29 ಕಿ.ಮೀ ಮೈಲೇಜ್.. 10.50 ಲಕ್ಷ, ಸದ್ದಿಲ್ಲದೇ ಹೊಸ ಮಾರುತಿ ಕಾರಿನ ಆಯ್ದ ವೇರಿಯೆಂಟ್‌ಗಳಲ್ಲಿ ಈ ಫೀಚರ್‌ನ್ನು ತೆಗೆಯಲಾಗಿದೆ!

ಕಳೆದ ತಿಂಗಳಷ್ಟೇ ನೂತನ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಎಸ್‌ಯುವಿಯನ್ನು ಮಾರಾಟಕ್ಕೆ ತರಲಾಗಿತ್ತು. ಈ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ 25,000 ಬುಕ್ಕಿಂಗ್‌ಗಳನ್ನು ಪಡೆದುಕೊಂಡಿತ್ತು. ಅದೇ ರೀತಿಯಲ್ಲಿ ಸೆಪ್ಟೆಂಬರ್ ತಿಂಗಳು ಗ್ರಾಹಕರು ಕೂಡ 'ವಿಕ್ಟೋರಿಸ್'ನ್ನು ಮುಗಿಬಿದ್ದು ಖರೀದಿ ಮಾಡಿದ್ದರು. ಒಟ್ಟು 4,261 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಸದ್ಯ, ಇದೇ ಮೊದಲ ಬಾರಿಗೆ ಕಂಪನಿಯು ಈ ಎಸ್‌ಯುವಿಯ ಆಯ್ದ ರೂಪಾಂತರಗಳಲ್ಲಿ (ವೇರಿಯೆಂಟ್) ವೈಶಿಷ್ಟ್ಯವೊಂದನ್ನು ಕೈಬಿಟ್ಟಿದೆ ಎಂದು ವರದಿಯಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೊಚ್ಚ ಹೊಸ 'ಮಾರುತಿ ವಿಕ್ಟೋರಿಸ್' ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ, ಝಡ್ಎಕ್ಸ್ಐ (ಒ), ಝಡ್ಎಕ್ಸ್ಐ ಪ್ಲಸ್ ಮತ್ತು ಝಡ್ಎಕ್ಸ್ಐ (ಒ) ಪ್ಲಸ್ ಎಂಬ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರ ಖರೀದಿ ದೊರೆಯುತ್ತದೆ. ಬಹುಮುಖ್ಯವಾಗಿ ಮಧ್ಯಮ ಶ್ರೇಣಿ ರೂಪಾಂತರಗಳೆಂದು ಹೆಸರಿಸಲಾಗಿರುವ ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ (ಒ) ನಲ್ಲಿ ಲೆಥೆರೆಟ್ ಸೀಟ್‌ಗಳನ್ನು ತೆಗೆದುಹಾಕಲಾಗಿದೆ.

This Feature Deleted in Maruti Suzuki Victoris Select Variants Details

ಇನ್ಮುಂದೆ ಈ ವೈಶಿಷ್ಟ್ಯವು ಗರಿಷ್ಠ ಶ್ರೇಣಿ ರೂಪಾಂತರಗಳಾದ ಝಡ್ಎಕ್ಸ್ಐ ಪ್ಲಸ್ & ಝಡ್ಎಕ್ಸ್ಐ (ಒ) ಪ್ಲಸ್‌ನಲ್ಲಿ ಮಾತ್ರ ಸಿಗಲಿದೆ. ಲೆಥೆರೆಟ್ ಸೀಟ್‌ಗಳನ್ನು ಕೈಬಿಟ್ಟಿರುವುದು ಬಿಟ್ಟರೆ, ಝಡ್ಎಕ್ಸ್ಐ ಹಾಗೂ ಝಡ್ಎಕ್ಸ್ಐ (ಒ) ರೂಪಾಂತರಗಳಲ್ಲಿ ಬೇರೆ ಯಾವ ಬದಲಾವಣೆಗಳನ್ನು ಮಾಡಲಾಗಿಲ್ಲ. ಜೊತೆಗೆ ಇವುಗಳ ಬೆಲೆಯನ್ನು ಸಹ ಯಥಾಸ್ಥಿತಿಯಲ್ಲಿ ಮುಂದುವರಿಸಲಾಗಿದೆ ಎಂಬ ವಿವರಗಳು ಲಭ್ಯವಾಗಿವೆ.

ಪ್ರಸ್ತುತ ದೇಶೀಯವಾಗಿ ನೂತನ 'ಮಾರುತಿ ಸುಜುಕಿ ವಿಕ್ಟೋರಿಸ್' ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.10.50 ಲಕ್ಷ ಹಾಗೂ ರೂ.19.99 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

ಈ ಕಾರು 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 373 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ತನ್ನದಾಗಿಸಿಕೊಂಡಿದೆ. 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ 2,600 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

ಇದು ಬಲಿಷ್ಠವದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್, 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) & 1.5-ಲೀಟರ್ ಪೆಟ್ರೋಲ್/ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ & ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. ಸಾಮಾನ್ಯ ಬೈಕ್‌ಗೆ ಕಮ್ಮಿಯಿಲ್ಲದ ರೀತಿಯಲ್ಲಿ 21 ರಿಂದ 29 ಕಿ.ಮೀವರಗೆ ಮೈಲೇಜ್ ಕೊಡುತ್ತದೆ. 180 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

ನೂತನ 'ವಿಕ್ಟೋರಿಸ್' ಸ್ಪ್ಲೆಂಡಿಡ್ ಸಿಲ್ವರ್, ಸಿಜ್ಲಿಂಗ್ ರೆಡ್, ಮ್ಯಾಗ್ಮಾ ಗ್ರೇ, ಆರ್ಕ್ಟಿಕ್ ವೈಟ್ ಹಾಗೂ ಮಿಸ್ಟಿಕ್ ಗ್ರೀನ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (10.1 ಇಂಚು), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸನ್‌ರೂಫ್, ಪ್ಯಾಸೆಂಜರ್ ಹೆಡ್‌ರೆಸ್ಟ್‌ಗಳು, 64 ಕಲರ್ ಆಂಬಿಯೆಂಟ್ ಲೈಟಿಂಗ್ ಮತ್ತು ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಗ್ಲೋಬಲ್ ಎನ್‌ಸಿಎಪಿ ಹಾಗೂ ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾದಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಹೊಂದಿದೆ.

More from DriveSpark

Article Published On: Thursday, October 23, 2025, 15:47 [IST]
English summary
This feature deleted in maruti suzuki victoris select variants details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+