ಕೊರಿಯಾ ಶಕ್ತಿ ಪ್ರದರ್ಶನಕ್ಕೆ ಕಿಯಾ ತಯಾರಿ.. ನಾಳೆ ಹೊಸ ಕಾರು ಅನಾವರಣ, ಬೆಲೆ ಎಷ್ಟು.. ವಿಶೇಷತೆಗಳೇನು?

ದಕ್ಷಿಣ ಕೊರಿಯಾಗೆ ಸೇರಿರುವ ಕಿಯಾ ಮೋಟಾರ್ಸ್ (Kia Motors), ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಆಂಧ್ರ ಪ್ರದೇಶದ ಪೆನುಗೊಂಡದಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೆಚ್ಚು ಪ್ರಖ್ಯಾತಿ ಗಳಿಸಿರುವ 'ಸೆಲ್ಟೋಸ್'ನ್ನು ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ನಾಳೆ (ಡಿ.10) ಅಂತರರಾಷ್ಟ್ರೀಯ ಮಟ್ಟದಲ್ಲಿ ಇದೇ ಕಾರಿನ 2ನೇ ತಲೆಮಾರಿನ ಮಾಡೆಲ್‌ನ್ನು ಅದ್ದೂರಿಯಾಗಿ ಅನಾವರಣಗೊಳಿಸಲಾಗುತ್ತದೆ. ಬನ್ನಿ, ಈ ಕಾರಿನ ನಿರೀಕ್ಷಿತ ಬೆಲೆ ಎಷ್ಟು.. ಯಾವೆಲ್ಲ ವಿಶೇಷತೆಗಳಿಗೆ ಸಾಕ್ಷಿಯಾಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಬೆಲೆ (Price):

ಹೊಚ್ಚ ಹೊಸ ಕಿಯಾ ಸೆಲ್ಟೋಸ್ (Kia Seltos) ಎಸ್‌ಯುವಿ, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ರೂ.11.30 ಲಕ್ಷದಿಂದ ರೂ.20 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿರಬಹುದು ಎನ್ನಲಾಗಿದೆ. 2026ರ ಆರಂಭದಲ್ಲಿ ಮಾರಾಟಕ್ಕೆ ಬರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

Tomorrow Next Generation Kia Seltos Suv Global Unveil Details

ವಿನ್ಯಾಸ (Design):

ಈ ಕಾರಿನ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು. ಈಗಾಗಲೇ, ಕಂಪನಿ ಹಂಚಿಕೊಂಡಿದ್ದ ಟೀಸರ್‌ಗಳಿಂದ ಅದು ಖಚಿತವಾಗಿದೆ. 'ಟೈಗರ್ ಫೇಸ್' ಫ್ರಂಟ್ ಗ್ರಿಲ್, ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲೈಟ್‌ಗಳು, ಇಂಟಿಗ್ರೇಟೆಡ್ ಸ್ಪಾಯ್ಲರ್ ಮತ್ತು ಶಾರ್ಕ್ ಫಿನ್ ಆಂಟೆನಾವನ್ನು ಹೊಂದಿರುವುದನ್ನು ನೋಡಬಹುದಾಗಿದೆ.

ಸುತ್ತಳತೆ (Dimensions):

ಇದು ಸಾಕಷ್ಟು ವಿಶಾಲವಾಗಿರಲಿದೆ. 4,365 ಎಂಎಂ ಉದ್ದ, 1,800 ಎಂಎಂ ಅಗಲ ಹಾಗೂ 1,645 ಎಂಎಂ ಎತ್ತರವಿರಲಿದೆ. ಜೊತೆಗೆ 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,610 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿರುವ ನಿರೀಕ್ಷೆಯಿದೆ.

Tomorrow Next Generation Kia Seltos Suv Global Unveil Details

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ನೂತನ 'ಕಿಯಾ ಸೆಲ್ಟೋಸ್' ಎಸ್‌ಯುವಿಯೂ ಸ್ಟ್ಯಾಂಡರ್ಡ್ 'ಸೆಲ್ಟೋಸ್'ನಂತೆಯೇ 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿರಲಿದೆ. ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಕೊಂಡೊಯ್ಯಲು 433 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿರಬಹುದು ಎಂದು ಹೇಳಲಾಗಿದೆ.

ಕಾರ್ಯಕ್ಷಮತೆ (Performance):

ಇದು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿರಲಿದೆ. ಪ್ರಸ್ತುತವಿರುವ 'ಸೆಲ್ಟೋಸ್' ಕಾರಿನಂತೆ 1.5-ಲೀ. ಟರ್ಬೋಚಾರ್ಜ್ಡ್ ಪೆಟ್ರೋಲ್ & 1.5-ಲೀ. ಡೀಸೆಲ್ ಎಂಜಿನ್‌ನ್ನು ಒಳಗೊಂಡಿರಲಿದೆ. ಹಾಗೆಯೇ ನವೀನವಾದ 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಎಂಜಿನ್‌ನ್ನು ಒಳಗೊಂಡಿರುವ ಸಾಧ್ಯತೆಯಿದೆ.

ಒಳಾಂಗಣ & ವೈಶಿಷ್ಟ್ಯಗಳು (Interior & Features):

ಈ ಕಾರಿನ ಕ್ಯಾಬಿನ್ ವಿನ್ಯಾಸದಲ್ಲೂ ಸಾಕಷ್ಟು ಮಾರ್ಪಾಡುಗಳು ಇರಲಿವೆ. ಬಹುತೇಕ 'ಸೈರಸ್'ಗೆ ಹೋಲಿಕೆಯಾಗಬಲ್ಲ ವೈಶಿಷ್ಟ್ಯಗಳನ್ನು ಪಡೆದಿರುವ ನಿರೀಕ್ಷೆಯಿದೆ. ಇನ್ಫೋಟೈನ್‌ಮೆಂಟ್‌ ಸಿಸ್ಟಮ್ - ಡ್ರೈವರ್ಸ್ ಡಿಸ್‌ಪ್ಲೇಗಾಗಿ ಡುಯಲ್ ಸ್ಕ್ರೀನ್‌ ಸೆಟಪ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡುಯಲ್ ಜೋನ್ ಎಸಿ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 8-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಸನ್‌ರೂಫ್‌ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನ್ನು ಹೊಂದಿರಬಹುದು ಎನ್ನಲಾಗಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features):

ಹೊಸ ಕಿಯಾ ಸೆಲ್ಟೋಸ್ ಎಸ್‌ಯುವಿ, ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿರಬಹುದು ಎಂದು ಹೇಳಲಾಗಿದೆ.

More from DriveSpark

Article Published On: Tuesday, December 9, 2025, 16:02 [IST]
English summary
Tomorrow next generation kia seltos suv globaly unveil details
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+