ಇದು ಕ್ರೆಟಾ, ನೆಕ್ಸಾನ್, ಸ್ಕಾರ್ಪಿಯೋ ಅಲ್ಲ.. 5 ಲಕ್ಷದ ಈ ಮಾರುತಿ ಹುಲಿಗೆ ಮುಗಿಬಿದ್ದ ಗ್ರಾಹಕರು, 1 ಲಕ್ಷ ಕಾರುಗಳು ಮಾರಾಟ!

ಭಾರತದ ವಾಹನ ಮಾರುಕಟ್ಟೆಯಲ್ಲಿ ಈ ವರ್ಷದ (H1 2025) ಮೊದಲಾರ್ಧದಲ್ಲಿ ಉತ್ತಮ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟ ಮಾಡಲಾಗಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡಿದ್ದಾರೆ. ಇತ್ತೀಚೆಗೆ, ಜನವರಿಯಿಂದ ಜೂನ್ ಅವಧಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಕಾರುಗಳ ಪಟ್ಟಿ ಪ್ರಕಟಗೊಂಡಿದೆ. ಮಾರುತಿ ಸುಜುಕಿಯ 6, ಟಾಟಾದ 2, ಹ್ಯುಂಡೈ ಹಾಗೂ ಮಹೀಂದ್ರಾ ಕಂಪನಿಯ ತಲಾ 1 ಕಾರುಗಳು ಸ್ಥಾನವನ್ನು ಪಡೆದಿವೆ.

ಈ ಪಟ್ಟಿಯಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಹ್ಯಾಚ್‌ಬ್ಯಾಕ್ ಮೊದಲ ಸ್ಥಾನದಲ್ಲಿದೆ. ಇದೇ ವರ್ಷದ ಮೊದಲಾರ್ಧದಲ್ಲಿ ಒಟ್ಟು 101,424 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2024ರ ಮೊದಲಾರ್ಧದಲ್ಲಿ 99,668 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಯೊಂದಿಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ಶೇಕಡ 2% ಪ್ರಗತಿಯಾಗಿದೆ. ಇದು ರೂ.5.54 ಲಕ್ಷದಿಂದ ರೂ.7.62 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ.

Top 10 Car Sales H1 2025 WagonR Creta Dzire Brezza Swift Ertiga to Nexon

ಹ್ಯುಂಡೈ ಕ್ರೆಟಾ (Hyundai Creta) ಎಸ್‌ಯುವಿ ಎರಡನೇ ಸ್ಥಾನದಲ್ಲಿದೆ. ಈ ವರ್ಷದ ಮೊದಲಾರ್ಧದಲ್ಲಿ ಬರೋಬ್ಬರಿ 100,560 ಯುನಿಟ್ 'ಕ್ರೆಟಾ' ಕಾರುಗಳನ್ನು ಮಾರಾಟಗೊಳಿಸಲಾಗದೆ. ಇದರೊಂದಿಗೆ ಮಾರಾಟ ಪ್ರಮಾಣವು ಶೇಕಡ 10% ಬೆಳವಣಿಗೆಯಾಗಿದೆ. 2024ರ ಮೊದಲಾರ್ಧದಲ್ಲಿ 91,348 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಸಾಮಾನ್ಯ ಕ್ರೆಟಾ ರೂ.11 ಲಕ್ಷದಿಂದ ರೂ.20 ಲಕ್ಷ ಹಾಗೂ ಕ್ರೆಟಾ ಎಲೆಕ್ಟ್ರಿಕ್ ರೂ.18 ಲಕ್ಷದಿಂದ ರೂ.24 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್ ಆಗಿದ್ದು, ಮೂರನೇ ಸ್ಥಾನದಲ್ಲಿದೆ. ಇದೇ ವರ್ಷದ ಮೊದಲಾರ್ಧದಲ್ಲಿ ಸರಿ ಸುಮಾರು 96,101 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2024ರ ಮೊದಲಾರ್ಧದಲ್ಲಿ 93,811 ಯುನಿಟ್‌ಗಳನ್ನು ಮಾರಲಾಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ, ಶೇಕಡ 2% ಪ್ರಗತಿಯಾಗಿದೆ. ಈ ಡಿಜೈರ್ ರೂ.6.84 ಲಕ್ಷದಿಂದ ರೂ.10.19 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ.

Top 10 Car Sales H1 2025 WagonR Creta Dzire Brezza Swift Ertiga to Nexon

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎಸ್‌ಯುವಿ ನಾಲ್ಕನೇ ಸ್ಥಾನದಲ್ಲಿದೆ. ಈ ವರ್ಷದ ಮೊದಲಾರ್ಧದಲ್ಲಿ ಒಟ್ಟು 93,729 ಯುನಿಟ್ ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2024ರ ಮೊದಲಾರ್ಧದಲ್ಲಿ 90,153 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದರೊಂದಿಗೆ ಮಾರಾಟ ಪ್ರಮಾಣವು ಶೇಕಡ 4% ಬೆಳವಣಿಗೆಯಾಗಿದೆ. ಈ ಕಾರು ರೂ.8.69 ಲಕ್ಷದಿಂದ ರೂ.14.14 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹ್ಯಾಚ್‌ಬ್ಯಾಕ್ ಐದನೇ ಸ್ಥಾನದಲಿದೆ. ಇದೇ ವರ್ಷದ ಮೊದಲಾರ್ಧದಲ್ಲಿ ಬರೋಬ್ಬರಿ 93,098 ಯುನಿಟ್ ಕಾರುಗಳನ್ನು ಮಾರಲಾಗಿದೆ. 2024ರ ಮೊದಲಾರ್ಧದಲ್ಲಿ 84,172 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿ ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ಶೇಕಡ 11% ಪ್ರಗತಿಯಾಗಿದೆ. ಇದು ರೂ.6.49 ಲಕ್ಷದಿಂದ ರೂ.9.64 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

Top 10 Car Sales H1 2025 WagonR Creta Dzire Brezza Swift Ertiga to Nexon

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿ ಆರನೇ ಸ್ಥಾನದಲ್ಲಿದೆ. ಈ ವರ್ಷದ ಮೊದಲಾರ್ಧದಲ್ಲಿ ಸರಿ ಸುಮಾರು 91,991 ಕಾರುಗಳನ್ನು ಮಾರಾಟಗೊಳಿಸಲಾಗಿದೆ. 2024ರ ಮೊದಲಾರ್ಧದಲ್ಲಿ 88,378 ಯುನಿಟ್‌ಗಳನ್ನು ಮಾರಲಾಗಿತ್ತು. ಇದರೊಂದಿಗೆ ಮಾರಾಟ ಪ್ರಮಾಣವು ಶೇಕಡ 4% ಬೆಳವಣಿಗೆಯಾಗಿದೆ. ಈ ಕಾರು ರೂ.8.96 ಲಕ್ಷದಿಂದ ರೂ.13.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಏಳನೇ ಸ್ಥಾನದಲ್ಲಿದೆ. ಇದೇ ವರ್ಷದ ಮೊದಲಾರ್ಧದಲ್ಲಿ 88,066 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಎಂಟನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್ (87,267 ಯುನಿಟ್ ), ಒಂಬತ್ತನೇ ಸ್ಥಾನದಲ್ಲಿ ಮಹೀಂದ್ರಾ ಸ್ಕಾರ್ಪಿಯೋ (85,648) ಹಾಗೂ ಹತ್ತನೇ ಸ್ಥಾನದಲ್ಲಿ ಟಾಟಾ ಪಂಚ್ (84,579) ಇದೆ.

Article Published On: Friday, July 18, 2025, 13:06 [IST]
English summary
Top 10 car sales h1 2025 wagonr creta dzire brezza swift ertiga to nexon
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+