Diesel Cars: ಅಗ್ಗದ ಬೆಲೆಗೆ ಸಿಗುವ 5 ಪ್ರಮುಖ ಡೀಸೆಲ್ ಕಾರುಗಳಿವು.. ಮೈಲೇಜ್ ಕೂಡ ಚೆನ್ನಾಗಿದೆ!

ಹೊಸ ಕಾರು ಖರೀದಿ ಮಾಡಬೇಕೆಂಬುದು ಹಲವರ ಕನಸಾಗಿರುತ್ತದೆ. ಅದರಲ್ಲೂ ಡೀಸೆಲ್ ಕಾರುಗಳು (Diesel Cars) ಉತ್ತಮವಾದ ಕಾರ್ಯಕ್ಷಮತೆಯಿಂದಲೂ ಮನೆ ಮಾತಾಗಿವೆ. ಕಟ್ಟುನಿಟ್ಟಿನ 'ಬಿಎಸ್6' ಎಮಿಷನ್ ಮಾನದಂಡಗಳು ಜಾರಿಯಾದ ಬಳಿಕ, ಅನೇಕ ವಾಹನ ತಯಾರಕ ಕಂಪನಿಗಳು ಈ ಕಾರುಗಳ ಉತ್ಪಾದನೆಯನ್ನೇ ಹಂತ ಹಂತವಾಗಿ ಸ್ಥಗಿತಗೊಳಿಸಿವೆ. ಆದರೂ ಒಂದಷ್ಟು ಕಂಪನಿಗಳು ಮಾತ್ರ ಮಾರಾಟಗೊಳಿಸುತ್ತಿದೆ. ನಾವಿಲ್ಲಿ ಅಗ್ಗದ ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿರುವ 5 ಪ್ರಮುಖ ಡೀಸೆಲ್ ಕಾರುಗಳ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ಮಹೀಂದ್ರಾ ಬೊಲೆರೊ (Mahindra Bolero):

ಈ ಕಾರು ರೂ.7.99 ಲಕ್ಷದಿಂದ ರೂ.9.69 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಸ್ಟೆಲ್ತ್ ಬ್ಲ್ಯಾಕ್, ಡೈಮಂಡ್ ವೈಟ್, ಡಿಸ್ಯಾಟ್ ಸಿಲ್ವರ್ ಹಾಗೂ ರಾಕಿ ಬೀಜ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 183 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,680 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. 7 ಆಸನಗಳನ್ನು ತನ್ನದಾಗಿಸಿಕೊಂಡಿದೆ.

Top 5 Low Price Diesel Cars Bolero Altroz Nexon Syros And Curvv

ನೂತನ 'ಬೊಲೆರೊ' 1.5-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 14 ರಿಂದ 16 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 125 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7 ಇಂಚು), ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ ಆಲ್ಟ್ರೋಜ್ (Tata Altroz):

ಇದು ರೂ.8.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಈ ಕಾರು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಂಬರ್ ಗ್ಲೋ, ಪ್ರಿಸ್ಟೈನ್ ವೈಟ್, ಪ್ಯೂರ್ ಗ್ರೇ, ಡ್ಯೂನ್ ಗ್ಲೋ ಹಾಗೂ ರಾಯಲ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 165 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ & 2,501 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. 5 ಆಸನಗಳನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.

Top 5 Low Price Diesel Cars Bolero Altroz Nexon Syros And Curvv

ಹೊಸ 'ಆಲ್ಟ್ರೋಜ್' 1.5-ಲೀ. ಡೀಸೆಲ್ ಎಂಜಿನ್‌ನ್ನು ಒಳಗೊಂಡಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 23.64 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (10.25 ಇಂಚು), ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, 4-ಸ್ಪೀಕರ್ ಸೆಟಪ್‌, ಸನ್‌ರೂಫ್, 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಮತ್ತು 360 ಡಿಗ್ರಿ ಕ್ಯಾಮೆರಾ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ ನೆಕ್ಸಾನ್ (Tata Nexon):

ಈ ಕಾರು 9.01 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಪ್ಯೂರ್ ಗ್ರೇ, ಪ್ರಿಸ್ಟೈನ್ ವೈಟ್, ಕಾರ್ಬನ್ ಬ್ಲ್ಯಾಕ್, ಗ್ರಾಸ್‌ಲ್ಯಾಂಡ್ ಬೀಜ್ ಹಾಗೂ ಓಷನ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. 1.5-ಲೀ. ಡೀಸೆಲ್ ಎಂಜಿನ್‌ನ್ನು ಹೊಂದಿದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 24.08 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ತನ್ನದಾಗಿಸಿಕೊಂಡಿದೆ.

Top 5 Low Price Diesel Cars Bolero Altroz Nexon Syros And Curvv

ಕಿಯಾ ಸೈರಸ್ (Kia Syros):

ಇದು ರೂ. 10.14 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಉತ್ತಮವಾದ ವಿನ್ಯಾಸವನ್ನು ಪಡೆದಿದೆ. ಸ್ಪಾರ್ಕ್ಲಿಂಗ್ ಸಿಲ್ವರ್, ಗ್ರಾವಿಟಿ ಗ್ರೇ, ಇಂಪೀರಿಯಲ್ ಬ್ಲೂ, ಇಂಟೆನ್ಸ್ ರೆಡ್ ಹಾಗೂ ಪ್ಯೂಟರ್ ಆಲಿವ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 1.5-ಲೀ. ಡೀಸೆಲ್ ಎಂಜಿನ್‌ನ್ನು ಪಡೆದಿದೆ. 6-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 17.65 ರಿಂದ 20.75 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ.

Top 5 Low Price Diesel Cars Bolero Altroz Nexon Syros And Curvv

ಟಾಟಾ ಕರ್ವ್ (Tata Curvv):

ಈ ಎಸ್‌ಯುವಿಯು ರೂ. 11.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಪ್ಯೂರ್ ಗ್ರೇ, ನೈಟ್ರೋ ಕ್ರಿಮ್ಸನ್, ಪ್ರಿಸ್ಟೈನ್ ವೈಟ್, ಗೋಲ್ಡ್ ಎಸೆನ್ಸ್, ಒಪೇರಾ ಬ್ಲೂ, ಫ್ಲೇಮ್ ರೆಡ್ ಹಾಗೂ ಡೇಟೋನಾ ಗ್ರೇ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. 1.5.ಲೀ. ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್ ಹಾಗೂ 7 ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಪಡೆದಿದೆ. 15 ಕಿ.ಮೀವರೆಗೆ ಮೈಲೇಜ್ ಕೊಡುತ್ತದೆ. 5 ಆಸನಗಳನ್ನು ಹೊಂದಿದೆ.

More from DriveSpark

Article Published On: Friday, October 24, 2025, 23:55 [IST]
English summary
Top 5 low price diesel cars bolero altroz nexon syros and curvv
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+