Safest cars: ಭಾರತದ ಟಾಪ್-5 ಸುರಕ್ಷಿತ ಕಾರುಗಳು: ಗರಿಷ್ಟ ಗುಣಮಟ್ಟ, ಬಂಡೆಯಂತಹ ನಿರ್ಮಾಣ!
ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ ವಾಹನ ಸುರಕ್ಷತೆ ಬಗ್ಗೆ ಗ್ರಾಹಕರಲ್ಲಿ ಕಾಳಜಿ ಹೆಚ್ಚಾಗಿದೆ. ತುಸು ಬೆಲೆ ಹೆಚ್ಚಾದರೂ ಚಿಂತಿಸದೆ ಉತ್ತಮ ನಿರ್ಮಾಣ ಗುಣಮಟ್ಟವಿರುವ ಕಾರುಗಳನ್ನು ಖರೀದಿಸಲು ಜನ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ವಾಹನ ಸುರಕ್ಷತೆಯನ್ನು ಪರಿಶೀಲಿಸಲು ನಡೆಸಲಾಗುವ ಕ್ರ್ಯಾಶ್ ಟೆಸ್ಟ್ ಕಾರ್ಯಕ್ರಮವಾದ ಭಾರತ್ ಎನ್‌ಸಿಎಪಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಡಿಸೆಂಬರ್ 2023 ರಲ್ಲಿ ಪ್ರಾರಂಭಿಸಿದರು. ಇಲ್ಲಿಯವರೆಗೆ ಭಾರತ್ ಎನ್‌ಸಿಎಪಿ 17 ವಾಹನಗಳನ್ನು ಪರೀಕ್ಷಿಸಿದ್ದು, ಭಾರತದ ಟಾಪ್ 5 ಸುರಕ್ಷಿತ ಕಾರುಗಳು (Safest cars) ಇಲ್ಲಿವೆ.
ಕಿಯಾ ಸಿರೋಸ್: ಕಿಯಾ ಸಿರೋಸ್ (Kia Syros) ಸೈರಸ್ ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 30.21 ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 49 ಅಂಕಗಳಿಗೆ 44.42 ಅಂಕಗಳನ್ನು ಗಳಿಸಿದೆ. ಕಿಯಾ ಸೈರಸ್ ಪೆಟ್ರೋಲ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.9.50 ಲಕ್ಷದಿಂದ ರೂ.16.80 ಲಕ್ಷಗಳಾದರೆ, ಡೀಸೆಲ್ ಮಾದರಿಯ ಬೆಲೆಯು ರೂ.11.30 ಲಕ್ಷದಿಂದ ರೂ.17.80 ಲಕ್ಷಗಳಾಗಿದೆ.

ಸ್ಕೋಡಾ ಕೈಲಾಕ್: ಸ್ಕೋಡಾ ಕೈಲಾಕ್ (Skoda Kylaq) ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 30.88 ಅಂಕಗಳನ್ನು ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 49 ಅಂಕಗಳಿಗೆ 45.00 ಅಂಕಗಳನ್ನು ಗಳಿಸಿದೆ. ಕೈಲಾಕ್ ದೇಶದ ಅತ್ಯಂತ ಸುರಕ್ಷಿತ ಕಾಂಪ್ಯಾಕ್ಟ್ ಎಸ್ ಯುವಿಯಾಗಿದೆ. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8.25 ಲಕ್ಷದಿಂದ ರೂ.13.99 ಲಕ್ಷಗಳಾಗಿದೆ.
ಮಹೀಂದ್ರಾ ಥಾರ್ ರೊಕ್ಸ್: ಮಹೀಂದ್ರಾ ಥಾರ್ ರೊಕ್ಸ್ (Mahindra Thar Roxx) ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 31.09 ಮತ್ತು ಮಕ್ಕಳ ರಕ್ಷಣೆಯಲ್ಲಿ 49.00 ಅಂಕಗಳಿಗೆ 45.00 ಅಂಕಗಳನ್ನು ಗಳಿಸಿದೆ. ಥಾರ್ ರೊಕ್ಸ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.12.99 ಲಕ್ಷದಿಂದ ರೂ.23.29 (ಎಕ್ಸ್ ಶೋರೂಂ) ಲಕ್ಷಗಳಾಗಿದೆ.

ಈ ಥಾರ್ ರಾಕ್ಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ಸುರಕ್ಷತೆಗಾಗಿ 6-ಏರ್‌ಬ್ಯಾಗ್, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 4 ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಮಹೀಂದ್ರಾ ಬಿಇ 6: ಮಹೀಂದ್ರಾ ಬಿಇ 6(Mahindra Be6) ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 31.97 ಅಂಕಗಳನ್ನು ಗಳಿಸಿದೆ. ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 54 ಅಂಕಗಳನ್ನು ಗಳಿಸಿದೆ. ಬಿಇ 6 ಬೆಲೆಯು ರೂ.19.65 ಲಕ್ಷದಿಂದ ರೂ.27.65 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಇದು 6 ಏರ್ ಬ್ಯಾಗ್‌ಗಳು, ಲೆವೆಲ್ 2 ADAS, 3-ಪಾಯಿಂಟ್ ಸೀಟ್ ಬೆಲ್ಟ್, 360-ಡಿಗ್ರಿ ಕ್ಯಾಮೆರಾಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ.

ಮಹೀಂದ್ರಾ ಎಕ್ಸ್ಇವಿ 9ಇ: ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಎಲೆಕ್ಟ್ರಿಕ್ ಎಸ್‌ಯುವಿಯಾದ ಎಕ್ಸ್ ಇವಿ 9ಇ (Xev 9e) ಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಇದು ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ (ಎಒಪಿ) 32 ಅಂಕಗಳಿಗೆ 32 ಅಂಕಗಳನ್ನು ಗಳಿಸುವ ಮೂಲಕ ಸುರಕ್ಷತೆಯಲ್ಲಿ ಅಗ್ರಸ್ಥಾನದಲ್ಲಿದೆ. ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ (ಸಿಒಪಿ) 49 ರಲ್ಲಿ 45 ಅಂಕಗಳನ್ನು ಗಳಿಸಿದೆ.
ಎಕ್ಸ್‌ಇವಿ 9ಇ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.22.65 ಲಕ್ಷದಿಂದ ರೂ.31.25 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಇದು 6 ಏರ್ ಬ್ಯಾಗ್‌ಗಳು, ಲೆವೆಲ್ 2 ADAS, 3-ಪಾಯಿಂಟ್ ಸೀಟ್ ಬೆಲ್ಟ್, 360-ಡಿಗ್ರಿ ಕ್ಯಾಮೆರಾಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಜೊತೆಗೆ ಡ್ರೈವಿಂಗ್ ರೇಂಜ್, ಪರ್ಫಾಮೆನ್ಸ್, ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಭರ್ಜರಿ ಮಾರಾಟ ಕಾಣುತ್ತಿದೆ.


Click it and Unblock the Notifications