ಹೊಸ ಕಾರು ಖರೀದಿಸುತ್ತಿದ್ದೀರಾ? ಸ್ವಲ್ಪ ತಡೀರಿ... ಫ್ರಾಂಕ್ಸ್ ಹೈಬ್ರಿಡ್ ಸೇರಿದಂತೆ 4 ಕಾರುಗಳು ಬಿಡುಗಡೆಗೆ ಸಜ್ಜು

ಭಾರತದಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡಿರುವ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಪ್ರತಿ ವರ್ಷ ಹೊಸ ಕಾರುಗಳ ಆಗಮನದಿಂದ ಸದ್ದು ಮಾಡುತ್ತಿರುತ್ತದೆ. ಇದರ ಸಬ್-4-ಮೀಟರ್ ವಿಭಾಗವು ವಿಶೇಷವಾಗಿ ಸ್ಪರ್ಧಾತ್ಮಕವಾಗಿದ್ದು, ಎಲ್ಲಾ ಪ್ರಮುಖ ವಾಹನ ತಯಾರಕರು ಕನಿಷ್ಠ ಒಂದು ಅಥವಾ ಕಾರುಗಳನ್ನು ಈ ವಿಭಾಗದಲ್ಲಿ ಹೊಂದಿದ್ದಾರೆ. ಇದೀಗ ಮುಂದಿನ ಪೀಳಿಗೆಗೆ ಬೇಕಾದ ಎಲ್ಲಾ ಅಗತ್ಯತೆಗಳಿಗೆ ಅನುಗುಣವಾಗಿ ಐದು ವಾಹನ ತಯಾರಕರು ಈಗಿರುವ ಮಾಡಲ್‌ಗಳಿಗೆ ಹೊಸ ಅಪ್‌ಡೇಟ್‌ಗಳು ಅಥವಾ ಸಂಪೂರ್ಣವಾಗಿ ಹೊಸ ಮಾದರಿಗಳನ್ನು ಪರಿಚಯಿಸಲು ಸಜ್ಜಾಗುತ್ತಿದ್ದಾರೆ.

ಹೊಸ ಹ್ಯುಂಡೈ ವೆನ್ಯೂ: ಮುಂದಿನ ತಲೆಮಾರಿನ ಹ್ಯುಂಡೈ ವೆನ್ಯೂ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಇದರಲ್ಲಿ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ಬಣ್ಣ ಆಯ್ಕೆಗಳು, ಹೊಸ ಸ್ಟೀರಿಂಗ್ ವೀಲ್ ಮತ್ತು ಲೆವೆಲ್ 2 ADAS ಸೇರಿದಂತೆ ವಿವಿಧ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

top-5-upcoming-compact-suvs-in-india

ಹೊಸ ಕ್ರೆಟಾದಿಂದ ವಿನ್ಯಾಸ ಸ್ಪೂರ್ತಿ ಪಡೆಯಲಿದ್ದು, ಹಲವು ಸಿಗ್ನೇಚರ್ ಸ್ಟೈಲಿಂಗ್ ಅಂಶಗಳನ್ನು ಒಳಗೊಂಡಿರಲಿದೆ. ಕ್ಯೂಬ್ ಆಕಾರದ ಎಲ್ಇಡಿ ಹೆಡ್‌ಲೈಟ್ ಮತ್ತು ಪ್ಯಾರಾಮೆಟ್ರಿಕ್ ಗ್ರಿಲ್ ಅನ್ನು ಹೊಂದಿರುತ್ತದೆ. ಹಿಂಭಾಗದಲ್ಲಿ ಫ್ಲಾಟ್ LED ಟೈಲ್‌ಲೈಟ್‌ಗಳು, ಕನೆಕ್ಟೆಡ್ LED ಲೈಟ್ ಬಾರ್ ಅನ್ನು ಬಹುಶಃ ಟಾಪ್ ವೇರಿಯೆಂಟ್‌ನಲ್ಲಿ ನೀಡಬಹುದು.

ಮಹೀಂದ್ರಾ XUV 3X0 ಇವಿ: ಮಹೀಂದ್ರಾದ XUV 3X0 ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಲು ಕಂಪನಿ ಸಜ್ಜಾಗುತ್ತಿದೆ. ಎರಡು ಬ್ಯಾಟರಿ ಪ್ಯಾಕ್‌ ಆಯ್ಕೆ ನೀಡುವ ನಿರೀಕ್ಷೆಯಿದೆ. ಬೇಸ್‌ ವೇರಿಯೆಂಟ್ 3XO EV ಕಾರು 34.5 kWh ಮತ್ತು ಟಾಪ್ ವೇರಿಯೆಂಟ್ 39.4 kWh ಬ್ಯಾಟರಿ ಪಡೆಯುವ ಸಾಧ್ಯತೆ ಇದೆ. ನೆಕ್ಸಾನ್ EV ಗಿಂತ ಕಡಿಮೆ ಬೆಲೆಗೆ ಸಿಗಲಿದೆ ಎನ್ನಲಾಗುತ್ತಿದೆ. ಆಗಸ್ಟ್‌ನಲ್ಲಿ ಬಿಡುಗಡೆಯಾಗಬಹುದು.

top-5-upcoming-compact-suvs-in-india

ಮಾರುತಿ ಸುಜುಕಿ ಫ್ರಾಂಕ್ಸ್ ಹೈಬ್ರಿಡ್: 2025 ರ ವೇಳೆಗೆ, ಫ್ರಾಂಕ್ಸ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿ ಗುರ್ತಿಸಿಕೊಂಡಿದೆ. ಇದೀಗ ಈ ಕಾರನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು, ಮಾರುತಿ ಸುಜುಕಿ ಕಂಪನಿಯು ಫ್ರಾಂಕ್ಸ್ ಹೈಬ್ರಿಡ್ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಬಿಡುಗಡೆ ನಂತರ ಅತ್ಯಂತ ಕೈಗೆಟುಕುವ ಹೈಬ್ರಿಡ್ ವಾಹನವಾಗಲಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದಲ್ಲಿ ನೀಡಲಾದ ಟೊಯೊಟಾ ಹೈಬ್ರಿಡ್ ತಂತ್ರಜ್ಞಾನಕ್ಕಿಂತ ಭಿನ್ನವಾಗಿ, ಫ್ರಾಂಕ್ಸ್ ಮಾರುತಿಯ ಆಂತರಿಕ ಪವರ್ ಟ್ರೇನ್ ಅನ್ನು ಒಳಗೊಂಡಿರಲಿದೆ. ಫ್ರಾಂಕ್ಸ್ ಹೈಬ್ರಿಡ್ ಕಾರು ಸ್ವಿಫ್ಟ್ ಮತ್ತು ಡಿಜೈರ್ ನಲ್ಲಿ ನೀಡಿರುವ ಅದೇ 1.2-ಲೀಟರ್ 3-ಸಿಲಿಂಡರ್ ಎಂಜಿನ್ ನೊಂದಿಗೆ ಬರಲಿದೆ. 2025 ದ್ವಿತೀಯಾರ್ಧದಲ್ಲಿ ಈ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ.

top-5-upcoming-compact-suvs-in-india

ರೆನಾಲ್ಟ್ ಕಿಗರ್ ಫೇಸ್ ಲಿಫ್ಟ್: ಈ ವರ್ಷ ರೆನಾಲ್ಟ್ ಕಿಗರ್ ಫೇಸ್ ಲಿಫ್ಟ್ ಜೂನ್‌ 21ಕ್ಕೆ ಬಿಡುಗಡೆ ಯಾಗುವ ನಿರೀಕ್ಷೆಯಿದೆ. ಇದು ಸಣ್ಣ ನವೀಕರಣಗಳೊಂದಿಗೆ ಮುಂಭಾಗದಲ್ಲಿ ಹೊಸ ಗ್ರಿಲ್ ಮತ್ತು ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳೊಂದಿಗೆ ಕೆಲವು ಹೊಸ ಸಣ್ಣ ಸ್ಟೈಲಿಂಗ್ ಅಂಶಗಳೊಂದಿಗೆ ಮರುವಿನ್ಯಾಸಗೊಂಡು ಬರಲಿದೆ. ಹಿಂಭಾಗವನ್ನು ಸಹ ನವೀಕರಿಸುವ ನಿರೀಕ್ಷೆಯಿದ್ದು, ಅದೇ ಸಿ-ಆಕಾರದ ಟೈಲ್‌ಲೈಟ್‌ಗಳನ್ನು ಉಳಿಸಿಕೊಳ್ಳಲಿದೆ.

ಟಾಟಾ ಪಂಚ್ ಫೇಸ್ ಲಿಫ್ಟ್: ಶೀಘ್ರದಲ್ಲೆ ಟಾಟಾ ಪಂಚ್ ಹೊಸ ಫೇಸ್ ಲಿಫ್ಟ್ ಪಡೆಯಲಿದೆ. ಲೀಕ್ ಆಗಿರುವ ಚಿತ್ರಗಳ ಪ್ರಕಾರ, ಇಂಟೀರಿಯರ್‌ನಲ್ಲಿ 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನೊಂದಿಗೆ ಗಮನಾರ್ಹ ಅಪ್‌ಡೇಟ್ಸ್ ಇರಲಿವೆ.

2025 ರ ಪಂಚ್ ಎಲೆಕ್ಟ್ರಿಕ್ ಎಸ್‌ಯುವಿಯಂತೆಯೇ ಸ್ಪ್ಲಿಟ್ ಹೆಡ್ ಲೈಟ್ ವಿನ್ಯಾಸ, ಮುಂಭಾಗದಲ್ಲಿ ಕನೆಕ್ಟೆಡ್ ಎಲ್ಇಡಿ ಡಿಆರ್‌ಎಲ್, ಹೊಸ ಅಲಾಯ್ ವೀಲ್‌ಗಳು ಮತ್ತು ಟೈಲ್‌ಲೈಟ್ ಗಳೊಂದಿಗೆ ಟಾಟಾ ಪಂಚ್ ಫೇಸ್‌ಲಿಫ್ಟ್ ಆವೃತ್ತಿಯು 2025 ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಅದೇ 1.2 ಲೀಟರಿನ 3 ಸಿಲಿಂಡರ್ ಎಂಜಿನ್ ಹೊಂದಿರಲಿದೆ.

Article Published On: Monday, June 9, 2025, 12:09 [IST]
English summary
Top 5 upcoming compact suvs in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+