Top selling SUV's: ಮಾರ್ಚ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿಗಳ ಪಟ್ಟಿ: ಹ್ಯುಂಡೈಗೆ ಕಿರೀಟ!

Top selling SUV's: ದೇಶದಲ್ಲಿ ಎಸ್‌ಯುವಿಗಳು ಹೆಚ್ಚಾಗಿ ಮಾರಾಟವಾಗುತ್ತಿವೆ, ಸೆಡಾನ್‌ಗಳಿಗೆ ಹೋಲಿಸಿದರೆ ಭಾರತೀಯ ಗ್ರಾಹಕರು ಹೆಚ್ಚಾಗಿ ಎಸ್‌ಯುವಿಗಳನ್ನು ಖರೀದಿಸುತ್ತಿರುವುದು ಇತ್ತೀಚಿನ ಮಾರಾಟ ಅಂಕಿಅಂಶಗಳ ಮೂಲಕ ಮತ್ತೊಮ್ಮೆ ಸಾಭೀತಾಗಿದೆ. ಎಸ್‌ಯುವಿಗಳು ಸದ್ಯ ಟ್ರೆಂಡ್ ನಲ್ಲಿವೆ. ಕಳೆದ ಕೆಲವು ತಿಂಗಳುಗಳಿಂದ ಮಾರುಕಟ್ಟೆ ಪ್ರವೃತ್ತಿಯನ್ನು ನೋಡಿದರೆ ಖರೀದಿದಾರರು ಎಸ್‌ಯುವಿಗಳಿಗೆ ಆದ್ಯತೆ ನೀಡಿದ್ದು, ಅವುಗಳಲ್ಲಿ ಸತತ ಕಳೆದ ಮೂರು ತಿಂಗಳುಗಳಿಂದ ಕ್ರೆಟಾ ಹೆಚ್ಚು ಮಾರಾಟವಾದ ವಾಹನವಾಗಿದೆ. ಇದರ ನಂತರ ಟಾಟಾ ಪಂಚ್, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್ ಮಹೀಂದ್ರಾ ಸ್ಕಾರ್ಪಿಯೋದಂತಹ ಎಸ್‌ಯುವಿಗಳು ಹೆಚ್ಚಾಗಿ ಮಾರಾಟವಾಗಿವೆ.

ಮಾರ್ಚ್ 2025 ರಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿಗಳು: ಮೊದಲಿನಿಂದಲೂ ಭಾರತದಲ್ಲಿ ಮಿಡ್‌ಸೈಜ್ ಎಸ್‌ಯುವಿ ವಿಭಾಗವನ್ನು ಆಳುತ್ತಿರುವ ಹ್ಯುಂಡೈ ಕ್ರೆಟಾ, ತನ್ನ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಕೇವಲ ಇಂಧನ ಚಾಲಿತ ಕ್ರೆಟಾ ಮಾತ್ರವಲ್ಲದೆ ಈಗ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಈ ಎಸ್‌ಯುವಿ ಬಿಡುಗಡೆಯಾಗಿ ಕಂಪನಿಗೆ ಉತ್ತಮ ಲಾಭವನ್ನು ತಂದುಕೊಟ್ಟಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಬರೋಬ್ಬರಿ 18,059 ಯುನಿಟ್ ಕಾರುಗಳು ಮಾರಾಟವಾಗಿವೆ.

top-selling-suvs-march-2025-tata-hyundai-maruti-mahindra

ಹ್ಯುಂಡೈ ಕ್ರೆಟಾ ಈಗ ಕಂಪನಿಗೆ ಹೆಚ್ಚು ಮಾರಾಟ ತಂದುಕೊಡಲು ಮತ್ತೊಂದು ಕಾರಣವೆಂದರೆ, ಇಂಧನ ಚಾಲಿತ ಕ್ರೆಟಾವನ್ನು ಇತ್ತೀಚೆಗೆ ಹೊಸ ನವೀಕರಣಗಳೊಂದಿಗೆ ಅಪ್‌ಡೇಟ್‌ ಮಾಡಿ ಬಿಡುಗಡೆ ಮಾಡಿರುವುದು. ಎಸ್‌ಯುವಿ ಅದೇ ಲುಕ್‌ನೊಂದಿಗೆ ಇದೀಗ ಆಕರ್ಷಕ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬಿಡುಗಡೆಯಾಗಿ ಮಾರಾಟದಲ್ಲಿ ಧೂಳೆಬ್ಬಿಸಿದೆ. ಈ ಮೂಲಕ ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕರಾಗಿ ಕಂಪನಿಗೆ ತನ್ನ ಸ್ಥಾನವನ್ನು ಮರಳಿ ಪಡೆಯಲು ಸಹಾಯ ಮಾಡಿದೆ.

ಹ್ಯುಂಡೈ ಕ್ರೆಟಾ ನಂತರದ ಸ್ಥಾನದಲ್ಲಿ ಟಾಟಾ ಪಂಚ್ ಇದೆ, ಇದು ಟಾಟಾ ಮೋಟಾರ್ಸ್‌ಗೆ ಭಾರೀ ಯಶಸ್ಸನ್ನು ತಂದುಕೊಟ್ಟ ಕಾರಾಗಿದೆ. ಮಾರ್ಚ್ 2025 ರಲ್ಲಿ ಬರೋಬ್ಬರಿ 17,714 ಯುನಿಟ್ ಕಾರುಗಳು ಮಾರಾಟವಾಗಿವೆ. ಟಾಟಾ ಪಂಚ್ 2025 ರ ಆರ್ಥಿಕ ವರ್ಷದಲ್ಲಿ ಎರಡನೇ ಹೆಚ್ಚು ಮಾರಾಟವಾದ ವಾಹನವಾಗಿದ್ದು, ಮಾರುತಿ ಸುಜುಕಿ ವ್ಯಾಗನ್ ಆರ್ ಅನ್ನು ಹಿಂದಿಕ್ಕಿದೆ.

top-selling-suvs-march-2025-tata-hyundai-maruti-mahindra

ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಟಾಟಾ ಪಂಚ್ ಲಭ್ಯವಿರುವ ಕಾರಣ ತನ್ನ ಪ್ರತಿಸ್ಪರ್ಧಿ ಕಾರುಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಟಾಟಾ ಪಂಚ್ ನಂತರ ಮಾರುತಿ ಸುಜುಕಿ ಬ್ರೆಝಾದ ಕಾರುಗಳು ಮಾರಾಟವಾಗಿವೆ. ವರದಿಗಳ ಪ್ರಕಾರ, ಕಳೆದ ಮಾರ್ಚ್‌ ತಿಂಗಳಲ್ಲಿ ಮಾರುತಿ ಬ್ರೆಝಾದ 16,546 ಯುನಿಟ್ ಕಾರುಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಬ್ರೆಝಾ ಕಾರು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿದೆ.

ಹಾಗೆಯೇ ಮಾರುತಿ ಬ್ರೆಝಾ ನಂತರದ ಸ್ಥಾನದಲ್ಲಿ ಟಾಟಾ ನೆಕ್ಸಾನ್ ಎಸ್‌ಯುವಿ ಭಾರತದಲ್ಲಿ ಅತೀಹೆಚ್ಚು ಮಾರಾಟವಾದ ಕಾರಾಗಿದೆ. ಕಳೆದ ಮಾರ್ಚ್‌ ತಿಂಗಳಲ್ಲಿ ಟಾಟಾ ನೆಕ್ಸಾನ್‌ನ 16,366 ಯುನಿಟ್ ಕಾರುಗಳು ಮಾರಾಟವಾಗಿವೆ. ಟಾಟಾ ನೆಕ್ಸಾನ್ ಎಸ್‌ಯುವಿಯು ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿದೆ.

top-selling-suvs-march-2025-tata-hyundai-maruti-mahindra

ಮಾರ್ಚ್ 2025 ರಲ್ಲಿ ಹೆಚ್ಚು ಮಾರಾಟವಾದ ಮೊದಲ ಐದು ಎಸ್‌ಯುವಿಗಳ ಪಟ್ಟಿಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಕೂಡ ಇದೆ. ಇದು ಕಳೆದ ವರ್ಷಕ್ಕಿಂತ ಬಲವಾದ ಮಾರಾಟವನ್ನು ಸಾಧಿಸಿದೆ. ಮಹೀಂದ್ರಾ ಸ್ಕಾರ್ಪಿಯೋ-ಎನ್ ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡುತ್ತಿದ್ದು, ಇದು ಒಟ್ಟು 13,913 ಯುನಿಟ್ ಕಾರುಗಳ ಮಾರಾಟವನ್ನು ದಾಖಲಿಸಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 8, 2025, 15:29 [IST]
English summary
Top selling suvs march 2025 tata hyundai maruti mahindra
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+