ಬಡವರ ಮೆಚ್ಚಿನ ಕಂಪನಿ ಮಾರುತಿ ಸುಜುಕಿಯಿಂದ ಬಿಡುಗಡೆಯಾಗಲಿರುವ ಕಾರುಗಳಿವು

ಹೊಸ ವರ್ಷದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಹೊಸ ಕಾರುಗಳು ಬಿಡುಗಡೆಯಾಗಲು ಸಜ್ಜಾಗುತ್ತಿದೆ. ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಈ ವರ್ಷದಲ್ಲಿ ಹಲವಾರು ಹೊಸ ಕಾರುಗಳನ್ನು ತರುತ್ತಿದೆ. ಇದರಲ್ಲಿ ಹಲವಾರು ಹೊಸ ಮಾದರಿಗಳು ಮತ್ತು ಫೇಸ್‌ಲಿಫ್ಟ್‌ಗಳನ್ನು ಪರಿಚಯಿಸಲು ಸಜ್ಜಾಗಿದೆ. ಹೆಚ್ಚು ಬಹುನಿರೀಕ್ಷಿತವಾಗಿ ಕಾರು ಪ್ರಿಯರು ಕಾಯುತ್ತಿರುವುದು ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರ್ ಕಾಗಿ ಆಗಿದೆ. ಮುಂದಿನ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮಾರುತಿ ಇ-ವಿಟಾರಾ: ಮಾರುತಿ ಸುಜುಕಿ ಕಂಪನಿಯು ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಿ ಎಲೆಕ್ಟ್ರಿಕ್ ವಾಹನ ರಂಗಕ್ಕೆ ಪ್ರವೇಶಲು ರೆಡಿಯಾಗಿದ್ದಾರೆ. ಈ ನಡುವೆ ಸುಜುಕಿ ಮೋಟಾರ್ ಕಾರ್ಪೊರೇಷನ್ ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾದ ಇವಿಟಾರಾವನ್ನು ಇತ್ತೀಚೆಗೆ ಇಟಲಿಯ ಮಿಲನ್‌ನಲ್ಲಿ ಅನಾವರಣಗೊಳಿಸಿತ್ತು. ಭಾರತೀಯ ಮಾರುಕಟ್ಟೆಯ ಜೊತೆಗೆ, ಯುರೋಪಿಯನ್ ಯೂನಿಯನ್ ಮತ್ತು ಜಪಾನ್‌ನಂತಹ ಅನೇಕ ಜಾಗತಿಕ ಮಾರುಕಟ್ಟೆಗಳಲ್ಲಿ ಇ-ವಿಟಾರಾ ಕಾರನ್ನು ಪರಿಚಯಿಸಲಾಗುವುದು.

Maruti Suzuki

ಮಾರುತಿ ಸುಜುಕಿ ಇವಿಟಾರಾ (Maruti Suzuki eVitara) ಕಾರನ್ನು ಗುಜರಾತ್‌ನಲ್ಲಿರುವ ಕಂಪನಿಯ ಸೌಲಭ್ಯದಲ್ಲಿ ತಯಾರಿಸಲಾಗುವುದು. 2023ರ ಜನವರಿ ಭಾರತದ ಆಟೋ ಎಕ್ಸ್‌ಪೋದಲ್ಲಿ ಮತ್ತು ನಂತರ ಅಕ್ಟೋಬರ್‌ನಲ್ಲಿ ಜಪಾನ್ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾದ ಮಾರುತಿ ಇವಿಎಕ್ಸ್ ಕಾನ್ಸೆಪ್ಟ್ ನಿಂದ ಸ್ಫೂರ್ತಿ ಪಡೆದಿದೆ. ಪರಿಸರ ಸ್ನೇಹಿ ಎಸ್‍ಯುವಯನ್ನು ಸುಜುಕಿಯು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ: ಸದ್ಯ ಮಾರುತಿ ಸುಜುಕಿ ಸದ್ದಿಲ್ಲದೇ 7-ಆಸನದ ಹೊಚ್ಚ ಹೊಸ 'ಗ್ರ್ಯಾಂಡ್ ವಿಟಾರಾ' ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ. ಇತ್ತೀಚೆಗೆ ನೂತನ 7-ಆಸನದ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಎನ್ನಲಾದ ಎಸ್‌ಯುವಿಯೊಂದು ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಈ ಕಾರಿನ ಬಹುತೇಕ ವಿನ್ಯಾಸ (ಡಿಸೈನ್) ಸ್ವಲ್ಪ ಮಟ್ಟಿಗೆ ಈಗಿರುವ ಗ್ರ್ಯಾಂಡ್ ವಿಟಾರಾದಂತೆಯೇ ಇದೆ.

Maruti Suzuki

ಈ ಕಾರು ಮೂರು ಪವರ್‌ಟ್ರೇನ್‌ನೊಂದಿಗೂ ಲಭ್ಯವಿದೆ. 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್), 1.5-ಲೀಟರ್ ಮೈಲ್ಡ್ ಹೈಬ್ರಿಡ್ ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಮತ್ತು ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಜೊತೆಗೆ 20.58 ರಿಂದ 27.97 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಮಾರುತಿ ಸುಜುಕಿ ಬಲೆನೊ: ಪ್ರಸ್ತುತ ತನ್ನ ಎರಡನೇ ತಲೆಮಾರಿನ ಮಾರುತಿ ಬಲೆನೊ ಕಾರು ಕೊನೆಯದಾಗಿ 2022 ರಲ್ಲಿ ನವೀಕರಣವನ್ನು ಸ್ವೀಕರಿಸಲಾಗಿತು. ಆ ಫೇಸ್‌ಲಿಫ್ಟ್‌ನಿಂದ ಸುಮಾರು ಎರಡು ವರ್ಷಗಳ ನಂತರ, 2025ರ ಮಾರ್ಚ್ ವೇಳೆಗೆ ಮತ್ತೊಂದು ನವೀಕರಣವನ್ನು ನಿರೀಕ್ಷಿಸಲಾಗಿದೆ. ವದಂತಿಗಳು ಈ ಮಾರುತಿ ಸುಜುಕಿ ಫೇಸ್‌ಲಿಫ್ಟ್ ಹೈಬ್ರಿಡ್ ಪವರ್‌ಟ್ರೇನ್ ಅನ್ನು ಪರಿಚಯಿಸಬಹುದೆಂದು ಎಂದು ಹೇಳಲಾಗುತ್ತಿದೆ. ಇದು ಮಾರುತಿಯು 2024ರ ಮೊದಲಿನಿಂದಲೂ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ.

ಮಾರುತಿ ಸುಜುಕಿ ಬ್ರೆಝಾ: 2022ರ ಕೊನೆಯಲ್ಲಿ ಈ ಬ್ರೆಝಾ ಕಾರು ಫೇಸ್‌ಲಿಫ್ಟ್‌ ಮಾದರಿಗೆ ಒಳಗಾಯಿತು. ಈ ಸ್ಕೋಡಾ ಕೈಲಾಕ್ ಮತ್ತು ಕಿಯಾ ಸೈರಸ್ ನಂತಹ ಹೊಸ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಗಳಿಂದ ಹೆಚ್ಚುತ್ತಿರುವ ಸ್ಪರ್ಧೆಯನ್ನು ಗಮನಿಸಿದರೆ, ಪ್ರತಿಸ್ಪರ್ಧಿಗಳಿಗಿಂತ ಮುಂದೆ ಉಳಿಯಲು ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ 2025ರ ಆಗಸ್ಟ್ ತಿಂಗಳ ಒಳಗೆ ಹೊಸ ನವೀಕರಣಗಳೊಂದಿಗೆ ಬ್ರೆಝಾ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 6, 2025, 13:59 [IST]
English summary
Top upcoming maruti suzuki cars in india details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+