'ಬಾಹುಬಲಿ' ಫಾರ್ಚೂನರ್ ಎಸ್‍ಯುವಿಯ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟೊಯೊಟಾ
ಫುಲ್ ಸೈಜ್ ಎಸ್‌ಯುವಿ (Full Size Suv) ವಿಭಾಗದಲ್ಲಿ ದಿಗ್ಗಜ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಎಂದಿನಂತೆ ಮುಂದುವರೆಸಿದೆ. ಪ್ರತಿ ತಿಂಗಳಿನಲ್ಲೂ, ಫುಲ್ ಸೈಜ್ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ (Toyota Fortuner) ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಮುಂದುವರೆಯುತ್ತಿದೆ. ಫುಲ್ ಸೈಜ್ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಅಗ್ರಸ್ಥ್ನಾನದಲ್ಲಿದ್ದರೂ ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕುಸಿತವನ್ನು ಕಂಡಿದೆ. ಈ ನಡುವೆ ಟೊಯೊಟಾ ಫಾರ್ಚುನರ್‌ನ GR-S ರೂಪಾಂತರದ ಬೆಲೆಯು ರೂ.50,000 ವರೆಗೆ ಹೆಚ್ಚಿಸಲಾಗಿದೆ.
ಟೊಯೊಟಾ ಫಾರ್ಚೂನರ್ ಎಸ್‍ಯುವಿಯ 2.8 ಡೀಸೆಲ್ MT 4x2, 2.8 ಡೀಸೆಲ್ AT 4x2, 2.8 ಡೀಸೆಲ್ MT 4x4, ಮತ್ತು 2.8 ಡೀಸೆಲ್ AT 4x4 ಮಾದರಿಗಳ ಬೆಲೆಯು ರೂ. 40,000 ವರೆಗೆ ಹೆಚ್ಚಿಸಲಾಗಿದೆ. ಇನ್ನು ಅದೇ ರೀತಿ, ಫಾರ್ಚುನರ್‌ನ 2.7 ಪೆಟ್ರೋಲ್ MT 4x2 ಮತ್ತು 2.7 ಪೆಟ್ರೋಲ್ ಎಟಿ 4x2 ರೂಪಾಂತರಗಳ ಬೆಲೆಯು ಈಗ ರೂ.35,000 ವರೆಗೆ ಹೆಚ್ಚಿಸಲಾಗಿದೆ.

ಇದಲ್ಲದೆ, ಲೆಜೆಂಡರ್ ಸರಣಿಯಲ್ಲಿ ಡೀಸೆಲ್ 4x2 AT ಮತ್ತು 2.8 ಡೀಸೆಲ್ 4x4 AT ಎರಡೂ ರೂಪಾಂತರಗಳ ಬೆಲೆಗಳು ರೂ. 45,000 ವರೆಗೆ ಹೆಚ್ಚಿಸಲಾಗಿದೆ. ಇನ್ನು ಟೊಯೊಟಾ ಫಾರ್ಚೂನರ್ ಎಸ್‍ಯುವಿಯ ಮಾರಾಟದ ವರದಿಯ ಬಹಿರಂಗವಾಗಿದೆ. 2024ರ ಡಿಸೆಂಬರ್ ತಿಂಗಳಿನಲ್ಲಿ ಬರೋಬ್ಬರಿ 2,206 ಯುನಿಟ್ ಫಾರ್ಚೂನರ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ಡಿಸೆಂಬರ್ ತಿಂಗಳಿನಲ್ಲಿ ಫಾರ್ಚೂನರ್ 1,876 ಯುನಿಟ್‌ಗಳು ಮಾರಾಟಗೊಳಿಸಿತು.
ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.29 ರಷ್ಟು ಕುಸಿತವನ್ನು ಕಂಡಿದೆ. ಇನ್ನು ಭರ್ಜರಿ ಬೇಡೀಕೆಯನ್ನು ಹೊಂದಿರುವುದರಿಂದ ಟೊಯೊಟಾ ಫಾರ್ಚೂನರ್ ಎಸ್‍ಯುವಿಯ ಕಾಯುವಿಕೆಯ ಅವಧಿಯನ್ನು ಹೊಂದಿದೆ. ಈ ಟೊಯೊಟಾ ಫಾರ್ಚೂನರ್ ಎಸ್‍ಯುವಿಯು ಕಾಯುವಿಕೆಯ ಅವಧಿಯು ರಾಜ್ಯ, ಡೀಲರ್‌ಶಿಪ್, ರೂಪಾಂತರ, ಬಣ್ಣ ಮತ್ತು ಇತರ ಅಂಶಗಳನ್ನು ಅವಲಂಬಿಸಿ ಬದಲಾಗುತ್ತದೆ.

ಈ ಟೊಯೊಟಾ ಫಾರ್ಚೂನರ್ ಎಸ್‍ಯುವಿ ಕಾಯುವಿಕೆಯ ಅವಧಿಯ ನಿಖರವಾದ ಮಾಹಿತಿಯನ್ನು ತಿಳಿಯಲು ನಿಮ್ಮ ಹತ್ತಿರದ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ. 7-ಸೀಟುಗಳ ಪ್ರಸ್ತುತ ಜನರೇಷನ್ ಫಾರ್ಚೂನರ್ ಎಸ್‍ಯುವಿಯನ್ನು 2016 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಟೊಯೊಟಾ ಫಾರ್ಚೂನರ್ ಜಿಆರ್ ಸ್ಪೋರ್ಟ್ ರೂಪಾಂತರವನ್ನು ಸೇರಿಸಿ ಸರಣಿಯನ್ನು ವಿಸ್ತರಿಸಲಾಗಿದೆ.
ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಲೆಜೆಂಡರ್ ಆವೃತ್ತಿಯು ಮಾರಾಟದಲ್ಲಿದೆ ಮತ್ತು ಇದು 4X4 ಆಯ್ಕೆಯೊಂದಿಗೆ ಸಹ ಲಭ್ಯವಿದೆ. ಫಾರ್ಚೂನರ್ ಲೆಜೆಂಡರ್‌ನ 4×4 ರೂಪಾಂತರವನ್ನು ಫಾರ್ಚುನರ್‌ನ ಶ್ರೇಣಿಗೆ ಸೇರಿಸಿತು. ಈ ಟೊಯೊಟಾ ಫಾರ್ಚುನರ್‌ನ ಜಿಆರ್-ಸ್ಪೋರ್ಟ್ ರೂಪಾಂತರವನ್ನು ಕೂಡ ಬಿಡುಗಡೆಗೊಳಿಸಿತ್ತು. ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಬೆಲೆಗಳಲ್ಲಿನ ಹೆಚ್ಚಳವನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ.

ಈ ಟೊಯೊಟಾ ಫಾರ್ಚೂನರ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯು ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದ್ದು, ಇದು ಎಸ್‍ಯುವಿಯು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಟೊಯೊಟಾ ಫಾರ್ಚುನರ್ ಎಸ್‍ಯುವಿಯಲ್ಲಿ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ.
ಈ ಎಸ್‍ಯುವಿಯಲ್ಲಿ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಹೊಂದಿವೆ. ಟೊಯೊಟಾ ಫಾರ್ಚುನರ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಒಳಭಾಗದಲ್ಲಿ ಈಗ ಹೆಚ್ಚು ಪ್ರೀಮಿಯಂ ಆಗಿ ನವೀಕರಿಸಿದ್ದು, ಕೆಲವು ಹೊಸ ಫೀಚರ್ಸ್ ಗಳನ್ನು ಹೊಂದಿವೆ. ಟೊಯೊಟಾ ತನ್ನ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.
ಈ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಟಾಪ್ ವೆರಿಯೆಂಟ್ ಲೆಜೆಂಡರ್ ಆಗಿದೆ. ಈ ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ. ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ಮಾದರಿಗೆ ಹೋಲಿಸಿದರೆ 4X4 ವೆರಿಯೆಂಟ್ ಯಾವುದೇ ವಿಶೇಷ ಬಾಹ್ಯ ಬಿಟ್‌ಗಳನ್ನು ಪಡೆಯುವುದಿಲ್ಲ. ಫಾರ್ಚುನರ್ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ.


Click it and Unblock the Notifications








