30 ಕಿ.ಮೀ ಮೈಲೇಜ್.. 5-ಸೀಟರ್, ಇನ್ನು 6.90 ಲಕ್ಷದ ಈ ಟೊಯೊಟಾ ಕಾರಿನ ಎಲ್ಲ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌!

ಟೊಯೊಟಾ ಗ್ಲಾನ್ಜಾ (Toyota Glanza) ಜನಪ್ರಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಗಿದೆ. ಈ ಕಾರು ಹೆಚ್ಚು ಅತ್ಯಾಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ 'ಗ್ಲಾನ್ಜಾ' ಹ್ಯಾಚ್‌ಬ್ಯಾಕ್‌ನ್ನು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸಲು ನವೀಕರಿಸಿಯೂ ಮಾರಾಟಕ್ಕೆ ತರಲಾಗಿದೆ. ಬನ್ನಿ, ಆ ಬಗ್ಗೆ ಇಲ್ಲಿದೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಇನ್ಮುಂದೆ ಟೊಯೊಟಾ ಗ್ಲಾನ್ಜಾ ಕಾರಿನ ಎಲ್ಲ ಹೊಸ ರೂಪಾಂತರಗಳು (ವೇರಿಯೆಂಟ್) ಸ್ಟ್ಯಾಂಡರ್ಡ್ ಆಗಿ 6 ಏರ್‌ಬ್ಯಾಗ್‌ಗಳೊಂದಿಗೆ ಖರೀದಿಗೆ ಲಭ್ಯವಾಗಲಿವೆ. ಸುರಕ್ಷತೆಯ ದೃಷ್ಟಿಯಿಂದ ಈ ಹ್ಯಾಚ್‌ಬ್ಯಾಕ್‌ನ್ನು ಮೇಲ್ದರ್ಜೆರಿಸಿದ್ದರೂ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ನೂತನ ಗ್ಲಾನ್ಜಾ ಕಾರು ರೂ.6.90 ಲಕ್ಷದಿಂದ ರೂ.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Toyota Glanza Gets 6 Airbags As Standard Rs 6 90 Lakh Price Details

ಟೊಯೊಟಾ ಗ್ಲಾನ್ಜಾ ಹ್ಯಾಚ್‌ಬ್ಯಾಕ್‌ ಮಾರಾಟವನ್ನು ಹೆಚ್ಚಿಸಲು ಕಂಪನಿಯು 'ಪ್ರೆಸ್ಟೀಜ್ ಪ್ಯಾಕೇಜ್'ನ್ನು ಘೋಷಣೆ ಮಾಡಿದೆ. ಈ ಸೀಮಿತ ಅವಧಿ ಕೊಡುಗೆಯು ಜುಲೈ 31ರವರೆಗೆ ಮಾನ್ಯವಾಗಿರಲಿದೆ. ಇದರಡಿ ಪ್ರೀಮಿಯಂ ಡೋರ್ ವೈಸರ್‌ಗಳು, ಕ್ರೋಮ್ & ಬ್ಲ್ಯಾಕ್ ಅಕ್ಸೆಂಟ್‌ಗಳೊಂದಿಗೆ ಬಾಡಿ ಸೈಡ್ ಮೋಲ್ಡಿಂಗ್, ರೇರ್ ಲ್ಯಾಂಪ್ ಗಾರ್ನಿಶ್, ಔಟ್ ಸೈಡ್ ರೇರ್‌ವ್ಯೂ ಮಿರರ್‌ಗಳು & ಫೆಂಡರ್‌ಗಳಿಗಾಗಿ ಕ್ರೋಮ್ ಗಾರ್ನಿಶ್‌ಗಳು, ರೇರ್ ಸ್ಕಿಡ್ಡ್ ಪ್ಲೇಟ್ ಮತ್ತು ಇಲ್ಯುಮಿನೇಟೆಡ್ ಡೋರ್ ಸಿಲ್‌ಗಳು ಸೇರಿದಂತೆ ಹಲವು ಅಕ್ಸೆಸೊರಿಗಳನ್ನು ಒದಗಿಸಲಾಗುತ್ತದೆ.

ಟೊಯೊಟಾ ಗ್ಲಾನ್ಜಾ ವಿಶೇಷತೆಗಳೇನು:

ಈ ಕಾರು ಇ, ಎಸ್, ಜಿ ಹಾಗೂ ವಿ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಹೊರಭಾಗದಲ್ಲೂ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಇದು ನೋಡುಗರ ಸೆಳೆಯುವಂತಿದ್ದು, ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ ಮತ್ತು ಸ್ಪೋರ್ಟಿನ್ ರೆಡ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.

Toyota Glanza Gets 6 Airbags As Standard Rs 6 90 Lakh Price Details

ನೂತನ ಗ್ಲಾನ್ಜಾ 2 ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಮತ್ತೊಂದು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 22.35 ರಿಂದ 30.61 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 37 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. 3990 ಎಂಎಂ ಉದ್ದ, 1745 ಎಂಎಂ ಅಗಲ ಮತ್ತು 1500 ಎಂಎಂ ಎತ್ತರವು ಇದೆ.

Toyota Glanza Gets 6 Airbags As Standard Rs 6 90 Lakh Price Details

ಇದರ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. ಒಟ್ಟು 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ, ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 318 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.

ಈ ಕಾರು 9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಎಂಜಿನ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್ ಮತ್ತು ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು ಮಾತ್ರವಲ್ಲದೆ, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ವಿಎಸ್‍ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

Article Published On: Friday, July 11, 2025, 17:23 [IST]
English summary
Toyota glanza gets 6 airbags as standard rs 6 90 lakh price details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+