Toyota: ಟೊಯೋಟಾ ಕಾರುಗಳನ್ನು ಮುಗಿಬಿದ್ದು ಖರೀದಿ: ಆಕರ್ಷಕ ಕಾರುಗಳ ಅದ್ದೂರಿ ಮಾರಾಟ!

ಟೊಯೋಟಾ ಕಾರುಗಳೆಂದರೆ ದೇಶದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ, ವಿಶ್ವಾಸಾರ್ಹ ಎಂಜಿನ್‌ನೊಂದಿಗೆ ಕಂಪನಿಯ ಕಾರುಗಳು ಭಾರತದಲ್ಲಿ ಉತ್ತಮ ಮಾರಾಟವನ್ನು ಕಾಣುತ್ತವೆ. ಇದೀಗ ಟೊಯೊಟಾ 2025ರ ಆರ್ಥಿಕ ವರ್ಷದಲ್ಲಿ ಶೇ28 ರಷ್ಟು ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ, ಇದು ಇದುವರೆಗಿನ ಅತ್ಯುತ್ತಮ ವಾರ್ಷಿಕ ಕಾರ್ಯಕ್ಷಮತೆಯಾಗಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) 2024-25ರ ಆರ್ಥಿಕ ವರ್ಷದಲ್ಲಿ 3,37,148 ಯುನಿಟ್ ಕಾರುಗಳನ್ನು ಮಾರಾಟ ಮಾಡುವ ಮೂಲಕ ತನ್ನ ಅತ್ಯಧಿಕ ವಾರ್ಷಿಕ ಮಾರಾಟವನ್ನು ಸಾಧಿಸಿದೆ. 2023-24ರ ಆರ್ಥಿಕ ವರ್ಷದಲ್ಲಿ 2,63,512 ಯುನಿಟ್ ಕಾರುಗಗಳು ಮಾರಾಟವಾಗಿದ್ದವು.

ಮಾರ್ಚ್ 2025 ರಲ್ಲಿ, ಟೊಯೋಟಾ 30,043 ಯುನಿಟ್ ಕಾರುಗಳ ಮಾರಾಟವನ್ನು ದಾಖಲಿಸಿದೆ, ಇದು 2024 ರ ಮಾರ್ಚ್‌ನಲ್ಲಿ ಮಾರಾಟವಾಗಿದ್ದ 27,180 ಯುನಿಟ್ ಕಾರುಗಳಿಗೆ ಹೋಲಿಸಿದರೆ ವಾರ್ಷಿಕವಾಗಿ ಶೇ11 ರಷ್ಟು ಹೆಚ್ಚಳವನ್ನು ಸಾಧಿಸಿದೆ. ಈ ಪೈಕಿ 28,373 ಯುನಿಟ್ ಕಾರುಗಳು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದರೆ, 1,670 ಯುನಿಟ್ ಕಾರುಗಳನ್ನು ರಫ್ತು ಮಾಡಲಾಗಿದೆ.

toyota-kirloskar-motor-2024-25-financial-year-sales-report

ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಇನ್ನೋವಾ ಹೈಕ್ರಾಸ್ ಗಮನಾರ್ಹ ಮಾರಾಟದ ಮೈಲಿಗಲ್ಲುಗಳನ್ನು ದಾಟಿದ್ದು, ಮಾರುಕಟ್ಟೆಯಲ್ಲಿ ಟೊಯೊಟಾದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಅರ್ಬನ್ ಕ್ರೂಸರ್ ಟೈಸರ್ ಮತ್ತು ಕ್ಯಾಮ್ರಿ ಹೈಬ್ರಿಡ್‌ನಂತಹ ಮಾದರಿಗಳು ಸೇರಿದಂತೆ ಟೊಯೋಟಾ ತನ್ನ ನವೀಕರಿಸಿದ ಕಾರುಗಳೊಂದಿಗೆ ಭಾರತದಲ್ಲಿ ಭಾರೀ ಯಶಸ್ಸನ್ನು ಕಂಡಿದೆ.

ಶ್ರೇಣಿ 2 ಮತ್ತು 3 ನಗರಗಳಲ್ಲಿ ಟೊಯೋಟಾದ ಬಲವಾದ ಉಪಸ್ಥಿತಿಯಿಂದಾಗಿ ತನ್ನ ಗ್ರಾಹಕರಿಗೆ ಕಾರುಗಳು ಹತ್ತಿರದಲ್ಲಿ ಸಿಗುವಂತೆ ಮಾಡಿದೆ. ಕಂಪನಿಯು ತನ್ನ ಬೆಳವಣಿಗೆಗೆ ಮುಖ್ಯವಾಗಿ ಎಸ್‌ಯುವಿಗಳು ಮತ್ತು ಎಂಪಿವಿಗಳು ಹೆಚ್ಚಿನ ಕೊಡುಗೆ ನೀಡಿರುವುದಾಗಿ ಹೇಳಿದೆ. ಟೊಯೋಟಾ ಪ್ರಕಾರ ಶೇ 35 ರಷ್ಟು ಹೆಚ್ಚಳವನ್ನು ಕಂಡಿದೆ, ಜೊತೆಗೆ ರಫ್ತುಗಳಲ್ಲಿ ಶೇ 59 ರಷ್ಟು ಹೆಚ್ಚಳವನ್ನು ಕಂಡಿದೆ. ಇದು ಟೊಯೊಟಾದ ಪ್ರಮುಖ ಉತ್ಪಾದನಾ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.

toyota-kirloskar-motor-2024-25-financial-year-sales-report

ಸೇಲ್ಸ್-ಸರ್ವೀಸ್-ಯೂಸ್ಡ್ ಕಾರ್ ಬಿಸಿನೆಸ್ & ಪ್ರಾಫಿಟ್ ಎನ್ಹಾನ್ಸ್ಮೆಂಟ್ನ ಉಪಾಧ್ಯಕ್ಷ ವರಿಂದರ್ ವಾಧ್ವಾ ಮಾತನಾಡಿ, ಎಸ್‌ವಿಯು, ಎಂಪಿವಿ ಮತ್ತು ಹೈಬ್ರಿಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚುತ್ತಿರುವ ರಫ್ತು ಮತ್ತು ಸಣ್ಣ ನಗರಗಳಲ್ಲಿ ಆಳವಾದ ತೊಡಗಿಸಿಕೊಳ್ಳುವಿಕೆಯು ಟೊಯೊಟಾದ ಯಶಸ್ಸಿಗೆ ಕಾರಣವಾಗಿದೆ. ಟೊಯೊಟಾದ ಗ್ರಾಹಕ-ಕೇಂದ್ರಿತ ವಿಧಾನ ಮತ್ತು ವೈವಿಧ್ಯಮಯ ಉತ್ಪನ್ನ ಶ್ರೇಣಿಯು ಹೆಚ್ಚುತ್ತಿರುವ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕಂಪನಿಯನ್ನು ಪ್ರತ್ಯೇಕಿಸುತ್ತಿದೆ ಎಂದು ಹೇಳಿದರು.

ಗ್ರಾಹಕರ ಅನುಭವವನ್ನು ಹೆಚ್ಚಿಸಲು, ಟೊಯೊಟಾ ಟಿ-ಕೇರ್ ಮತ್ತು ಟಿ-ಗ್ಲೋಸ್‌ನಂತಹ ಮಾಲೀಕತ್ವದ ಪರಿಹಾರಗಳ ಮೇಲೆ ಕೇಂದ್ರೀಕರಿಸಿದ್ದ, ಜೊತೆಗೆ ಪೂರ್ವ-ಮಾಲೀಕತ್ವದ ಕಾರುಗಳಿಗೆ ಟೊಯೊಟಾ ಮೊಬಿಲಿಟಿ ಸೊಲ್ಯೂಷನ್ಸ್ ಅನ್ನು ವಿಸ್ತರಿಸಿದೆ. ಈ ಉಪಕ್ರಮಗಳು ಬ್ರಾಂಡ್ ನಿಷ್ಠೆ ಮತ್ತು ಗ್ರಾಹಕರ ತೃಪ್ತಿಯನ್ನು ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

toyota-kirloskar-motor-2024-25-financial-year-sales-report

ಒಟ್ಟಾರೆ ಟೊಯೋಟಾ ಭಾರತದಲ್ಲಿ ತನ್ನ ಸ್ಥಾನವನ್ನು ಕಾಪಾಡಿಕೊಳ್ಳುವ ಮೂಲಕ ಪ್ರಮುಖ ವಾಹನ ತಯರಾಕರ ಪಟ್ಟಿಯಲ್ಲಿ ಉಳಿದಿದೆ. ಸದ್ಯ ವಿವಿಧ ಕಾರು ಬ್ರಾಂಡ್‌ಗಳು ಹೊಸ ಉತ್ಪನ್ನಗಳೊಂದಿಗೆ ಹೆಚ್ಚಿನ ಪೈಪೋಟಿ ನೀಡುತ್ತಿದ್ದರೇ, ಟೊಯೋಟಾ ಮಾತ್ರ ತನ್ನ ಐಕಾನಿಕ್ ಕಾರುಗಳ ಮೂಲಕ ಪ್ರತ್ಯೇಕ ಅಭಿಮಾನಿಗಳನ್ನು ಉಳಿಸಿಕೊಂಡು ಭಾರತದಲ್ಲಿ ಮುನ್ನುಗ್ಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 2, 2025, 12:20 [IST]
English summary
Toyota kirloskar motor 2024 25 financial year sales report
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+