Toyota: ಟೊಯೋಟಾ ಕಾರುಗಳಿಗೆ ಇಷ್ಟೊಂದು ಬೇಡಿಕೆಯೇ? ಜೂನ್‌ನಲ್ಲಿ ಜನ ಮುಗಿಬಿದ್ದು ಖರೀದಿ!
ಟೊಯೋಟಾ (Toyota) ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಭಾರತದಲ್ಲಿ ತನ್ನ ವೇಗವನ್ನು ಮುಂದುವರಿಸಿದೆ. ಮಾರಾಟದಲ್ಲಿ ಬಲವಾದ ಬೇಡಿಕೆ ವ್ಯಕ್ತವಾಗಿದ್ದು, ಭಾರತೀಯ ಗ್ರಾಹಕರು ಜೂನ್ ತಿಂಗಳಲ್ಲಿ ಟೊಯೋಟಾ ಕಾರುಗಳನ್ನು ಮುಗಿಬಿದ್ದು ಖರೀದಿಸಿದ್ದಾರೆ. ಕಂಪನಿಯ ಪ್ರಮುಖ ಕಾರುಗಳಾದ ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್, ಟೊಯೋಟಾ ರೂಮಿಯನ್, ಟೊಯೋಟಾ ಇನ್ನೋವಾ ಕ್ರಿಸ್ಟಾ, ಟೊಯೋಟಾ ಗ್ಲಾಂಜಾದಂತಹ ಕಾರುಗಳು ಹೆಚ್ಚಾಗಿ ಮಾರಾಟವಾಗಿವೆ. ಇವುಗಳಿಗೆ ದೇಶದಲ್ಲಿ ಉತ್ತಮ ಬೇಡಿಕೆಯಿದ್ದು, ಜೂನ್ 2025 ರಲ್ಲಿ ಕಂಪನಿಗೆ ಭರ್ಜರಿ ಲಾಭವನ್ನು ತಂದುಕೊಟ್ಟಿವೆ. ಜೂನ್ ತಿಂಗಳ ಮಾರಾಟ ವರದಿಯನ್ನು ಕಂಪನಿ ಪ್ರಕಟಿಸಿದೆ.
ಟೊಯೋಟಾ ವರ್ಷದಿಂದ ವರ್ಷಕ್ಕೆ ಶೇ5 ರಷ್ಟು ಮಾರಾಟ ಬೆಳವಣಿಗೆಯನ್ನು ವರದಿ ಮಾಡಿದೆ. ಅಂದಹಾಗೆ ಕಂಪನಿಯು ಜೂನ್ ತಿಂಗಳಲ್ಲಿ ಒಟ್ಟು 28,869 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಇದು ಜೂನ್ 2024 ರಲ್ಲಿ ಮಾರಾಟವಾಗಿದ್ದ 27,474 ಯುನಿಟ್ ಕಾರುಗಳಿಗೆ ಹೋಲಿಸಿದರೆ ಗಣನೀಯ ಬೆಳವಣಿಗೆ ಸಾಧಿಸಿದೆ.

ಈ ಅಂಕಿ ಅಂಶವು ದೇಶೀಯವಾಗಿ ಮಾರಾಟವಾದ 26,453 ಯುನಿಟ್ ಕಾರುಗಳು ಮತ್ತು ರಫ್ತು ಮಾಡಿದ 2,416 ಯುನಿಟ್ ಕಾರುಗಳನ್ನು ಒಳಗೊಂಡಿದೆ. ಜೂನ್ 2025 ರ ಮಾರಾಟವು ಮೇ 2025 ಕ್ಕೆ ಹೋಲಿಸಿದರೆ ಶೇ 6.46 ರಷ್ಟು ಕುಸಿತ ಕಂಡಿದೆ. ತಿಂಗಳಿನಿಂದ ತಿಂಗಳಿಗೆ ಸ್ವಲ್ಪ ಇಳಿತವನ್ನು ತೋರಿಸಿದೆ. ಅಂದರೆ ಮೇ 2025 ರಲ್ಲಿ 30,864 ಯುನಿಟ್ ಕಾರುಗಳು ಮಾರಾಟವಾಗಿದ್ದವು.
2025 ರ ಮೊದಲಾರ್ಧದಲ್ಲಿ (ಜನವರಿಯಿಂದ ಜೂನ್ ವರೆಗೆ), ಟೊಯೋಟಾ ಮಾರಾಟ ಪ್ರಮಾಣದಲ್ಲಿ ಶೇ 16 ರಷ್ಟು ಹೆಚ್ಚಳವನ್ನು ಸಾಧಿಸಿದೆ. 2024 ರ ಅವಧಿಯಲ್ಲಿ ಟೊಯೋಟಾ 1,50,250 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಈ ಬಾರಿ (2025 ರ ಮೊದಲಾರ್ಧ) ಬರೋಬ್ಬರಿ 1,74,885 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಹೆಚ್ಚುವರಿಯಾಗಿ, ಜೂನ್ 2025 ರಲ್ಲಿ ಫಾರ್ಚೂನರ್ ಮತ್ತು ಲೆಜೆಂಡರ್ ಅನ್ನು ಹೊಸ 'ನಿಯೋ ಡ್ರೈವ್' ವೇರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಲಾಯಿತು, ಇದು ಹೆಚ್ಚಿನ ಮೈಲೇಜ್, ಡ್ರೈವ್ ಪರ್ಫಾಮೆನ್ಸ್ ಮತ್ತು ಸೌಕರ್ಯವನ್ನು ಸುಧಾರಿಸುವ ಸುಧಾರಿತ 48-ವೋಲ್ಟ್ ಸಿಸ್ಟಮ್ ಒಳಗೊಂಡಿದೆ. ಈಗ ಟೊಯೋಟಾ ಪ್ರಮುಖ PEM [ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್] ಹೈಡ್ರೋಜನ್ ತಂತ್ರಜ್ಞಾನ ಪೂರೈಕೆದಾರ ಓಹ್ಮಿಯಮ್ ಇಂಟರ್‌ನ್ಯಾಷನಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಒಪ್ಪಂದದ ಭಾಗವಾಗಿ ಎರಡೂ ಕಂಪನಿಗಳು ಮೈಕ್ರೋಗ್ರಿಡ್‌ನಂತಹ ಸಂಯೋಜಿತ, ಹಸಿರು ಹೈಡ್ರೋಜನ್ - ಚಾಲಿತ ವಿದ್ಯುತ್ ಪರಿಹಾರಗಳ ಕಾರ್ಯಸಾಧ್ಯತೆಯನ್ನು ನಿರ್ಣಯಿಸುತ್ತವೆ. ಇದನ್ನು ಡೇಟಾಸೆಂಟರ್‌ಗಳು, ಪರಿಸರ ನಿರ್ಬಂಧಗಳಿಗೆ ಸೂಕ್ಷ್ಮವಾಗಿರುವ ದೂರದ ಸ್ಥಳಗಳು ಮುಂತಾದ ವೈವಿಧ್ಯಮಯ ಬಳಕೆಯ ಸಂದರ್ಭಗಳಲ್ಲಿ ಅನ್ವಯಿಸಬಹುದು ಎಂದು ಕಂಪನಿ ತಿಳಿಸಿದೆ.

ಪ್ರತಿ ಹಂತದಲ್ಲೂ ಅವರ ಮಾಲೀಕತ್ವದ ಅನುಭವವನ್ನು ಶ್ರೀಮಂತಗೊಳಿಸುವ ಗುರಿಯನ್ನು ಹೊಂದಿರುವ ಟೊಯೋಟಾ, ಮೌಲ್ಯವರ್ಧಿತ ಕೊಡುಗೆಗಳ ಮೂಲಕ ಗ್ರಾಹಕರೊಂದಿಗೆ ಬಲವಾಗಿ ತೊಡಗಿಸಿಕೊಂಡಿದೆ. ವರ್ಷದ ಎಲ್ಲಾ ದಿನಗಳಲ್ಲಿ ನಾವು ಚುರುಕಾಗಿದ್ದೇವೆ, ನಮ್ಮ ಗ್ರಾಹಕರು ಏನು ಬಯಸುತ್ತಾರೆ ಎಂಬುದರ ಮೇಲೆ ಕೇಂದ್ರೀಕರಿಸಿ ಮಾರುಕಟ್ಟೆಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವುದನ್ನು ಮುಂದುವರೆಸುವುದಾಗಿ ಕಂಪನಿ ಹೇಳಿದೆ.
ಟೊಯೋಟಾ ಮಾರಾಟ ಸೇವೆ ಹಾಗೂ ಬಳಸಿದ ಕಾರು ವ್ಯವಹಾರದ (Used Car Business) ಉಪಾಧ್ಯಕ್ಷ ವರೀಂದರ್ ವಾಧ್ವಾ ಮಾತನಾಡಿ, ಮಾಲೀಕತ್ವದ ಅನುಭವವನ್ನು ಹೆಚ್ಚಿಸಲು ಮಾರಾಟ ನಂತರದ ಸೇವೆ ಮತ್ತು ಮೌಲ್ಯವರ್ಧಿತ ಕೊಡುಗೆಗಳ ಮೂಲಕ ಬಲವಾದ ಗ್ರಾಹಕ ತೊಡಗಿಸಿಕೊಳ್ಳುವಿಕೆಯಿದೆ. ವರ್ಷವಿಡೀ ಮಾರುಕಟ್ಟೆಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು TKM ಚುರುಕಾಗಿ ಮತ್ತು ಗ್ರಾಹಕ-ಕೇಂದ್ರಿತವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.


Click it and Unblock the Notifications








