ಇತ್ತೀಚೆಗೆ ಬಿಡುಗಡೆ: ಹೊಸ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಏರೋ ಎಡಿಷನ್ ವಿಶೇಷತೆಗಳು
ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಏರೋ ಎಡಿಷನ್ ಅನ್ನು ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ಹೈರೈಡರ್ SUV ಯ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿರುವ ಲಿಮಿಟೆಡ್ ಎಡಿಷನ್ ಸ್ಟೈಲಿಂಗ್ ಪ್ಯಾಕೇಜ್ ಆಗಿದ್ದು, ಇದರ ಬೆಲೆ ರೂ.31,999 ಹೆಚ್ಚುವರಿಯಾಗಿರುತ್ತದೆ. ಇದು ಪ್ರಾಥಮಿಕವಾಗಿ SUV ಯ ಸ್ಪೋರ್ಟಿ ಮತ್ತು ಆಕ್ರಮಣಕಾರಿ ನೋಟವನ್ನು ಮೂರು ಬಾಹ್ಯ ಬಾಡಿ ಕಿಟ್ ಗಳೊಂದಿಗೆ ಹೆಚ್ಚಿಸುತ್ತದೆ. ಒಟ್ಟಾರೆ ಹೈರೈಡರ್‌ನ ರಸ್ತೆ ಉಪಸ್ಥಿತಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಏರೋ ಎಡಿಷನ್ ಅತ್ಯಾಧುನಿಕತೆ, ಪ್ರತ್ಯೇಕತೆ ಮತ್ತು ಆಧುನಿಕ ಸೌಕರ್ಯವನ್ನು ಬಯಸುವ ಗ್ರಾಹಕರಿಗಾಗಿದೆ ಪರಿಚಯಿಸಲಾಗಿದೆ ಎಂದು ಟೊಯೋಟಾ ಹೇಳಿದೆ.
ವಿಶೇಷ ಸ್ಟೈಲಿಂಗ್: ಇದರ ಹೊಸ ಮುಂಭಾಗದ ಸ್ಪಾಯ್ಲರ್ ಸೇರ್ಪಡೆಯು ಎಸ್‌ಯುವಿಯ ದಿಟ್ಟ ಪಾತ್ರವನ್ನು ಹೆಚ್ಚಿಸುತ್ತದೆ, ಹಿಂಭಾಗದ ಸ್ಪಾಯ್ಲರ್ - ಶೈಲಿ ಮತ್ತು ಕಾರ್ಯ ಎರಡಕ್ಕೂ ಆಕರ್ಷಕ ಹೊಸ ಹಿಂಭಾಗದ ಸ್ಪಾಯ್ಲರ್ ಏರೋಡೈನಮಿಕ್ ದಕ್ಷತೆಗೆ ಕೊಡುಗೆ ನೀಡುವುದರ ಜೊತೆಗೆ ಸ್ಪೋರ್ಟಿ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ತೀಕ್ಷ್ಣ ಮತ್ತು ಹೆಚ್ಚು ಆಕ್ರಮಣಕಾರಿ ನಿಲುವನ್ನು ನೀಡುತ್ತದೆ.

ಅರ್ಬನ್ ಕ್ರೂಸರ್ ಹೈರೈಡರ್ ಬೆಲೆಯು ರೂ. 10.94 ಲಕ್ಷದಿಂದ (ಎಕ್ಸ್ - ಶೋರೂಂ) ಆರಂಭವಾಗುತ್ತದೆ. ಹೊಸ ಸ್ಪೆಷಲ್ ಎಡಿಷನ್ ಏರೋ ಎಡಿಷನ್ ವೈಟ್, ಸಿಲ್ವರ್, ಬ್ಲಾಕ್ ಮತ್ತು ರೆಡ್ ಸೇರಿದಂತೆ ನಾಲ್ಕು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಈ ಕಾರು ಸ್ವಯಂ-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ಬಿ - ಎಸ್‌ಯುವಿ ವಿಭಾಗದಲ್ಲಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಪವರ್ ನೀಡುತ್ತದೆ.
ಕ್ಯಾಬಿನ್ ಒಳಗೆ, ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್ ಮತ್ತು 360 - ಡಿಗ್ರಿ ಕ್ಯಾಮೆರಾ, ವೆಂಟಿಲೇಟೆಡ್ ಸೀಟುಗಳು, ಪನೋರಮಿಕ್ ಸನ್‌ರೂಫ್, 9 - ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಬರುತ್ತದೆ. USB ಚಾರ್ಜಿಂಗ್, ಹೊಂದಿಕೊಳ್ಳುವ 60:40 ಸ್ಪ್ಲಿಟ್ ಹಿಂಭಾಗದ ಸೀಟ್ ಹಾಗೂ ಹಿಂಭಾಗದ ರಿಕ್ಲೈನ್ ಸೀಟುಗಳು, ಹಿಂಭಾಗದ AC ವೆಂಟ್‌ಗಳು ಸೇರಿದಂತೆ ಆಧುನಿಕ ಭಾರತೀಯ ಕುಟುಂಬಗಳ ಅಗತ್ಯಗಳಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ.
ಟೊಯೋಟಾ 66 ವಿಶೇಷ ಪರಿಕರಗಳು, ಸಮಗ್ರ 3 - ವರ್ಷ/100,000 ಕಿ.ಮೀ ವಾರಂಟಿ (5 ವರ್ಷ/220,000 ಕಿಮೀ ವರೆಗೆ ವಿಸ್ತರಿಸಬಹುದು) ಮತ್ತು ಉದ್ಯಮ - ಪ್ರಮುಖ 8 - ವರ್ಷ/160,000 ಕಿ.ಮೀ ಹೈಬ್ರಿಡ್ ಬ್ಯಾಟರಿ ವಾರಂಟಿಯನ್ನು ನೀಡುವ ಮೂಲಕ ಮಾಲೀಕತ್ವದ ಅನುಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಟೊಯೋಟಾ ಹೇಳಿದೆ.
ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಮತ್ತು ನಿಯೋ ಡ್ರೈವ್, ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಇ - ಡ್ರೈವ್ ಟ್ರಾನ್ಸ್‌ಮಿಷನ್ ಸೇರಿದಂತೆ ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ನಿಯೋ ಡ್ರೈವ್ 1.5-ಲೀಟರ್ ಕೆ-ಸಿರೀಸ್ ಎಂಜಿನ್, 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 2WD ಮತ್ತು 4WD ಆಯ್ಕೆಗಳೊಂದಿಗೆ 6 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
40% ದೂರ ಮತ್ತು 60% ಸಮಯವನ್ನು ಎಲೆಕ್ಟ್ರಿಕ್ ಪವರ್‌ನಲ್ಲಿ ಚಲಿಸುತ್ತದೆ. ಪ್ರತಿ ಲೀಟರ್‌ಗೆ 27.97 ಕಿ.ಮೀ/ಲೀ ಮೈಲೇಜ್ ನೀಡುತ್ತದೆ. ಹೈರೈಡರ್‌ನ ಹೊರಭಾಗವು ಗಮನಾರ್ಹವಾದ ಕ್ರಿಸ್ಟಲ್ ಅಕ್ರಿಲಿಕ್ ಗ್ರಿಲ್, ಸಿಗ್ನೇಚರ್ ಟ್ವಿನ್ LED DRLಗಳು ಮತ್ತು ಸೊಗಸಾದ 17-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಒಟ್ಟಾರೆ ಟೊಯೋಟಾದ ಜನಪ್ರಿಯ ಎಸ್‌ಯುವಿಗೆ ಹೆಚ್ಚುವರಿ ಪ್ರತಿಷ್ಠೆ ಮತ್ತು ಪ್ರೀಮಿಯಂ ಆಕರ್ಷಣೆಯನ್ನು ತರುವ ಲಿಮಿಟೆಡ್ - ಎಡಿಷನ್ ಸ್ಟೈಲಿಂಗ್ ಪ್ಯಾಕೇಜ್ ಇದಾಗಿದೆ. ಹೈರೈಡರ್‌ನ ರಸ್ತೆ ಉಪಸ್ಥಿತಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಏರೋ ಎಡಿಷನ್ ಅತ್ಯಾಧುನಿಕತೆ, ಪ್ರತ್ಯೇಕತೆ ಮತ್ತು ಆಧುನಿಕ ಸೌಕರ್ಯವನ್ನು ಬಯಸುವ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು ಸಂಸ್ಕರಿಸಿದ ವಿವರಗಳೊಂದಿಗೆ ದಿಟ್ಟ ಡಿಸೈನ್ ನೊಂದಿಗೆ ಬರುತ್ತದೆ.


Click it and Unblock the Notifications








