Toyota: ಹೊಸ ಟೊಯೋಟಾ ಹೈಬ್ರಿಡ್ ಕಾರಿಗೆ ಹೆಚ್ಚಾಯ್ತು ಬೇಡಿಕೆ: ಪ್ರೆಸ್ಟೀಜ್ ಪ್ಯಾಕೇಜ್ ಪರಿಚಯ

ಗ್ರಾಹಕರ ಸಂತೋಷವನ್ನು ಹೆಚ್ಚಿಸುವ ಸಲುವಾಗಿ ಟೊಯೋಟಾ (Toyota) ಕಂಪನಿಯು ತನ್ನ ಜನಪ್ರಿಯ ಸೆಲ್ಫ್ - ಚಾರ್ಜಿಂಗ್ ಹೈಬ್ರಿಡ್ ಎಸ್‌ಯುವಿ ಆಗಿರುವ ಅರ್ಬನ್ ಕ್ರೂಸರ್ ಹೈರೈಡರ್‌ಗಾಗಿ ಸೀಮಿತ ಅವಧಿಯ 'ಪ್ರೆಸ್ಟೀಜ್ ಪ್ಯಾಕೇಜ್' ಅನ್ನು ಪರಿಚಯಿಸಿದೆ. ಈ ಎಸ್‌ಯುವಿ ಈಗಾಗಲೇ ದಿಟ್ಟ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸ್ಟೈಲಿಷ್ ಲುಕ್‌ ಹೊಂದಿದೆ. ಇದರ ಜೊತೆಗೆ ಈ ವಿಶೇಷ ಪ್ರೆಸ್ಟೀಜ್ ಪ್ಯಾಕೇಜ್ ಹೆಚ್ಚುವರಿ ಆಕರ್ಷಣೆಯನ್ನು ನೀಡಲಿದೆ. ಜುಲೈ 2025 ರಿಂದ ಲಭ್ಯವಿರುವ ಪ್ರೆಸ್ಟೀಜ್ ಪ್ಯಾಕೇಜ್ 10 ಉನ್ನತ-ಮೌಲ್ಯದ, ಡೀಲರ್-ಫಿಟೆಡ್ ಮತ್ತು ಒರಿಜಿನಲ್ ಅಕ್ಸೆಸೊರಿಗಳನ್ನು ಒಳಗೊಂಡಿದೆ.

ಹೊಸ ಪ್ರೆಸ್ಟೀಜ್ ಪ್ಯಾಕೇಜ್ ಅಡಿಯಲ್ಲಿ ಡೋರ್ ವೈಸರ್, ಹುಡ್ ಎಂಬ್ಲಮ್, ಹಿಂಭಾಗದ ಡೋರ್ ಲಿಡ್ ಗಾರ್ನಿಶ್, ಫೆಂಡರ್ ಗಾರ್ನಿಶ್, ಬಾಡಿ ಕ್ಲಾಡಿಂಗ್, ಮುಂಭಾಗದ ಬಂಪರ್ ಗಾರ್ನಿಶ್, ಹೆಡ್ ಲ್ಯಾಂಪ್ ಗಾರ್ನಿಶ್, ಹಿಂಭಾಗದ ಬಂಪರ್ ಗಾರ್ನಿಶ್, ಹಿಂಭಾಗದ ಲ್ಯಾಂಪ್ ಕ್ರೋಮ್ ಗಾರ್ನಿಶ್, ಹಿಂಭಾಗದ ಬಾಗಿಲಿನ ಅಲಂಕರಗಳನ್ನು ಈ ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ.

toyota-urban-cruiser-hyryder-prestige-package-unveiled

ಟೊಯೋಟಾ ಪ್ರೆಸ್ಟೀಜ್ ಪ್ಯಾಕೇಜ್ ಅನ್ನು ಅನ್ವೇಷಿಸಲು ಮತ್ತು ಟೊಯೋಟಾ ಹೈಬ್ರಿಡ್ ಎಸ್‌ಯುವಿಯ ವರ್ಧಿತ ಮೌಲ್ಯವನ್ನು ತಿಳಿಯಲು ಗ್ರಾಹಕರು ತಮ್ಮ ಹತ್ತಿರದ ಡೀಲರ್‌ಶಿಪ್‌ಗೆ ಭೇಟಿ ನೀಡಬಹುದು. ಪ್ರತಿಯೊಂದು ಅಕ್ಸೆಸೊರಿಯನ್ನು ಹೈರೈಡರ್‌ನ ವಿಶಿಷ್ಟ SUV ಪಾತ್ರದೊಂದಿಗೆ ಸರಾಗವಾಗಿ ಮಿಶ್ರಣ ಮಾಡಲಾಗಿದೆ. ಅದರ ಮಸ್ಕುಲರ್ ನಿಲುವು, ಕ್ರೋಮ್ ಹೈಲೈಟ್‌ಗಳು ಕಾರನ್ನು ಮತ್ತಷ್ಟು ವರ್ಧಿಸಿವೆ.

2022 ರಲ್ಲಿ ಬಿಡುಗಡೆಯಾದ ಈ ಕಾರು, ಇತ್ತೀಚೆಗೆ 1,00,000 ಯುನಿಟ್ ಕಾರುಗಳ ಮಾರಾಟದ ಮೈಲಿಗಲ್ಲನ್ನು ಮೀರಿಸಿದೆ. ಈ SUV ಆಲ್ - ವೀಲ್ - ಡ್ರೈವ್ ಕಾನ್ಫಿಗರೇಶನ್ ‌ನೊಂದಿಗೆ ಲಭ್ಯವಿದೆ. ಬೆಲೆಗಳು 11.34 ಲಕ್ಷ ರೂ.ಗಳಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗಿ 20.19 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ.

toyota-urban-cruiser-hyryder-prestige-package-unveiled

ಅರ್ಬನ್ ಕ್ರೂಸರ್ ಹೈರೈಡರ್ ವಿಶೇಷತೆಗಳು

ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಅಸಾಧಾರಣ ಮೈಲೇಜ್ ಮತ್ತು ಉತ್ತಮ ಪರ್ಫಾಮೆನ್ಸ್‌ಗಾಗಿ ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಪವರ್ ಸಂಯೋಜನೆಯೊಂದಿಗೆ ಮೊದಲ-ಇನ್-ಸೆಗ್ಮೆಂಟ್ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಹೊಂದಿದೆ. ಇದು ಟೊಯೋಟಾದ 1.5L TNGA ಅಟ್ಕಿನ್ಸನ್ ಸೈಕಲ್ ಎಂಜಿನ್ ಮತ್ತು ಸುಧಾರಿತ ಎಲೆಕ್ಟ್ರಿಕ್ ಮೋಟಾರ್‌ನಿಂದ ನಡೆಸಲ್ಪಡುತ್ತದೆ.

ಇನ್ನು ನಿಯೋ ಡ್ರೈವ್ (ಮೈಲ್ಡ್-ಹೈಬ್ರಿಡ್) ವೇರಿಯೆಂಟ್‌ಗಳು 1.5L K - ಸಿರೀಸ್ ಎಂಜಿನ್‌ನೊಂದಿಗೆ ಬರುತ್ತವೆ. ಇದನ್ನು 5 - ಸ್ಪೀಡ್ ಮ್ಯಾನುವಲ್ ಅಥವಾ 6 - ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ. ಹೆಚ್ಚುವರಿ ಸಾಮರ್ಥ್ಯಕ್ಕಾಗಿ, ಆಯ್ದ ಟ್ರಿಮ್‌ಗಳು ಆಲ್-ವೀಲ್ ಡ್ರೈವ್ (AWD) ಸಿಸ್ಟಮ್ ಸಹ ಒಳಗೊಂಡಿವೆ.

toyota-urban-cruiser-hyryder-prestige-package-unveiled

ಹೈರೈಡರ್ ಕ್ರಿಸ್ಟಲ್ ಅಕ್ರಿಲಿಕ್ ಗ್ರಿಲ್, ಟ್ವಿನ್ LED DRL ಗಳು, 17-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಇಂಟೀರಿಯರ್‌ನಲ್ಲಿ ವೆಂಟಿಲೇಟೆಡ್ ಲೆದರ್ ಸೀಟುಗಳು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋದೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್ ಮತ್ತು 360-ಡಿಗ್ರಿ ಕ್ಯಾಮೆರಾದೊಂದಿಗೆ ಬರುತ್ತದೆ.

ಇವಿಷ್ಟೇ ಅಲ್ಲದೇ ಹಿಂಭಾಗದ ಒರಗಿಸುವ ಆಸನಗಳು, ಹಿಂಭಾಗದ AC ವೆಂಟ್‌ಗಳು, USB ಪೋರ್ಟ್‌ಗಳು ಮತ್ತು 60:40 ಸ್ಪ್ಲಿಟ್ ಹಿಂಭಾಗದ ಸೀಟ್‌ನಂತಹ ಪ್ರಾಯೋಗಿಕ ಫೀಚರ್ಸ್ ಭಾರತೀಯ ಕುಟುಂಬಗಳಿಗೆ ಸೂಕ್ತವಾಗಿಸುತ್ತದೆ. ಟೊಯೋಟಾ 66 ವಿಶೇಷ ಅಕ್ಸೆಸೊರಿಗಳು, 3-ವರ್ಷ ಅಥವಾ 1,00,000 ಕಿ.ಮೀ ವಾರಂಟಿ (5 ವರ್ಷಗಳು/2,20,000 ಕಿ.ಮೀ ವರೆಗೆ ವಿಸ್ತರಿಸಬಹುದು) ಮತ್ತು 8-ವರ್ಷ/1,60,000 ಕಿ.ಮೀ ಹೈಬ್ರಿಡ್ ಬ್ಯಾಟರಿ ವಾರಂಟಿ ಹೊಂದಿದೆ.

More from DriveSpark

Article Published On: Tuesday, July 8, 2025, 16:41 [IST]
English summary
Toyota urban cruiser hyryder prestige package unveiled
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+