27.97 Km ಮೈಲೇಜ್.. 5-ಸೀಟರ್, 11 ಲಕ್ಷ, ಈ Toyota SUVಗೆ ಫುಲ್ ಡಿಮ್ಯಾಂಡ್.. ಸೇಲ್ಸ್ ದಿಢೀರ್ ಏರಿಕೆ!

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ವಿಶ್ವಾಸಾರ್ಹ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ಉತ್ತಮವಾದ ಕಾರ್ಯಕ್ಷಮತೆಗೂ ಹೆಸರುವಾಗಿದೆ. ಈ ಜೂನ್ ತಿಂಗಳು ಇದೇ 'ಅರ್ಬನ್ ಕ್ರೂಸರ್ ಹೈರೈಡರ್' ಕಾರು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಗ್ರಾಹಕರು ಕೂಡ ನಾಮುಂದು-ತಾಮುಂದು ಎಂಬಂತೆ ಖರೀದಿ ಮಾಡಿದ್ದಾರೆ. ಬರೋಬ್ಬರಿ 7,462 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ (YoY) ಶೇಕಡ 75% ಪ್ರಗತಿ ಸಾಧಿಸಲಾಗಿದೆ. 2024ರ ಜೂನ್‌ನಲ್ಲಿ 4,275 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು.

ಈ ವರ್ಷದ ಮೊದಲ 5 ತಿಂಗಳಲ್ಲೂ 'ಟೊಯೊಟಾ ಹೈರೈಡರ್' ಎಸ್‌ಯುವಿಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿವೆ. ಮೇನಲ್ಲಿ 7,573 ಯುನಿಟ್, ಏಪ್ರಿಲ್‌ನಲ್ಲಿ 4,642 ಯುನಿಟ್, ಮಾರ್ಚ್‌ನಲ್ಲಿ 5,286 ಯುನಿಟ್, ಫೆಬ್ರವರಿಯಲ್ಲಿ 4,314 ಯುನಿಟ್ ಮತ್ತು ಜನವರಿ ತಿಂಗಳಲ್ಲಿ 4,941 ಯುನಿಟ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಲಾಗಿತ್ತು.

Toyota Urban Cruiser Hyryder Suv June 2025 Sales Details

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ವಿಶೇಷತೆಗಳೇನು:

ಇದು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾದ ರೀ-ಬ್ಯಾಡ್ಜ್ ಮಾಡೆಲ್ ಆಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈ ಕಾರು ಕನಿಷ್ಠ ರೂ.11.34 ಲಕ್ಷ ಮತ್ತು ಗರಿಷ್ಠ ರೂ.19.99 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇ, ಎಸ್, ಜಿ ಮತ್ತು ವಿ ಎಂಬ ರೂಪಾಂತರಗಳೊಂದಿಗೂ (ವೇರಿಯೆಂಟ್) ದೊರೆಯುತ್ತದೆ.

ನೂತನ ಹೈರೈಡರ್ ಎಸ್‌ಯುವಿ ಹೊರಭಾಗದಲ್ಲೂ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್, ಮಿಡ್‌ನೈಟ್ ಬ್ಲ್ಯಾಕ್ & ಸ್ಪೀಡಿ ಬ್ಲೂ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ. ಈ ಕಾರು 4365 ಎಂಎಂ ಉದ್ದ, 1795 ಎಂಎಂ ಅಗಲ, 1645 ಎಂಎಂ ಎತ್ತರವು ಇದೆ. 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2600 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

Toyota Urban Cruiser Hyryder Suv June 2025 Sales Details

ಇದರಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಸಂಚಾರ ಮಾಡಬಹುದು. ಪ್ರವಾಸಕ್ಕೆ ತೆರಳುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 373 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 45 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಹೊಂದಿದೆ.

ಈ ಕಾರು ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 1.5-ಲೀ. ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಮತ್ತು 1.5-ಲೀ. ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲದಂತೆ 19 ರಿಂದ 27.97 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Toyota Urban Cruiser Hyryder Suv June 2025 Sales Details

ಹೊಸ ಟೊಯೊಟಾ ಹೈರೈಡರ್ ಕಾರಿನ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. 9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿರುವ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್‌ಗಳು, ಯುಎಸ್‌‍ಬಿ ಪೋರ್ಟ್‌ಗಳು ಮತ್ತು ಹೆಡ್-ಅಪ್ ಡಿಸ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಇದು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸುತ್ತದೆ. 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಹಿಲ್ ಹೋಲ್ಡ್ ಕಂಟ್ರೋಲ್ ಹಾಗೂ ಆಲ್ ವೀಲ್ ಡಿಸ್ಕ್ ಬ್ರೆಕ್‌ಗಳಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Wednesday, July 9, 2025, 13:46 [IST]
English summary
Toyota urban cruiser hyryder suv june 2025 sales details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+