Toyota: 28.5 ಕಿ.ಮೀ ಮೈಲೇಜ್.. 5-ಸೀಟರ್, 7 ಲಕ್ಷದ ಈ ಜನಪ್ರಿಯ ಟೊಯೊಟಾ ಕಾರಿಗೆ ಮುಗಿಬಿದ್ದ ಗ್ರಾಹಕರು!

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗಳು ಪಾಲುದಾರಿಕೆ ಹೊಂದಿದ್ದು, ಅದರ ಭಾಗವಾಗಿ 2024ರ ಏಪ್ರಿಲ್ ತಿಂಗಳಲ್ಲಿ 'ಫ್ರಾಂಕ್ಸ್' ಆಧಾರಿತ ನೂತನ 'ಟೈಸರ್' ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಅಂದಿನಿಂದಲೇ ಈ ಎಸ್‌ಯುವಿಗೆ ಭಾರೀ ಬೇಡಿಕೆ ಸೃಷಿಯಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತದೆ. ಕಳೆದ ಡಿಸೆಂಬರ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯ ಗ್ರಾಹಕರು ಈ ಕಾರನ್ನು ಖರೀದಿ ಮಾಡಿದ್ದಾರೆ.

ಹೋದ ತಿಂಗಳು (ಡಿಸೆಂಬರ್‌ - 2024) ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಎಸ್‌ಯುವಿಗಳು ದಾಖಲೆ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಯಾವುದೇ ಹಬ್ಬಗಳು ಇಲ್ಲದಿದ್ದರೂ 2,628 ಯುನಿಟ್ ಟೈಸರ್ ಕಾರುಗಳು ಮಾರಾಟ ಮಾಡಲಾಗಿದೆ. ನವೆಂಬರ್‌ನಲ್ಲಿ 3,620 ಯುನಿಟ್‌, ಅಕ್ಟೋಬರ್‌ನಲ್ಲಿ 3,092 ಯುನಿಟ್, ಸೆಪ್ಟೆಂಬರ್‌ನಲ್ಲಿ 2,278 ಯುನಿಟ್, ಆಗಸ್ಟ್‌ನಲ್ಲಿ 3,213 ಯುನಿಟ್ ಜುಲೈನಲ್ಲಿ 2,640 ಯುನಿಟ್ ಮತ್ತು ಜೂನ್‌ನಲ್ಲಿ 3,184 ಯುನಿಟ್‌ ಟೈಸರ್ ಎಸ್‌ಯುವಿಗಳನ್ನು ಗ್ರಾಹಕರು ಕೊಂಡುಕೊಂಡಿದ್ದಾರೆ.

Toyota Urban Cruiser Taisor Suv Sales In December 2024 Details

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ನೂತನ ಟೊಯೊಟಾ ಟೈಸರ್ ಎಸ್‌ಯುವಿ, ರೂ.7.74 ಲಕ್ಷದಿಂದ ರೂ.13.04 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. ಇ, ಎಸ್ & ಎಸ್ ಪ್ಲಸ್ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಲುಸೆಂಟ್ ಆರೆಂಜ್, ಸ್ಪೋರ್ಟಿನ್ ರೆಡ್, ಕೆಫೆ ವೈಟ್, ಎಂಟೈಸಿಂಗ್ ಸಿಲ್ವರ್ ಮತ್ತು ಗೇಮಿಂಗ್ ಗ್ರೇ ಒಳಗೊಂಡನಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.

ಈ ಕಾರು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ ಹಾಗೂ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ. 19.8 ರಿಂದ 28.5 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ.

Toyota Urban Cruiser Taisor Suv Sales In December 2024 Details

ಹೊಸ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಇದರಿಂದ ಪ್ರಯಾಣಿಕರು ಆರಾಮದಾಯಕವಾಗಿ ದೂರದ ಊರುಗಳಿಗೆ ಪ್ರಯಾಣಿಸಬಹುದು. ಜೊತೆಗೆ 308 ಲೀ. ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ನೂತನ ಎಸ್‌ಯುವಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಈ ಕಾರಿಗೆ ನಿಸ್ಸಾನ್ ಮ್ಯಾಗ್ನೈಟ್, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ ಮತ್ತು ಕಿಯಾ ಸೋನೆಟ್ ಎಸ್‌ಯುವಿಗಳು ಪ್ರಬಲವಾದ ಎದುರಾಳಿಯಾಗಿವೆ.

ಒಟ್ಟಾರೆ ಟೊಯೊಟಾ ಮಾರಾಟ ಎಷ್ಟಿದೆ: ದೇಶೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು (ಡಿಸೆಂಬರ್‌ - 2024) ಕಂಪನಿಯು ಸರಿ ಸುಮಾರು 24,887 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿದೆ. 21,372 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ (YOY) 16% ಬೆಳವಣಿಗೆಯಾಗಿದೆ. ಟೊಯೊಟಾ ಈ ಪರಿಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಇನ್ನೋವಾ ಕಾರು ಬಹುಮುಖ್ಯ ಕಾರಣವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 13, 2025, 18:53 [IST]
English summary
Toyota urban cruiser taisor suv sales in december 2024 details
Read more on toyota india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+