ದಶಕ ಕಳೆದರು ಜನ ಇನ್ನೂ ಮರೆತಿಲ್ಲ! ಸ್ಥಗಿತಗೊಂಡಿದ್ದ SUV 2026 ಜನವರಿಯಲ್ಲಿ ಬಿಡುಗಡೆಗೆ ಸಜ್ಜು!
ಹೊಸ ರೆನಾಲ್ಟ್ ಡಸ್ಟರ್ (Renault Duster) 2026 ಜನವರಿ 26 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ, ಇದು ಗಮನಾರ್ಹ ಮರುವಿನ್ಯಾಸ, ವರ್ಧಿತ ವೈಶಿಷ್ಟ್ಯಗಳು ಮತ್ತು ಆಧುನಿಕ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಲಿದ್ದು, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಹೆಚ್ಚು ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಭಾರತೀಯ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಈಗಾಗಲೇ ದೃಢಪಡಿಸಲಾಗಿದೆ. ಮುಂಬರುವ 2026ರ ರೆನಾಲ್ಟ್ ಡಸ್ಟರ್ ವೈಶಿಷ್ಟ್ಯಗಳು, ವಿನ್ಯಾಸ ಮತ್ತು ಪವರ್ ಟ್ರೇನ್ ಅನ್ನು ನೋಡೋಣ.
ಈ ಹಿಂದೆ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ರೆನಾಲ್ಟ್ ಡಸ್ಟರ್ ಅನ್ನು 2012 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ಕಾರಣಾಂತರಗಳಿಂದ ಒಂದು ದಶಕದ ನಂತರ, 2022 ರಲ್ಲಿ ಇದನ್ನು ಸ್ಥಗಿತಗೊಳಿಸಲಾಯಿತು. ಈ ಬ್ರ್ಯಾಂಡ್ ಈಗ ಡಸ್ಟರ್ ಅನ್ನು ಹೊಸ ಡಿಸೈನ್‌ನಲ್ಲಿ ಮರಳಿ ತರಲು ಸಜ್ಜಾಗಿದೆ. ಮುಂಬರುವ ಹೊಸ ರೆನಾಲ್ಟ್ ಡಸ್ಟರ್ ಎಸ್‌ಯುವಿಯ ನಿರೀಕ್ಷಿತ ವೈಶಿಷ್ಟ್ಯಗಳು, ವಿನ್ಯಾಸ ಮತ್ತು ಪವರ್ ಟ್ರೇನ್ ಆಯ್ಕೆಗಳನ್ನು ನೋಡೋಣ.

ಫೀಚರ್ಸ್: ಮುಂಬರುವ ಹೊಸ 2026 ರ ರೆನಾಲ್ಟ್ ಡಸ್ಟರ್ 10.1-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಸಹ-ಪ್ರಯಾಣಿಕರಿಗೆ 7-ಇಂಚಿನ ಡಿಸ್ಪ್ಲೇ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಿರುವ ತ್ರಿಬಲ್ ಸ್ಕ್ರೀನ್ ಸೆಟಪ್ ಪಡೆಯುವ ನಿರೀಕ್ಷೆಯಿದೆ. ಇದು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ವೈರ್ ಲೆಸ್ ಚಾರ್ಜಿಂಗ್, ಪನೋರಮಿಕ್ ಸನ್ ರೂಫ್‌ನಂತಹ ಪ್ರೀಮಿಯಂ ಫೀಚರ್ಸ್ ಒಳಗೊಂಡಿರುವ ಸಾಧ್ಯತೆಯಿದೆ.
ಎಂಜಿನ್ ವಿಶೇಷತೆಗಳು: ಪವರ್ ಟ್ರೇನ್ ಆಯ್ಕೆಗಳಿಗೆ ಸಂಬಂಧಿಸಿದ ನಿಖರವಾದ ವಿವರಗಳನ್ನು ಬ್ರ್ಯಾಂಡ್ ಇನ್ನೂ ದೃಢಪಡಿಸಿಲ್ಲ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು. ಹೆಚ್ಚಿನ ಮೂಲಗಳ ಪ್ರಕಾರ ಅಂತರರಾಷ್ಟ್ರೀಯವಾಗಿ, ಡಸ್ಟರ್ ವಿವಿಧ ಪರಿಣಾಮಕಾರಿ ಪವರ್‌ಟ್ರೇನ್‌ಗಳನ್ನು ನೀಡುತ್ತಿದ್ದು, ಭಾರತಕ್ಕೂ ಇದೇ ರೀತಿಯ ಆಯ್ಕೆಗಳನ್ನು ನಿರೀಕ್ಷಿಸಲಾಗಿದೆ.

ಮೊದಲನೇಯದು 48V ಮೈಲ್ಡ್-ಹೈಬ್ರಿಡ್‌ನೊಂದಿಗೆ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 130 PS ಪವರ್ ಹಾಗೂ 230 Nm ಟಾರ್ಕ್ ಉತ್ಪಾದಿದುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ನೊಂದಿಗೆ AWD ಕಾನ್‌ಫಿಗರೇಷನ್ ಹೊಂದಿರಬಹುದು. ಎರಡನೇಯದು 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, ಇದು 154 PS ಪವರ್ ಹಾಗೂ 250 Nm ಟಾರ್ಕ್ ಹೊರಹಾಕುತ್ತದೆ. ಇದು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಯಾಗಿ ಬರಲಿದೆ.
ಮೂರನೇಯದು 1.6-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಆಗಿದ್ದು, ಇದು 140 PS ಪವರ್ ಹಾಗೂ 1.2 kWh ಬ್ಯಾಟರಿ ಬ್ಯಾಕ್‌ನೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಇದ್ಯಾವುದು ಅಧಿಕೃತವಾಗಿ ಕಂಪನಿ ಬಹಿರಂಗಪಡಿಸಿಲ್ಲ. ಕೇವಲ ನಿರೀಕ್ಷೆಗಳಾಗಿವೆ ಎಂಬುದನ್ನು ಗಮನಿಸಬೇಕು, ಶೀಘ್ರದಲ್ಲೆ ಕಾರಿನ ಕುರಿತು ಹೆಚ್ಚಿನ ಮಾಹಿತಿಯನ್ನು ಕಂಪನಿ ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದೆ.

ಹೊಸ ರೆನಾಲ್ಟ್ ಡಸ್ಟರ್ ಡಿಸೈನ್: ಈ ಗಾಗಲೇ ಹೊಸ 2026 ರೆನಾಲ್ಟ್ ಡಸ್ಟರ್ ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ಇದರ ಆಧಾರದ ಮೇಲೆ ಹೇಳುವುದಾದರೆ, ಇದು ಹಳೆಯ ತಲೆಮಾರಿನ ಮಾಡಲ್‌ನಂತೆಯೇ ಅದೇ ಒರಟಾದ ಬಾಹ್ಯ ವಿನ್ಯಾಸವನ್ನು ಮುಂದುವರಿಸುವ ನಿರೀಕ್ಷೆಯಿದೆ. ಏಕೆಂದರೆ ಈ ಡಿಸೈನ್ ಭಾರತದಲ್ಲಿ ಬ್ರಾಂಡ್‌ಗೆ ಆರಂಭದಲ್ಲಿ ಹೆಸರುತಂದುಕೊಟ್ಟಿದೆ. ಹಾಗಾಗಿ ಹಳೆಯ ಡಿಸೈನ್‌ನೊಂದಿಗೆ ಅಲ್ಲಲ್ಲಿ ಹೊಸ ಅಂಶಗಳನ್ನು ಸೇರಿಸಿ ಬಿಡುಗಡೆ ಮಾಡಲಿದೆ.
ಮುಂಭಾಗದಲ್ಲಿ, 2026 ರ ರೆನಾಲ್ಟ್ ಡಸ್ಟರ್ ಹೊಸ ಗ್ರಿಲ್, ವೈ-ಆಕಾರದ ಎಲ್ಇಡಿ ಡಿಆರ್ಎಲ್‌ಗಳು ಮತ್ತು ಪರಿಷ್ಕೃತ ಬಂಪರ್ ಗಳನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸಲಾಗಿದೆ. ಇದು ಚೌಕಾಕಾರದ ಚಕ್ರದ ಕಮಾನುಗಳು, ಬದಿಗಳಲ್ಲಿ ಚಲಿಸುವ ದಪ್ಪ ಬಾಡಿ ಕ್ಲಾಡಿಂಗ್ , ವೈ-ಆಕಾರದ ಎಲ್ಇಡಿ ಟೈಲ್ ಲ್ಯಾಂಪ್ ಗಳು ಮತ್ತು ದೊಡ್ಡ ವಿಂಡ್ ಶೀಲ್ಡ್ ಸಹ ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೊಸ 2026 ರ ರೆನಾಲ್ಟ್ ಡಸ್ಟರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








