10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರುತಿ ಹೈಬ್ರಿಡ್ ಸೇರಿದಂತೆ 6 ಕಾರುಗಳು ಬಿಡಗಡೆಗೆ ಸಜ್ಜು

ಭಾರತದಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ 6 ಕಾರುಗಳು ಬಿಡುಗಡೆಗೆ ಸಜ್ಜಾಗಿವೆ. ದೊಡ್ಡ ಎಸ್‌ಯುವಿಗಳಿಗೆ ಬೇಡಿಕೆಯ ಹೆಚ್ಚಳದ ಹೊರತಾಗಿಯೂ, ಕೈಗೆಟುಕುವ ಕಾರುಗಳು ಕಾರು ತಯಾರಕರಿಗೆ ಗಮನಾರ್ಹ ಮಾರಾಟವನ್ನು ತರುತ್ತಲೇ ಇವೆ. ಹೆಚ್ಚುತ್ತಿರುವ ಹೊಸ ಫೀಚರ್‌ಗಳ ಬೇಡಿಕೆ ಜೊತೆಗೆ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಕಡಿಮೆ ಬೆಲೆಯಲ್ಲಿ ಕಾಂಪ್ಯಾಕ್ಟ್ ಕಾರುಗಳನ್ನು ಬಿಡುಗಡೆ ಮಾಡಲು ಕಂಪನಿಗಳು ಸಜ್ಜಾಗುತ್ತಿವೆ. 10 ಲಕ್ಷ ರೂ.ಗಳ ಬೆಲೆಯಲ್ಲಿ ಅನೇಕ ಹೊಸ ಮಾದರಿಗಳು ಬಿಡುಗಡೆಗೆ ಸಾಲಾಗಿ ನಿಂತಿವೆ. ಅವು ಈ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ.

1. ರೆನಾಲ್ಟ್ ಕಿಗರ್ ಫೇಸ್ ಲಿಫ್ಟ್: ಕ್ಯಾಬಿನ್ ಒಳಗೆ, ಹೊಸ ಫೀಚರ್‌ಗಳ ಸೇರ್ಪಡೆಗಳೊಂದಿಗೆ ಡ್ಯಾಶ್‌ಬೋರ್ಡ್ ಲೇಔಟ್‌ನಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಪಡೆದುಕೊಂಡು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಕಿಗರ್ ಫೇಸ್ ಲಿಫ್ಟ್, ತನ್ನ ವಿನ್ಯಾಸದಲ್ಲಿಯೂ ಪ್ರಮುಖ ನವೀಕರಣಗಳನ್ನು ಪಡೆಯಲಿದೆ.

upcoming-car-launches-maruti-fronx-hybrid-and-more

ಪರಿಚಿತ 1.0 - ಲೀಟರ್ ಎನ್ಎ ಪೆಟ್ರೋಲ್ ಮತ್ತು 1.0 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ಗಳು ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲದೆ ಮುಂದುವರಿಯುತ್ತವೆ. ಪ್ರಸ್ತುತ ಪರಿಚಿತ ಮುಂಭಾಗದಿಂದ ಬ್ರ್ಯಾಂಡ್ ನ ಹೊಸ ಲೋಗೋವನ್ನು ಕಿಗರ್ ಫೇಸ್ ಲಿಫ್ಟ್ ನೊಂದಿಗೆ ಭಾರತದಲ್ಲಿ ಪರಿಚಯಿಸಬಹುದು ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೆ ಈ ಬಗ್ಗೆ ರೆನಾಲ್ಟ್ ಕಂಪನಿ ಮಾಹಿತಿ ಹಂಚಿಕೊಳ್ಳಲಿದೆ.

2. ಟಾಟಾ ಆಲ್ಟ್ರೋಜ್ ಫೇಸ್ ಲಿಫ್ಟ್: ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ಡ್ಯಾಶ್‌ಬೋರ್ಡ್ ಲೇಔಟ್, ಪರಿಚಿತ 1.2 - ಲೀಟರ್ ಎನ್ಎ ಪೆಟ್ರೋಲ್, 1.5 - ಲೀಟರ್ ಟರ್ಬೊ ಡೀಸೆಲ್ ಮತ್ತು 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಸೇರಿದಂತೆ ಸಿಎನ್‌ಜಿ ಆಯ್ಕೆಯೊಂದಿಗೆ ಆಲ್ಟ್ರೊಜ್ ಹೊಸ ಅವತಾರದಲ್ಲಿ ಬಿಡುಗಡೆಗೆ ಸಜ್ಜಾಗಿದೆ.

upcoming-car-launches-maruti-fronx-hybrid-and-more

ಮುಂಬರುವ ತಿಂಗಳುಗಳಲ್ಲಿ ಎಂಟ್ರಿ ಕೊಡುವ ನಿರೀಕ್ಷೆಯಿದ್ದು, ಆಲ್ಟ್ರೋಜ್ ಫೇಸ್ ಲಿಫ್ಟ್ ಈಗಾಗಲೇ ರಸ್ತೆಯಲ್ಲಿ ಟೆಸ್ಟಿಂಗ್ ಮಾಡುವಾಗ ಹಲವು ಬಾರಿ ಕಾಣಿಸಿಕೊಂಡಿದೆ. ನವೀಕರಿಸಿದ ಮಾದರಿಯು ಹೊಸ ಬಂಪರ್, ನವೀನ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಸೇರಿದಂತೆ ಹೊಸ ಅಲಾಯ್ ವೀಲ್ ‌ಗಳ ಜೊತೆಗೆ ಬಾಹ್ಯ ವಿನ್ಯಾಸದಲ್ಲಿ ಸಣ್ಣ ಬದಲಾವಣೆಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.

3. ಹೊಸ ನಿಸ್ಸಾನ್ 7 ಸೀಟರ್ ಕಾಂಪ್ಯಾಕ್ಟ್ ಎಂಪಿವಿ: ನಿಸ್ಸಾನ್ ತನ್ನ ಮುಂಬರುವ ಎಂಪಿವಿಯ ಒಳಾಂಗಣ ವಿನ್ಯಾಸದಲ್ಲಿ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ತನ್ನ ಹೊಸ 7 - ಸೀಟರ್ ಎಂಪಿವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದನ್ನು ಖಚಿತಪಡಿಸಿದೆ. ಈಗಾಗಲೇ ಅದರ ಟೀಸರ್ ಹೊರಬಂದಿದ್ದು, ವಿಶಿಷ್ಟ ಸ್ಟೈಲಿಂಗ್, ಸಾಕಷ್ಟು ಆಧುನಿಕ ಮತ್ತು ಆಕರ್ಷಕ ಡಿಸೈನ್ ಹೊಂದಿದೆ.

upcoming-car-launches-maruti-fronx-hybrid-and-more

ಈ ಮೂರು ಸಾಲಿನ ಕಾಂಪ್ಯಾಕ್ಟ್ ಎಂಪಿವಿ ಪರಿಚಿತ 1.0 - ಲೀಟರ್ 3 - ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 ಬಿಹೆಚ್ ಪವರ್ ಮತ್ತು 96 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ 5 - ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಎಂಪಿವಿ ಸಿಎಂಎಫ್ - ಎ ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಲಿದೆ.

4. ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ: 2025 ರ ದ್ವಿತೀಯಾರ್ಧದಲ್ಲಿ ಮಾರಾಟವಾಗುವ ನಿರೀಕ್ಷೆಯಿರುವ ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿ, ಇತ್ತೀಚಿನ ಕ್ರೆಟಾ ಮತ್ತು ಅಲ್ಕಾಜರ್ ಸೇರಿದಂತೆ ಹ್ಯುಂಡೈ ಎಸ್‌ಯುವಿಗಳ ಪ್ರಸ್ತುತ ಬೆಳವಣಿಗೆಯಂತೆಯೇ ಹೊಸ ವಿನ್ಯಾಸ ಸೇರಿದಂತೆ ಸಮಗ್ರ ನವೀಕರಣಗಳನ್ನು ಪಡೆಯಲಿದೆ.

ಪ್ರಸ್ತುತ ಡೀಸೆಲ್ ಮತ್ತು ಪೆಟ್ರೋಲ್ ಪವರ್ ಟ್ರೇನ್ ಆಯ್ಕೆಗಳನ್ನು ಮುಂದಿನ ತಲೆಮಾರಿನ ವೆನ್ಯೂಗೆ ಕೊಂಡೊಯ್ಯಲಾಗುವುದು. ಇದರ ಜೊತೆಗೆ, ನವೀಕರಿಸಿದ ಒಳಾಂಗಣ ವಿನ್ಯಾಸ ಮತ್ತು ವರ್ಧಿತ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುವುದು. ಹೊಸ ತಲೆಮಾರಿನ ವೆನ್ಯೂ ಕಾರಿನ ರೋಡ್ ಟೆಸ್ಟಿಂಗ್ ಈಗಾಗಲೇ ನಡೆಯುತ್ತಿದ್ದು, ಇತ್ತೀಚೆಗೆ ಎನ್-ಲೈನ್ ಮಾದರಿಯನ್ನು ವಿದೇಶದಲ್ಲೂ ಪರೀಕ್ಷಿಸಲಾಗಿದೆ.

5. ಮಾರುತಿ ಸುಜುಕಿ ಫ್ರಾಂಕ್ಸ್ ಹೈಬ್ರಿಡ್: ಆಂತರಿಕವಾಗಿ ವೈಟಿಬಿ (ಕಂಪನಿಯ ಕೋಡ್ ನೇಮ್) ಎಂಬ ಹೆಸರನ್ನು ಹೊಂದಿರುವ ಹೈಬ್ರಿಡ್ ಕ್ರಾಸ್ಒವರ್ 2025 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ 'ಹೈಬ್ರಿಡ್' ಬ್ಯಾಡ್ಜ್ ನೊಂದಿಗೆ ಈ ವರ್ಷದ ಜನವರಿಯಲ್ಲಿ ಫ್ರಾಂಕ್ಸ್ ಹೈಬ್ರಿಡ್ ಅನ್ನು ಭಾರತದಲ್ಲಿ ಟೆಸ್ಟ್ ಮಾಡಲಾಯಿತು.

ಇದು ಪರಿಚಿತ 1.2 - ಲೀಟರ್ ಝಡ್ - 12 - ಇ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ವರದಿಗಳ ಪ್ರಕಾರ, ಸ್ಟ್ರಾಂಗ್ ಹೈಬ್ರಿಡ್ ಪವರ್ ಟ್ರೇನ್ ಮಿಡ್ ಲೈಫ್ ಫೇಸ್ ಲಿಫ್ಟ್ ನವೀಕರಣದೊಂದಿಗೆ ಬಿಡುಗಡೆಯಾಗಲಿದೆ. ಈ ಶ್ರೇಣಿಯ ಎಕ್ಸ್ಟೆಂಡರ್ ಹೈಬ್ರಿಡ್ ತಂತ್ರಜ್ಞಾನದ ಪ್ರಮುಖ ಪ್ರಯೋಜನವೆಂದರೆ ಸುಧಾರಿತ ಮೈಲೇಜ್ ಸಿಗಲಿದ್ದು, ಸುಮಾರು 30 ಕಿ.ಮೀ ಮೈಲೇಜ್ ನಿರೀಕ್ಷಿಸಬಹುದು.

6. ರೆನಾಲ್ಟ್ ಟ್ರೈಬರ್ ಫೇಸ್ ಲಿಫ್ಟ್: ಟ್ರೈಬರ್ ಪ್ರಸ್ತುತ ರೆನಾಲ್ಟ್ ಕಂಪನಿಯಿಂದ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರಾಗಿದೆ. ಈ ಕಾಂಪ್ಯಾಕ್ಟ್ ಎಂಪಿವಿ ಒಳಾಂಗಣದಲ್ಲಿ ಹೊಸ ಡ್ಯಾಶ್ ಬೋರ್ಡ್ ಲೇಔಟ್, ಹೊಸ ಅಪ್ ಹೋಲ್ಸ್ಟರಿ ಮತ್ತು ಹೆಚ್ಚಿನ ವೈಶಿಷ್ಟ್ಯಗಳಂತಹ ಕೆಲವು ಬದಲಾವಣೆಗಳನ್ನು ಪಡೆದುಕೊಂಡು ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ 7 - ಸೀಟರ್ ಕಾರು ಈ ವರ್ಷ ಬಿಡುಗಡೆಯಾಗಲಿದೆ.

ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲದೆ, ರನಾಲ್ಟ್ ಟ್ರೈಬರ್ ಪರಿಚಿತ 1.0 - ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಉಳಿದಂತೆ ರೆನಾಲ್ಟ್ ಟ್ರೈಬರ್ ಫೇಸ್ ಲಿಫ್ಟ್ ನವೀಕರಿಸಿದ ಬಾಹ್ಯ ವಿನ್ಯಾಸವನ್ನು ಪಡೆಯಲಿದ್ದು, ಇದು ಪ್ರಸ್ತುತ ಮಾದರಿಗಿಂತ ಹೆಚ್ಚು ತೀಕ್ಷ್ಣವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇವೆಲ್ಲವು ಮುಂಬರುವ ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 10 ಲಕ್ಷ ರೂ. ಗಳ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಹೊಸ ನವೀಕರಣಗಳು, ಆಧುನಿಕ ವಿನ್ಯಾಸ ಸೇರಿದಂತೆ ಹಲವು ವಿಶೆಷತೆಗಳೊಂದಿಗೆ ಎಂಟ್ರಿಕೊಡಲಿವೆ. ಸದ್ಯ ಕೈಗೆಟುಕುವ ಬೆಲೆಯ ಕಾರುಗಳು ತುಂಬಾ ಬೇಡಿಕೆಯಿರುವ ಕಾರಣ ಬ್ರಾಂಡ್‌ಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಪರಿಚಯಿಸಲಿವೆ.

ಸದ್ಯ ದೊಡ್ಡ ಎಸ್‌ಯುವಿಗಳನ್ನು ಮೀರಿಸಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಕಾಂಪಾಕ್ಟ್ ಎಸ್‌ಯುವಿಗಳು, ಕಾರು ತಯಾರಕರಿಗೆ ಗಮನಾರ್ಹ ಮಾರಾಟವನ್ನು ತಂದುಕೊಡಲು ಸಜ್ಜಾಗುತ್ತಿವೆ. 10 ಲಕ್ಷ ರೂ. ಗಳ ಬೆಲೆ ಶ್ರೇಣಿಯಲ್ಲಿ ಇದೇ ವರ್ಷ ಬಿಡುಗಡೆಯಾಗಲಿರುವ ಮೇಲಿನ ಈ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, April 27, 2025, 10:00 [IST]
English summary
Upcoming car launches maruti fronx hybrid and more
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+