2-seater car: ಬೈಕ್ ಬೆಲೆಯಲ್ಲಿ ಹೊಸ 2-ಸೀಟರ್ ಕಾರು: ಸನ್‌ರೂಫ್ ಕೂಡ ಇದೆ!

ಇದೇ ವರ್ಷ ಜನವರಿಯಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್‌ಪೋ 2025 (Bharat Mobility Expo 2025) ರಲ್ಲಿ ಸೋಲಾರ್ ಎಲೆಕ್ಟ್ರಿಕ್ ಕಾರುಗಳ ತಯಾರಕ ಕಂಪನಿಯಾದ 'ವೈವ್ ಮೊಬಿಲಿಟಿ', ತನ್ನ ಬಹುನಿರೀಕ್ಷಿತ ಇವಾ ಕಾಂಪ್ಯಾಕ್ಟ್ ಸೋಲಾರ್ ಎಲೆಕ್ಟ್ರಿಕ್ 2-ಸೀಟರ್ ಕಾರನ್ನು (2-seater car) ಬಿಡುಗಡೆ ಮಾಡಿದೆ. ಟ್ರಾಫಿಕ್ ದಟ್ಟಣೆ, ಸೀಮಿತ ಪಾರ್ಕಿಂಗ್ ಸ್ಥಳ ಮತ್ತು ಹೆಚ್ಚುತ್ತಿರುವ ಇಂಧನ ವೆಚ್ಚಗಳಂತಹ ನಗರ ಜೀವನದ ಸವಾಲುಗಳನ್ನು ನಿಭಾಯಿಸಲು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬೆಲೆ ಹಾಗೂ ವಿಶೇಷತೆಗಳನ್ನು ಇಲ್ಲಿ ವಿವರಿಸಲಾಗಿದೆ.

ಈ 2-ಸೀಟರ್ (2-seater car) ಕಾರನ್ನು 3.25 ಲಕ್ಷ ರೂ.ಗಳ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರು ಸಂಪೂರ್ಣ ಎಲೆಕ್ಟ್ರಿಕ್ ಪವರ್‌ನಲ್ಲಿ ಚಲಿಸಲಿದ್ದು, ಹೆಚ್ಚುವರಿಯಾಗಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿರುವುದರಿಂದಾಗಿ ಚಾರ್ಜ್‌ ಖಾಲಿಯಾದಾಗ ಸೋಲಾರ್ ಎನರ್ಜಿಯನ್ನು ಬಳಸಿಕೊಂಡು ಚಲಿಸುವಂತೆ ನಿರ್ಮಿಸಲಾಗಿದೆ.

vayve-eva-solar-electric-car-price-varients-specs-details

ವೇವ್ ಎಲೆಕ್ಟ್ರಿಕ್ ಇವಾ ಕಾರು, ಭಾರತದ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರಾಗಿದ್ದು, ವೇವ್ ಇವಾ ನೋವಾ (Vayve Eva Nova), ವೇವ್ ಇವಾ ಸ್ಟೆಲ್ಲಾ (Vayve Eva Stella) ಮತ್ತು ವೇವ್ ಇವಾ ವೆಗಾ (Vayve Eva Vega) ಎಂಬ ಮೂರು ವೇರಿಯೆಂಟ್‌ಗಳನ್ನು ಒಳಗೊಂಡಿದೆ. ಪ್ರತಿ ಚಾರ್ಜ್‌ಗೆ 250 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ.

ಇದರ ಹೈ-ವೋಲ್ಟೇಜ್ ಪವರ್‌ಟ್ರೇನ್ ತಂತ್ರಜ್ಞಾನವು ಸೂಪರ್-ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಕೇವಲ 5 ನಿಮಿಷ ಚಾರ್ಜ್ ಮಾಡಿದರೆ 50 ಕಿ.ಮೀ ರೇಂಜ್ ಒದಗಿಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಸ್ಮಾರ್ಟ್‌ಫೋನ್ ಏಕೀಕರಣ, ವೆಹಿಕಲ್ ಡಯಾಗ್ನೋಸ್ಟಿಕ್ಸ್, ರಿಮೋಟ್ ಮಾನಿಟರಿಂಗ್ ಮತ್ತು ಓವರ್-ದಿ-ಏರ್ (OTA) ಅಪ್‌ಡೇಟ್‌ಗಳು ಸೇರಿದಂತೆ ಸ್ಮಾರ್ಟ್ ಕನೆಕ್ಟಿವಿಟಿ ವೈಶಿಷ್ಟ್ಯಗಳೊಂದಿಗೆ Eva ಸಜ್ಜುಗೊಂಡಿದೆ.

vayve-eva-solar-electric-car-price-varients-specs-details

ವಿಶಾಲವಾದ ಚಾಲಕ ಗೋಚರತೆ, ಕೇವಲ 5 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವರ್ಧನೆ ಮತ್ತು 70 kmph ನ ಟಾಪ್ ಸ್ಪೀಡ್ ಡೈನಾಮಿಕ್ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಮೂರು ವೇರಿಯೆಂಟ್‌ಗಳು ಕ್ರಮವಾಗಿ 9 ಕಿಲೋವ್ಯಾಟ್, 12.6 ಕಿಲೋವ್ಯಾಟ್ ಮತ್ತು 18 ಕಿಲೋವ್ಯಾಟ್ ಬ್ಯಾಟರಿಗಳನ್ನು ಒಳಗೊಂಡಿವೆ.

ಇಕೋ, ಸಿಟಿ, ಸ್ಪೋರ್ಟ್ ಎಂಬ ಮೂರು ಡ್ರೈವ್ ಮೋಡ್‌ಗಳು, ಪನಾರಮಿಕ್ ಗ್ಲಾಸ್ ರೂಫ್, ಕ್ಲೈಮೆಟ್ ಕಂಟ್ರೋಲ್, ಸ್ಮಾರ್ಟ್ ಫೋನ್ ಸಂಪರ್ಕದೊಂದಿಗೆ 2-ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟಾರ್ಟ್-ಸ್ಟಾಪ್ ಬಟನ್, 13 ಇಂಚಿನ ಸ್ಟೀಲ್ ವೀಲ್‌ಗಳು, LED ಹೆಡ್ ಲೈಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಮತ್ತು ಕ್ಯಾಮೆರಾ, ಆಟೋ-ಡಿಮ್ಮಿಂಗ್ IRVM ಅನ್ನು ಒಳಗೊಂಡಿದೆ.

vayve-eva-solar-electric-car-price-varients-specs-details

ಸ್ಮಾರ್ಟ್ ಫೋನ್ ಸಂಪರ್ಕದೊಂದಿಗೆ 4-ಸ್ಪೀಕರ್ ಆಡಿಯೊ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು, ಹೈಟ್-ಅಡ್ಜಸ್ಟಬಲ್ ಡ್ರೈವರ್ ಸೀಟ್, ಏರ್ ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹೊಂದಿದೆ. ಇವೆಲ್ಲವು ವೇರಿಯೆಂಟ್‌ಗೆ ತಕ್ಕಂತೆ ಹೆಚ್ಚುವರಿ ಫೀಚರ್ಸ್‌ಗಳನ್ನು ಒಳಗೊಂಡಿರುವತ್ತವೆ ಎಂಬುದನ್ನು ಗಮನಿಸಬೇಕು. ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 29, 2025, 17:37 [IST]
English summary
Vayve eva solar electric car price varients specs details
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+