ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನಿಂದ ಮೊದಲ ಡೀಲರ್‌ಶಿಪ್ ಲೋಕಾರ್ಪಣೆ.. ಶೀಘ್ರ 2 ಕಾರುಗಳು ಬಿಡುಗಡೆ, ಬೆಲೆ ಎಷ್ಟು, ಹೇಗಿವೆ?
ವಿಯೆಟ್ನಾಂ ದೇಶದ ವಿನ್‌ಫಾಸ್ಟ್ (VinFast) ಜಾಗತಿಕ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಚಾಲಿತ ಕಾರುಗಳು, ಸ್ಕೂಟರ್‌ಗಳು ಹಾಗೂ ಬಸ್‌ಗಳನ್ನು ಮಾರಾಟಗೊಳಿಸುತ್ತಿದ್ದು, ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಕಂಪನಿಯು ಭಾರತವನ್ನು ಪ್ರವೇಶಿಸಿದ್ದು, ಮೊದಲ ಡೀಲರ್‌ಶಿಪ್‌ನ್ನು ತೆರೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ವಿನ್‌ಫಾಸ್ಟ್‌ನ ಅಂಗಸಂಸ್ಥೆಯಾದ ವಿನ್‌ಫಾಸ್ಟ್ ಆಟೋ ಇಂಡಿಯಾ (VinFast Auto India), ಗುಜರಾತ್‌ನ ಸೂರತ್‌ನಲ್ಲಿಂದು ಪ್ರಪ್ರಥಮ ಡೀಲರ್‌ಶಿಪ್‌ನ್ನು ಲೋಕಾರ್ಪಣೆಗೊಳಿಸಿದೆ. ಈ ಮೂಲಕ ದೇಶೀಯ ಕಾರು ಮಾರುಕಟ್ಟೆಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದೆ. ಈ ಡೀಲರ್‌ಶಿಪ್‌ನಲ್ಲಿ ಅತಿ ಶೀಘ್ರದಲ್ಲೇ ಬಿಡುಗಡೆಗೊಳ್ಳುವ ಹೊಚ್ಚ ಹೊಸ ವಿಎಫ್6 (VF6) ಹಾಗೂ ವಿಎಫ್7 (VF7) ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಪ್ರದರ್ಶನ ಮಾಡಲಾಗುತ್ತದೆ.

ಈ ವರ್ಷಾಂತ್ಯದೊಳಗೆ (2025) ಕಂಪನಿಯು ದೇಶದ 27ಕ್ಕೂ ಅಧಿಕ ನಗರಗಳಲ್ಲಿ 35 ಡೀಲರ್‌ಶಿಪ್‌ಗಳನ್ನು ಆರಂಭಿಸಲು ಉದ್ದೇಶಿಸಿದೆ. ಆಗಸ್ಟ್ 4 ರಂದು ತಮಿಳುನಾಡಿನ ತೂತುಕುಡಿಯಲ್ಲಿ ರೂ.16,000 ಕೋಟಿ (2 ಬಿಲಿಯನ್ ಡಾಲರ್) ಹೂಡಿಕೆಯೊಂದಿಗೆ ನಿರ್ಮಿಸಿರುವ ಬೃಹತ್ ಉತ್ಪಾದನಾ ಘಟಕವನ್ನು ಸಹ ಉದ್ಘಾಟಿಸಲು ಯೋಜಿಸಿದೆ.
ಇದೇ ಜುಲೈ 15 ರಿಂದ ವಿನ್‌ಫಾಸ್ಟ್ ಕಂಪನಿಯು ವಿಎಫ್6 ಮತ್ತು ವಿಎಫ್7 ಎಲೆಕ್ಟ್ರಿಕ್ ಕಾರುಗಳಿಗಾಗಿ ಅಧಿಕೃತವಾಗಿ ಪ್ರಿ-ಬುಕ್ಕಿಂಗ್ ಪಡೆಯುವುದಕ್ಕೆ ಶುರು ಮಾಡಿದೆ. ಆಸಕ್ತ ಗ್ರಾಹಕರು ಕಂಪನಿಯ ಡೀಲರ್‌ಶಿಪ್ ಅಥವಾ ವೆಬ್‌ಸೈಟ್‌ನಲ್ಲಿ ರೂ.21,000 ಮುಂಗಡ ಹಣವನ್ನು ಪಾವತಿಸಿ, ಆರ್ಡರ್ ಮಾಡಬಹುದು.

ವಿನ್‌ಫಾಸ್ಟ್ ವಿಎಫ್6 (VinFast VF6) ವಿಶೇಷತೆಗಳೇನು:
ಈ ಎಲೆಕ್ಟ್ರಿಕ್ ಎಸ್‌ಯುವಿ ರೂ.18 ಲಕ್ಷ ಹಾಗೂ ಗರಿಷ್ಠ ರೂ.24 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ಅರ್ಥ್ ಮತ್ತು ವಿಂಡ್ ಎಂಬ ರೂಪಾಂತರಗಳನ್ನು (ವೇರಿಯೆಂಟ್) ಪಡೆದಿರಲಿದೆ. ಜೆಟ್ ಬ್ಲ್ಯಾಕ್, ಡೆಸಾಟ್ ಸಿಲ್ವರ್, ಇನ್ಫಿನಿಟಿ ಬ್ಲಾಂಕ್, ಕ್ರಿಮ್ಸನ್ ರೆಡ್ ಮತ್ತು ಜೆನಿತ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ ಎಂದು ವರದಿಯಾಗಿದೆ.
ವಿದೇಶದಲ್ಲಿ ಲಭ್ಯವಿರುವ ಇದೇ ಕಾರು, 5 ಆಸನಗಳನ್ನು ಒಳಗೊಂಡಿದೆ. 59.6 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 379 ರಿಂದ 410 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. 12.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್ ಹಾಗೂ 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ನಿರೀಕ್ಷೆಯೂ ಇದೆ.

ವಿನ್‌ಫಾಸ್ಟ್ ವಿಎಫ್7 (Vinfast VF7) ವಿಶೇಷತೆಗಳೇನು:
ಈ ಎಲೆಕ್ಟ್ರಿಕ್ ಎಸ್‌ಯುವಿ ರೂ.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಅರ್ಥ್, ವಿಂಡ್ ಮತ್ತು ಸ್ಕೈ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗಲಿದೆ. ಜೆಟ್ ಬ್ಲ್ಯಾಕ್, ಡೆಸಾಟ್ ಸಿಲ್ವರ್, ಇನ್ಫಿನಿಟಿ ಬ್ಲಾಂಕ್, ಕ್ರಿಮ್ಸನ್ ರೆಡ್ ಮತ್ತು ಜೆನಿತ್ ಗ್ರೇ ಎಂಬ ಬಣ್ಣಗಳನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
ಇದು 5 ಆಸನಗಳನ್ನು ಒಳಗೊಂಡಿದೆ. ಅಂತರರಾಷ್ಟ್ರೀಯವಾಗಿಯೂ ದೊರೆಯಲಿದ್ದು, 75.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಪ್ಯಾಕ್‌ನ್ನು ಹೊಂದಿದ್ದು, ಪೂರ್ತಿ ಚಾರ್ಜ್‌ನಲ್ಲಿ 431 ರಿಂದ 450 ಕಿಲೋಮೀಟರ್ ರೇಂಜ್ (ಮೈಲೇಜ್) ಕ್ರಮಿಸುತ್ತದೆ. 15-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪನೋರಮಿಕ್ ಗ್ಲಾಸ್ ರೂಫ್, 8 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯೂ ಇದೆ.


Click it and Unblock the Notifications








