VinFast: ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನ VF6 ಕಾರು ಬಿಡುಗಡೆ, ಬೆಲೆ ತುಂಬಾ ಅಗ್ಗ.. ನೀರಿಕ್ಷೆಗೂ ಮೀರಿದ ವೈಶಿಷ್ಟ್ಯಗಳು!

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast), ಭಾರತದ ಕಾರು ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಹೊಚ್ಚ ಹೊಸ 'ವಿಎಫ್6' ಕಾರನ್ನು ಬಿಡುಗಡೆಗೊಳಿಸಿದೆ. ಇದೊಂದು ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಅತ್ಯಾಧುನಿಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ಬನ್ನಿ, ಈ ನೂತನ ಕಾರಿನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಸ ವಿನ್‌ಫಾಸ್ಟ್ ವಿಎಫ್6 (VinFast VF6) ಎಲೆಕ್ಟ್ರಿಕ್ ಎಸ್‌ಯುವಿ, ರೂ.16.49 ಲಕ್ಷದಿಂದ ರೂ.18.29 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅರ್ಥ್, ವಿಂಡ್ ಹಾಗೂ ವಿಂಡ್ ಇನ್ಫಿನಿಟಿ ಎಂಬ 3 ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಈಗಾಗಲೇ, ಬುಕ್ಕಿಂಗ್ ಶುರುವಾಗಿದೆ. ಆಸಕ್ತ ಗ್ರಾಹಕರು ರೂ.21,000 ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದು.

VinFast VF 6 Launched In India Rs 16 49 Lakh Starting Price Details

ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಸೆಳೆಯುವಂತಿದೆ. ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲೈಟ್‌ಗಳು, 'ವಿನ್‌ಫಾಸ್ಟ್' ಲೋಗೋ ಹೊಂದಿರುವ ಐಬ್ರೋ ಸ್ಟೈಲ್ ಎಲ್ಇಡಿ ಡಿಆರ್‌ಎಲ್‌ಗಳು, ರೇರ್ ಎಲ್ಇಡಿ ಲೈಟ್ ಬಾರ್‌ಗಳು ಹಾಗೂ 18-ಇಂಚಿರುವ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಕ್ರಿಮ್ಸನ್ ರೆಡ್, ಜೆನಿತ್ ಗ್ರೇ, ಅರ್ಬನ್ ಮಿಂಟ್, ಜೆಟ್ ಬ್ಲ್ಯಾಕ್ ಮತ್ತು ಡೆಸ್ಯಾಟ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.

ನೂತನ ವಿನ್‌ಫಾಸ್ಟ್ ವಿಎಫ್6 ಕಾರು ಹೆಚ್ಚು ವಿಶಾಲ ಗಾತ್ರದಲ್ಲಿದೆ. 4,241 ಎಂಎಂ ಉದ್ದ, 1,834 ಎಂಎಂ ಅಗಲ ಮತ್ತು 1,580 ಎಂಎಂ ಎತ್ತರವು ಇದೆ. ಜೊತೆಗೆ 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,730 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

VinFast VF 6 Launched In India Rs 16 49 Lakh Starting Price Details

ಇದು 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 423 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ.

ಹೊಸ ವಿನ್‌ಫಾಸ್ಟ್ ವಿಎಫ್6 ಎಲೆಕ್ಟ್ರಿಕ್ ಎಸ್‌ಯುವಿ ಹೆಚ್ಚು ಶಕ್ತಿಯುತವಾಗಿರುವ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 59.6 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 468 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಎಫ್‌ಡಬ್ಲ್ಯೂಡಿ (ಫೋರ್ ವೀಲ್ ಡ್ರೈವ್) ಟೆಕ್ನಾಲಜಿಯನ್ನು ಒಳಗೊಂಡಿದೆ.

VinFast VF 6 Launched In India Rs 16 49 Lakh Starting Price Details

ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 204 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 310 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಇದು ಕೇವಲ 8.89 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಈ ಕಾರು ಡಿಸಿ ಫಾಸ್ಟ್, 3.3 ಕೆಡಬ್ಲ್ಯೂ ಹಾಗೂ 7.2 ಕೆಡಬ್ಲ್ಯೂ ಎಸಿ ಚಾರ್ಜರ್‌ಗಳೊಂದಿಗೂ ಸುಲಭವಾಗಿ ಚಾರ್ಜ್ ಆಗಬಲ್ಲದು.

ನೂತನ ವಿನ್‌ಫಾಸ್ಟ್ ವಿಎಫ್6 ಕಾರಿನ ಕ್ಯಾಬಿನ್ ವಿನ್ಯಾಸವು ಸಾಕಷ್ಟು ಉತ್ತಮವಾಗಿದೆ. 12.9-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 8-ಸ್ಪೀಕರ್ ಸೌಂಡ್ ಸಿಸ್ಟಮ್, ಏರ್ ಫಿಲ್ಟರ್, ಅಕೌಸ್ಟಿಕ್ ವಿಂಡ್‌ಶೀಲ್ಡ್, ಪನೋರಮಿಕ್ ಸನ್‌ರೂಫ್, 90ಡಬ್ಲ್ಯೂ ಯುಎಸ್‌‍ಬಿ-ಸಿ ಚಾರ್ಜಿಂಗ್ ಹಾಗೂ ಕನೆಕ್ಟೆಡ್ ಕಾರ್ ಟೆಕ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 7 ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಆಟೋ ಪಾರ್ಕ್ ಅಸಿಸ್ಟ್, ಆಟೋಮೆಟಿಕ್ ಹೆಡ್‌ಲೈಟ್‌ಗಳು, ರೇರ್ ಸೆನ್ಸಿಂಗ್ ವೈಪರ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

ಇದಕ್ಕೆ ಮಹೀಂದ್ರಾ ಬಿಇ 6ಇ, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಎಂಜಿ ಜಡ್ಎಸ್ ಇವಿ ಹಾಗೂ ಟಾಟಾ ಕರ್ವ್ ಇವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಅತಿ ಶೀಘ್ರದಲ್ಲೇ ವಿತರಣೆಯು ಆರಂಭವಾಗಲಿದೆ. ಆ ಬಳಿಕ, ದೇಶಿಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Saturday, September 6, 2025, 14:28 [IST]
English summary
Vinfast vf 6 launched in india rs 16 49 lakh starting price details
Read more on VinFast india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+