ಬಡವರ ಕನಸು ನನಸು: ಸಣ್ಣ ಎಲೆಕ್ಟ್ರಿಕ್ ಕಾರು ಪ್ರದರ್ಶನ, ಪಕ್ಕದ ರಾಜ್ಯದಲ್ಲೇ ತಯಾರಿಕೆ.. ಕಡಿಮೆ ಬೆಲೆಗೆ ಬರುತ್ತಾ?
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ (VinFast) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ಭಾರತದ ಕಾರು ಮಾರುಕಟ್ಟೆಯಲ್ಲಿ ತನ್ನದೆಯಾದ ಛಾಪನ್ನು ಮೂಡಿಸಲು ಮುಂದಾಗಿದೆ. ಸದ್ಯ, ನವದೆಹಲಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿಯುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಹೊಚ್ಚ ಹೊಸ 'ವಿಎಫ್3' ಎಲೆಕ್ಟ್ರಿಕ್ ಕಾರನ್ನು ಪ್ರದರ್ಶನ ಮಾಡಿದೆ. ಬನ್ನಿ.. ಈ ನೂತನ ಕಾರು ಹೇಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.
ವಿನ್ಯಾಸ (Design): ನೂತನ ವಿನ್‌ಫಾಸ್ಟ್ ವಿಎಫ್3 ಇವಿ (VinFast VF3 EV) ಪುಟ್ಟ ಎಲೆಕ್ಟ್ರಿಕ್ ಕಾರಾಗಿದ್ದು, ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಈ ಕಾರು ಗಾತ್ರದಲ್ಲಿ ಮಾರುತಿ ಸುಜುಕಿ ಆಲ್ಟೊ ಕಾರಿನಂತೆ ಇದ್ದರೂ 2-ಡೋರ್ ಆಯ್ಕೆಯನ್ನು ಹೊಂದಿರುವುದರಿಂದ 'ಎಂಜಿ ಕಾಮೆಟ್ ಇವಿ'ಗೆ ಹೋಲಿಕೆಯಾಗುತ್ತದೆ.

ಈ ಎಲೆಕ್ಟ್ರಿಕ್ ಕಾರು ಬಾಕ್ಸಿ ಆಕಾರವನ್ನು ಹೊಂದಿದೆ. ಇದು ಆಕರ್ಷಕವಾದ ಕ್ರೋಮ್ ಗ್ರಿಲ್ ಬಾರ್, ಉತ್ತಮವಾದ ಹೆಡ್‌ಲೈಟ್‌ಗಳು, ಕಪ್ಪು (ಬ್ಲ್ಯಾಕ್) ಬಣ್ಣದ ಬಂಪರ್‌ನ್ನು ಪಡೆದಿದೆ. ಇದು ಮಾತ್ರವಲ್ಲದೆ ಅಲಾಯ್ ವೀಲ್‌ಗಳು, ವಿ-ಆಕಾರಕ್ಕೆ ಹೋಲಿಕೆಯಾಗುವ ಟೈಲ್‌ಗೇಟ್‌ನ್ನು ಒಳಗೊಂಡಿದೆ. ಜೊತೆಗೆ 3,190 ಎಂಎಂ ಉದ್ದ, 1,679 ಎಂಎಂ ಅಗಲ ಹಾಗೂ 1,652 ಎಂಎಂ ಎತ್ತರವನ್ನು ಒಳಗೊಂಡಿದ್ದು, 2,075 ಎಂಎಂ ವೀಲ್‌ಬೇಸ್‌ನ್ನು ತನ್ನದಾಗಿಸಿಕೊಂಡಿದೆ.

ಕಾರ್ಯಕ್ಷಮತೆ (Performance): ನೂತನ ವಿನ್‌ಫಾಸ್ಟ್ ವಿಎಫ್3 ಇವಿ ಶಕ್ತಿಯುವಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 215 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬಳಲಿಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 40 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 110 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸಲಿದೆ ಎಂದು ತಿಳಿದುಬಂದಿದೆ.
ವೈಶಿಷ್ಟ್ಯಗಳು (Features): ಈ ಕಾರು ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರುವ ನೀರಿಕ್ಷೆಯಿದೆ. 10-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, 2-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪಡೆದಿರಲಿದೆ ಎನ್ನಲಾಗಿದೆ. ಇದರೊಟ್ಟಿಗೆ ಪ್ರಯಾಣಿಕರ ಸುರಕ್ಷತೆಗಾಗಿ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

ಬೆಲೆ (Price): ನೂತನ ವಿನ್‌ಫಾಸ್ಟ್ ವಿಎಫ್3 ಇವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಸರಿ ಸುಮಾರು ರೂ.10 ಲಕ್ಷವರೆಗೆ (ಎಕ್ಸ್ ಶೋರೂಂ) ದರವನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. 4 ಆಸನ ಆಯ್ಕೆ ವ್ಯವಸ್ಥೆಯಲ್ಲಿಯೂ ಮಾರಾಟಕ್ಕೆ ಬರಬಹುದು ಎನ್ನಲಾಗಿದೆ. ವಿಶೇಷವಾಗಿ ಈ ಕಾರನ್ನು ತಮಿಳುನಾಡಿನ ತೂತುಕುಡಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ.
ಇನ್ನು, ವಿನ್‌ಫಾಸ್ಟ್ ವಿಎಫ್3 ಇವಿಗೆ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಟಿಯಾಗೊ ಇವಿ, ಟಾಟಾ ಟಿಗೊರ್ ಇವಿ ಮತ್ತು ಎಂಜಿ ಕಾಮೆಟ್ ಇವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ. ಈ ಕಾರು, ಅತಿ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಯೂ ಇದೆ. ಶ್ರೀಸಾಮಾನ್ಯರು ಕೂಡ ಸುಲಭವಾಗಿ ಖರೀದಿ ಮಾಡಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








