VinFast: ಎರಡು ಹೊಸ ಕಾರುಗಳು ಬಿಡುಗಡೆಗೆ ಸಜ್ಜು: ಬೆಲೆಯೆಷ್ಟು, ವಿಶೇಷತೆಗಳೇನು?

ಭಾರತಕ್ಕೆ ಹೊಸ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿ ಲಗ್ಗೆಯಿಟ್ಟಿದೆ. ಇದು ವಿಯೆಟ್ನಾಂ ಮೂಲದ ಬ್ರಾಂಡ್ ಆಗಿದ್ದು, ಜಾಗತಿಕವಾಗಿ ಹೆಸರು ಮಾಡಿದೆ. ಅದೇ ವಿನ್‌ಫಾಸ್ಟ್ (VinFast) ಬ್ರಾಂಡ್, ಈ ವರ್ಷದ ಆರಂಭದಲ್ಲಿ ಕಂಪನಿಯು ಭಾರತದಲ್ಲಿ ಆರಂಭಿಕವಾಗಿ VF7 ಮತ್ತು VF6 ಎಂಬ ಎರಡು ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಈ ಸಂಬಂಧ ದೇಶದಲ್ಲಿ ಡೀಲರ್‌ ನೆಟ್‌ವರ್ಕ್ ಸೇರಿದಂತೆ ಸ್ಥಳೀಯ ಕಾರು ಉತ್ಪಾದನಾ ಘಟಕದವರೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇನ್ನೇನು ಕಾರುಗಳ ಬಿಡುಗಡೆ ಮಾತ್ರ ಬಾಕಿಯಿದ್ದು, ಆ ಎರಡೂ ಕಾರುಗಳ ಬಗ್ಗೆ ನಮಗೆ ಲಭ್ಯವಾಗಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೇವೆ.

ವಿನ್‌ಫಾಸ್ಟ್ VF7 ಮತ್ತು VF6 ಎಸ್‌ಯುವಿಗಳು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿವೆ. ವಿನ್‌ಫಾಸ್ಟ್ VF7 ಕಾರಿನ ನಿರೀಕ್ಷಿತ ಬೆಲೆಗಳನ್ನು ನೋಡುವುದಾದ್ರೆ, ವೇರಿಯೆಂಟ್ ಮತ್ತು ಸ್ಥಳೀಯ ಜೋಡಣೆಯನ್ನು ಅವಲಂಭಿಸಿ ರೂ. 25 ಲಕ್ಷದಿಂದ ರೂ. 35 ಲಕ್ಷ ಬೆಲೆ ಇರಲಿದೆ. ಇನ್ನೂ ಕೆಲವು ಮೂಲಗಳು ಹೈ-ಎಂಡ್/ಟಾಪ್ ಟ್ರಿಮ್‌ಗಳು ಅಥವಾ ಆನ್-ರೋಡ್ ಬೆಲೆ ಒಳಗೊಂಡಂತೆ ರೂ. 50 ಲಕ್ಷದವರೆಗೆ ಇರಲಿದೆ ಎಂದು ಹೇಳುತ್ತಿವೆ.

vinfast-vf7-and-vf6-price-features-range-expectations

ವಿನ್‌ಫಾಸ್ಟ್ VF7 ಕಾರಿನ ಬ್ಯಾಟರಿ ಮತ್ತು ರೇಂಜ್ ವಿಷಯಕ್ಕೆ ಬಂದರೆ, 70.8 kWh (ಭಾರತ-ಸ್ಪೆಕ್) ಬ್ಯಾಟರಿ ಇರಲಿದೆ. ಇದರಲ್ಲಿ FWD (ಫ್ರಂಟ್ ವೀಲ್ ಡ್ರೈವ್) ಒಮ್ಮೆ ಚಾರ್ಜ್ ಮಾಡಿದರೆ 450 ಕಿ.ಮೀ ವರೆಗೆ ಓಡುತ್ತದೆ. AWD ವೇರಿಯೆಂಟ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ 431 ಕಿ.ಮೀ ವರೆಗೆ ರೇಂಜ್ ನೀಡುವ ನಿರೀಕ್ಷೆಯಿದೆ.

ವಿನ್‌ಫಾಸ್ಟ್ VF6 ಕಾರಿನ ವಿಷಯಕ್ಕೆ ಬಂದರೆ ಇದು ರೂ. 18 ಲಕ್ಷದಿಂದ ರೂ. 25 ಲಕ್ಷ (ಬೇಸ್ ಇಕೋ), ಟಾಪ್ ವೇರಿಯೆಂಟ್‌ಗಳು 30-45 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ವಿನ್‌ಫಾಸ್ಟ್ VF6 ಎಲೆಕ್ಟ್ರಿಕ್ ಎಸ್‌ಯುವಿ ಬ್ಯಾಟರಿಯು 59.6 kWh ಇರಲಿದೆ. ಇದನ್ನು ಒಮ್ಮೆ ಚಾರ್ಜ್‌ ಮಾಡಿದರೆ ಬರೋಬ್ಬರಿ 399 ಕಿ.ಮೀ ವರೆಗೆ ರೇಂಜ್ ನೀಡುವ ನೀರೀಕ್ಷೆಗಳಿವೆ.

vinfast-vf7-and-vf6-price-features-range-expectations

ಇದು FWD ಜೊತೆಗೆ 203 HP ಪವರ್ ಹಾಗೂ ಹೆಚ್ಚಿನ ಟಾರ್ಕ್ ಮತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಎರಡೂ ಮಾಡಲ್‌ಗಳ ಬುಕಿಂಗ್‌ಗಳು ತೆರೆದಿವೆ, ಹಬ್ಬದ ಸೀಸನ್‌ನಲ್ಲಿ (ಆಗಸ್ಟ್-ಸೆಪ್ಟೆಂಬರ್ 2025) ಬಿಡುಗಡೆಗಳನ್ನು ಯೋಜಿಸಲಾಗಿದೆ. ಬ್ಯಾಟರಿ ಸಾಮರ್ಥ್ಯ ಮತ್ತು ರೇಂಜ್ ಭಾರತದ ಮುಂಬರುವ ಇತರ ಎಲೆಕ್ಟ್ರಿಕ್ SUV ಗಳಲ್ಲಿ VF6 ಮತ್ತು VF7 ಎರಡನ್ನೂ ಸ್ಪರ್ಧಾತ್ಮಕವಾಗಿ ಇರಿಸುತ್ತದೆ.

ತಂತ್ರಜ್ಞಾನ ಮತ್ತು ಸೌಕರ್ಯದ ವಿಷಯಕ್ಕೆ ಬಂದರೆ, ಎರಡೂ ಕಾರುಗಳಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್ ಕಾರ್ ಟೆಕ್, ಲೆದರ್ ಸೀಟ್‌ಗಳು, ಬಹು ಏರ್‌ಬ್ಯಾಗ್‌ಗಳು, ABS, ESC, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಉನ್ನತ ಟ್ರಿಮ್‌ಗಳಲ್ಲಿ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳು (ADAS) ಇರಲಿದೆ.

vinfast-vf7-and-vf6-price-features-range-expectations

ಇವಿಷ್ಟೇ ಅಲ್ಲದೆ, ಟಾಪ್ ವೇರಿಯೆಂಟ್‌ಗಳಲ್ಲಿ ಪ್ರೀಮಿಯಂ ಸೌಂಡ್ ಸಿಸ್ಟಮ್, ದೊಡ್ಡ ಟಚ್‌ಸ್ಟ್ರೀನ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್, 6 - ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಸೆಲ್ಫ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ - ಕೀಪಿಂಗ್ ಅಸಿಸ್ಟ್ ನಂತಹ ಆಧುನಿಕ ಫೀಚರ್ಸ್ ಅನ್ನು ನಿರೀಕ್ಷಿಸಲಾಗಿದೆ.

ಈ ಬೆಲೆ ಮತ್ತು ರೇಂಜ್ ವಿವರಗಳು ಜುಲೈ 2025 ರ ಹೊತ್ತಿಗೆ ಲಭ್ಯವಿರುವ ಅತ್ಯಂತ ಪ್ರಸ್ತುತ ಅಧಿಕೃತ ಮತ್ತು ಮಾಧ್ಯಮ ವರದಿಗಳನ್ನು ಆಧರಿಸಿವೆ. ಅಂತಿಮ ಬೆಲೆ ಮತ್ತು ವೇರಿಯೆಂಟ್ ಕುರಿತ ಹೆಚ್ಚಿನ ಮಾಹಿತಿ ಬಿಡುಗಡೆ ಸಮಯದಲ್ಲಿ ಹೊರಬರಲಿದೆ. ಬಿಡುಗಡೆಗೆ ಸಿದ್ಧವಾಗಿರುವ ಈ ಎರಡೂ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Wednesday, July 16, 2025, 11:51 [IST]
English summary
Vinfast vf7 and vf6 price features range expectations
Read more on VinFast india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+