ಮೊನ್ನೆಯಷ್ಟೆ ಭಾರತಕ್ಕೆ ಲಗ್ಗೆಯಿಟ್ಟ ಹೊಸ ಕಾರು ಬ್ರಾಂಡ್: ಈ ಕಾರುಗಳು ಬಿಡುಗಡೆಗೆ ಸಜ್ಜು!

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2025 ರಲ್ಲಿ (Auto expo 2025) ವಿಯೆಟ್ನಂ ಮೂಲದ 'ವಿನ್‌ಫಾಸ್ಟ' (VinFast) ಕಾರು ತಯಾರಕ ಕಂಪನಿಯು ಭಾರತಕ್ಕೆ ಲಗ್ಗೆಯಿಟ್ಟಿದೆ. ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಮಾದರಿಗಳಾಗಿ VF 7 ಮತ್ತು VF 6 ಮಾಡಲ್‌ಗಳನ್ನು ಆಯ್ಕೆ ಮಾಡಿದ್ದು, ಇವು ಬಿಡುಗಡೆಯಾಗುವ ಮೊದಲ ಮಾರುಕಟ್ಟೆಯೂ ಭಾರತವಾಗಿದೆ. ಸೌಕರ್ಯ ಮತ್ತು ಆಧುನಿಕತೆಯ ಸಾಮರಸ್ಯದ ಮಿಶ್ರಣವನ್ನು ಸಾಕಾರಗೊಳಿಸುತ್ತಾ VF 7 ಮತ್ತು VF 6 ಸುರಕ್ಷಿತ ಎಲೆಕ್ಟ್ರಿಕ್ ವಾಹನವಾಗಳಾಗಿ ಭಾರತದಲ್ಲಿ ಜನಪ್ರಿಯತೆ ಪಡೆಯಲಿವೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿವೆ.

ಜಾಗತಿಕ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವುದು, ಬೆಳೆಯುತ್ತಿರುವ ಬೇಡಿಕೆಯನ್ನು ಪೂರೈಸುವುದು ಮತ್ತು ಭಾರತ ಸೇರಿದಂತೆ ವಿದೇಶಗಳಿಗೆ ಸುಸ್ಥಿರ ಚಲನಶೀಲತೆಯನ್ನು ಅಳವಡಿಸಿಕೊಳ್ಳುವುದನ್ನು ಗುರಿಯಾಗಿರಿಸಿಕೊಂಡಿದ್ದೇವೆ. ಇದನ್ನು ಸಾಕಾರಗೊಳಿಸಲು ಕಳೆದ ವರ್ಷ ದಕ್ಷಿಣ ಭಾರತದ ತಮಿಳುನಾಡಿನ ತೂತುಕುಡಿಯಲ್ಲಿ ನಮ್ಮ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕಕ್ಕೆ ಅಡಿಪಾಯ ಹಾಕಿದ್ದೇವೆ ಎಂದು ತಿಳಿಸಿದೆ.

vinfast-vf7-vf6-top-things-you-should-know

ಇದೀಗ ಆಟೋ ಎಕ್ಸ್‌ಪೋ 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಮೊದಲ ಎರಡು ಎಲೆಕ್ಟ್ರಿಕ್ ವಾಹನಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ವಿನ್‌ಫಾಸ್ಟ್‌ ಕಂಪನಿಯು ಎರಡು ಎಲೆಕ್ಟ್ರಿಕ್ ಪ್ರೀಮಿಯಂ ಎಸ್‌ಯುವಿಗಳಾದ VF 7 ಮತ್ತು VF 6 ವಾಹನಗಳ ಅನಾವರಣವು ಭರವಸೆಯ ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ವಿನ್‌ಫಾಸ್ಟ್‌ಗೆ ಮಹತ್ವದ ಮೈಲಿಗಲ್ಲಾಗಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಎಕ್ಸ್‌ಪೋದಲ್ಲಿ ನಮ್ಮ ವಿಶಾಲವಾದ ಎಲೆಕ್ಟ್ರಿಕ್ ಮೊಬಿಲಿಟಿ ಪರಿಹಾರಗಳ ಪೋರ್ಟ್‌ಫೋಲಿಯೊವನ್ನು ಪ್ರದರ್ಶಿಸಲು ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಪ್ರೀಮಿಯಂ SUV ಗಳಾದ VF 7 ಮತ್ತು VF 6 ಭಾರತದಲ್ಲಿ EV ಗಳ ಖರೀದಿಯನ್ನು ವೇಗಗೊಳಿಸುವ ಗೇಮ್ ಚೇಂಜರ್‌ಗಳಾಗಿವೆ. ಇಲ್ಲಿ ನಮ್ಮ ಉಪಸ್ಥಿತಿಯು ಭಾರತೀಯ ಮಾರುಕಟ್ಟೆಗೆ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ ಎಂದು ವಿನ್‌ಫಾಸ್ಟ್ ಇಂಡಿಯಾದ ಸಿಇಒ ಅಶ್ವಿನ್ ಅಶೋಕ್ ಪಾಟೀಲ್ ಹೇಳಿದ್ದಾರೆ.

vinfast-vf7-vf6-top-things-you-should-know

ವಿನ್‌ಫಾಸ್ಟ್ ಕಂಪನಿಯು ಭಾರತದ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಎಲ್ಲಾ ಚಾನೆಲ್ ಉಪಸ್ಥಿತಿಯೊಂದಿಗೆ ಡೀಲರ್‌ಗಳನ್ನು ನೇಮಿಸುತ್ತಿದೆ. ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು. ನಮ್ಮ ಭಾರತ ಕೇಂದ್ರಿತ ಪ್ರೀಮಿಯಂ VF 7 ಮತ್ತು VF 6 SUV ಗಳು 2025 ರ ದ್ವಿತೀಯಾರ್ಧದ ಆರಂಭದಿಂದ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ.

ಈ ಎರಡು ಕಾರುಗಳಲ್ಲಿ ಪ್ರೀಮಿಯಂ SUV ಆಗಿರುವ VF 7 ನಲ್ಲಿ ಚಾಲಕ-ಕೇಂದ್ರಿತ ಒಳಾಂಗಣವು ಬುದ್ಧಿವಂತ ತಂತ್ರಜ್ಞಾನಗಳಿಂದ ಪೂರಕವಾಗಿದ್ದು, ವಿಶಾಲವಾದ ಮತ್ತು ಆರಾಮದಾಯಕ ಅನುಭವವನ್ನು ಪ್ರಯಾಣಿಕರಿಗೆ ನೀಡುತ್ತದೆ. "ಅಸಮ್ಮಿತ ಏರೋಸ್ಪೇಸ್" ತತ್ವಶಾಸ್ತ್ರವನ್ನು ಅಳವಡಿಸಿಕೊಂಡು, VF 7 ದಿಟ್ಟ ಮತ್ತು ದೃಢವಾದ ಹೊರಭಾಗವನ್ನು ಹೊಂದಿದೆ. ಒಟ್ಟಾರೆ ಒಂದು ರೋಮಾಂಚನಕಾರಿ ಚಾಲನಾ ಅನುಭವವನ್ನು ನೀಡುತ್ತದೆ.

vinfast-vf7-vf6-top-things-you-should-know

ವಿನ್‌ಫಾಸ್ಟ್‌ VF 6 ಬಗ್ಗೆ ಹೇಳುವುದಾದ್ರೆ ಇದು ಕೂಡ ಪ್ರೀಮಿಯಂ SUV ಆಗಿದ್ದು, "ದಿ ಡ್ಯುಯಾಲಿಟಿ ಇನ್ ನೇಚರ್" ತತ್ವಶಾಸ್ತ್ರದಿಂದ ಪ್ರೇರಿತವಾದ ಅಸಾಧಾರಣ ಪರ್ಫಾಮೆನ್ಸ್ ಮತ್ತು ಫೀಚರ್ಸ್ ಹೊಂದಿದೆ. ಇದರ ಪರಿಣಾಮವಾಗಿ ಮೋಜಿನ ಮತ್ತು ಅತ್ಯಾಧುನಿಕ, ತಾಂತ್ರಿಕ ಮತ್ತು ಮಾನವ ಕೇಂದ್ರಿತ ವಾಹನಗಳಾಗಿ ಹೊರಹೊಮ್ಮಲಿವೆ ಎಂದು ಕಂಪನಿ ಭರವಸೆ ನೀಡಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, February 2, 2025, 13:00 [IST]
English summary
Vinfast vf7 vf6 top things you should know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+