Volvo: ಭಾರತದಲ್ಲಿ ಹೊಸ ಹೈಬ್ರಿಡ್ ಎಸ್‌ಯುವಿ ಬಿಡುಗಡೆ: ಬೆಲೆಯೆಷ್ಟು?

ಐಷಾರಾಮಿ ಕಾರು ತಯಾರಕ ವೋಲ್ವೋ, ಇಂದು ತನ್ನ ರಿಫ್ರೆಶ್ಡ್ XC60 ಮೈಲ್ಡ್ ಹೈಬ್ರಿಡ್ ಎಸ್‌ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ರೂ. 71,90,000 ಪರಿಚಯಾತ್ಮಕ ಎಕ್ಸ್-ಶೋರೂಂ ಬೆಲೆಯಲ್ಲಿ ಇದು ಖರೀದಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ. ಹೊಸ ವಿನ್ಯಾಸ, ಸೌಕರ್ಯ, ಇನ್ಫೋಟೈನ್‌ಮೆಂಟ್ ಅಪ್‌ಡೇಟ್‌ಗಳನ್ನು ಒಳಗೊಂಡಿದೆ. ಜೊತೆಗೆ ಇದು ವೋಲ್ವೋ ಕಾರ್ಸ್‌ನ ಹೊಸ - ಪೀಳಿಗೆಯ ಇಂಟರ್ಫೇಸ್‌ನೊಂದಿಗೆ ಸಜ್ಜುಗೊಂಡಿದೆ. ಹಾಗೆಯೇ ಇದರ ಸುಧಾರಿತ ಸುರಕ್ಷತೆ ಮತ್ತು ಚಾಲನಾ ತಂತ್ರಜ್ಞಾನಗಳು ಆತ್ಮವಿಶ್ವಾಸದ ಚಾಲನಾ ಅನುಭವವನ್ನು ಖಚಿತಪಡಿಸುತ್ತವೆ ಎಂದು ವೋಲ್ವೋ ತಿಳಿಸಿದೆ.

ರಿಫ್ರೆಶ್ಡ್ XC60 ಮೈಲ್ಡ್ ಹೈಬ್ರಿಡ್ ಎಸ್‌ಯುವಿ ವಿಶೇಷತೆಗಳು

ಕಾರಿನಲ್ಲಿ ದೊಡ್ಡದಾದ 11.2-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್ ಮತ್ತು ಕ್ವಾಲ್ಕಾಮ್‌ನ ಸ್ನ್ಯಾಪ್‌ಡ್ರಾಗನ್ ಕಾಕ್‌ಪಿಟ್ ಪ್ಲಾಟ್‌ಫಾರ್ಮ್ ಪ್ರೊಸೆಸರ್ ಹೊಂದಿದೆ. ಇದು ಉತ್ತಮ ಪಿಕ್ಚರ್ ಕ್ವಾಲಿಟಿ, ಸಂಸ್ಕರಣಾ ಶಕ್ತಿ ಮತ್ತು ತಡೆರಹಿತ ಓವರ್-ದಿ-ಏರ್ ಅಪ್‌ಡೇಟ್‌ಗಳನ್ನು ನೀಡುತ್ತದೆ. ವಿಶೇಷವಾದ ಚಾರ್ಕೋಲ್ ಡ್ಯಾಶ್‌ಬೋರ್ಡ್, ಸಾಟಿಯಿಲ್ಲದ ಸ್ಕ್ಯಾಂಡಿನೇವಿಯನ್ ಐಷಾರಾಮಿ ಸ್ಪರ್ಶವನ್ನು ಒದಗಿಸುತ್ತದೆ.

volvo-xc60-mild-hybrid-suv-launched-in-india

ರಿಫ್ರೆಶ್ ಮಾಡಿದ XC60 ಕಾರಿನ ಹೊರಭಾಗವು ಪ್ರೀಮಿಯಂ SUV ಗೆ ಹೆಚ್ಚು ಸಮಕಾಲೀನ ಮತ್ತು ಪವರ್‌ಫುಲ್ ನೋಟವನ್ನು ನೀಡಿದೆ. ತೆಳುವಾದ ಮುಂಭಾಗದ ಪ್ರೊಫೈಲ್ ಮತ್ತು ವೋಲ್ವೋ ಕಾರ್ಸ್‌ನ ಐಕಾನಿಕ್ ಐರನ್ ಮಾರ್ಕ್ ಹೊಂದಿರುವ ಮರುವಿನ್ಯಾಸಗೊಳಿಸಲಾದ ಗ್ರಿಲ್ ಎಂತವರನ್ನು ಆಕರ್ಷಿಸುತ್ತದೆ. ಹಿಂಭಾಗವು ಅಷ್ಟೇ ಆಕರ್ಷಕವಾಗಿದ್ದು, ತೀಕ್ಷ್ಣವಾದ, ಹೆಚ್ಚು ಸ್ಟೈಲಿಶ್ ಡಾರ್ಕ್ ಟೈಲ್‌ಲೈಟ್‌ಗಳೊಂದಿಗೆ ಸಜ್ಜುಗೊಂಡಿದೆ.

XC60 ಹೊಸ ಅಲಾಯ್ ವೀಲ್‌ಗಳನ್ನು (19-ಇಂಚಿನ 5-ಡಬಲ್ ಸ್ಪೋಕ್ ಗ್ಲಾಸಿ ಬ್ಲ್ಯಾಕ್ ಡೈಮಂಡ್ ಕಟ್) ಸಹ ಪಡೆದುಕೊಂಡಿದೆ. ಇದನ್ನು ಫಾರೆಸ್ಟ್ ಲೇಕ್, ಕ್ರಿಸ್ಟಲ್ ವೈಟ್, ಓನಿಕ್ಸ್ ಬ್ಲ್ಯಾಕ್, ಡೆನಿಮ್ ಬ್ಲೂ, ಬ್ರೈಟ್ ಡಸ್ಕ್ ಮತ್ತು ವೇಪರ್ ಗ್ರೇ ಸೇರಿದಂತೆ ಅತ್ಯಾಧುನಿಕ ಬಣ್ಣಗಳಿಂದ ಗ್ರಾಹಕರು ಆಯ್ಕೆ ಮಾಡಬಹುದು. ಪ್ರಕೃತಿಯಿಂದ ಪ್ರೇರಿತವಾದ ಹೊಸ ಫಾರೆಸ್ಟ್ ಲೇಕ್ ಬಣ್ಣವು ಗ್ರಾಹಕರ ನೆಚ್ಚಿನದಾಗಿದೆ, ಯಾವುದೇ ರಸ್ತೆಯಲ್ಲಿಯೂ ಎದ್ದು ಕಾಣುತ್ತದೆ.

volvo-xc60-mild-hybrid-suv-launched-in-india

ರಿಫ್ರೆಶ್ ಮಾಡಿದ XC60 ಈಗ ಇನ್ನೂ ನಿಶ್ಯಬ್ದ ಕ್ಯಾಬಿನ್ ಪಡೆದುಕೊಂಡಿದೆ. ಸುಧಾರಿತ ಏರ್ ಕ್ಲೀನರ್ ತಂತ್ರಜ್ಞಾನ, 15 ಹೈ-ಎಂಡ್ ಸ್ಪೀಕರ್‌ಗಳಿಂದ (ಸಬ್-ವೂಫರ್ ಸೇರಿದಂತೆ) ಗಮನಾರ್ಹವಾದ 1410W ಔಟ್‌ಪುಟ್ ಅನ್ನು ನೀಡುತ್ತದೆ. ಈ ಕಾರು ಹೊಸ ಕಪ್ ಹೋಲ್ಡರ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ವಿಶಾಲವಾದ ಲೋಡ್ ಕಂಪಾರ್ಟ್‌ಮೆಂಟ್ ಸೇರಿದಂತೆ ಸ್ಮಾರ್ಟ್ ಶೇಖರಣಾ ಆಯ್ಕೆಗಳನ್ನು ಸಹ ಒಳಗೊಂಡಿದೆ.

ಹೊಸ ರಿಫ್ರೆಶ್ XC60 B5 (ಪೆಟ್ರೋಲ್ ಮೈಲ್ಡ್-ಹೈಬ್ರಿಡ್) 1969 cc ಎಂಜಿನ್ ಹೊಂದಿದ್ದು, 250 hp ಗರಿಷ್ಠ ಪವರ್ ಹಾಗೂ 360 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಆಟೋಮ್ಯಾಟೆಡ್ 8 - ಸ್ಪೀಡ್ AWD ಗೇರ್‌ಬಾಕ್ಸ್‌ನೊಂದಿಗೆ 48-ವೋಲ್ಟ್ ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಹೊಂದಿದೆ.

volvo-xc60-mild-hybrid-suv-launched-in-india

ಹೊರಾಂಗಣ ಪ್ರಮುಖ ಲಕ್ಷಣಗಳು: ಹೊಸ ಗ್ರಿಲ್ ಮತ್ತು ಗ್ರಿಲ್ ಐರನ್ ಮಾರ್ಕ್, ಸಕ್ರಿಯ ಬಾಗುವಿಕೆಯೊಂದಿಗೆ ಥಾರ್ ಹ್ಯಾಮರ್ LED ಹೆಡ್‌ಲೈಟ್‌ಗಳು, ಡಾರ್ಕನ್ಡ್ ಟೈಲ್‌ಲೈಟ್‌ಗಳು, 19-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು, ಹೊಸ ಬಣ್ಣ - ಫಾರೆಸ್ಟ್ ಲೇಕ್, ಪನೋರಮಿಕ್ ಸನ್‌ರೂಫ್ ನಂತಹ ಆಕರ್ಷಕ ಹೈಲೆಟ್‌ಗಳನ್ನು ಹೊಂದಿದೆ.

ಒಳಾಂಗಣ ಪ್ರಮುಖ ಲಕ್ಷಣಗಳು: ಗ್ರಾಫಿಕಲ್ ಹೆಡ್ ಅಪ್ ಡಿಸ್ಪ್ಲೇ, 12.3-ಇಂಚಿನ ಡ್ರೈವರ್ ಡಿಸ್ಪ್ಲೇ, 15 ಬೋವರ್ಸ್ & ವಿಲ್ಕಿನ್ಸ್ ಸ್ಪೀಕರ್‌ಗಳು, ಹೊಸ ಕಬ್ಬಿಣದ ಗುರುತು ಹೊಂದಿರುವ ಸ್ಟೀರಿಂಗ್ ವೀಲ್, ವೈರ್‌ಲೆಸ್ ಫೋನ್ ಚಾರ್ಜರ್, ಸ್ಪ್ಲಿಟ್ ಸ್ಕ್ರೀನ್‌ನೊಂದಿಗೆ ಸುಧಾರಿತ 360° ಕ್ಯಾಮೆರಾ, ಸುಧಾರಿತ ಏರ್ ಕ್ಲೀನರ್ (PM 2.5 ಸಂವೇದಕ) ಹೊಂದಿರುವ 4-ವಲಯ ಏರ್ ಕಂಡಿಷನರ್ ಹೊಂದಿದೆ.

ಸುರಕ್ಷತೆ: ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಪೈಲಟ್ ಅಸಿಸ್ಟ್, ಲೇನ್ ಕೀಪಿಂಗ್ ಏಡ್, ಕ್ರಾಸ್-ಟ್ರಾಫಿಕ್‌ನೊಂದಿಗೆ ಬ್ಲೈಂಡ್ ಸ್ಪಾಟ್ ಮಾಹಿತಿ ವ್ಯವಸ್ಥೆ ಎಚ್ಚರಿಕೆ ಮತ್ತು ಬ್ರೇಕ್ ಸಪೋರ್ಟ್, ಘರ್ಷಣೆ ತಗ್ಗಿಸುವಿಕೆ ಸಪೋರ್ಟ್ (ಮುಂಭಾಗ ಮತ್ತು ಹಿಂಭಾಗ), 360-ಡಿಗ್ರಿ ಕ್ಯಾಮೆರಾ ಮತ್ತು ಪಾರ್ಕಿಂಗ್ ಸಹಾಯ (ಮುಂಭಾಗ, ಹಿಂಭಾಗ ಮತ್ತು ಬದಿ), 5 ವರ್ಷಗಳ ಚಂದಾದಾರಿಕೆಯೊಂದಿಗೆ Google ಸೇವೆಗಳು, ವೋಲ್ವೋ ಕಾರ್ಸ್ ಅಪ್ಲಿಕೇಶನ್ ನೀಡಲಾಗಿದೆ.

More from DriveSpark

Article Published On: Friday, August 1, 2025, 16:31 [IST]
English summary
Volvo xc60 mild hybrid suv launched in india
Read more on volvo india luxury cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+