ಕೇವಲ 65 ಸಾವಿರಕ್ಕೆ ಹೊಸ ಸ್ಕೂಟರ್ ಬಿಡುಗಡೆ: 1 ಪೈಸೆ ಖರ್ಚಿಲ್ಲ... ನಿತ್ಯ 150 ಕಿ.ಮೀ ಓಡಿಸಿ
ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್‌ಗಳಲ್ಲಿ ಒಂದಾದ ಝೀಲಿಯೋ ಇ (ZELIO E) ಕಂಪನಿಯು, ತನ್ನ ಜನಪ್ರಿಯ 'ಲೆಜೆಂಡರ್ ಕಡಿಮೆ ವೇಗ'ದ (Low speed) ಎಲೆಕ್ಟ್ರಿಕ್ ಸ್ಕೂಟರ್‌ನ ಬಹು ನಿರೀಕ್ಷಿತ ಫೇಸ್‌ಲಿಫ್ಟ್ ಮಾಡಲ್‌ನ್ನು ಬಿಡುಗಡೆ ಮಾಡಿದೆ. ಇದನ್ನು ಹೊಸ ಡಿಸೈನ್, ಸುಧಾರಿತ ಫೀಚರ್ಸ್ ಮತ್ತು ಹೊಸ ಬಣ್ಣದ ಆಯ್ಕೆಗಳನ್ನು ಬೆರೆಸಿ, ಫೇಸ್‌ಲಿಫ್ಟೆಡ್ ಲೆಜೆಂಡರ್ ಅನ್ನು ದಕ್ಷ, ವಿಶ್ವಾಸಾರ್ಹ ಸ್ಕೂಟರ್ ಹುಡುಕುತ್ತಿರುವ ಆಧುನಿಕ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
ಹೊಸ ಸ್ಕೂಟರ್ ಅನ್ನು ಮೂರು ವಿಭಿನ್ನ ಬ್ಯಾಟರಿ ಪ್ಯಾಕ್ ಹಾಗೂ ಮೂರು ಹೊಸ ಬಣ್ಣಗಳಲ್ಲಿ ಲಭ್ಯವಿದೆ. ರಸ್ಟಿ ಆರೆಂಜ್, ಗ್ಲಾಸಿ ಗ್ರೀನ್ ಮತ್ತು ಗ್ಲಾಸಿ ಗ್ರೇ ಬಣ್ಣಗಳ ಆಯ್ಕೆಯಿದೆ. 60V/30A ವೇರಿಯೆಂಟ್ ಬೆಲೆಯು ರೂ. 75,000 ಇದ್ದು, 74V/32A ವೇರಿಯೆಂಟ್ ಬೆಲೆಯು ರೂ. 79,000 ಇದೆ. ಇವೆರಡು ವೇರಿಯೆಂಟ್‌ಗಳು ಲಿಥಿಯಂ - ಐಯಾನ್ ಬ್ಯಾಟರಿಗಳನ್ನು ಹೊಂದಿವೆ.

ಹಾಗೆಯೇ ಈ ಸ್ಕೂಟರ್ 32AH ಜೆಲ್ ಬ್ಯಾಟರಿ ವೇರಿಯೆಂಟ್ ಅನ್ನು ಕೂಡ ಹೊಂದಿದ್ದು, ಇದರ ಬೆಲೆಯು ರೂ. 65,000 ಇದೆ. ಈ ಸ್ಕೂಟರ್‌ಗಳು 25 ಕಿ.ಮೀ ಗರಿಷ್ಠ ವೇಗ ಮತ್ತು ಒಂದೇ ಚಾರ್ಜ್‌ನಲ್ಲಿ 150 ಕಿ.ಮೀ ರೇಂಜ್ ಹೊಂದಿದೆ. ಇದು ಹೆಚ್ಚಿನ ಕಾರ್ಯಕ್ಷಮತೆಯ 60/72V BLDC ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತದೆ. ಪ್ರತಿ ಚಾರ್ಜ್‌ಗೆ ಕೇವಲ 1.5 ಯೂನಿಟ್ ವಿದ್ಯುತ್ ಅನ್ನು ಬಳಸುತ್ತದೆ.
ಸ್ಕೂಟರ್‌ನ ಒಟ್ಟು ತೂಕ 98 ಕೆ.ಜಿ, 150 ಕೆ.ಜಿ ಲೋಡಿಂಗ್ ಸಾಮರ್ಥ್ಯ ಮತ್ತು 170 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಲೆಜೆಂಡರ್ ಅನ್ನು ನಿರ್ಮಿಸಲಾಗಿದೆ. ವೇರಿಯೆಂಟ್‌ಗಳ ಅನ್ವಯಿಸಿ ಚಾರ್ಜಿಂಗ್ ಸಮಯವು ಬದಲಾಗುತ್ತದೆ, ಲಿಥಿಯಂ-ಐಯಾನ್ ಮಾಡಲ್‌ಗಳು 4 ಗಂಟೆಗಳು ಮತ್ತು ಜೆಲ್ ಬ್ಯಾಟರಿ ಮಾಡಲ್ 08 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.
ZELIO ವಾಹನದ ಮೇಲೆ 2 ವರ್ಷಗಳ ಮತ್ತು ಎಲ್ಲಾ ಬ್ಯಾಟರಿ ವೇರಿಯೆಂಟ್‌ಗಳ ಮೇಲೆ 1 ವರ್ಷದ ಸಮಗ್ರ ವಾರೆಂಟಿಯನ್ನು ನೀಡುತ್ತಿದೆ. ಜೊತೆಗೆ ZELIO ಕಂಪನಿಯು ವಿಶೇಷ ಪರಿಚಯಾತ್ಮಕ ಪ್ರಯೋಜನವನ್ನು ಸಹ ನೀಡುತ್ತಿದ್ದು, ಮೊದಲ 1,000 ಗ್ರಾಹಕರು ಉಚಿತ ಸುರಕ್ಷತಾ ಹೆಲ್ಮೆಟ್ ಅನ್ನು ಪಡೆಯಬಹುದು ಎಂದು ಕಂಪನಿ ತಿಳಿಸಿದೆ.
ಹೊಸ ಲೆಜೆಂಡರ್ ಸುರಕ್ಷತೆ, ಸೌಕರ್ಯ ಮತ್ತು ದೈನಂದಿನ ಅನುಕೂಲತೆಯನ್ನು ಹೆಚ್ಚಿಸಲು ಹಲವು ವಿಶೇಷತೆಗಳಿಂದ ತುಂಬಿದೆ. ಇದು ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳು, 90/90-12 ಟೈರ್‌ಗಳನ್ನು ಹೊಂದಿರುವ 12-ಇಂಚಿನ ಅಲಾಯ್ ವೀಲ್‌ಗಳು, ಸುಗಮ ಮತ್ತು ಸ್ಥಿರ ಸವಾರಿಗಳಿಗಾಗಿ ಪ್ರಬಲವಾದ ಹಿಂಭಾಗದ ಹಬ್ ಮೋಟಾರ್ ಅನ್ನು ಒಳಗೊಂಡಿದೆ.
ಮುಂಭಾಗದ ಟೆಲಿಸ್ಕೋಪಿಕ್ ಮತ್ತು ಹಿಂಭಾಗದ ಡ್ಯುಯಲ್ ಸ್ಪ್ರಿಂಗ್-ಲೋಡೆಡ್ ಸಸ್ಪೆನ್ಷನ್ ಒರಟು ರಸ್ತೆಗಳಲ್ಲಿಯೂ ಉತ್ತಮ ರೈಡ್ ಅನ್ನು ನೀಡುತ್ತದೆ. ಸ್ಟೈಲಿಶ್ LED ಹೆಡ್‌ಲ್ಯಾಂಪ್‌ಗಳು, ಟೈಲ್‌ಲ್ಯಾಂಪ್‌ಗಳು ಮತ್ತು ಇಂಡಿಕೇಟರ್‌ಗಳು ಸ್ಕೂಟರ್‌ನ ಆಧುನಿಕ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಹಾಗೆಯೇ ಇದರ ಡಿಜಿಟಲ್ ಡ್ಯಾಶ್‌ಬೋರ್ಡ್ ಸವಾರರಿಗೆ ಸಂಪೂರ್ಣ ಮಾಹಿತಿ ನೀಡುತ್ತದೆ.
ಸ್ಕೂಟರ್‌ನ ಇತರ ಹೈಲೆಟ್‌ಗಳನ್ನು ನೋಡುವುದಾದ್ರೆ ಕೀಲೆಸ್ ಎಂಟ್ರಿ, ಮೊಬೈಲ್ ಚಾರ್ಜಿಂಗ್, ಆಂಟಿ - ಥೆಫ್ಟ್ ಡಿಟೆಕ್ಷನ್, ಪ್ರಾಕ್ಸಿಮಿಟಿ ಲಾಕ್ - ಅನ್‌ಲಾಕ್, ಪಾರ್ಕ್ ಅಸಿಸ್ಟ್, ಫಾಲೋ - ಮಿ - ಹೋಮ್ ಲೈಟ್‌ಗಳು, SOS ಅಲರ್ಟ್‌ಗಳು, ಕ್ರ್ಯಾಶ್ ಮತ್ತು ಫಾಲ್ ಡಿಟೆಕ್ಷನ್ ಮತ್ತು ವೆಹಿಕಲ್ ಡಯಾಗ್ನೋಸ್ಟಿಕ್ಸ್ ಲೆಜೆಂಡರ್ ಅನ್ನು ನಗರ ಪ್ರಯಾಣಕ್ಕೆ ಸ್ಮಾರ್ಟ್ ಮತ್ತು ವಿಶ್ವಾಸಾರ್ಹ ಆಯ್ಕೆಯನ್ನಾಗಿ ಮಾಡುತ್ತದೆ.


Click it and Unblock the Notifications








