Duster: ಲುಕ್ ನೋಡಿ ಸ್ವಾಮಿ: ಕಮ್ಮಿ ಬೆಲೆಗೆ ಬಿಡುಗಡೆಗೆ ಸಜ್ಜು... ಪ್ರತಿಸ್ಪರ್ಧಿಗಳಿಗೆ ಆಗಲೆ ಭಯ ಶುರುವಾಗಿದೆ!
ಮೊದಲಿನಂತಲ್ಲದೆ ಭಾರತದಲ್ಲಿ ಈಗ ಪ್ರತಿಯೊಬ್ಬರು ಕಾರು ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಡಿಮೆ EMI, ಸುಲಭವಾದ ಡೌನ್‌ಪೇಮೆಂಟ್‌ನಿಂದಾಗಿ ಆರಾಮವಾಗಿ 6-7 ಲಕ್ಷ ಬೆಲೆಯಲ್ಲಿ ಸಿಗುವ ಕಾರುಗಳನ್ನು ಖರೀದಿಸಬಹುದಾಗಿದೆ. ಮಧ್ಯಮ ವರ್ಗದವರು ಕೂಡ ಮಿಡ್‌ಸೈಜ್ ಎಸ್‌ಯುವಿಯನ್ನು ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ, ಪ್ರಸ್ತುತ ಮಿಡ್‌ಸೈಜ್ ಎಸ್‌ಯುವಿ ವಿಭಾಗವು ಭಾರತದಲ್ಲಿ ಅತ್ಯಂತ ಬೇಡಿಕೆ ಹೊಂದಿದೆ. ಬಹುತೇಕ ಎಲ್ಲಾ ಬ್ರಾಂಡ್‌ಗಳು ಈ ವಿಭಾಗದಲ್ಲಿ ತೀವ್ರ ಪೈಪೋಟಿಯೊಂದಿಗೆ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ರೆನಾಲ್ಟ್ ಭಾರತಕ್ಕಾಗಿ ಮೂರನೇ ತಲೆಮಾರಿನ ಡಸ್ಟರ್ (Renault Duster) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರಿನ ವಿಶೇಷತೆಗಳನ್ನು ತಿಳಿಯೋಣ.
ಈಗಾಗಲೇ ಅನಾವರಣಗೊಂಡಿರುವ ಹೊಸ ಡಸ್ಟರ್, ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ಕಿಯಾ ಸೆಲ್ಟೋಸ್, ಹುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಮಾರುತಿ ಸುಜುಕಿ ವಿಕ್ಟೋರಿಸ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್‌ನಂತಹ ಮಾಡಲ್‌ಗಳೊಂದಿಗೆ ಸ್ಪರ್ಧಿಸಲಿದೆ. ಇವೆಲ್ಲವು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಭಾರತೀಯ ರಸ್ತೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅಂಶಗಳಿಂದಾಗಿ ದೇಶೀಯ ವಾಹನ ಮಾರಾಟದಲ್ಲಿ ಪ್ರಮುಖ ಪಾಲನ್ನು ಹೊಂದಿವೆ.

ಹೊಸ ರೆನಾಲ್ಟ್ ಡಸ್ಟರ್ ಡಿಸೈನ್: ಮೂರನೇ ತಲೆಮಾರಿನ ಡಸ್ಟರ್ LED ಹೆಡ್‌ಲ್ಯಾಂಪ್‌ಗಳು, ಟೈಲ್-ಲ್ಯಾಂಪ್‌ಗಳು, DRL ಗಳು, ಹೊಸ ಬಂಪರ್‌ಗಳು, ಡೋರ್ ಹ್ಯಾಂಡಲ್‌ಗಳು ಮತ್ತು ಅಲಾಯ್ ವೀಲ್‌ಗಳು ಸೇರಿದಂತೆ ವ್ಯಾಪಕವಾದ ಬಾಹ್ಯ ಬದಲಾವಣೆಗಳನ್ನು ಪಡೆದುಕೊಂಡು ಬರಲಿದೆ. ಪೂರ್ಣ - ಅಗಲದ ಹಿಂಭಾಗದ ಟೈಲ್-ಲ್ಯಾಂಪ್ ಡಿಸೈನ್ ಸಹ ನಿರೀಕ್ಷಿಸಲಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿನ ಪ್ರಸ್ತುತ ಸ್ಟೈಲಿಂಗ್‌ಗೆ ಹೊಂದಿಕೆಯಾಗುತ್ತದೆ.
ರೆನಾಲ್ಟ್ ಡಸ್ಟರ್ ಇಂಟೀರಿಯರ್: ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 7-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆರು ಸ್ಪೀಕರ್‌ಗಳನ್ನು ಹೊಂದಿರುವ ಅರ್ಕಾಮಿಸ್ 3D ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಇರಲಿವೆ.

ರೆನಾಲ್ಟ್ ಡಸ್ಟರ್ ನಿರೀಕ್ಷಿತ ಬೆಲೆ: ಮಾಧ್ಯಮ ವರದಿಗಳು 2026ರ ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್‌ನ ಬೆಲೆಯನ್ನು ಸ್ಪರ್ಧಾತ್ಮಕವಾಗಿ ನಿಗದಿಪಡಿಸಬಹುದು. ಆರಂಭಿಕ ಬೆಲೆ ರೂ. 10 ಲಕ್ಷ (ಎಕ್ಸ್-ಶೋರೂಂ)ಕ್ಕಿಂತ ಕಡಿಮೆ ಇರಬಹುದು ಎನ್ನಲಾಗಿದೆ. ಮೂಲಗಳ ಪ್ರಕಾರ ಸುಮಾರು ರೂ. 9.49 ಲಕ್ಷದಿಂದ ಆರಂಭಿಕ ಬೆಲೆ ಪ್ರಾರಂಭವಾಗುವ ನಿರೀಕ್ಷೆಯಿದೆ, ತನ್ನ ವಿಭಾಗದಲ್ಲಿ ಸ್ಪರ್ಧಾತ್ಮಕವಾಗಿ ಸ್ಥಾನ ಪಡೆಯಲಿದೆ.
ರೆನಾಲ್ಟ್ ಡಸ್ಟರ್ ಸೇಫ್ಟಿ ಫೀಚರ್ಸ್: ಈ ಎಸ್‌ಯುವಿ ವೇಗ ಎಚ್ಚರಿಕೆಗಳೊಂದಿಗೆ ಟ್ರಾಫಿಕ್ ಸೈನ್ ಗುರುತಿಸುವಿಕೆ, ಹಿಂಭಾಗದ ಪಾರ್ಕಿಂಗ್ ಅಸಿಸ್ಟ್, ವಾಹನಗಳು, ಪಾದಚಾರಿಗಳು, ಸೈಕ್ಲಿಸ್ಟ್‌ಗಳು ಮತ್ತು ಮೋಟಾರ್‌ಸೈಕಲ್‌ಗಳನ್ನು ಪತ್ತೆ ಮಾಡುವ ಆಟೋ ಎಮರ್ಜನ್ಸಿ ಬ್ರೇಕಿಂಗ್ ಮತ್ತು ಲೇನ್ ಬದಲಾವಣೆ ಎಚ್ಚರಿಕೆಯಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು ನೀಡುವ ನಿರೀಕ್ಷೆಯಿದೆ.

ರೆನಾಲ್ಟ್ ಡಸ್ಟರ್ ಎಂಜಿನ್ ಆಯ್ಕೆಗಳು: ಮೂರನೇ ತಲೆಮಾರಿನ ಡಸ್ಟರ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಸಿಗುವ ನಿರೀಕ್ಷೆಯಿದೆ. 1.2-ಲೀಟರ್ 3-ಸಿಲಿಂಡರ್ ಟರ್ಬೊ-ಪೆಟ್ರೋಲ್ ಜೊತೆಗೆ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನ, 1.0-ಲೀಟರ್ 3-ಸಿಲಿಂಡರ್ ಟರ್ಬೊ ಬೈ-ಫ್ಯೂಲ್ ಎಂಜಿನ್ ಮತ್ತು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು ಸೇರಿದಂತೆ 1.2 kWh ಬ್ಯಾಟರಿಯೊಂದಿಗೆ ಜೋಡಿಸಲಾದ 1.6-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ನೀಡಲಾಗುವುದು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಮೊದಲಿಗೆ ರೆನಾಲ್ಟ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಡಸ್ಟರ್ ಎಸ್‌ಯುವಿಯನ್ನು 2012 ರಲ್ಲಿ ಬಿಡುಗಡೆ ಮಾಡಿತ್ತು. ಆದರೆ, 2022ರಲ್ಲಿ ವಿವಿಧ ಕಾರಣಗಳಿಂದ ಮಾರಾಟ ಸ್ಥಗಿತಗೊಳಿಲಾಯಿತು. ಇದೀಗ ಹೊಸ ರೆನಾಲ್ಟ್ ಡಸ್ಟರ್ ಅನ್ನು ಜನವರಿ 26ರ ಗಣರಾಜ್ಯೋತ್ಸವದಂದು ಅದ್ದೂರಿಯಾಗಿ ಅನಾವರಣಗೊಳಿಸಲಾಗಿದೆ. ಫೆಬ್ರವರಿಯಲ್ಲಿ ಬಿಡುಗಡೆಯಾದ ಬಳಿಕ ಯಾವಮಟ್ಟಿಗೆ ಸದ್ದು ಮಾಡಲಿದೆ ಕಾದುನೋಡಬೇಕಿದೆ.


Click it and Unblock the Notifications








