Renault Duster: ಇನ್ನೊಂದೇ ವಾರದಲ್ಲಿ ಅಚ್ಚರಿಗೊಳಿಸಲಿದೆ ರೆನಾಲ್ಟ್... ಡಸ್ಟರ್ ಮತ್ತೆ ಬಿಡುಗಡೆ ಸಜ್ಜು!
ಹೊಸ ರೆನಾಲ್ಟ್ ಡಸ್ಟರ್ (Renault Duster) 2026 ಜನವರಿ 26 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಈಗಾಗಲೇ ದೃಢಪಡಿಸಲಾಗಿದೆ. ಮೂಲತಃ ಡಸ್ಟರ್ ಅನ್ನು 2012 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು, ನಂತರ ಇದನ್ನು 2022 ರಲ್ಲಿ ಸ್ಥಗಿತಗೊಳಿಸಲಾಯಿತು. ಬ್ರ್ಯಾಂಡ್ ಇತ್ತೀಚೆಗೆ ಮುಂಬರುವ ರೆನಾಲ್ಟ್ ಡಸ್ಟರ್ 2026ರ ಮೊದಲ ಟೀಸರ್ ಅನ್ನು ಹಂಚಿಕೊಂಡಿದೆ. ಡಸ್ಟರ್‌ನ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್ ಬಗೆಗಿನ ಪ್ರಮುಖ ವಿವರಗಳು ಇಲ್ಲಿವೆ.
ಡಿಸೈನ್ ಬಗ್ಗೆ ಹೆಳುವುದಾದರೆ, ಹೊಸ DRL ಗಳ ಜೊತೆಗೆ LED ಹೆಡ್‌ಲೈಟ್‌ಗಳು, ದೃಢವಾದ ಬಂಪರ್ ಮತ್ತು ಮುಂಭಾಗದಲ್ಲಿ ಆಯತಾಕಾರದ ಸ್ಲ್ಯಾಟ್‌ಗಳನ್ನು ಹೊಂದಿರುವ ಬ್ಲಾಕ್ ಗ್ರಿಲ್ ಅನ್ನು ಹೊಂದಿರಲಿದೆ. ಹಾಗೆಯೇ Y-ಆಕಾರದ 18-ಇಂಚಿನ ಡೈಮಂಡ್-ಕಟ್ ಅಲಾಯ್ ಚಕ್ರಗಳು, Y-ಆಕಾರದ ಟೈಲ್‌ಲೈಟ್‌ಗಳೊಂದಿಗೆ ಸ್ಪೋರ್ಟಿಯಾಗಿರಲಿದೆ. ಉಳಿದಂತೆ ಹಳೆಯ ಮಾಡಲ್‌ನಂತೆಯೇ ಅದೇ ಒರಟಾದ ಬಾಹ್ಯ ವಿನ್ಯಾಸವನ್ನು ಮುಂದುವರಿಸುವ ನಿರೀಕ್ಷೆಯಿದೆ.

ಈ ಕಾರಿನಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್-ಆಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಮೂರು-ಸ್ಕ್ರೀನ್ ಸೆಟಪ್, ಸಹ-ಪ್ರಯಾಣಿಕರಿಗೆ 7-ಇಂಚಿನ ಡಿಸ್ಪ್ಲೇ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯುವ ಬಗ್ಗೆ ನಿರೀಕ್ಷೆಯಿದೆ. ಇದು ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್, 4x4 ಡ್ರೈವಿಂಗ್ ಕಾನ್ಫಿಗರೇಶನ್ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಪವರ್‌ಟ್ರೇನ್ ಆಯ್ಕೆಗಳ ಕುರಿತು ನಿಖರವಾದ ವಿವರಗಳನ್ನು ಬ್ರ್ಯಾಂಡ್ ಇನ್ನೂ ದೃಢೀಕರಿಸಿಲ್ಲ, ಮುಂಬರುವ ರೆನಾಲ್ಟ್ ಡಸ್ಟರ್ 2026 ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಆಯ್ಕೆಗಳೊಂದಿಗೆ ಹೈಬ್ರಿಡ್ ಎಂಜಿನ್ ಅನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಮುಂಬರುವ ರೆನಾಲ್ಟ್ ಡಸ್ಟರ್ ಟರ್ಬೊ - ಹೈಬ್ರಿಡ್ ಎಂಜಿನ್‌ನೊಂದಿಗೆ ಬರುವ ನಿರೀಕ್ಷೆಯಿದೆ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು.

ಹೆಚ್ಚಿನ ಮೂಲಗಳ ಪ್ರಕಾರ ಅಂತರರಾಷ್ಟ್ರೀಯವಾಗಿ, ಡಸ್ಟರ್ ವಿವಿಧ ಪವರ್‌ಟ್ರೇನ್‌ಗಳನ್ನು ನೀಡುತ್ತಿದ್ದು, ಭಾರತಕ್ಕೂ ಇದೇ ರೀತಿಯ ಆಯ್ಕೆಗಳನ್ನು ನೀಡಬಹುದು. ಬನ್ನಿ ಒಮ್ಮೆ ಆ ಎಂಜಿನ್ ಆಯ್ಕೆಗಳನ್ನು ಸಹ ನೋಡೋಣ. ಮೊದಲನೇಯದು 48V ಮೈಲ್ಡ್-ಹೈಬ್ರಿಡ್‌ನೊಂದಿಗೆ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 130 PS ಪವರ್ ಹಾಗೂ 230 Nm ಟಾರ್ಕ್ ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ನೊಂದಿಗೆ AWD ಕಾನ್‌ಫಿಗರೇಷನ್ ಹೊಂದಿರಬಹುದು.
ಎರಡನೇಯದು 6-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಆಗಿದ್ದು, ಇದು 140 PS ಪವರ್ ಹಾಗೂ 1.2 kWh ಬ್ಯಾಟರಿ ಬ್ಯಾಕ್‌ನೊಂದಿಗೆ ಬರಲಿದೆ ಎಂದು ವರದಿಯಾಗಿದೆ. ಮೂರನೇಯದು 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, ಇದು 154 PS ಪವರ್ ಹಾಗೂ 250 Nm ಟಾರ್ಕ್ ಹೊರಹಾಕುತ್ತದೆ. ಇದು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಯಾಗಿ ಬರಲಿದೆ.

ಸುರಕ್ಷತಾ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ ಈ ಕಾರು 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿರಲಿದೆ. ಹೆಚ್ಚಿನ ವರ್ಧಿತ ಸುರಕ್ಷತೆಗಾಗಿ ಅಡಾಪ್ಟವ್ ಕ್ರೂಸ್ ಮತ್ತು ಲೇನ್ ಅಸಿಸ್ಟ್ ಸೇರಿದಂತೆ ಲೆವೆಲ್-2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ನಿರೀಕ್ಷಿಸಲಾಗಿದೆ. ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಸಂಪರ್ಕಿತ - ಕಾರ್ ತಂತ್ರಜ್ಞಾನವನ್ನು ಕೂಡ ನಿರೀಕ್ಷಿಸಲಾಗಿದೆ.
ಹಾಗೆಯೇ ಇಎಸ್‍ಪಿ(ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಆಲ್ ವೀಲ್ ಡಿಸ್ಕ್ ಬ್ರೇಕ್, ಎಬಿಎಸ್(ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ(ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್)ಗಳನ್ನು ಒಳಗೊಂಡಿರಬಹುದು. ಈ ಕಾರು 4,360 ಎಂಎಂ ಉದ್ದ, 1,822 ಎಂಎಂ ಅಗಲ ಹಾಗೂ 1695 ಎಂಎಂ ಎತ್ತರವಿರಲಿದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,673 ಎಂಎಂ ವೀಲ್‌ಬೇಸ್ ಹೊಂದಿರುವ ಸಾಧ್ಯತೆಯಿದೆ.


Click it and Unblock the Notifications








