ಬೈಕ್‌ನಂತೆ 33 ಕಿ.ಮೀ ವರೆಗೆ ಮೈಲೇಜ್: ರೂ.10 ಲಕ್ಷದೊಳಗೆ ಸಿಗುವ 5 ಪ್ರಮುಖ CNG ಕಾರುಗಳಿವು!

ಭಾರತದ ವಾಹನ ಮಾರುಕಟ್ಟೆಯಲ್ಲಿ 'ಸಿಎನ್‌ಜಿ' ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇವು ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಉತ್ತಮ ಇಂಧನ ದಕ್ಷತೆಗೂ ಹೆಸರುವಾಸಿಯಾಗಿವೆ. ಗ್ರಾಹಕರು ಕೂಡ ಮುಗಿಬಿದ್ದ ಕೊಂಡುಕೊಳ್ಳುತ್ತಿದ್ದಾರೆ. ನೀವು ರೂ.10 ಲಕ್ಷಕ್ಕಿಂತ ಅಗ್ಗದ ಬೆಲೆಗೆ ಹೊಚ್ಚ ಹೊಸ ಸಿಎನ್‌ಜಿ ಕಾರೊಂದನ್ನು ಖರೀದಿಸಲು ಆಲೋಚಿದ್ದೀರಾ.. ಹಾಗಾದರೆ ಟಾಟಾ ಪಂಚ್, ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ಎಕ್ಸ್‌ಟರ್‌, ಟಾಟಾ ನೆಕ್ಸಾನ್ ಹಾಗೂ ಮಾರುತಿ ಸುಜುಕಿ ಫ್ರಾಂಕ್ಸ್ ಮಾಡೆಲ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ.

ಟಾಟಾ ಪಂಚ್ ಸಿಎನ್‌ಜಿ (Tata Punch CNG):

ಇದೊಂದು ಮೈಕ್ರೋ ಎಸ್‌ಯುವಿಯಾಗಿದ್ದು, ಈಚೆಗೆ ನವೀಕರಿಸಲಾಗಿದೆ. ರೂ.6.69 ಲಕ್ಷದಿಂದ ರೂ.9.29 ಲಕ್ಷ ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀಟರ್ ಸಿಎನ್‌ಜಿ ಎಂಜಿನ್ ಪಡೆದಿದ್ದು, 73.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 103 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 26.99 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಲಿದೆ ಎಂದು ಅಂದಾಜಿಸಲಾಗಿದೆ.

Best 5 CNG Cars Under Rs 10 Lakh In India Punch Swift Exter Nexon And Fronx

ನೂತನ 'ಪಂಚ್' 5 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸನ್‌ರೂಫ್ ಹಾಗೂ ಸ್ಟೀರಿಂಗ್-ಮೌಂಟೆಡ್ ಆಡಿಯೋ ಕಂಟ್ರೋಲ್‌ ಸೇರಿದಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ರಿವರ್ಸ್ ಕ್ಯಾಮೆರಾವನ್ನು ಪಡೆದಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ (Maruti Suzuki Swift CNG):

ಈ ಹ್ಯಾಚ್‌ಬ್ಯಾಕ್‌ ಕೂಡ ಸಿಎನ್‌ಜಿ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದೆ. ರೂ.7.45 ಲಕ್ಷದಿಂದ ರೂ.8.39 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.2-ಲೀಟರ್ ಸಿಎನ್‌ಜಿ ಎಂಜಿನ್‌, 70 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 102 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 32.85 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ.

Best 5 CNG Cars Under Rs 10 Lakh In India Punch Swift Exter Nexon And Fronx

ಹೊಸ 'ಸ್ವಿಫ್ಟ್' 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಹಾಗೂ ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಹೊಂದಿದೆ.

ಹ್ಯುಂಡೈ ಎಕ್ಸ್‌ಟರ್‌ ಸಿಎನ್‌ಜಿ (Hyundai Exter CNG):

ಇದು ಪ್ರಖ್ಯಾತ ಮೈಕ್ರೋ ಎಸ್‌ಯುವಿಯಾಗಿದೆ. ರೂ.6.87 ಲಕ್ಷದಿಂದ ರೂ.9.48 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.2-ಲೀಟರ್ ಸಿಎನ್‌ಜಿ ಎಂಜಿನ್ ಒಳಗೊಂಡಿದ್ದು, 27.1 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಒಳಗೊಂಡಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 6-ಏರ್‌ಬ್ಯಾಗ್‌ಗಳನ್ನು ಪಡೆದಿದೆ.

Best 5 CNG Cars Under Rs 10 Lakh In India Punch Swift Exter Nexon And Fronx

ಟಾಟಾ ನೆಕ್ಸಾನ್ ಸಿಎನ್‌ಜಿ (Tata Nexon CNG):

ಈ ಕಾರು ವಿಶ್ವಾಸಾರ್ಹ ಎಸ್‌ಯುವಿಯಾಗಿ ಹೊರಹೊಮ್ಮಿದೆ. ರೂ.8.23 ಲಕ್ಷದಿಂದ ರೂ.13.36 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 1.2-ಲೀಟರ್ ಸಿಎನ್‌ಜಿ ಎಂಜಿನ್ ಪಡೆದಿದ್ದು, 24 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 6-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

Best 5 CNG Cars Under Rs 10 Lakh In India Punch Swift Exter Nexon And Fronx

ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್‌ಜಿ (Maruti Suzuki Fronx CNG):

ಇದೊಂದು ಪ್ರಮುಖ ಎಸ್‌ಯುವಿಯಾಗಿದ್ದು, ಗ್ರಾಹಕರು ಸಹ ಮೆಚ್ಚಿಕೊಂಡಿದ್ದಾರೆ. ರೂ.7.79 ಲಕ್ಷದಿಂದ ರೂ.8.59 ಲಕ್ಷ ಬೆಲೆಯನ್ನು ಹೊಂದಿದೆ. 1.2-ಲೀಟರ್ ಸಿಎನ್‌ಜಿ ಎಂಜಿನ್‌ ಒಳಗೊಂಡಿದ್ದು, 28.51 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. 5 ಆಸನಗಳನ್ನು ಪಡೆದಿದೆ. 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ 6-ಏರ್‌ಬ್ಯಾಗ್‌ಗಳನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Friday, January 16, 2026, 16:13 [IST]
English summary
Best 5 cng cars under rs 10 lakh in india punch swift exter nexon and fronx
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+