Honda Amaze: ಬೆಸ್ಟ್ ಸೆಡಾನ್ ಕಾರು... 5-ಸ್ಟಾರ್ ಸುರಕ್ಷತೆ: 6 ಏರ್‌ಬ್ಯಾಗ್... 19.46 ಕಿ.ಮೀ ಮೈಲೇಜ್
ಭಾರತದ ಪ್ರಮುಖ ಕಾರುಗಳ ತಯಾರಕರಾದ ಹೋಂಡಾ (Honda), ಇತ್ತೀಚಿನ 3ನೇ ತಲೆಮಾರಿನ ಹೋಂಡಾ ಅಮೇಜ್ (Honda Amaze) ಗೆ ಭಾರತ್ ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮದಲ್ಲಿ (ಭಾರತ್ NCAP) ವಯಸ್ಕ ಪ್ರಯಾಣಿಕರ ರಕ್ಷಣೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಯಲ್ಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಲಾಗಿದೆ. ಇದರ ಬೆಲೆಯು ರೂ. 8.19 ಲಕ್ಷ (ಎಕ್ಸ್-ಶೋರೂಂ) ದಿಂದ ಆರಂಭವಾಗುತ್ತದೆ. ಇದು ಲೆವೆಲ್ 2 ADAS, 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, E20 ಇಂಧನ ಕಂಪ್ಲೈಂಟ್ ನಂತಹ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಹೋಂಡಾ ಸೆನ್ಸಿಂಗ್ - ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಹೊಂದಿರುವ ಹೋಂಡಾ ಅಮೇಜ್, ಘರ್ಷಣೆ ತಗ್ಗಿಸುವಿಕೆ ಬ್ರೇಕಿಂಗ್ (Collision Mitigation Braking), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ರೋಡ್ ಡಿಪಾರ್ಚರ್ ಮಿಟಿಗೇಷನ್, ಲೀಡ್ ಕಾರ್ ಡಿಪಾರ್ಚರ್ ಅಲರ್ಟ್ ಮತ್ತು ಆಟೋ ಹೈ ಬೀಮ್‌ನಂತಹ ವೈಶಿಷ್ಟ್ಯಗಳನ್ನು ನೀಡುವ ಭಾರತದ ಅತ್ಯಂತ ಕೈಗೆಟುಕುವ ADAS ಹೊಂದಿರುವ ಕಾರಾಗಿದೆ.

ಹೋಂಡಾ ಅಮೇಜ್ ಹೈ-ಪರ್ಫಾಮೆನ್ಸ್, ಉತ್ತಮ ಮೈಲೇಜ್, ವಿಶ್ವಾಸಾರ್ಹ ಹೋಂಡಾ ಎಂಜಿನಿಯರಿಂಗ್‌ಗೆ ಹೆಸರುವಾಸಿಯಾಗಿರುವ ಆಧುನಿಕ ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಹೋಂಡಾದ ACE ಬಾಡಿ ರಚನೆಯೊಂದಿಗೆ ನಿರ್ಮಿಸಲಾದ ಇದು 6 ಏರ್‌ಬ್ಯಾಗ್‌ಗಳು, ISOFIX, EBD ಯೊಂದಿಗೆ ABS, ಬ್ರೇಕ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್ ಅನ್ನು ಒಳಗೊಂಡಿದೆ. ಇದು ಅನೇಕ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಲವಾದ ಸುರಕ್ಷತೆಯನ್ನು ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಹೋಂಡಾ ಅಮೇಜ್ ಹೋಂಡಾದ ವಿಶ್ವಾಸಾರ್ಹ 1.2 ಲೀಟರ್ i-VTEC ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು CVT ಮತ್ತು 5 - ಸ್ಪೀಡ್ ಮ್ಯಾನುವಲ್ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲ ಬಾರಿಯ ಖರೀದಿದಾರರು, ಯುವ ಕುಟುಂಬಗಳು ಮತ್ತು ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಅಮೇಜ್, ಸುಧಾರಿತ ವೈಶಿಷ್ಟ್ಯಗಳು ಮತ್ತು ವಿಶ್ವಾಸಾರ್ಹತೆಯೊಂದಿಗೆ ತನ್ನ ವಿಭಾಗದಲ್ಲಿ ಎದ್ದು ಕಾಣುವ ಕಾರಾಗಿದೆ.

ಹೋಂಡಾ ಅಮೇಜ್‌ನ ಸ್ಪೋರ್ಟಿ ಬಾಹ್ಯ ವಿನ್ಯಾಸ, ಅತ್ಯಾಧುನಿಕ ಮತ್ತು ವಿಶಾಲವಾದ ಒಳಾಂಗಣ, ಸುಧಾರಿತ ಸುರಕ್ಷತಾ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳಿಂದ ತುಂಬಿದ್ದು, ಐದು ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾದ ಸೆಡಾನ್ ಆಗಿದೆ. ವಿಶ್ವಾಸಾರ್ಹ ಸವಾರಿಯೊಂದಿಗೆ ಔಟ್‌ಕ್ಲಾಸ್ ಪ್ರೀಮಿಯಂ ಅನುಭವವನ್ನು ನೀಡುತ್ತದೆ ಎಂದು ಹೋಂಡಾ ಕಂಪನಿ ಭರವಸೆ ನೀಡಿದೆ.
ಮೈಲೇಜ್ ವಿಷಯಕ್ಕೆ ಬಂದರೆ, ಸಿವಿಟಿ ಆಟೋಮ್ಯಾಟಿಕ್ ಆಯ್ಕೆಯಲ್ಲಿ 19.46 ಕಿ.ಮೀ ಮೈಲೇಜ್ ಮತ್ತು 5 - ಸ್ಪೀಡ್ ಎಂಟಿ ಆಯ್ಕೆಯಲ್ಲಿ 18.65 ಕಿ.ಮೀ ಮೈಲೇಜ್ ನೀಡುವುದಾಗಿ ಹೋಂಡಾ ಕಂಪನಿ ಹೇಳಿಕೊಂಡಿದೆ. ಸ್ಟ್ಯಾಂಡರ್ಡ್ ಆಗಿ ಹೋಂಡಾ ಕಂಪನಿಯು 3 ವರ್ಷಗಳು / ಅನಿಯಮಿತ ಕಿ.ಮೀ ವಾರಂಟಿಯನ್ನು ನೀಡುತ್ತಿರುವುದಾಗಿ ಹೇಳಿಕೊಂಡಿದೆ. ಹೊಸ ಅಮೇಜ್ ಕಾರು ಮಾರುತಿ ಸುಜುಕಿ ಡಿಜೈರ್, ಟಾಟಾ ಟಿಗೋರ್ ಮತ್ತು ಹ್ಯುಂಡೈ ಔರಾ ಕಾರುಗಳಿಗೆ ಪೈಪೋಟಿ ನೀಡಲಿದೆ.

ಹೊಸ ಹೋಂಡಾ ಅಮೇಜ್ ಕಾರಿನ ಫೀಚರ್ಸ್ ವಿಷಯಕ್ಕೆ ಬಂದರೆ, ಒಟ್ಟಾರೆ ಒಳಾಂಗಣ ವಿನ್ಯಾಸವು ಹೋಂಡಾ ಎಲಿವೇಟ್ ಎಸ್‌ಯುವಿಯನ್ನು ಹೋಲುತ್ತದೆ. ಆಪಲ್ ಕಾರ್ಪ್ಲೇ / ಆಂಡ್ರಾಯ್ಡ್ ಆಟೋ ಜೊತೆಗೆ ಈ ಸೆಡಾನ್ ಕಾರಿನಲ್ಲಿ ಡಿಜಿಟಲ್ ಕ್ಲಸ್ಟರ್ ನೊಂದಿಗೆ 10.25 - ಇಂಚಿನ ಫ್ರೀ -ಸ್ಟ್ಯಾಂಡಿಂಗ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ಹೊಂದಿದೆ.
ಹಿಂಭಾಗದ ಎಸಿ ವೆಂಟ್ ಗಳು, 460 ಲೀಟರ್ ಬೂಟ್ ಸ್ಪೇಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್ ಲೆಸ್ ಚಾರ್ಜರ್, ರಿಮೋಟ್ ಸ್ಟಾರ್ಟ್ ವಿತ್ ಎಸಿ ಕಂಟ್ರೋಲ್ ಅನ್ನು ಹೊಂದಿದೆ. ಜೊತೆಗೆ ಹೋಂಡಾ ಕನೆಕ್ಟೆಡ್ ಕಾರ್ ಟೆಕ್ 5 ವರ್ಷಗಳ ಉಚಿತ ಚಂದಾದಾರಿಕೆ ಕೂಡ ಇದೆ.


Click it and Unblock the Notifications








