ಕಡಿಮೆ ಬೆಲೆಯಲ್ಲಿ ಕ್ರೂಸ್ ಕಂಟ್ರೋಲ್ ಫೀಚರ್ ಹೊಂದಿರುವ ಬೆಸ್ಟ್ ಕಾರುಗಳು!
ಒಂದು ಕಾಲದಲ್ಲಿ ಪ್ರೀಮಿಯಂ ಕಾರುಗಳಿಗೆ ಮಾತ್ರ ಸೀಮಿತವಾಗಿದ್ದ 'ಕ್ರೂಸ್ ಕಂಟ್ರೋಲ್' ಫೀಚರ್ ಈಗ ಹೆಚ್ಚು ಕೈಗೆಟುಕುವ ಕಾರುಗಳಲ್ಲಿಯೂ ಸಿಗುತ್ತಿದೆ. ಈ ಫೀಚರ್ ನಿರಂತರ ಆಕ್ಸಿಲರೇಟರ್ ಒತ್ತುವ ಅಗತ್ಯವಿಲ್ಲದೆ ಲಾಂಗ್‌ಡ್ರೈವ್‌ಗಳಲ್ಲಿ ಡ್ರೈವರ್‌ಗೆ ಸಹಾಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಫೀಚರ್ ಸೆಟ್ ಮಾಡುವ ಸ್ಥಿರ ವೇಗವನ್ನು ವಾಹನವು ಕಾಯ್ದುಕೊಳ್ಳಲು ಅನುವು ಮಾಡಿಕೊಡುತ್ತದೆ. ಬಜೆಟ್ ಸ್ನೇಹಿ ಕಾರುಗಳಲ್ಲಿ ಇದರ ಲಭ್ಯತೆಯು ಅವುಗಳ ಮಾರಾಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬನ್ನಿ ಹಾಗಾದ್ರೆ ರೂ. 8 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಯಾವೆಲ್ಲಾ ಕಾರುಗಳಲ್ಲಿ ಕ್ರೂಸ್ ಕಂಟ್ರೋಲ್ ಇದೆ ನೋಡೋಣ.
ಟಾಟಾ ಪಂಚ್: ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯ ಮಿಡ್-ಸ್ಪೆಕ್ ಪ್ಯೂರ್+ ಟ್ರಿಮ್‌ನಿಂದ ಕ್ರೂಸ್ ಕಂಟ್ರೋಲ್ ನೀಡಲಾಗುತ್ತದೆ. ಇದರ ಬೆಲೆ ರೂ. 7 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಗುತ್ತದೆ. CNG ಕೂಡ ಆಯ್ಕೆ ಮಾಡಬಹದು. 5-ಸ್ಪೀಡ್ ಮ್ಯಾನುವಲ್, AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿದೆ. ಟರ್ಬೊ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಜೊತೆಗೆ ಬರುತ್ತದೆ.

ಟಾಟಾ ಆಲ್ಟ್ರೋಜ್: ಟಾಟಾ ಆಲ್ಟ್ರೋಜ್ ಆರಂಭಿಕ ಮಟ್ಟದ ಸ್ಮಾರ್ಟ್ ವೇರಿಯೆಂಟ್ ಹೊರತುಪಡಿಸಿ ಮಿಕ್ಕೆಲ್ಲವುಗಳಲ್ಲಿ ಕ್ರೂಸ್ ಕಂಟ್ರೋಲ್ ಇದೆ. ಇದರ ಬೆಲೆ ರೂ. 7.05 ಲಕ್ಷ (ಎಕ್ಸ್-ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಆಲ್ಟ್ರೋಜ್ ಅನ್ನು 1.5-ಲೀಟರ್ ಟರ್ಬೊ ಡೀಸೆಲ್ ಹಾಗೂ 1.2-ಲೀಟರ್ NA ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಜೊತೆಗೆ CNG ಆಯ್ಕೆಯಲ್ಲೂ ಖರೀದಿಸಬಹುದಾಗಿದೆ.
ಟಾಟಾ ಟಿಯಾಗೊ: ಟಾಟಾ ಟಿಯಾಗೊ ಟಾಪ್-ಸ್ಪೆಕ್ XZ+ ವೇರಿಯೆಂಟ್‌ನಲ್ಲಿ ಕ್ರೂಸ್ ಕಂಟ್ರೋಲ್ ನೀಡಲಾಗುತ್ತದೆ. ಇದರ ಬೆಲೆಯು ರೂ. 6.77 ಲಕ್ಷ (ಎಕ್ಸ್ - ಶೋರೂಂ) ಇದೆ. ಟಿಯಾಗೊ 1.2 - ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದನ್ನು 5 - ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ನೊಂದಿಗೆ ಖರೀದಿಸಬಹುದು. ಟಾಟಾ ಟಿಯಾಗೊ CNG ಆಯ್ಕೆಯಲ್ಲೂ ಸಿಗುತ್ತದೆ.

ಹುಂಡೈ ಗ್ರ್ಯಾಂಡ್ ಐ10 ನಿಯೋಸ್: ಹುಂಡೈ ಗ್ರ್ಯಾಂಡ್ ಐ10 ನಿಯೋಸ್‌ನ ಮಿಡ್-ಸ್ಪೆಕ್ ಸ್ಪೋರ್ಟ್ಜ್ ಟ್ರಿಮ್‌ನಲ್ಲಿ ಕ್ರೂಸ್ ಕಂಟ್ರೋಲ್ ನೀಡಲಾಗುತ್ತದೆ. ಇದರ ಬೆಲೆಯು ರೂ. 6.85 ಲಕ್ಷ ಹಾಗೂ ರೂ. 7.36 ಲಕ್ಷ (ಎಕ್ಸ್ - ಶೋರೂಂ ಬೆಲೆಗಳು) ಬೆಲೆಯ MT ಹಾಗೂ ಸ್ಪೋರ್ಟ್ಜ್ AMT ಟ್ರಿಮ್‌ನಲ್ಲಿ ಖರೀದಿಸಬಹುದು. ಗ್ರ್ಯಾಂಡ್ i10 ನಿಯೋಸ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ AMT ಆಯ್ಕೆಗಳಲ್ಲಿ ಖರೀದಿಸಬಹುದು.
ಟಾಟಾ ಟಿಗೊರ್: ಟಾಟಾ ಟಿಗೊರ್ XZ ಪ್ಲಸ್ ವೇರಿಯೆಂಟ್ ಕ್ರೂಸ್ ಕಂಟ್ರೋಲ್ ಹೊಂದಿದೆ. ಇದರ ಬೆಲೆ ರೂ. 7.32 ಲಕ್ಷ (ಎಕ್ಸ್-ಶೋರೂಂ) ವಿದೆ. ಟಿಯಾಗೊ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ನೊಂದಿಗೆ ಪಡೆಯಬಹುದು. ಗ್ರಾಹಕರು CNG ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.

ನಿಸ್ಸಾನ್ ಗ್ರಾವೈಟ್: ನಿಸ್ಸಾನ್ ಗ್ರಾವೈಟ್ ಟೆಕ್ನಾ ಟ್ರಿಮ್‌ನಿಂದ ಕ್ರೂಸ್ ಕಂಟ್ರೋಲ್ ಅನ್ನು ನೀಡಲಾಗುತ್ತದೆ, ಇದರ ಬೆಲೆ ರೂ. 7.9 ಲಕ್ಷ (ಎಕ್ಸ್-ಶೋರೂಂ) ದಿಂದ ಆರಂಭವಾಗುತ್ತದೆ. ನಿಸ್ಸಾನ್ ಗ್ರಾವೈಟ್ 1.0 ಲೀಟರ್ NA ಪೆಟ್ರೋಲ್ ಎಂಜಿನ್ ಹೊಂದಿದೆ. ಗೇರ್‌ಬಾಕ್ಸ್ ಆಯ್ಕೆಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಅನ್ನು ಒಳಗೊಂಡಿದೆ.
ಕಾರು ತಯಾರಕರು ಈಗಾಗಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳು, ಸಂಪರ್ಕಿತ ವೈಶಿಷ್ಟ್ಯಗಳು ಮತ್ತು ಸುಧಾರಿತ ಸುರಕ್ಷತಾ ಸಾಧನಗಳಂತಹ ತಂತ್ರಜ್ಞಾನಗಳನ್ನು ಕೈಗೆಟುಕುವ ಕಾರುಗಳಲ್ಲಿಯೂ ಪರಿಚಯಿಸಿದ್ದಾರೆ. ಕಂಪನಿಗಳು ಮೌಲ್ಯ-ಪ್ರಜ್ಞೆಯ ಖರೀದಿದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿರುವುದರಿಂದ ಈಗ ಕ್ರೂಸ್ ಕಂಟ್ರೋಲ್ ಅನ್ನು ಕೂಡ ಈ ಪಟ್ಟಿಗೆ ಸೇರಿಸಲಾಗುತ್ತಿದೆ. ಸೀಮಿತ ಬಜೆಟ್‌ನಲ್ಲಿ ಕಾರನ್ನು ಖರೀದಿಸಲು ಯೋಜಿಸುವ ಗ್ರಾಹಕರಿಗೆ ಮೇಲಿನ ಕಾರುಗಳು ಬೆಸ್ಟ್ ಆಯ್ಕೆಯಾಗಿವೆ.


Click it and Unblock the Notifications








