Maruti: ಕಮ್ಮಿ ಬೆಲೆ, 5 ಮಂದಿಗೆ ಪರ್ಫೆಕ್ಟ್ ಎಸ್‌ಯುವಿ: 25.51 ಕಿ.ಮೀ ಮೈಲೇಜ್: ಸನ್‌ರೂಫ್ ಇದೆ!
ಮಾರುತಿ ಸುಜುಕಿ (Maruti Suzuki) 2026 ಜನವರಿ ತಿಂಗಳಲ್ಲಿ ಒಟ್ಟು 2.37 ಲಕ್ಷ ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಈ ಮಾರಾಟದಲ್ಲಿ ಅತಿ ಹೆಚ್ಚಿನ ಪಾಲು ಸ್ವಿಫ್ಟ್, ಬ್ರೆಝಾ, ಡಿಜೈರ್ ಮತ್ತು ಬಲೆನೊದಂತಹ ಮಾಡಲ್‌ಗಳದ್ದಾಗಿದೆ. ಗ್ರಾಹಕರ ಹೆಚ್ಚಿನ ಬೇಡಿಕೆಯಿಂದ ಈ ಕಾರುಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗಿವೆ. ಅದರಲ್ಲೂ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಬಗ್ಗೆ ಹೇಳಲೇಬೇಕು, ತನ್ನ ವಿಭಾಗದಲ್ಲಿ ಅತ್ಯಧಿಕ ಪೈಪೋಟಿ ಇದ್ದರೂ ಉತ್ತಮ ಮಾರಾಟವನ್ನು ಕಂಡಿದೆ. ಕಂಪನಿಯ ಮಾರಾಟ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿದೆ.
ಭಾರತದಲ್ಲಿ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ವೇಗವಾಗಿ ಬೆಳೆಯುತ್ತಿದೆ, ಇದರಲ್ಲಿ ಮುಖ್ಯವಾಗಿ ಬ್ರೆಝಾ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಮುಂದುವರೆಯಲು ಪ್ರತಿಸ್ಟರ್ಧಿಗಳೊಂದಿಗೆ ಸೆಣಸಾಡುತ್ತಿದೆ. ಈ ಕಾರಿನ ಕಡಿಮೆ ಬೆಲೆ, ಉತ್ತಮ ಫೀಚರ್ಸ್, ಆಕರ್ಷಕ ಡಿಸೈನ್, ಐದು ಮಂದಿಗೆ ಆರಾಮ ಪ್ರಯಾಣ ಸೇರಿದಂತೆ ಅತ್ಯುತ್ತಮ ಮೈಲೇಜ್ ನೀಡುವುದರಿಂದ ಮಾರುತಿ ಬ್ರೆಝಾ ಸದ್ಯ ಭಾರತದಲ್ಲಿ ಹೆಚ್ಚಾಗಿ ಮಾರಾಟ ಕಾಣುತ್ತಿದೆ.

ಅಂದಹಾಗೆ ಭಾರತದಲ್ಲಿ ಮಾರುತಿ ಸುಜುಕಿ ಬ್ರೆಝಾ 2026 ಜನವರಿ ತಿಂಗಳಲ್ಲಿ ಬರೋಬ್ಬರಿ 17,486 ಯುನಿಟ್ ವಾಹನಗಳು ಮಾರಾಟವಾಗಿವೆ. ಕೇವಲ ಒಂದು ತಿಂಗಳಲ್ಲಿ 17,486 ಯೂನಿಟ್ ವಾಹನಗಳೆಂದರೆ ಪ್ರತಿ ದಿನ ಸುಮಾರು 564 ಕಾರುಗಳನ್ನು ಡೆಲಿವರಿ ನೀಡಿರಬಹುದು. ಈ ಮಾರಾಟ ಅಂಕಿಅಂಶಗಳನ್ನು ನೋಡಿದರೆ ಮಾರುತಿ ಬ್ರೆಝಾ ಕಾರು ಯಾವ ಮಟ್ಟಿಗೆ ಭಾರತೀಯ ಗ್ರಾಹಕರನ್ನು ಸೆಳೆದಿದೆ ಎಂಬುದನ್ನು ತಿಳಿಯಬಹುದು.
ಮಾರುತಿ ಸುಜುಕಿ ಬ್ರೆಝಾ ವಿಶೇಷತೆಗಳು
ಪ್ರಸ್ತುತ ಹೊಸ ಮಾರುತಿ ಸುಜುಕಿ ಬ್ರೆಝಾ ಆರಂಭಿಕ ಬೆಲೆಯು ರೂ. 8,25,900 (ಎಕ್ಸ್ ಶೋರೂಂ) ಇದೆ. ಹಾಗೆಯೇ ಇದರ ಟಾಪ್ ವೇರಿಯೆಂಟ್ ಬೆಲೆಯು 13,01,300 (ಎಕ್ಸ್ ಶೋರೂಂ) ಇದೆ. ಬ್ರೆಝಾ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದ್ದು, 5 ಮಂದಿ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದು. ಈ ಕಾರು ಗ್ಲೋಬಲ್ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಪ್ರಭಾವಶಾಲಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಗಳಿಸಿದೆ.

ಮಾರುತಿ ಸುಜುಕಿ ಬ್ರೆಝಾದಲ್ಲಿ K-15 ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ನೀಡಲಾಗುತ್ತದೆ. ಈ ಎಂಜಿನ್ 5 - ಸ್ಪೀಡ್ ಮ್ಯಾನುವಲ್ ಹಾಗೂ 6 - ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗುತ್ತದೆ. ಕಂಪನಿಯ ಪ್ರಕಾರ ಪೆಟ್ರೋಲ್‌ನಲ್ಲಿ 17.38 ಕಿ.ಮೀ ಹಾಗೂ ಸಿಎನ್‌ಜಿನಲ್ಲಿ 25.51 ಕಿ.ಮೀವರೆಗು ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಬ್ರೆಝಾ 40 ಕನೆಕ್ಟೆಡ್ ಫೀಚರ್‌ಗಳ ಪ್ರಭಾವಶಾಲಿ ಸೂಟ್ ಒಳಗೊಂಡಿದೆ. 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಅತ್ಯಾಧುನಿಕ ಹೆಡ್-ಅಪ್ ಡಿಸ್ಪ್ಲೇ ಜೊತೆಗೆ 360-ವ್ಯೂ ಕ್ಯಾಮೆರಾ, 6-ಸ್ಪೀಕರ್ ಸೆಟಪ್‌ನಂತಹ ಸುಧಾರಿತ ವೈಶಿಷ್ಟ್ಯಗಳಿಂದ ತುಂಬಿದೆ. ಇದರ ಎಲೆಕ್ಟ್ರಿಕ್ ಸನ್‌ರೂಫ್ ಅತ್ಯಾಧುನಿಕತೆಯ ಹೆಚ್ಚುವರಿ ಸ್ಪರ್ಶವನ್ನು ನೀಡುತ್ತದೆ.

ಹಾಗೆಯೇ ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ - ಹೋಲ್ಡ್ ಅಸಿಸ್ಟ್ ಮತ್ತು 360 - ಡಿಗ್ರಿ ಕ್ಯಾಮೆರಾ, ಸೀಟ್ ಬೆಲ್ಟ್ ರಿಮೈಂಡರ್ಸ್, ರೇರ್ ಪಾರ್ಕಿಂಗ್ ಸೇನಾರ್ಸ್ ಒಳಗೊಂಡಿದೆ. ಮ್ಯಾಗ್ಮಾ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಪರ್ಲ್ ಮಿಡ್ನೈಟ್ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಗಳಲ್ಲಿ ಈ ಕಾರನ್ನು ಖರೀದಿಸಬಹುದು.
ಖರೀದಿದಾರರಿಗೆ ಖುಷಿ ಸುದ್ದಿ ಏನೆಂದರೆ ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿಯೂ ಸರಿಹೊಂದಿಸಬಹುದಾದ ಹಿಂಭಾಗದ ಹೆಡ್ ರೆಸ್ಟ್‌ಗಳು ಮತ್ತು ಹಿಂಭಾಗದ ಸೀಟ್ ಬ್ಯಾಕ್ ರೆಸ್ಟ್ ಗಾಗಿ 60:40 ಸ್ಪ್ಲಿಟ್ ಫೋಲ್ಡಿಂಗ್ ಫಂಕ್ಷನ್, ಮುಂಭಾಗದ ಸೀಟ್ ಬೆಲ್ಟ್‌ಗಳಿಗೆ ಎತ್ತರ ಹೊಂದಾಣಿಕೆ, ಹಿಂಭಾಗದ ಸೆಂಟರ್ ಆರ್ಮ್ ರೆಸ್ಟ್ - ಕಪ್ ಹೋಲ್ಡರ್ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.


Click it and Unblock the Notifications








