Maruti: ಬಡವರ ಐಷಾರಾಮಿ ಕಾರಿದು... ಫುಲ್ ಡಿಮ್ಯಾಂಡ್, 32 ಕಿ.ಮೀ ಮೈಲೇಜ್: ಬರೀ 5.7 ಲಕ್ಷ ಬೆಲೆ!
ಭಾರತದಲ್ಲಿ ಮಿಡ್‌ಸೈಜ್ ಹ್ಯಾಚ್‌ಬ್ಯಾಕ್ ವಿಭಾಗವು ತುಂಬಾ ಬೇಡಿಕೆ ಪಡೆದುಕೊಂಡಿದೆ, ಅದರಲ್ಲೂ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ತನ್ನ ಸ್ಟೈಲಿಷ್ ಲುಕ್ ಮತ್ತು ಆಕರ್ಷಕ ಡಿಸೈನ್ ಮಧ್ಯಮ ವರ್ಗದವರಿಗೆ ಫೆವರೆಟ್ ಆಯ್ಕೆಯಾಗಿದೆ. ಈ ಕಾರು ಪ್ರತಿ ತಿಂಗಳಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟ ಕಾಣುತ್ತದೆ, ಇದರ ಹೆಚ್ಚಿನ ಮೈಲೇಜ್ ಹಾಗೂ ಕಡಿಮೆ ಮೇಂಟೆನನ್ಸ್ ಖರ್ಚು ಮಧ್ಯಮ ವರ್ಗದ ಗ್ರಾಹಕರಿಗೆ ಹೇಳಿ ಮಾಡಿಸಿದಂತಿರುತ್ತದೆ. ಹಾಗಾದ್ರೆ ಪ್ರಸ್ತುತ ಭಾರತದಲ್ಲಿ ಈ ಕಾರಿನ ಬೆಲೆ, ಫೀಚರ್ಸ್, ಮೈಲೇಜ್ ಹಾಗೂ ಎಂಜಿನ್ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಪ್ರಸ್ತುತ ಭಾರತದಲ್ಲಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆಯು ರೂ. 5,78,900 (ಎಕ್ಸ್ - ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಟಾಪ್ - ಎಂಡ್ ವೇರಿಯೆಂಟ್ ಬೆಲೆಯು ರೂ. 8,79,900 (ಎಕ್ಸ್ - ಶೋರೂಂ) ವರೆಗೆ ಇದೆ. ಬೆಲೆಗೆ ತಕ್ಕ ಫೀಚರ್ಸ್ ಹಾಗೂ ಸೌಕರ್ಯವನ್ನು ಒದಗಿಸುವ ಈ ಕಾರು, ಐದು ಮಂದಿ ಕುಳಿತು ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ಕಡಿಮೆ ಬೆಲೆಯಲ್ಲಿ ಸಿಗುವ ಈ ಕಾರು, ಪ್ರತಿ ತಿಂಗಳಿನಂತೆ ಕಳೆದ ತಿಂಗಳಲ್ಲಿಯೂ (ಜನವರಿ) ಉತ್ತಮ ಮಾರಾಟ ಕಂಡಿದೆ. ಒಟ್ಟು 17,806 ಯುನಿಟ್ ಕಾರುಗಳು ಜನವರಿಯಲ್ಲಿ ಮಾರಾಟವಾಗಿವೆ. ಇದು ಕಂಪನಿಗೆ ಉತ್ತಮ ಲಾಭ ತಂದುಕೊಟ್ಟಿದ್ದು, ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಸ್ವಿಫ್ಟ್ ತನ್ನ ಜನಪ್ರಿಯತೆಯನ್ನು ಎಂದಿನಂತೆ ಕಾಪಾಡಿಕೊಂಡಿದೆ. ಈ ಕಾರಿನ ಮೈಲೇಜ್ ಹಾಗೂ ಫೀಚರ್ಸ್ ನೋಡೋಣ.
ಸ್ವಿಫ್ಟ್ ಇಂಟೀರಿಯರ್‌ನಲ್ಲಿ 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಪುಶ್-ಬಟನ್ ಸ್ಟಾರ್ಟ್, ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಕ್ಲೇಮೇಟ್ ಕಂಟ್ರೋಲ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ವೈರ್‌ಲೆಸ್ ಚಾರ್ಜರ್ ಮತ್ತು ರೇರ್ ಎಸಿ ವೆಂಟ್‌ಗಳನ್ನು ನೀಡಡಲಾಗಿದ್ದು, ಬೆಲೆಗೆ ತಕ್ಕ ಫೀಚರ್ಸ್ ಪಡೆದುಕೊಂಡಿದೆ.

ಇದರ ಎಂಜಿನ್ ವಿಶೇಷತೆಗಳನ್ನು ನೋಡುವುದಾದರೆ ಈ ಕಾರು 1.2 - ಲೀ, 3 - ಸಿಲಿಂಡರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 5 - ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ನೀಡಲಾಗಿದೆ. ಇದರ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 24.80 ಕಿ.ಮೀ ಮೈಲೇಜ್ ನೀಡಿದರೆ ಸಿಎನ್‌ಜಿನಲ್ಲಿ 32.85 ಕಿ.ಮೀವರೆಗೆ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಹೊಸ ಸ್ವಿಫ್ಟ್ ಕಾರಿನಲ್ಲಿ 5 ಮಂದಿ ವಯಸ್ಕ ಪ್ರಯಾಣಿಕರು ಆರಾಮವಾಗಿ ಪ್ರಯಾಣಿಸಬಹುದಾಗಿದ್ದು, ಹೆಚ್ಚಿನ ಲಗ್ಗೇಜ್ ಸಾಗಿಸಲು 265 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒದಗಿಸಲಾಗಿದೆ. ಇದು ಕಡಿಮೆ ಬೆಲೆಯಲ್ಲಿ ಸಿಗುವ ಸ್ಟೈಲಿಷ್ ಹ್ಯಾಚ್‌ಬ್ಯಾಕ್ ಆಗಿರುವುದರಿಂದ ಡೀಲರ್ ಸಿಬ್ಬಂದಿ ಕೂಡ ಈ ಕಾರನ್ನು ಹೆಚ್ಚಾಗಿ ಇಷ್ಟಪಟ್ಟು ಖರೀದಿಸುತ್ತಾರೆ ಎಂದು ತಿಳಿದುಬಂದಿದೆ.

ಸುರಕ್ಷತೆಯ ವಿಷಯಕ್ಕೆ ಬಂದರೆ 6 ಏರ್‌ಬ್ಯಾಗ್‌ಗಳು, 3 ಪಾಯಿಂಟ್ ಸೀಟ್‌ಬೆಲ್ಟ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD) ಹಾಗೂ ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಗಳನ್ನು ಹೊಂದಿದೆ. ಇವು ಬೇಸಿಕ್ ಸೇಫ್ಟಿ ಫೀಚರ್ಸ್ ಆಗಿದ್ದರೂ ಪ್ರಯಾಣದಲ್ಲಿ ಸಂಭವನೀಯ ಅಪಘಾತಗಳಲ್ಲಿ ಪ್ರಯಣಿಕರಿಗೆ ಉತ್ತಮ ರಕ್ಷಣೆ ಒದಗಿಸುತ್ತವೆ.
ಒಟ್ಟಾರೆ ಈ ಕಾರು ಮಧ್ಯಮ ವರ್ಗದವರ ಫೆವರೆಟ್ ಆಗಿದೆ. ಡಿಸೈನ್‌ನಿಂದ ಹಿಡಿದು ಫೀಚರ್ಸ್, ಆರಾಮ, ಮೈಲೇಜ್, ಪರ್ಫಾಮೆನ್ಸ್ ಹಾಗೂ ಇದರ ಕಡಿಮೆ ಬೆಲೆಯು ಖರೀದಿದಾರರಿಗೆ ಈ ಕಾರನ್ನು ಫೇವರೆಟ್ ಆಯ್ಕೆಯನ್ನಾಗಿಸಿದೆ. ಬೆಂಗಳೂರಿನಲ್ಲಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬೇಸ್ ವೇರಿಯೆಂಟ್ ಆನ್ ರೋಡ್ ಬೆಲೆಯು ರೂ. 7.00 ಲಕ್ಷದಿಂದ ಪ್ರಾರಂಭವಾಗುತ್ತದೆ.


Click it and Unblock the Notifications








