Maruti: ಮಾರುತಿ ಹೈಬ್ರಿಡ್ ಕಾರಿಗೆ ಫುಲ್ ಡಿಮ್ಯಾಂಡ್: ಡೀಲರ್‌ಗಳೇ ಇಷ್ಟಪಟ್ಟು ಖರೀದಿ: 28 ಕಿ.ಮೀ ಮೈಲೇಜ್
ಮಧ್ಯಮ ಗಾತ್ರದ ಎಸ್‌ಯುವಿಗಳು ಪ್ರಸ್ತುತ ಭಾರತದ ಅತ್ಯಂತ ಬೇಡಿಕೆ ಪಡೆದುಕೊಂಡಿರುವ ಕಾರುಗಳಾಗಿದ್ದು, ಈ ವಿಭಾಗದಲ್ಲಿ ಬರುವ ಬಹುತೇಕ ಎಲ್ಲಾ ಬ್ರ್ಯಾಂಡ್‌ನ ಕಾರುಗಳು ಉತ್ತಮ ಮಾರಾಟ ಕಾಣುತ್ತಿವೆ. ಮಾರುತಿ ಸುಜುಕಿ ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಿದ್ದ ಮಾರುತಿ ವಿಕ್ಟೋರಿಸ್ ಕಡಿಮೆ ಸಮಯದಲ್ಲೆ ತುಂಬಾ ಬೇಡಿಕೆ ಪಡೆದುಕೊಂಡಿದೆ. ಈ ಕಾರು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ 50,000 ಕಾರುಗಳನ್ನು ಮಾರಾಟ ಮಾಡಿದೆ ಎಂಬುದು ಒಂದು ಅಚ್ಚರಿಯಾದರೆ, ಜನವರಿ ತಿಂಗಳಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದೆ.
ಮಾರುತಿ ಸುಜುಕಿಯ ಈ ಮಧ್ಯಮ ಗಾತ್ರದ SUV ವಿಕ್ಟೋರಿಸ್, 2026 ಜನವರಿ ತಿಂಗಳಲ್ಲಿ ಬರೋಬ್ಬರಿ 15,240 ಕಾರುಗಳು ಮಾರಾಟವಾಗಿವೆ. ಕಡಿಮೆ ಸಮಯದಲ್ಲಿ ಗ್ರಾಹಕರಿಂದ ಈ ಮಟ್ಟದ ಪ್ರತಿಕ್ರಿಯೆ ಸಿಕ್ಕಿರುವುದು ಕಾರಿನ ಮೇಲೆ ಗ್ರಾಹಕರಿಗಿರುವ ಆಕರ್ಷಣೆಯನ್ನು ತೋರಿಸುತ್ತದೆ. ಈ ಕಾರು ಉತ್ತಮ ಡಿಸೈನ್, ಆಕರ್ಷಕ ಫೀಚರ್ಸ್, ಅತ್ಯುತ್ತಮ ಮೈಲೇಜ್ ಹಾಗೂ ಸುರಕ್ಷಿತ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ.

5-ಸ್ಟಾರ್ ಸೇಫ್ಟಿ ರೇಟಿಂಗ್
ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD), ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ರೇರ್ ಪಾರ್ಕಿಂಗ್ ಸೆನ್ಸರ್ಸ್ ಹಾಗೂ 360 ಡಿಗ್ರಿ ಕ್ಯಾಮೆರಾದಂತಹ ಆಧುನಿಕ ಸೇಫ್ಟಿ ಫೀಚರ್ಸ್ ಕಾರಿನ ಸುರಕ್ಷತೆಯನ್ನು ಹೆಚ್ಚಿಸಿವೆ.
ಅಲ್ಲದೆ ಹೊಸ ಮಾರುತಿ ವಿಕ್ಟೋರಿಸ್ ಎಸ್‌ಯುವಿಯ ನಿರ್ಮಾಣ ಗುಣಮಟ್ಟವನ್ನು ಭಾರತ್ ಎನ್‌ಸಿಎಪಿ (Bharat NCAP) ಪರೀಕ್ಷಿಸಿ 5-ಸ್ಟಾರ್ ಸೇಫ್ಟಿ ರೇಟಿಂಗ್ ನೀಡಿದೆ. ಈ ಕ್ರ್ಯಾಷ್ ಟೆಸ್ಟ್‌ನಲ್ಲಿ ವಯಸ್ಕರ ರಕ್ಷಣೆಯಲ್ಲಿ (Adult Occupant Protection) 32 ಅಂಕಗಳಿಗೆ 31.66 ಅಂಕಗಳನ್ನು ಗಳಿಸಿದರೆ, ಮಕ್ಕಳ ರಕ್ಷಣೆಯಲ್ಲಿ (Child Occupant Protection) 49 ಅಂಕಗಳಿಗೆ 43 ಅಂಕಗಳನ್ನು ಪಡೆದುಕೊಂಡು 5-ಸ್ಟಾರ್ ಸೇಫ್ಟಿ ರೇಟಿಂಗ್ ದಕ್ಕಿಸಿಕೊಂಡಿದೆ.

ಮಾರುತಿ ವಿಕ್ಟೋರಿಸ್ ವಿಶೇಷತೆಗಳು
ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ ಬೇಸ್ ವೇರಿಯೆಂಟ್ ಬೆಲೆಯು ರೂ. 10,49,900 ಲಕ್ಷ (ಎಕ್ಸ್ ಶೋರೂಂ) ಬೆಲೆಯಿಂದ ಆರಂಭವಾದರೆ, ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ. 19,98,900 (ಎಕ್ಸ್ ಶೋರೂಂ) ಲಕ್ಷವಿದೆ. ಇದು 5-ಸೀಟರ್ ಕಾರಾಗಿದ್ದು, ಇಂಟೀರಿಯರ್‌ನಲ್ಲಿ ನೀಡಲಾಗಿರುವ ಆಧುನಿಕ ಫೀಚರ್ಸ್ ಐದು ಮಂದಿ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಅನುಭವ ನೀಡುತ್ತವೆ.
ಇಂಟೀರಿಯರ್‌ನಲ್ಲಿ ಪನೋರಮಿಕ್ ಸನ್‌ರೂಫ್, 64-ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, 10.1 - ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ-ಎಕ್ಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಎಸಿ ಹಾಗೂ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ಹಲವು ಫೀಚರ್ಸ್ ಒಳಗೊಂಡಿದೆ.

ಎಂಜಿನ್ ವಿಷಯಕ್ಕೆ ಬಂದರೆ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ ಎಸ್‌ಯುವಿ ಗ್ರಾಹಕರಿಗೆ 3 ಆಯ್ಕೆಗಳನ್ನು ನೀಡುತ್ತದೆ. ಒಂದು 1.5 - ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಹಾಗೂ 6 - ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಹಾಗೆಯೇ 1.5 - ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್, ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ.
ಕೊನೆಯದು 1.5 - ಲೀಟರ್ ಸಿಎನ್‌ಜಿ ಆಯ್ಕೆಯಾಗಿದ್ದು, ಇದು 5 - ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಮೈಲೇಜ್ ವಿಷಯಕ್ಕೆ ಬಂದರೆ ಇದರ ಪೆಟ್ರೋಲ್ ವೇರಿಯೆಂಟ್‌ಗಳು 20.45 ಕಿ.ಮೀ, ಇದರ ಹೈಬ್ರಿಡ್ ಎಂಜಿನ್ 28.65 ಕಿ.ಮೀ ಹಾಗೂ ಸಿಎನ್‌ಜಿ ಎಂಜಿನ್ ಸುಮಾರು 27.02 ಕಿ.ಮೀ/ಕೆಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.


Click it and Unblock the Notifications








