Tata: ಟಾಟಾ ಗತ್ತು ಇಡೀ ದೇಶಕ್ಕೆ ಗೊತ್ತು... ಮಾರುಕಟ್ಟೆ ಶೇಕ್ ಮಾಡಿದ 6 ಲಕ್ಷ ಬೆಲೆಯ ಎಸ್‌ಯುವಿ

ಮೈಕ್ರೋ ಎಸ್‌ಯುವಿಗಳು ಭಾರತದಲ್ಲಿ ಕೈಗೆಟುಕುವ ಬೆಲೆಗೆ ಸಣ್ಣ ಕುಟುಂಬಗಳಿಗೆ ಸಿಗುವ ಬೆಸ್ಟ್ ಕಾರುಗಳಾಗಿವೆ. ಈ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟ ಕಾಣುವ ಕಾರಾಗಿ ಟಾಟಾ ಪಂಚ್ (Tata Punch) ಅಗ್ರ ಸ್ಥಾನದಲ್ಲಿದೆ. 2026 ಜನವರಿ ತಿಂಗಳಿನಲ್ಲಿಯೂ ಅತಿ ಹೆಚ್ಚು ಮಾರಾಟವಾದ ಮೈಕ್ರೋ ಎಸ್‌ಯುವಿಯಾಗಿ ಮತ್ತೊಮ್ಮೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಎಲೆಕ್ಟ್ರಿಕ್ ಹಾಗೂ ಇಂಧನ ಚಾಲಿತ ಆವೃತ್ತಿಗಳಲ್ಲಿ ಖರೀದಿಗೆ ಸಿಗುವ ಈ ಪುಟ್ಟ ಕಾರು ಐದು ಮಂದಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಹಾಗೆಯೇ ನಿರ್ಮಾಣ ಗುಣಮಟ್ಟವು ಅತ್ಯುತ್ತಮವಾಗಿದ್ದು, 5-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ.

ಟಾಟಾ ಪಂಚ್ ಕೇವಲ ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಒಟ್ಟು 7 ಲಕ್ಷ ಯುನಿಟ್‌ ಕಾರುಗಳ ಮಾರಾಟವನ್ನು ದಾಟಿದೆ. ಹಾಗೆಯೇ 2026 ಜನವರಿ ತಿಂಗಳವೊಂದರಲ್ಲೆ ಬರೋಬ್ಬರಿ 19,000 ಕ್ಕೂ ಹೆಚ್ಚು ಯುನಿಟ್‌ ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ಮೋಟಾರ್ಸ್ ಇದುವರೆಗಿನ ಅತ್ಯಧಿಕ ಮಾಸಿಕ ಮಾರಾಟವನ್ನು ದಾಖಲಿಸಿದೆ.

best-micro-suv-tata-punch-sold-19-000-cars-in-january-2026

ಇದು ವರ್ಷದ ಆರಂಭಿಕ ತಿಂಗಳಲ್ಲಿ ಟಾಟಾ ಮೋಟಾರ್ಸ್‌ನ ಒಟ್ಟಾರೆ ಪ್ರಯಾಣಿಕ ವಾಹನಗಳಿಗೆ ಬಲವಾದ ಕೊಡುಗೆ ನೀಡಿದೆ. ಕಳೆದ 2 ಲಕ್ಷ ಪಂಚ್ ಕಾರುಗಳನ್ನು ಕಳೆದ 12 ತಿಂಗಳುಗಳಲ್ಲಿ ಮಾತ್ರ ಮಾರಾಟ ಮಾಡಲಾಗಿದೆ. ಇದು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಮಾಡಲ್‌ಗಳು ಸೇರಿದಂತೆ ವಿವಿಧ ವೇರಿಯೆಂಟ್‌ಗಳಲ್ಲಿ ಸಿಗುವುದರಿಂದ ಗ್ರಾಹಕರ ನಿರಂತರ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ.

ಟಾಟಾ ಪಂಚ್ SUV ವಿಶೇಷತೆಗಳು

ಭಾರತದಲ್ಲಿ ಟಾಟಾ ಪಂಚ್ ಫೇಸ್‌ಲಿಫ್ಟ್‌ನ ಆರಂಭಿಕ ಬೆಲೆ ರೂ. 5.59 ಲಕ್ಷ (ಎಕ್ಸ್-ಶೋರೂಂ) ಇದ್ದರೇ, ಟಾಪ್ ವೇರಿಯೆಂಟ್ ಬೆಲೆಯು ರೂ. 10.54 ಲಕ್ಷ (ಎಕ್ಸ್-ಶೋರೂಂ) ಇದೆ. ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ಒಳಗೆ ಹಲವಾರು ಸೌಲಭ್ಯಗಳಿವೆ. ಸ್ಮಾರ್ಟ್ ಸ್ಟೀರಿಂಗ್ ವೀಲ್, ಫ್ರಂಟ್ ಪವರ್ ವಿಂಡೋಗಳು, ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಮತ್ತು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮುಂತಾದ ಫೀಚರ್‌ಗಳನ್ನು ಒಳಗೊಂಡಿದೆ.

best-micro-suv-tata-punch-sold-19-000-cars-in-january-2026

ಇವಿಷ್ಟೇ ಅಲ್ಲದೆ ಇತರ ವೈಶಿಷ್ಟ್ಯಗಳಲ್ಲಿ ಸ್ಪೀಡ್ ಅಲರ್ಟ್ ಸಿಸ್ಟಮ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ರಿಯರ್ AC ವೆಂಟ್‌ಗಳು, ನಾಲ್ಕು ಸ್ಪೀಕರ್‌ಗಳು, ವಾಯ್ಸ್-ಅಸಿಸ್ಟೆಡ್ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು USB ಟೈಪ್-C ಚಾರ್ಜರ್ ಸೇರಿವೆ. ಜೊತೆಗೆ ಫ್ರಂಟ್ ಸೀಟ್ ಅಡ್ಜಸ್ಟಬಲ್ ಹೆಡ್‌ರೆಸ್ಟ್‌ಗಳು, ಮಲ್ಟಿ ಡ್ರೈವ್ ಮೋಡ್‌ಗಳು, ಕೀಲೆಸ್ ಎಂಟ್ರಿ, ಸೆಂಟ್ರಲ್ ಲಾಕಿಂಗ್, 4-ಇಂಚಿನ ಡಿಜಿಟಲ್ ಕ್ಲಸ್ಟರ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳನ್ನು ನೀಡಲಾಗಿದೆ.

ಡಿಸೈನ್ ವಿಷಯಕ್ಕೆ ಬಂದರೆ ಟಾಟಾ ಪಂಚ್ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಹಿಂಭಾಗದ ಬಂಪರ್‌ಗಳು, ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್, 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳು, ಲೈಟ್‌ಬಾರ್‌ನೊಂದಿಗೆ ಹೊಸ ಕನೆಕ್ಟೆಡ್ ಎಲ್‌ಇಡಿ ಟೈಲ್‌ಲೈಟ್‌ಗಳು ಹಾಗೂ ಏರ್ ಇನ್‌ಟೇಕ್ ವೆಂಟ್‌ಗಳಿಗಾಗಿ ಸಿಲ್ವರ್ ಸರೌಂಡ್‌ನಂತಹ ವಿನ್ಯಾಸ ಅಂಶಗಳನ್ನು ಹೊಂದಿದೆ.

best-micro-suv-tata-punch-sold-19-000-cars-in-january-2026

ಎಂಜಿನ್ ವಿಷಯಕ್ಕೆ ಬಂದರೆ ಹೊಸ ಟಾಟಾ ಪಂಚ್ ಎರಡು ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದ್ದು, ಮೊದಲನೇಯದು 1.2-ಲೀಟರ್ NA ಪೆಟ್ರೋಲ್ ಎಂಜಿನ್ 87 ಬಿಎಚ್‌ಪಿ ಗರಿಷ್ಠ ಪವರ್ ಮತ್ತು 115 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಮತ್ತು ಎಎಮ್‌ಟಿ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ.

ಎರತಡನೇಯದು 1.2-ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್‌ 118 ಬಿಎಚ್ ಪವರ್ ಮತ್ತು 170 ಎನ್‌ಎಂ ಟಾರ್ಕ್ ಹೊರಹಾಕುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಸಿಎನ್‌ಜಿ ಆಯ್ಕೆಯೂ ಇದೆ, ಇದು ಮ್ಯಾನುವಲ್ ಮತ್ತು ಎಎಮ್‌ಟಿ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ. 72 ಬಿಎಚ್ ಪವರ್ ಮತ್ತು 103 ಎನ್‌ಎಂ ಟಾರ್ಕ್ ಹೊರಹಾಕುತ್ತದೆ.

More from DriveSpark

Article Published On: Tuesday, February 3, 2026, 12:38 [IST]
English summary
Best micro suv tata punch sold 19000 cars in january 2026
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+