BYD: ಭಾರತದಲ್ಲಿ ಫುಲ್ ಡಿಮ್ಯಾಂಡ್ ಪಡೆದಿರುವ ಚೀನಾದ ಬಿವೈಡಿ ಸೀಲಯನ್ 7 ವಿಶೇಷತೆಗಳು

ಚೀನಾದ ಪ್ರಮುಖ ಕಾರು ತಯಾರಕ ಕಂಪನಿಯಾದ ಬಿವೈಡಿ (BYD), ತನ್ನ ಹೊಸ ಬಿವೈಡಿ ಸೀಲಯನ್ 7ನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಮೊನ್ನೆಯಷ್ಟೆ ಆನಿವರ್ಸರಿ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಎರಡು ವೇರಿಯೆಂಟ್‌ಗಳಿದ್ದು, ಮೊದಲನೇಯದು 'ಸೀಲಿಯನ್ 7 ಪರ್ಫಾಮೆನ್ಸ್' ವೇರಿಯೆಂಟ್ 82.56 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಬೆಲೆಯು ರೂ. 54,90,000 (ಎಕ್ಸ್‌ ಶೋರೂಂ) ಇದೆ. ಎರಡನೇಯದು 'ಸೀಲಿಯನ್ 7 ಪ್ರೀಮಿಯಂ' ವೇರಿಯೆಂಟ್ 82.56 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಬೆಲೆಯು ರೂ. 49,40,000 (ಎಕ್ಸ್‌ ಶೋರೂಂ) ಇದೆ.

SEALION 7 ಪರ್ಫಾರ್ಮೆನ್ಸ್ ವೇರಿಯೆಂಟ್ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 542 ಕಿ.ಮೀ ಓಡಿಸಬಹುದು ಮತ್ತು ಪ್ರೀಮಿಯಂ ವೇರಿಯೆಂಟ್ ಸಂಪೂರ್ಣ ಚಾರ್ಜ್‌ನಲ್ಲಿ 567 ಕಿ.ಮೀ ಓಡಿಸಬಹುದು. ಪರ್ಫಾರ್ಮೆನ್ಸ್ ವೇರಿಯೆಂಟ್ ಕೇವಲ 4.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು, ಹಾಗೆಯೇ ಪ್ರೀಮಿಯಂ ವೇರಿಯೆಂಟ್ 6.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು.

byd-sealion-7-first-anniversary-edition-price-features-battery-details

ಭಾರತದಲ್ಲಿ BYD SEALION 7 ಬಲವಾದ ಗ್ರಾಹಕರ ಪ್ರತಿಕ್ರಿಯೆಯನ್ನು ಕಂಡಿದೆ. ಭಾರತದಲ್ಲಿ ಇಲ್ಲಿಯವರೆಗೆ 2500 ಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ. ಇದು ಪ್ರೀಮಿಯಂ ಎಲೆಕ್ಟ್ರಿಕ್ SUV ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಗ್ರಾಹಕರು ಈಗ ಹೊಸ ಆನಿವರ್ಸರಿ ಎಡಿಷನ್ ಅನ್ನು BYD ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ರೂ.70,000 ಪಾವತಿಸುವ ಮೂಲಕ ಬುಕ್ ಮಾಡಬಹುದಾಗಿದೆ.

ಬಿವೈಡಿ ಸೀಲಿಯನ್ 7 ಕಾರು BYD ಯ ಓಷನ್-ಎಕ್ಸ್ ಡಿಸೈನ್‌ನೊಂದಿಗೆ ಕೂಪ್ ತರಹದ ರೂಫ್‌ಲೈನ್ ಮತ್ತು ಪ್ರಮುಖ X- ಆಕಾರದ ಲೈಟಿಂಗ್ ಅಂಶಗಳೊಂದಿಗೆ ಬರುತ್ತದೆ. ಪ್ರೀಮಿಯಂ ವೆರಿಯೆಂಟ್ 19 ಇಂಚಿನ ವೀಲ್‌ಗಳನ್ನು ಪಡೆದರೆ, ಪರ್ಫಾರ್ಮೆನ್ಸ್ ಟ್ರಿಮ್‌ನಲ್ಲಿ 20 ಇಂಚುಗಳ ವೀಲ್‌ಗಳು ಇರುತ್ತವೆ. ಈ SUV 500-ಲೀಟರ್ ಬೂಟ್ ಮತ್ತು 58-ಲೀಟರ್ ಫ್ರಂಟ್ ಟ್ರಂಕ್ ಅನ್ನು ಹೊಂದಿದೆ.

byd-sealion-7-first-anniversary-edition-price-features-battery-details

BYD SEALION 7 ಇಂಟೀರಿಯರ್‌ನಲ್ಲಿ 15.6-ಇಂಚಿನ ತಿರುಗುವ ಟಚ್‌ಸ್ಕ್ರೀನ್, ಎಲೆಕ್ಟ್ರಿಕ್ ಸನ್‌ಶೇಡ್‌ನೊಂದಿಗೆ ಪನೋರಮಿಕ್ ಗ್ಲಾಸ್ ರೂಫ್, ಕ್ವಿಲ್ಟೆಡ್ ನಪ್ಪಾ ಲೆದರ್ ಸೀಟ್‌ಗಳು ಮತ್ತು 128-ಆಂಬಿಯೆಂಟ್ ಲೈಟಿಂಗ್ ಮತ್ತು ಶಬ್ದ, 12 Dynaudio ಸ್ಪೀಕರ್‌ಗಳು, ವೆಂಟಿಲೇಟೆಡ್ ಸೀಟುಗಳು ಮತ್ತು ಎಲೆಕ್ಟ್ರಿಕ್ ಟೈಲ್‌ಗೇಟ್ ಮತ್ತು ವೆಹಿಕಲ್-ಟು-ಲೋಡ್ (VTOL) ಸಾಮರ್ಥ್ಯ ಸೇರಿದಂತೆ 50 W ವೈರ್‌ಲೆಸ್ ಫೋನ್ ಚಾರ್ಜರ್ ಹೊಂದಿದೆ.

ಮೊದಲ ವಾರ್ಷಿಕೋತ್ಸವದ ಆಫರ್ ಭಾಗವಾಗಿ, ಮೊದಲ 1100 ಗ್ರಾಹಕರು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಈ ಆಫರ್‌ಗಳು ಏಪ್ರಿಲ್ 30, 2026 ರವರೆಗೆ ಮಾಡಿದ ಬುಕಿಂಗ್‌ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ. ಆಸಕ್ತ ಗ್ರಾಹಕರು ಕೂಡಲೇ BYD ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ರೂ.70,000 ಪಾವತಿಸುವ ಮೂಲಕ ಕಾರನ್ನು ಬುಕ್ ಮಾಡಬಹುದಾಗಿದೆ.

byd-sealion-7-first-anniversary-edition-price-features-battery-details

ವಿಶೇಷ ಆಫರ್‌ಗಳಲ್ಲಿ ಏನೆಲ್ಲಾ ಪ್ರಯೋಜನ ಪಡೆಯಬಹುದು ಎಂಬುದನ್ನು ನೋಡುವುದಾದ್ರೆ, ಇನ್‌ಸ್ಟಾಲೇಷನ್‌ನೊಂದಿಗೆ ಉಚಿತ 11 kW ಹೋಮ್ ಚಾರ್ಜರ್, ಉಚಿತ 2 ವರ್ಷಗಳ ಫ್ರೀ ಸರ್ವಿಸ್ ಮತ್ತು ಮೇಂಟೇನನ್ಸ್ ಸೇರಿವೆ. ಬ್ಯಾಟರಿ ಮೇಲೆ 8 ವರ್ಷ ಅಥವಾ 1,50,000 ಕಿ.ಮೀ ವಾರೆಂಟಿ (ಸಾಮಾನ್ಯ ಖಾತರಿ 6 ವರ್ಷಗಳು / 150,000 ಕಿಮೀ)ಯೊಂದಿಗೆ ಬರುತ್ತದೆ. ಹಾಗೆಯೇ ಹೈ ವೋಲ್ಟೇಜ್ ಬ್ಯಾಟರಿ ಮೇಲೆ 8 ವರ್ಷಗಳು / 1,60,000 ಕಿ.ಮೀ ವಾರೆಂಟಿಯೊಂದಿಗೆ ಬರುತ್ತದೆ.

ಪ್ರಸ್ತುತ ಭಾರತದದಲ್ಲಿ ಕಂಪನಿಯು BYD SEALION 7, BYD ATTO 3 eSUV, BYD eMAX 7 eMPV, ಮತ್ತು BYD SEAL ಎಂಬ ಮಾಡಲ್‌ಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, March 19, 2026, 14:20 [IST]
English summary
Byd sealion 7 first anniversary edition price features battery details
Read more on byd new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+