ಅಗ್ಗದ ಕಾರಿದು.. 3.49 ಲಕ್ಷ ರೂಪಾಯಿ.. 33 Km ಮೈಲೇಜ್, ಬಡವರಿಗೆ ಪರ್ಫೆಕ್ಟ್.. 3 ಲಕ್ಷ ಸೇಲ್ಸ್!

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ. ಇದು ತುಂಬಾ ಸರಳವಾಗಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಖರೀದಿಸುತ್ತಿದ್ದಾರೆ. ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಈ ಕಾರಿನ ಮಾರಾಟದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಸೆಪ್ಟೆಂಬರ್ 30, 2019ರಲ್ಲಿ ಮೊದಲ ಬಾರಿಗೆ 'ಮಾರುತಿ ಎಸ್-ಪ್ರೆಸ್ಸೊ' ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಅಲ್ಲಿಂದ ಇಲ್ಲಿವರೆಗೆ ಅಂದರೆ, ಬರೋಬ್ಬರಿ 5 ವರ್ಷ 6 ತಿಂಗಳಲ್ಲಿ (ಮೇ - 2025) 3 ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲನ್ನು ದಾಟಲಾಗಿದೆ. ಹಾಗೆಯೇ ನವೆಂಬರ್ 2025ರ ಅಂತ್ಯದೊಳಗೆ 3.10 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

Cheapest Hatchback Maruti Suzuki S-Presso Achieved 3 Lakh Sales Milestone Details

'ಮಾರುತಿ ಎಸ್-ಪ್ರೆಸ್ಸೊ' ಮಾರಾಟವು 2020 ಹಾಗೂ 2021 ಹಣಕಾಸು ವರ್ಷದಲ್ಲಿ ತುಂಬಾ ಚೆನ್ನಾಗಿತ್ತು. ಕ್ರಮವಾಗಿ 56,962 ಹಾಗೂ 67,167 ಯುನಿಟ್‌ಗಳನ್ನು ಮಾರಲಾಗಿತ್ತು. ಅದೇ ರೀತಿಯಲ್ಲಿ ಮುಂದುವರಿದ ಹಣಕಾಸು ವರ್ಷಗಳಾದ 2022ರಲ್ಲಿ 66,595 ಯುನಿಟ್, 2023ರಲ್ಲಿ 53,213 ಯುನಿಟ್, 2024ರಲ್ಲಿ 30,139 ಯುನಿಟ್ ಮತ್ತು 2025ರಲ್ಲಿ 23,538 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಪ್ರಸ್ತುತ 2026ರ ಹಣಕಾಸು ವರ್ಷದಲ್ಲಿ 12,524 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

'ಮಾರುತಿ ಸುಜುಕಿ ಎಸ್-ಪ್ರೆಸ್ಸೊ' ವಿಶೇಷತೆಗಳೇನು:

ಈ ಕಾರು ಅತ್ಯಂತ ಅಗ್ಗದ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.3.49 ಲಕ್ಷದಿಂದ ರೂ.5.25 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಹೊಂದಿದ್ದು, ಎಲ್ಲ ವರ್ಗದ ಜನರು ಸಹ ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಎಲ್ಎಕ್ಸ್ಐ (LXi), ವಿಎಕ್ಸ್ಐ (VXi) ಮತ್ತು ವಿಎಕ್ಸ್ಐ ಪ್ಲಸ್ (VXi Plus) ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ.

Cheapest Hatchback Maruti Suzuki S-Presso Achieved 3 Lakh Sales Milestone Details

ಇದು ಹ್ಯಾಚ್‌ಬ್ಯಾಕ್ ಆಗಿದ್ದರೂ ನೋಡಲು ಎಸ್‌ಯುವಿಯಂತೆ ಭಾಸವಾಗುತ್ತದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 13-ಇಂಚಿನ ಸ್ಟೀಲ್ ವೀಲ್‌ಗಳನ್ನು ಒಳಗೊಂಡಿದೆ. ಸಾಲಿಡ್ ಫೈರ್ ರೆಡ್, ಪರ್ಲ್ ಸ್ಟಾರಿ ಬ್ಲೂ, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸಿಲ್ಕಿ ಸಿಲ್ವರ್, ಸಾಲಿಡ್ ವೈಟ್ & ಬ್ಲೂಯಿಶ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,380 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ.

ನೂತನ 'ಎಸ್-ಪ್ರೆಸ್ಸೊ' ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಇದರ 1-ಲೀಟರ್ ಪೆಟ್ರೋಲ್ 66 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 89 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಮತ್ತೊಂದು 1-ಲೀಟರ್ ಸಿಎನ್‌ಜಿ ಎಂಜಿನ್‌ 56 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 82.1 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಕಾರು ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಹಾಗೂ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಯಾವ ಬೈಕ್‌ಗೂ ಕಮ್ಮಿಯಿಲ್ಲವೆಂಬಂತೆ 24 ರಿಂದ 33 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 148 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಬರೀ 14.5 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಇದರ ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪವರ್ ವಿಂಡೋಗಳು, ಯುಎಸ್‌ಬಿ ಕನೆಕ್ಟಿವಿಟಿ ಮತ್ತು ಕೀಲೆಸ್ ಎಂಟ್ರಿಯಂತಹ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 2-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಆಟೋ ಡೋರ್ ಲಾಕ್ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್‌ನ್ನು ಹೊಂದಿದೆ.

More from DriveSpark

Article Published On: Monday, January 5, 2026, 11:13 [IST]
English summary
Cheapest hatchback maruti suzuki s presso achieved 3 lakh sales milestone details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+