Honda: ಹೋಂಡಾ ಕಾರುಗಳ ಬೆಲೆ ಏರಿಕೆ ಘೋಷಣೆ: ಅಗ್ಗವಾಗಿ ಸಿಗುತ್ತಿದ್ದ 'ಅಮೇಜ್' ಈಗ ಎಷ್ಟಾಗಿದೆ?
ಭಾರತದಲ್ಲಿ ಎಸ್‌ಯುವಿಗಳ ಪ್ರಾಬಲ್ಯವಿದ್ದರೂ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿರುವ ಕೆಲವೇ ಸೆಡಾನ್‌ಗಳಲ್ಲಿ 'ಹೋಂಡಾ ಅಮೇಜ್' (Honda Amaze) ಕೂಡ ಒಂದು. ಈ ಕಾರು 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಕಾರಾಗಿಯು ಗುರ್ತಿಸಿಕೊಂಡಿದೆ. ಆದರೆ ಈಗ ಧಿಡೀರ್ ಶಾಕ್ ನೀಡಿದೆ, ಹೋಂಡಾ ಅಮೇಜ್ ಬೆಲೆ ಏರಿಕೆಯಾಗಿದೆ. ಸ್ವಿಫ್ಟ್ ಡಿಜೈರ್ ಪ್ರತಿಸ್ಪರ್ಧಿ ಈಗ ರೂ. 6,990 ರಷ್ಟು ಬೆಲೆ ಏರಿಕೆಯನ್ನು ಪಡೆದುಕೊಂಡಿದ್ದು, ಹೊಸ ಬೆಲೆಗಳು ರೂ. 7,47,790 (ಬೇಸ್) ಮತ್ತು ರೂ. 9,99,900 (ಟಾಪ್-ಸ್ಪೆಕ್ ZX CVT) ಬೆಲೆಯನ್ನು ಪಡೆದುಕೊಂಡಿವೆ.
ಹೆಚ್ಚಿದ ಕಚ್ಚಾ ವಸ್ತುಗಳ ವೆಚ್ಚ, ಹೆಚ್ಚುತ್ತಿರುವ ಹಣದುಬ್ಬರ ಮತ್ತು ಏರಿಳಿತಗಳ ಪ್ರತಿಕೂಲ ಪರಿಣಾಮದಿಂದಾಗಿ ಇನ್‌ಪುಟ್ ವೆಚ್ಚದಲ್ಲಿನ ಹೆಚ್ಚಳದಂತಹ ಕಾರಣಗಳನ್ನು ಉಲ್ಲೇಖಿಸಿ ಹೋಂಡಾ ಕಂಪನಿಯು ತನ್ನ ಕಾರಿನ ಬೆಲೆಯನ್ನು ಹೆಚ್ಚಿಸಿದೆ. ವೇರಿಯೆಂಟ್‌ಗೆ ಅನುಗುಣವಾಗಿ ಬೆಲೆಗಳು ಬದಲಾಗುತ್ತವೆ. ಈ ಬೆಲೆ ಏರಿಕೆಯಿಂದಾಗಿ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ಎದುರಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಹೋಂಡಾ ಅಮೇಜ್ ವಿಶೇಷತೆಗಳು
ವಿಶ್ವಾಸಾರ್ಹ ಸವಾರಿಯೊಂದಿಗೆ ಔಟ್‌ಕ್ಲಾಸ್ ಪ್ರೀಮಿಯಂ ಅನುಭವವನ್ನು ನೀಡುವ ಹೋಂಡಾ ಅಮೇಜ್' ಸ್ಪೋರ್ಟಿ ಬಾಹ್ಯ ವಿನ್ಯಾಸ, ಅತ್ಯಾಧುನಿಕ ಮತ್ತು ವಿಶಾಲವಾದ ಒಳಾಂಗಣ, ಸುಧಾರಿತ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿದೆ. ಕಾರಿನ ಹಿಂಭಾಗದ ಎಸಿ ವೆಂಟ್‌ಗಳು, 6-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್ ಲೆಸ್ ಚಾರ್ಜರ್, ರಿಮೋಟ್ ಸ್ಟಾರ್ಟ್ ವಿತ್ ಎಸಿ ಕಂಟ್ರೋಲ್, 460 ಲೀಟರ್ ಬೂಟ್ ಸ್ಪೇಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಕಾರಿನ ಪ್ರೀಮಿಯಂ ಫೀಚರ್ಸ್ ಆಗಿವೆ.
ಇವಿಷ್ಟೇ ಅಲ್ಲದೆ ಆಪಲ್ ಕಾರ್ಪ್ಲೇ / ಆಂಡ್ರಾಯ್ಡ್ ಆಟೋ ಜೊತೆಗೆ ಈ ಸೆಡಾನ್ ಕಾರಿನಲ್ಲಿ ಡಿಜಿಟಲ್ ಕ್ಲಸ್ಟರ್ ನೊಂದಿಗೆ 10.25 - ಇಂಚಿನ ಫ್ರೀ -ಸ್ಟ್ಯಾಂಡಿಂಗ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಅತಿ ಮುಖ್ಯವಾಗಿ ಹೊಸ ಹೋಂಡಾ ಅಮೇಜ್ ಕಾರಿನ ಒಳಾಂಗಣದ ವಿನ್ಯಾಸವು ಪ್ರೀಮಿಯಂ ಆಗಿರುವ ಹೋಂಡಾ ಎಲಿವೇಟ್ ಎಸ್‌ಯುವಿಯನ್ನು ಹೋಲುತ್ತದೆ.

ಹೋಂಡಾ ಅಮೇಜ್ ಹೋಂಡಾದ ವಿಶ್ವಾಸಾರ್ಹ 1.2 ಲೀಟರ್ i-VTEC ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು CVT ಮತ್ತು 5 - ಸ್ಪೀಡ್ ಮ್ಯಾನುವಲ್ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲ ಬಾರಿಯ ಖರೀದಿದಾರರು, ಯುವ ಕುಟುಂಬಗಳು ಮತ್ತು ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಅಮೇಜ್, ಸುಧಾರಿತ ವೈಶಿಷ್ಟ್ಯಗಳು ಮತ್ತು ವಿಶ್ವಾಸಾರ್ಹತೆಯೊಂದಿಗೆ ತನ್ನ ವಿಭಾಗದಲ್ಲಿ ಎದ್ದು ಕಾಣುವ ಕಾರಾಗಿದೆ.
ಹೊಸ ಅಮೇಜ್ ಕಾರು ಮಾರುತಿ ಸುಜುಕಿ ಡಿಜೈರ್, ಟಾಟಾ ಟಿಗೋರ್ ಮತ್ತು ಹ್ಯುಂಡೈ ಔರಾ ಕಾರುಗಳಿಗೆ ಪೈಪೋಟಿ ನೀಡಲಿದೆ. ಮೈಲೇಜ್ ವಿಷಯಕ್ಕೆ ಬಂದರೆ, ಸಿವಿಟಿ ಆಟೋಮ್ಯಾಟಿಕ್ ಆಯ್ಕೆಯಲ್ಲಿ 19.46 ಕಿ.ಮೀ ಮೈಲೇಜ್ ಮತ್ತು 5 - ಸ್ಪೀಡ್ ಎಂಟಿ ಆಯ್ಕೆಯಲ್ಲಿ 18.65 ಕಿ.ಮೀ ಮೈಲೇಜ್ ನೀಡುವುದಾಗಿ ಹೋಂಡಾ ಕಂಪನಿ ಹೇಳಿಕೊಂಡಿದೆ. ಹೋಂಡಾ ಅಮೇಜ್ ಮೇಲೆ ಕಂಪನಿಯು ಸ್ಟ್ಯಾಂಡರ್ಡ್ ಆಗಿ 3 ವರ್ಷಗಳು / ಅನಿಯಮಿತ ಕಿ.ಮೀ ವಾರಂಟಿಯನ್ನು ನೀಡುತ್ತಿದೆ.

5-ಸ್ಟಾರ್ ಸೇಫ್ಟಿ ರೇಟಿಂಗ್
ಇತ್ತೀಚೆಗೆ 3ನೇ ತಲೆಮಾರಿನ ಹೋಂಡಾ ಅಮೇಜ್ ಅನ್ನು ಕ್ರಾಷ್ ಟೆಸ್ಟ್‌ಗೆ ಒಳಪಡಿಸಲಗಾದ್ದು, ಭಾರತ್ NCAP ಸಂಸ್ಥೆಯು 5-ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಇದು ಲೆವೆಲ್ 2 ADAS, ಹೋಂಡಾದ ACE ಬಾಡಿ ರಚನೆಯೊಂದಿಗೆ ನಿರ್ಮಿಸಲಾದ ಇದು 6 ಏರ್‌ಬ್ಯಾಗ್‌ಗಳು, ISOFIX, EBD ಯೊಂದಿಗೆ ABS, ಬ್ರೇಕ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್ ಅನ್ನು ಒಳಗೊಂಡಿದೆ.
ಹೋಂಡಾ ಸೆನ್ಸಿಂಗ್ - ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ಹೊಂದಿರುವ ಹೋಂಡಾ ಅಮೇಜ್, ಘರ್ಷಣೆ ತಗ್ಗಿಸುವಿಕೆ ಬ್ರೇಕಿಂಗ್ (Collision Mitigation Braking), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್, ರೋಡ್ ಡಿಪಾರ್ಚರ್ ಮಿಟಿಗೇಷನ್, ಲೀಡ್ ಕಾರ್ ಡಿಪಾರ್ಚರ್ ಅಲರ್ಟ್ ಮತ್ತು ಆಟೋ ಹೈ ಬೀಮ್‌ನಂತಹ ವೈಶಿಷ್ಟ್ಯಗಳನ್ನು ನೀಡುವ ಭಾರತದ ಅತ್ಯಂತ ಕೈಗೆಟುಕುವ ADAS ಹೊಂದಿರುವ ಕಾರಾಗಿದೆ.


Click it and Unblock the Notifications








