ಜೂನ್ 2026 ರಲ್ಲಿ ಭಾರತದ ಪ್ರಯಾಣಿಕ ವಾಹನ ಮಾರುಕಟ್ಟೆ ಸಣ್ಣ ಕಾರುಗಳತ್ತ ಸಾಗುತ್ತಿದೆ, ಏಕೆಂದರೆ ಮೊದಲ ಬಾರಿಗೆ ಖರೀದಿದಾರರು ಹೆಚ್ಚಾಗಿದ್ದಾರೆ.

By Desk

ಭಾರತದ ಪ್ರಯಾಣಿಕರ ವಾಹನಗಳ ಖರೀದಿಯಲ್ಲಿ ಜೂನ್ ಅನಿರೀಕ್ಷಿತ ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿದೆ. ಎಸ್‌ಯುವಿಗಳು ಜನಪ್ರಿಯವಾಗಿದ್ದರೂ SIAM ದತ್ತಾಂಶದ ಪ್ರಕಾರ, ಜೂನ್‌ನಲ್ಲಿ 4.10 ಲಕ್ಷ ವಾಹನಗಳು ಮಾರಾಟವಾಗಿವೆ. ಇದು ಹಿಂದಿನ ವರ್ಷಕ್ಕಿಂತ ಶೇ.29ರಷ್ಟು ಹೆಚ್ಚು ಎನ್ನುವುದನ್ನು ಗಮನಿಸಬೇಕು. ಈ ಮಾರುಕಟ್ಟೆ ಬೆಳವಣಿಗೆಯಲ್ಲಿ ಸಣ್ಣ ಕಾರುಗಳ ಮಾರಾಟ ಗಮನಾರ್ಹವಾಗಿತ್ತು, ಇದು ಹಲವು ವರ್ಷಗಳ ಕುಸಿತದ ನಂತರ ಮಾರಕಟ್ಟೆಯಲ್ಲಿ ಮಾರಾಟ ಪ್ರಮಾಣ ಹೆಚ್ಚಾಗಿದೆ. ಈ ಏರಿಕೆಯು ಮುಖ್ಯವಾಗಿ ಮೊದಲ ಬಾರಿಗೆ ಕಾರು ಖರೀದಿಸುವವರು ಎಸ್‌ಯುವಿಗಳಿಗಿಂತ ಹ್ಯಾಚ್‌ಬ್ಯಾಕ್‌ಗಳನ್ನು ಆರಿಸಿಕೊಂಡಿರುವುದು ವಿಶೇಷ.

2026ನೇ ಹಣಕಾಸು ವರ್ಷದಲ್ಲಿ ಕಾರು ವ್ಯಾಪಾರ ಮಾರುಕಟ್ಟೆ ವ್ಯಾಪಕ ಬದಲಾವಣೆಯನ್ನು ಖಂಡಿದೆ. ಮೊದಲಾರ್ಧದಲ್ಲಿ ಮೊದಲ ಬಾರಿಗೆ ಕಾರು ಖರೀದಿಸುವವರು 42% ರಷ್ಟಿದ್ದರು. ನಂತರ ಮೂರನೇ ತ್ರೈಮಾಸಿಕದಲ್ಲಿ ಈ ಪಾಲು 48% ಕ್ಕೆ ಏರಿತು. ನಾಲ್ಕನೇ ತ್ರೈಮಾಸಿಕದಲ್ಲಿ ಇದು 51% ತಲುಪಿತು. ಕೈಗಾರಿಕಾ ವೀಕ್ಷಕರು ಇದನ್ನು ಭವಿಷ್ಯದ ಬೇಡಿಕೆಗಾಗಿ ಒಂದು ಪ್ರಮುಖ ಸಂಕೇತವೆಂದು ಪರಿಗಣಿಸಿದರು.

ಜೂನ್‌ನಲ್ಲಿ ವಿಭಾಗವಾರು ಬೆಳವಣಿಗೆಯಲ್ಲಿಯೂ ಸ್ಟಷ್ಟ ಅಂತರವಿದೆ. ಸಣ್ಣ ಕಾರುಗಳ ಮಾರಾಟ ಕಳೆದ ವರ್ಷದ ಜೂನ್‌ಗಿಂತ 78% ಹೆಚ್ಚಾದರೆ, ಎಸ್‌ಯುವಿ ಮಾರಾಟವೂ ಇದೇ ಅವಧಿಯಲ್ಲಿ 29% ಬೆಳೆದಿದೆ. ಈ ಬೆಳವಣಿಗೆ ಮಾರುಕಟ್ಟೆ ತಜ್ಞರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಏಕೆಂದರೆ ಎಸ್‌ಯುವಿಗಳು ಹಲವು ವರ್ಷಗಳಿಂದ ಮಾರುಕಟ್ಟೆಯನ್ನು ಮುನ್ನಡೆಸಿದ್ದವು. ಈ ಸಂಖ್ಯೆಗಳು ಮೊದಲ ಬಾರಿಗೆ ಸಣ್ಣ ಕಾರು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ.

ಸೂಚಕ ಆಕೃತಿ
ಭಾರತದಲ್ಲಿ ಮಾರಾಟವಾದ ಪ್ರಯಾಣಿಕರ ವಾಹನಗಳು (ಜೂನ್) 4.10 ಲಕ್ಷ
ಒಟ್ಟಾರೆ ಪಿವಿ ಬೆಳವಣಿಗೆ (ಜೂನ್, ವರ್ಷದಿಂದ ವರ್ಷಕ್ಕೆ) 29%
ಸಣ್ಣ ಕಾರು ಮಾರಾಟ ಬೆಳವಣಿಗೆ (ಜೂನ್, ವರ್ಷದಿಂದ ವರ್ಷಕ್ಕೆ) 78%
ಎಸ್‌ಯುವಿ ಮಾರಾಟ ಬೆಳವಣಿಗೆ (ಜೂನ್, ವರ್ಷದಿಂದ ವರ್ಷಕ್ಕೆ) 29%
ಮೊದಲ ಬಾರಿಗೆ ಖರೀದಿದಾರರ ಪಾಲು (FY2026 H1) 42%
ಮೊದಲ ಬಾರಿಗೆ ಖರೀದಿದಾರರ ಪಾಲು (FY2026 Q3) 48%
ಮೊದಲ ಬಾರಿಗೆ ಖರೀದಿದಾರರ ಪಾಲು (FY2026 Q4) 51%

ಏರುತ್ತಿರುವ ಎಸ್‌ಯುವಿ ಬೆಲೆಗಳು ಬಜೆಟ್-ಕೇಂದ್ರಿತ ಖರೀದಿದಾರರನ್ನು ಹ್ಯಾಚ್‌ಬ್ಯಾಕ್‌ಗಳ ಕಡೆಗೆ ಮುಖ ಮಾಡುವಂತೆ ಮಾಡುತ್ತಿದೆ. ಸೂಕ್ತವಾದ ವೈಶಿಷ್ಟ್ಯಗಳಿರುವ ಕಾಂಪ್ಯಾಕ್ಟ್ ಎಸ್‌ಯುವಿ 10 ಲಕ್ಷದಿಂದ 15 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಅನೇಕ ಸಣ್ಣ ಕಾರುಗಳು ಇನ್ನೂ 5 ಲಕ್ಷದಿಂದ 8 ಲಕ್ಷ ರೂ.ಗಳ ನಡುವೆ ಇವೆ. ಸಣ್ಣ ಕಾರುಗಳು ಉತ್ತಮ ನಗರ ಮೈಲೇಜ್ ನೀಡುತ್ತವೆ. ಜೊತೆಗೆ ಮಾಸಿಕ ವೆಚ್ಚವನ್ನು ನಿರ್ವಹಿಸುವ ಕುಟುಂಬಗಳಿಗೆ ಕಡಿಮೆ ಸೇವಾ ವೆಚ್ಚವನ್ನೂ ನೀಡಬಲ್ಲವು.

India June 2026 small cars rise

ನಗರದಲ್ಲಿರುವ ಟ್ರಾಫಿಕ್ ಸಮಸ್ಯೆ, ಸಣ್ಣ ಕಾರುಗಳು ಮತ್ತೆ ಗಮನ ಸೆಳೆಯಲು ಸಹಾಯ ಮಾಡುತ್ತಿವೆ. ದೊಡ್ಡ ನಗರಗಳಲ್ಲಿ ಪಾರ್ಕಿಂಗ್ ಸಮಸ್ಯೆಯೂ ಇರುವುದರಿಂದ, ಹ್ಯಾಚ್‌ಬ್ಯಾಕ್‌ಗಳು ಕಿರಿದಾದ ರಸ್ತೆಗಳಲ್ಲಿ ಮತ್ತು ನಿಧಾನ ಸಂಚಾರದಲ್ಲಿ ನಿರ್ವಹಿಸಲು ಸುಲಭ. ಅವು ಸಣ್ಣ ಪಾರ್ಕಿಂಗ್ ಬೇಗಳಿಗೆ ಸರಿಹೊಂದಿದವು. ಈ ಪ್ರಾಯೋಗಿಕ ಅಂಶಗಳು ವಿಭಾಗವನ್ನು ಮೆಟ್ರೋ ಬಳಕೆದಾರರಿಗೆ, ವಿಶೇಷವಾಗಿ ತಮ್ಮ ಮೊದಲ ವಾಹನವನ್ನು ಖರೀದಿಸುವವರಿಗೆ ಹೆಚ್ಚು ಸಮಂಜಸವಾಗಿ ಕಾಣುವಂತೆ ಮಾಡಿತು.

ಸಣ್ಣ ಕಾರು ಮಾರಾಟದಲ್ಲಿನ ಬದಲಾವಣೆಯಿಂದ ಮಾರುತಿ ಸುಜುಕಿ ಹೆಚ್ಚು ಲಾಭ ಪಡೆಯಬಹುದು. ಆಲ್ಟೊ K10, ಸೆಲೆರಿಯೊ, ವ್ಯಾಗನ್ಆರ್, ಮತ್ತು ಸ್ವಿಫ್ಟ್ ಅನೇಕ ಮೊದಲ ಬಾರಿಗೆ ಖರೀದಿದಾರರ ಪಟ್ಟಿಗಳಲ್ಲಿ ಮರಳಿ ಬಂದವು. ಟಾಟಾ ಟಿಯಾಗೊ ಮತ್ತು ಹ್ಯುಂಡೈ ಗ್ರಾಂಡ್ i10 Nios ಸೇರಿದಂತೆ ಇತರ ಮಾದರಿಗಳೂ ಜನಪ್ರಿಯವಾಗಿವೆ. ಆದರೂ, ಹಲವಾರು ಬೆಲೆ ಬ್ಯಾಂಡ್‌ಗಳಲ್ಲಿ ಎಸ್‌ಯುವಿಗಳ ಬೇಡಿಕೆ ಸ್ಥಿರವಾಗಿತ್ತು.

ಜೂನ್‌ನಲ್ಲಿ ಸಣ್ಣ ಕಾರುಗಳ ಮಾರಾಟದಲ್ಲಿನ ಏರಿಕೆಯು ಮಾರುಕಟ್ಟೆಯ ವ್ಯಾಪಕ ಕಾಳಜಿಗಳ ಹೊರತಾಗಿಯೂ ಗಮನ ಸೆಳೆಯಿತು. ಅಮೆರಿಕ-ಇರಾನ್ ಯುದ್ಧದಿಂದ ಇಂಧನ ಬೆಲೆಗಳು ಏರುತ್ತಿವೆ. ಖರೀದಿದಾರರು E20 ಇಂಧನದ ಬಗ್ಗೆಯೂ ಗೊಂದಲದಲ್ಲಿದ್ದಾರೆ. ಮುಂಗಾರು ಅನಿಶ್ಚಿತತೆ ಆರ್ಥಿಕ ಪರಿಸ್ಥಿತಿ ಬಗ್ಗೆ ಮತ್ತಷ್ಟೂ ಯೋಚಿಸುವಂತೆ ಮಾಡಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಗ್ರಾಹಕ ಸಣ್ಣ ಕಾರುಗಳನ್ನು ಕೊಳ್ಳಲು ಉತ್ಸುಕನಾಗಿದ್ದಾನೆ. ಆದರೆ, ಇದೇ ಟ್ರೆಂಡ್ ಎಷ್ಟು ದಿನಗಳವರೆಗೆ ಮುಂದುವರೆಯುತ್ತೆ ಎನ್ನೋದು ಹೇಳುವುದು ಕಷ್ಟ.

Article Published On: Wednesday, July 29, 2026, 10:37 [IST]
English summary
June 2026 data reveals a market shift in India, with small cars and hatchbacks gaining from first-time buyers, while SUV sales remain steady. The trend highlights affordability, urban practicality, and evolving consumer preferences.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+