MG Majestor: ದೈತ್ಯ ಎಂಜಿ ಕಾರು ಬಿಡುಗಡೆಗೆ ಸಜ್ಜು: ಇದು D+ SUV... ಫಾರ್ಚುನರ್‌ಗೆ ನಡುಕ ಶುರು!

ಜೆಎಸ್‌ಡಬ್ಲ್ಯು ಎಂಜಿ ಮೋಟಾರ್ (JSW MG Motor) ಇಂಡಿಯಾ ಫೆಬ್ರವರಿ 12 ರಂದು ತನ್ನ ಅದ್ದೂರಿ ಅನಾವರಣಕ್ಕೆ ನಿಗದಿಯಾಗಿರುವ ಭಾರತದ ಮೊದಲ ಡಿ+ ಎಸ್‌ಯುವಿ - ಎಂಜಿ ಮೆಜೆಸ್ಟರ್ (D+ SUV - MG MAJESTOR)ನ ಅಧಿಕೃತ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಇದು ಬ್ರಾಂಡ್‌ನಿಂದ ಮುಂಬರಲಿರುವ ಬಹುನಿರೀಕ್ಷಿತ ಕಾರಾಗಿದ್ದು, ಟೀಸರ್ ಮೂಲಕ ಗ್ರಾಹಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಈ ಹೊಸ ಎಂಜಿ ಮೆಜೆಸ್ಟರ್ ಡಿಸೈನ್ ಮತ್ತು ಪರ್ಫಾಮೆನ್ಸ್ ಹೊಸ ಮಾನದಂಡಗಳನ್ನು ಸ್ಥಾಪಿಸಲು ಸಜ್ಜಾಗಿದೆ ಎಂದು ಎಂಜಿ ಮೋಟಾರ್‌ ಹೇಳಿಕೊಂಡಿದೆ.

ಈ ಹೊಸ ಎಂಜಿ ಮೆಜೆಸ್ಟರ್ ಎಸ್‌ಯುವಿ ತನ್ನ ಉದ್ದವಾದ, ಅಗಲವಾದ ಮತ್ತು ಎತ್ತರದ ಆಯಾಮಗಳೊಂದಿಗೆ ನಿಯಮಿತ D ವಿಭಾಗದಲ್ಲಿ ಮಿಂಚಲಿದೆ. ಹೊಸ D+ ವಿಭಾಗದಲ್ಲಿ ತನ್ನ ಉಪಸ್ಥಿತಿಯನ್ನು ಗುರುತಿಸಿಕೊಳ್ಳಲಿದೆ. ನಗರ ಮತ್ತು ಒರಟಾದ ಭೂಪ್ರದೇಶಗಳಲ್ಲಿ ಹೈ - ಪರ್ಫಾಮೆನ್ಸ್ ನೀಡಲು ವಿನ್ಯಾಸಗೊಳಿಸಲಾದ ಈ ಬೃಹತ್ ಎಸ್‌ಯುವಿ ತನ್ನ ಸಾಮರ್ಥ್ಯದಲ್ಲಿ ಶ್ರೇಷ್ಠತೆಯನ್ನು ಮರು ವ್ಯಾಖ್ಯಾನಿಸಲಿದೆ.

jsw-mg-motor-teased-indias-1st-d-plus-suv-mg-majestor

ಹೊಸದಾಗಿ ಬಿಡುಗಡೆ ಮಾಡಲಾಗಿರುವ ಟೀಸರ್, SUV ಯ ಕಮಾಂಡಿಂಗ್ ಡಿಸೈನ್ ಅನ್ನು ಪ್ರದರ್ಶಿಸಿದೆ, ಮೆಜೆಸ್ಟಿಕ್ ಎಸ್‌ಯುವಿಯನ್ನು ಮ್ಯಾಟ್ರಿಕ್ಸ್ ಕಾಂಬಿನೇಶನ್ ಗ್ರಿಲ್‌ನಿಂದ ಹೈಲೈಟ್ ಮಾಡಲಾಗಿದೆ. ತೀಕ್ಷ್ಣವಾದ ಫಾಲ್ಕನ್ - ಮಾದರಿಯ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು ಮತ್ತು ಫ್ಯೂಚರಿಸ್ಟಿಕ್ ಸ್ಪ್ಲಿಟ್ - ಶೈಲಿಯ ಹೆಡ್‌ಲ್ಯಾಂಪ್‌ಗಳನ್ನು ಪಡೆದುಕೊಂಡಿದೆ. ಹೊಸ ಎಂಜಿ ಮೆಜೆಸ್ಟರ್ ಫೆಬ್ರವರಿ 12 ರಂದು ತನ್ನ ಚೊಚ್ಚಲ ಪ್ರವೇಶ ಮಾಡಲಿದೆ ಎಂದು ಕಂಪನಿ ಧೃಡಪಡಿಸಿದೆ.

ಏನಿದು D ಸೆಗ್ಮೆಂಟ್?:

ಡಿ ವಿಭಾಗದಲ್ಲಿ ದೊಡ್ಡ ಕಾರುಗಳು ಅಥವಾ ಮಧ್ಯಮ ಗಾತ್ರದ ಫ್ಯಾಮಿಲಿ ಕಾರುಗಳು ಅಥವಾ ಸೆಡಾನ್‌ಗಳು ಬರುತ್ತವೆ. ಈ ಕಾರುಗಳು ಸಾಮಾನ್ಯವಾಗಿ ಕೆಳ ವಿಭಾಗಗಳಲ್ಲಿರುವ ಕಾರುಗಳಿಗಿಂತ ಉದ್ದ ಮತ್ತು ಅಗಲವಾಗಿರುತ್ತವೆ. ಪ್ರಯಾಣಿಕರು ಮತ್ತು ಸರಕುಗಳಿಗೆ ಸಾಕಷ್ಟು ಸ್ಥಳಾವಕಾಶದೊಂದಿಗೆ ಆರಾಮದಾಯಕ ಸವಾರಿಯನ್ನು ಒದಗಿಸಲು ಅವುಗಳನ್ನು ವಿನ್ಯಾಸಗೊಳಿಸಲಾಗಿದೆ.

ಆದರೆ ಮುಂಬರಲಿರುವ ಎಂಜಿ ಮೆಜೆಸ್ಟರ್ D+ SUV ಆಗಿದ್ದು, ದೊಡ್ಡ ಗಾತ್ರ, ಸುರಕ್ಷತೆ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಟೊಯೋಟಾ ಫಾರ್ಚೂನರ್ ಲೆಜೆಂಡರ್ ಮತ್ತು ಜೀಪ್ ಮೆರಿಡಿಯನ್‌ನಂತಹ ಮಾರುಕಟ್ಟೆಯಲ್ಲಿರುವ ಇತರ SUV ಗಳೊಂದಿಗೆ ಸ್ಪರ್ಧಿಸಲಿದೆ. ಇದು ವಿಶಾಲವಾದ ಮೂರು-ಸಾಲು ಕ್ಯಾಬಿನ್, ಸುಧಾರಿತ ತಂತ್ರಜ್ಞಾನ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವೇರಿಯೆಂಟ್‌ಗಳನ್ನು ಒಳಗೊಂಡಂತೆ ವಿವಿಧ ಪವರ್‌ಟ್ರೇನ್ ಆಯ್ಕೆಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಈ ವಿಭಾಗದ ಕಾರುಗಳು ಸಾಮಾನ್ಯವಾಗಿ ಪವರ್‌ಫುಲ್ ಎಂಜಿನ್‌ಗಳು ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಳು, ಹವಾಮಾನ ನಿಯಂತ್ರಣ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳಂತಹ ಆಧುನಿಕ ಫೀಚರ್‌ಗಳನ್ನು ಹೊಂದಿರುತ್ತವೆ. ದೀರ್ಘ ಪ್ರಯಾಣಕ್ಕಾಗಿ ವಿಶಾಲವಾದ ಮತ್ತು ಆರಾಮದಾಯಕ ವಾಹನದ ಅಗತ್ಯವಿರುವ ಕುಟುಂಬಗಳು ಅಥವಾ ವ್ಯಾಪಾರ ವೃತ್ತಿಪರರು ಅವುಗಳನ್ನು ಹೆಚ್ಚಾಗಿ ಬಳಸುತ್ತಾರೆ.

jsw-mg-motor-teased-indias-1st-d-plus-suv-mg-majestor

ಈ ಕಾರುಗಳು ಅವುಗಳ ವಿಶಾಲವಾದ ಒಳಾಂಗಣ, ಆರಾಮದಾಯಕ ಆಸನಗಳು ಮತ್ತು ಸುಗಮ ಸವಾರಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಬೆಲೆಗೆ ಸಂಬಂಧಿಸಿದಂತೆ ಡಿ ವಿಭಾಗದಲ್ಲಿನ ಕಾರುಗಳು ಹೆಚ್ಚು ದುಬಾರಿಯಾಗಿರುತ್ತವೆ. ಬೆಲೆಗೆ ತಕ್ಕಂತೆ ಫೀಚರ್ಸ್, ಪರ್ಫಾಮೆನ್ಸ್ ಮತ್ತು ಒಟ್ಟಾರೆ ಗುಣಮಟ್ಟದ ವಿಷಯದಲ್ಲಿ ಅವು ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತವೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, January 27, 2026, 17:48 [IST]
English summary
Jsw mg motor teased indias 1st d plus suv mg majestor
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+