Kia: ಸದ್ದಿಲ್ಲದೆ ಸೈರೋಸ್ ಹೊಸ ವೇರಿಯೆಂಟ್ ಬಿಡುಗಡೆ ಮಾಡಿದ ಕಿಯಾ: ಡಿಸೆಲ್ ಆಯ್ಕೆ ಲಭ್ಯ!

ಅತಿ ಕಡಿಮೆ ಸಮಯದಲ್ಲೇ ಭಾರತದ ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರ್ತಿಸಿಕೊಂಡಿರುವ 'ಕಿಯಾ ಇಂಡಿಯಾ', ತನ್ನ ಹೊಸದಾಗಿ ಬಿಡುಗಡೆ ಮಾಡಿದ್ದ ಸೈರೋಸ್ ಎಸ್‌ಯುವಿಗೆ ಹೊಸ ವೇರಿಯೆಂಟ್‌ನ್ನು ಪರಿಚಯಿಸಿದೆ. ಈ ಹೊಸ ವೇರಿಯೆಂಟ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಶ್ರೇಣಿಯಾದ್ಯಂತ ಒಟ್ಟಾರೆ ಮೌಲ್ಯ ಪ್ರತಿಪಾದನೆಯನ್ನು ನಿಗದಿಪಡಿಸಿರುವುದಾಗಿ ಕಿಯಾ ತಿಳಿಸಿದೆ. ಪೆಟ್ರೋಲ್ ಪವರ್‌ಟ್ರೇನ್ ಬೆಲೆ ರೂ.9,89,000 (ಎಕ್ಸ್ - ಶೋರೂಂ) ಮತ್ತು ಡೀಸೆಲ್ ಬೆಲೆಯು ರೂ.10,63,900 (ಎಕ್ಸ್ - ಶೋರೂಂ) ಇದೆ. ಹೊಸ ವೇರಿಯೆಂಟ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಿಯಾ ಸೈರೋಸ್ ಹೊಸ ವೇರಿಯೆಂಟ್ ವಿಶೇಷತೆಗಳು

ಕಿಯಾ ಸೈರೋಸ್ ವೇರಿಯೆಂಟ್ ವಿಸ್ತರಣೆಯಿಂದಾಗಿ ಗ್ರಾಹಕರು ಈಗ ಏಳು ವಿಭಿನ್ನ ವೇರಿಯೆಂಟ್ ಆಯ್ಕೆಗಳನ್ನು ಹೊಂದಿದ್ದಾರೆ. ಕಿಯಾ ಸೈರೋಸ್ HTK(O) ವೇರಿಯೆಂಟ್ ಅನ್ನು ಆಧರಿಸಿರುವ ಹೊಸ HTK(EX) ವೇರಿಯೆಂಟ್ ಅದೇ LED DRLಗಳು, ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು ಸೇರಿದಂತೆ R16 ಅಲಾಯ್ ವೀಲ್‌ಗಳೊಂದಿಗೆ ಸಜ್ಜುಗೊಂಡಿದ್ದು, ಒಟ್ಟಾರೆ ಡಿಸೈನ್ ಪ್ರೀಮಿಯಂ ಆಗಿ ಕಾಣುತ್ತದೆ.

kia-introduces-htk-ex-trim-for-syros-line-up-at-9-89-lakhs

ಹಾಗಯೇ ಫೀಚರ್ಸ್ ವಿಷಯಕ್ಕೆ ಬಂದರೆ ಈ ಹೊಸ ವೇರಿಯೆಂಟ್‌ನಲ್ಲಿ ಇಟಿಕ್ಲಿಕ್ ಸನ್‌ರೂಫ್, ಸುವ್ಯವಸ್ಥಿತ ಡೋರ್ ಹ್ಯಾಂಡಲ್‌ಗಳು, 31.2 cm (12.3 - ಇಂಚಿನ) ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲೆಕ್ಟ್ರಿಕಲ್ಲಿ ಅಡ್ಜಸ್ಟ್ ಮಾಡಬಹುದಾದ ಮತ್ತು ಮಡಚಬಹುದಾದ ORVMಗಳು ಮತ್ತು ಸೆನ್ಸಾರ್‌ಗಳೊಂದಿಗೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ ಸೇರಿದಂತೆ ಹಲವಾರು ಪ್ರೀಮಿಯಂ ಸೌಕರ್ಯ ಮತ್ತು ಅನುಕೂಲತೆಯ ಫೀಚರ್‌ಗಳನ್ನು ಸಹ ನೀಡಲಾಗಿದೆ.

ಇದರ ಸಮಗ್ರ ಸುರಕ್ಷತಾ ಪ್ಯಾಕೇಜ್‌ ನೋಡುವುದಾದರೆ EBD ಜೊತೆಗೆ ABS, ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಆರು ಏರ್‌ಬ್ಯಾಗ್‌ಗಳು ಮತ್ತು ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ ಸೇರಿದಂತೆ 20 ಕ್ಕೂ ಹೆಚ್ಚು ದೃಢವಾದ ಫೀಚರ್‌ಗಳನ್ನು ಒಳಗೊಂಡಿದೆ. ಗ್ರಾಹಕರ ಆಯ್ಕೆಯನ್ನು ಮತ್ತಷ್ಟು ವಿಸ್ತರಿಸಲು, HTK (EX) ಈಗ ಡೀಸೆಲ್ ಪವರ್ಟ್ರೇನ್ ‌ನಲ್ಲಿದೆ, ಇಂಧನ ಆಯ್ಕೆಗಳಲ್ಲಿ ಅದರ ಮೌಲ್ಯ ಪ್ರತಿಪಾದನೆಯನ್ನು ಬಲಪಡಿಸುತ್ತದೆ ಎಂದು ಕಿಯಾ ಹೇಳಿದೆ.

kia-introduces-htk-ex-trim-for-syros-line-up-at-9-89-lakhs

ಈ ಸೇರ್ಪಡೆಗಳು ಸೈರೋಸ್ ಅನ್ನು ಅದರ ಆಯ್ಕೆಯಲ್ಲಿ ಉತ್ತಮವಾಗಿ ಆಯ್ಕೆಮಾಡುವಂತೆ ಮಾಡುತ್ತದೆ, ಗ್ರಾಹಕರ ವರ್ಧಿತ ಮೌಲ್ಯವನ್ನು ಹೊಂದಿದೆ. ಈ SUV ವಿಶಾಲವಾದ ಮತ್ತು ಗಾಳಿಯಾಡುವ ಕ್ಯಾಬಿನ್ ಅನ್ನು ಹೊಂದಿದ್ದು, ಎಲ್ಲಾ ಪ್ರಯಾಣಿಕರಿಗೆ ಅತ್ಯಾಧುನಿಕ ಒಳಾಂಗಣ ಮತ್ತು ಸೌಕರ್ಯಯುತ ಆಸನದೊಂದಿಗೆ ಸಾಟಿಯಿಲ್ಲದ ಅನುಭವದ ಜೊತೆಗೆ ವರ್ಗ - ಪ್ರಮುಖ ಬೂಟ್ ಸ್ಥಳಾವಕಾಶವನ್ನು ಹೊಂದಿದೆ.

ಕಿಯಾ ಅವರ "ಆಪೋಸಿಟ್ಸ್ ಯುನೈಟೆಡ್" ನ ವಿನ್ಯಾಸ ತತ್ವಶಾಸ್ತ್ರದ ಮೇಲೆ ನಿರ್ಮಿಸಲಾದ ಸೈರೋಸ್, ಕ್ರಿಯಾತ್ಮಕ ಬಹುಮುಖತೆ ದಿಟ್ಟ ಡಿಸೈನ್ ಅನ್ನು ಸಂಯೋಜಿಸುತ್ತದೆ. ಬಲವರ್ಧಿತ K1 ಪ್ಲಾಟ್‌ಫಾರ್ಮ್ ಮತ್ತು 5 - ಸ್ಟಾರ್ BNCAP ಸುರಕ್ಷತಾ ರೇಟಿಂಗ್ ಅನ್ನು ಹೊಂದಿದ್ದು. ಸುರಕ್ಷಿತ ಕಾರುಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ.

kia-introduces-htk-ex-trim-for-syros-line-up-at-9-89-lakhs

"ಕಿಯಾ ಕಾರು ಖರೀದಿದಾರರ ಒಳನೋಟಗಳು, ನಾವು ತೆಗೆದುಕೊಳ್ಳುವ ಪ್ರತಿಯೊಂದು ಉತ್ಪನ್ನ ನಿರ್ಧಾರಕ್ಕೆ ಮಾರ್ಗದರ್ಶನ ನೀಡುತ್ತವೆ. ಸೈರೋಸ್‌ಗಾಗಿ HTK (EX) ಟ್ರಿಮ್ ಪರಿಚಯವು ಗ್ರಾಹಕರಿಗೆ ಅರ್ಥಪೂರ್ಣ ಮೌಲ್ಯವನ್ನು ನೀಡಲಿದೆ, ಇದರ ಪರಿಚಯವ ನಮ್ಮ ನಿರಂತರ ಗಮನವನ್ನು ಬಿಂಬಿಸುತ್ತದೆ. ಈಗ ಆಕರ್ಷಕ ಬೆಲೆಯಲ್ಲಿ ಸೈರೋಸ್ ಎಸ್‌ಯುವಿಗೆ ಹೊಸ ವೇರಿಯೆಂಟ್ ಶ್ರೇಣಿಯನ್ನು ವಿಸ್ತರಿಸುವ ಮೂಲಕ ಆಯ್ಕೆ ಹೆಚ್ಚಿಸಲಾಗಿದೆ.

ಗ್ರಾಹಕರು ಕಿಯಾದಿಂದ ನಿರೀಕ್ಷಿಸುವ ವೈಶಿಷ್ಟ್ಯಗಳನ್ನು ಮತ್ತು ಗುಣಮಟ್ಟವನ್ನು ನೀಡಲಾಗುತ್ತಿದೆ. ನಮ್ಮ SUV ಅನ್ನು ಹೆಚ್ಚು ಖರೀದಿಸುವಂತೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಹಾಗಾಗಿ ತನ್ನ ವಿಭಾಗದಲ್ಲಿಯೇ ಅತ್ಯುತ್ತಮ ಬೆಲೆಗೆ ಈ ಕಾರನ್ನು ನೀಡಲಾಗುತ್ತಿದೆ" ಎಂದು ಕಿಯಾ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆಯ ಹಿರಿಯ ಉಪಾಧ್ಯಕ್ಷ ಮತ್ತು ರಾಷ್ಟ್ರೀಯ ಮುಖ್ಯಸ್ಥ ಅತುಲ್ ಸೂದ್ ಹೇಳಿದರು.

More from DriveSpark

Article Published On: Friday, January 16, 2026, 15:36 [IST]
English summary
Kia introduces htk ex trim for syros line up at 9 89 lakhs
Read more on kia new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+