ಪುಟ್ಟ ಕಾರಿನಲ್ಲಿ ಹೊಸ ಡೀಸೆಲ್ ವೇರಿಯೆಂಟ್ ಸೇರ್ಪಡೆ: ಟರ್ಬೊ 7DCT ಕೂಡ ಲಭ್ಯ: ಬೆಲೆಯೆಷ್ಟು?
ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಕಿಯಾ ಇಂಡಿಯಾ, ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಮತ್ತು ಮೌಲ್ಯವನ್ನು ನೀಡುವ ಸಲುವಾಗಿ ಮಾಡೆಲ್ ಇಯರ್ 2026 (MY26) ಆವೃತ್ತಿಯ ಕಿಯಾ ಸೋನೆಟ್ ಅನ್ನು ಪರಿಚಯಿಸಿದೆ. ಡೀಸೆಲ್ ಆಟೋಮ್ಯಾಟಿಕ್ ಮತ್ತು ಟರ್ಬೊ ಪೆಟ್ರೋಲ್ 7DCT ಆಯ್ಕೆಗಳಲ್ಲಿ ಹೊಸ ಸೋನೆಟ್ SUV ವೇರಿಯೆಂಟ್‌ಗಳನ್ನು ಪರಿಚಯಿಸಿದೆ. ಡೀಸೆಲ್ ಆಟೋಮ್ಯಾಟಿಕ್ ಬೆಲೆಯು ಈಗ ರೂ. 9.77 ಲಕ್ಷ (ಎಕ್ಸ್ - ಶೋರೂಂ) ಮತ್ತು ಟರ್ಬೊ ಪೆಟ್ರೋಲ್ 7DCT ಅನ್ನು 9.89 (ಎಕ್ಸ್ - ಶೋರೂಂ) ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
MY26 ಸೋನೆಟ್ ಎರಡೂ ವೇರಿಯೆಂಟ್‌ಗಳನ್ನು ರೂ. 10 ಲಕ್ಷದೊಳಗೆ ಪರಿಚಯಿಸಲಾಗಿದೆ. ನಗರಗಳಲ್ಲಿ ಬೇಡಿಕೆ ಹೆಚ್ಚುತ್ತಲೇ ಇರುವುದರಿಂದ, ಗ್ರಾಹಕರು ಹೆಚ್ಚಿನ ಸೌಕರ್ಯ, ಸುಧಾರಿತ ದೈನಂದಿನ ಚಾಲನಾ ಸಾಮರ್ಥ್ಯವನ್ನು ನೀಡುವ ಆಟೋಮ್ಯಾಟಿಕ್ ವಾಹನಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯನ್ನು ಗುರುತಿಸಿ, ಕಿಯಾ ಸೋನೆಟ್‌ನ ಆಟೋಮ್ಯಾಟಿಕ್ ವೇರಿಯೆಂಟ್‌ಗಳನ್ನು ಹೆಚ್ಚಿಸಲಾಗಿದೆ.

ಕಿಯಾ ಸೋನೆಟ್ 1.5 - ಲೀಟರ್ ಡೀಸೆಲ್ 6 - ಸ್ಪೀಡ್ ಆಟೋಮ್ಯಾಟಿಕ್ ಈಗ HTE(O), HTK(O), HTK+, ಮತ್ತು HTK+(O) ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ HTK(O) ಮತ್ತು HTK+(O) ವೇರಿಯೆಂಟ್‌ಗಳಲ್ಲಿ 1.0-ಲೀಟರ್ ಟರ್ಬೊ ಪೆಟ್ರೋಲ್ 7DCT ಆಯ್ಕೆಗಳನ್ನು ಸಹ ಪರಿಚಯಿಸಲಾಗಿದೆ ಎಂದು ಕಿಯಾ ಇಂಡಿಯಾ ತಿಳಿಸಿದೆ.
ಈ ಪರಿಚಯದೊಂದಿಗೆ ಸೋನೆಟ್ ಹೆಚ್ಚು ಸ್ಪರ್ಧಾತ್ಮಕ ಬೆಲೆಯಲ್ಲಿ ಆಟೋಮ್ಯಾಟಿಕ್ ತಂತ್ರಜ್ಞಾನವನ್ನು ನೀಡುವ ಮೂಲಕ ವಿಭಾಗದಲ್ಲಿನ ಪ್ರಮುಖ ಅಂತರವನ್ನು ನೀಗಿಸುತ್ತದೆ. ಅದೇ ಸಮಯದಲ್ಲಿ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ 6AT ಮತ್ತು 7DCT ಎರಡನ್ನೂ ನೀಡುವ ಮೊದಲ SUV ಆಗಿ ಸೋನೆಟ್ ಗುರ್ತಿಸಿಕೊಂಡಿದೆ. ಈಗ ಆಟೋಮ್ಯಾಟಿಕ್ ಕಾರುಗಳ ಖರೀದಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕಿಯಾ ವಿಶ್ವಾಸ ವ್ಯಕ್ತಪಡಿಸಿದೆ.

"ಗ್ರಾಹಕರ ಅಗತ್ಯತೆಗಳು, ವಿಶೇಷವಾಗಿ ದೈನಂದಿನ ಪರಿಸ್ಥಿತಿಗಳಲ್ಲಿ ಆಟೋಮ್ಯಾಟಿಕ್ ಚಾಲನೆಯ ಅನುಕೂಲಕ್ಕಾಗಿ ಹೆಚ್ಚುತ್ತಿರುವ ಆದ್ಯತೆಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಮಾಡಲ್ ವರ್ಷ 2026 ರ ಅಪ್‌ಡೇಟ್‌ನೊಂದಿಗೆ, ನಾವು ಹೆಚ್ಚು ಸ್ಪರ್ಧಾತ್ಮಕ ಬೆಲೆಯಲ್ಲಿ ಡೀಸೆಲ್ ಆಟೋಮ್ಯಾಟಿಕ್ ಮತ್ತು ಟರ್ಬೊ ಪೆಟ್ರೋಲ್ 7DCT ಆಯ್ಕೆಗಳೊಂದಿಗೆ ನಮ್ಮ ಆಟೋಮೇಟೆಡ್ ಶ್ರೇಣಿಯನ್ನು ವಿಸ್ತರಿಸುತ್ತಿದ್ದೇವೆ.
ಹೆಚ್ಚಿನ ಗ್ರಾಹಕರು ಆಟೋಮ್ಯಾಟಿಕ್ ಕಾರುಗಳನ್ನು ಕಡಿಮೆ ಬೆಲೆಯಲ್ಲಿ ಸುಲಭವಾಗಿ ಖರೀದಿಸಲು ಅನುವು ಮಾಡಿಕೊಟ್ಟಿದ್ದೇವೆ. ನಮ್ಮ ಹೊಸ ವೇರಿಯೆಂಟ್‌ಗಳ ಪರಿಚಯವು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸೋನೆಟ್‌ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸುತ್ತದೆ" ಎಂದು ಕಿಯಾ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್‌ನ ಹಿರಿಯ ಉಪಾಧ್ಯಕ್ಷ ಅತುಲ್ ಸೂದ್ ಹೇಳಿದರು.

2020 ರಲ್ಲಿ ಬಿಡುಗಡೆಯಾದ ಕಿಯಾ ಸೋನೆಟ್ ಭಾರತದ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಹೆಚ್ಚು ಮಾರಾಟವಾಗುವ ಮಾಡಲ್‌ಗಳಲ್ಲಿ ಒಂದಾಗಿ ತನ್ನನ್ನು ತಾನು ಗುರ್ತಿಸಿಕೊಂಡಿದೆ. ಇತ್ತೀಚೆಗೆ 5 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ, ಇದು ಬ್ರ್ಯಾಂಡ್‌ನಲ್ಲಿ ಬಲವಾದ ಗ್ರಾಹಕರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಮಾರುಕಟ್ಟೆಯಲ್ಲಿ ಪ್ರಮುಖ ಬೆಳವಣಿಗೆಯ ಕಾರಾಗಿ ಮುಂದುವರೆದಿದೆ.
ಸೋನೆಟ್ ಐದು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಸ್ಪೋರ್ಟಿ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ವೈಶಿಷ್ಟ್ಯ - ಭರಿತ ಕ್ಯಾಬಿನ್ ಹೊಂದಿದೆ. ಜೊತೆಗೆ 15 ದೃಢವಾದ ಸುರಕ್ಷತಾ ಫೀಚರ್ಸ್, 10 ADAS ಲೆವೆಲ್1 ವೈಶಿಷ್ಟ್ಯಗಳು ಮತ್ತು 70+ ಸಂಪರ್ಕಿತ ಕಾರು ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಸೋನೆಟ್‌ನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತಾ ಹೊಸ ಬಾಹ್ಯ ಬಣ್ಣವಾದ ಮ್ಯಾಗ್ಮಾ ರೆಡ್ ಅನ್ನು ಸಹ ಪರಿಚಯಿಸಲಾಗಿದೆ ಎಂದು ಕಿಯಾ ತಿಳಿಸಿದೆ.


Click it and Unblock the Notifications








