Mahindra: ಈ ರಾಜ್ಯದಲ್ಲಿ ಮಹೀಂದ್ರಾದಿಂದ ರೂ.15,000 ಕೋಟಿ ಹೂಡಿಕೆ.. ಸಾವಿರಾರು ಉದ್ಯೋಗ ಸೃಷ್ಟಿ!

ಮಹಾರಾಷ್ಟ್ರದ ಕೈಗಾರಿಕಾ ಕ್ಷೇತ್ರಕ್ಕೆ ಮಹೀಂದ್ರಾ & ಮಹೀಂದ್ರಾ (Mahindra & Mahindra) ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಲು ಮುಂದಾಗಿದೆ. ಮುಂದಿನ 10 ವರ್ಷಗಳಲ್ಲಿ ಸರಿ ಸುಮಾರು ರೂ.15,000 ಕೋಟಿ ಹೂಡಿಕೆ ಮಾಡುವುದಾಗಿ 'ಅಡ್ವಾಂಟೇಜ್ ವಿದರ್ಭ' ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದೆ. ನಾಗಪುರದಲ್ಲಿ ಅತಿದೊಡ್ಡ ಆಟೋಮೊಬೈಲ್ ಹಾಗೂ ಟ್ರಾಕ್ಟರ್ ತಯಾರಿಕಾ ಘಟಕವನ್ನು ತೆರೆಯುವುದಾಗಿ ತಿಳಿಸಿದೆ.

ಈ ಉತ್ಪಾದನಾ ಘಟಕವು 1,500 ಎಕರೆಯಲ್ಲಿ ವಿಸ್ತರಿಸಲಿದೆ. ಇದರೊಂದಿಗೆ ಸಂಭಾಜಿನಗರದ 150 ಎಕರೆಯಲ್ಲಿ 'ಸಪ್ಲೈಯರ್ ಪಾರ್ಕ್' ಸಹ ನಿರ್ಮಾಣವಾಗಲಿದೆ. 2028 ರಿಂದ ನೂತನ ತಯಾರಿಕಾ ಘಟಕದ ಕಾರ್ಯಚರಣೆಯು ಶುರುವಾಗಲಿದೆ. ವಾರ್ಷಿಕ 5 ಲಕ್ಷಕ್ಕೂ ಹೆಚ್ಚು ವಾಹನಗಳು (ವಿಶೇಷವಾಗಿ ಕಾರುಗಳು) ಹಾಗೂ 1 ಲಕ್ಷ ಟ್ರಾಕ್ಟರ್‌ಗಳನ್ನು ತಯಾರಿಸಲು ಸಾಧ್ಯವಾಗಲಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಉದ್ಯೋಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

Mahindra Invests Rs 15 000 Crore In Maharashtra Details

ಬೃಹತ್ ಹೂಡಿಕೆ ಬಗ್ಗೆ ಮಹೀಂದ್ರಾದ ಆಟೋ & ಫಾರ್ಮ್ ಸೆಕ್ಟರ್‌ನ ಸಿಇಒ ರಾಜೇಶ್ ಜೆಜುರಿಕರ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಉತ್ಪಾದನಾ ಘಟಕವು ಮಹೀಂದ್ರಾದ ದಿಟ್ಟ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಇಲ್ಲಿ ಮುಂದಿನ ಪೀಳಿಗೆಯ ವಾಹನಗಳು ಹಾಗೂ ಟ್ರಾಕ್ಟರ್‌ಗಳನ್ನು ಸಿದ್ದಪಡಿಸಲಾಗಿತ್ತದೆ. 'ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್'ಗೆ ನಮ್ಮ ಬದ್ಧತೆಯನ್ನು ಬೆಂಬಲಿಸುತ್ತದೆ. ಎಂದು ಹೇಳಿದ್ದಾರೆ.

ಸದ್ಯ ಇದೇ ಮಹಾರಾಷ್ಟ್ರದ ಪುಣೆ ಸಮೀಪದ ಚಕನ್‌ನಲ್ಲಿ ಮಹೀಂದ್ರಾದ ದೊಡ್ಡ ತಯಾರಿಕಾ ಘಟಕವಿದ್ದು, 700 ಎಕರೆಗಳಲ್ಲಿ ವ್ಯಾಪಿಸಿಕೊಂಡಿದೆ. ಒಟ್ಟು 2,700 ರಿಂದ 3,000 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಐಇಸಿ ಎಂಜಿನ್ ಹಾಗೂ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.

Mahindra Invests Rs 15 000 Crore In Maharashtra Details

ಈಚೆಗೆ ಬಿಡುಗಡೆಯಾದ ಮಹೀಂದ್ರಾ ಕಾರುಗಳಿವು:

ಮಹೀಂದ್ರಾ ಎಕ್ಸ್ಇವಿ 9ಎಸ್: ಇದು ರೂ.19.95 ಲಕ್ಷದಿಂದ ರೂ.29.45 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಎವರೆಸ್ಟ್ ವೈಟ್, ಮಿಡ್‌ನೈಟ್ ಬ್ಲ್ಯಾಕ್, ರೂಬಿ ವೆಲ್ವೆಟ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 7 ಆಸನಗಳನ್ನು ಒಳಗೊಂಡಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು.

ನೂತನ 'ಎಕ್ಸ್ಇವಿ 9ಎಸ್' 59, 70 ಮತ್ತು 79 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 521 ರಿಂದ 550 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಟ್ರಿಪಲ್ ಸ್ಕ್ರೀನ್ ಸೆಟಪ್, ಕೀಲೆಸ್ ಎಂಟ್ರಿ ಮತ್ತು ರೇರ್ ಎಸಿ ವೆಂಟ್‌ಗಳಂತಹ ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಇವಿ: ಈ ಕಾರು ರೂ.13.89 ಲಕ್ಷದಿಂದ ರೂ.14.96 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಬುಲಾ ಬ್ಲ್ಯೂ ಮತ್ತು ಸ್ಟೆಲ್ತ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚರಿಸಬಹುದು.

ಹೊಸ 'ಎಕ್ಸ್‌ಯುವಿ 3ಎಕ್ಸ್ಒ ಇವಿ' 39.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. 285 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ಕೊಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್ ಮತ್ತು ಡುಯಲ್-ಜೋನ್ ಆಟೋ ಎಸಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಮಹೀಂದ್ರಾ ಎಕ್ಸ್‌ಯುವಿ 7ಎಕ್ಸ್ಒ: ಇದು ರೂ.13.66 ಲಕ್ಷದಿಂದ ರೂ.24.92 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 13 ರಿಂದ 17 ಕಿಲೋಮೀಟರ್‌ವರೆಗೆ ಮೈಲೇಜ್‌ ನೀಡುತ್ತದೆ. 7 ಆಸನಗಳನ್ನು ತನ್ನದಾಗಿಸಿಕೊಂಡಿದೆ. 12.3-ಇಂಚಿನ ಟ್ರಿಪಲ್ ಸ್ಕ್ರೀನ್ ಸೆಟಪ್ ಹಾಗೂ 7-ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

More from DriveSpark

Article Published On: Saturday, February 7, 2026, 20:37 [IST]
English summary
Mahindra invests rs 15000 crore in maharashtra details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+