Mahindra: ಸದ್ದಿಲ್ಲದೆ ಹೊಸ ಎಸ್‌ಯುವಿ ಬಿಡುಗಡೆ: ಮಹೀಂದ್ರಾ ಆಟ ಶುರು... ಪಕ್ಕಾ ಮಾರುಕಟ್ಟೆ ಶೇಕ್ ಆಗಲಿದೆ!
ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ, ಇಂದು ರೂ. 13.89 ಲಕ್ಷ (ಎಕ್ಸ್ ಶೊರೂಂ) ಆರಂಭಿಕ ಬೆಲೆಯಲ್ಲಿ 'ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ ಇವಿ' (Mahindra XUV 3XO EV) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರ ಆಕಾಂಕ್ಷೆಗಳು ಮತ್ತು ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ XUV 3XO EV, ನಗರ ವಿನ್ಯಾಸ, ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಇಂಟೀರಿಯರ್‌ನಲ್ಲಿ ಪ್ರೀಮಿಯಂ ವಾತಾವರಣದೊಂದಿಗೆ ಪ್ರತಿ ಪ್ರಯಾಣದಲ್ಲೂ ಸೌಕರ್ಯವನ್ನು ನೀಡುವಂತಹ ಕ್ಯಾಬಿನ್ ರೂಪಿಸಲಾಗಿದೆ. ಇದರ ಸೊಗಸಾದ ಡಿಸೈನ್ ಜೊತೆಗೆ ಪ್ರಾಯೋಗಿಕತೆಯನ್ನು ಬಯಸುವ ಗ್ರಾಹಕರಿಗೆ ಬೆಸ್ಟ್ ಆಯ್ಕೆಯಾಗಿದೆ ಎಂದು ಮಹೀಂದ್ರ ಭರವಸೆ ನೀಡಿದೆ.
ಏಪ್ರಿಲ್ 2024 ರಲ್ಲಿ ಬಿಡುಗಡೆಯಾದ ಇಂಧನ ಚಾಲಿತ XUV 3XO, ವಿಭಾಗ-ಪ್ರಮುಖ ವೈಶಿಷ್ಟ್ಯಗಳೊಂದಿಗೆ ಸಬ್ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಬಿಡುಗಡೆಯಾದಾಗಿನಿಂದ ಇದು 1.8 ಲಕ್ಷ ಕಾರುಗಳ ಮಾರಾಟವನ್ನು ತಲುಪಿದೆ. ಇದೀಗ XUV 3XO EV ವಾಹನವನ್ನು ಸಾಮಾನ್ಯವಾಗಿ ನಗರದೊಳಗೆ ಪ್ರಯಾಣಿಸಲು ಮತ್ತು ಸ್ಮಾರ್ಟ್ ಎಲೆಕ್ಟ್ರಿಕ್ SUV ಯನ್ನು ಬಯಸುವ ಗ್ರಾಹಕರಿಗಾಗಿ ನಿರ್ಮಿಸಲಾಗಿದೆ.

ಈ ಕಾರು ಎರಡು ವೇರಿಯಂಟ್‌ಗಳನ್ನು ಹೊಂದಿದ್ದು, AX5 ಬೆಲೆ ರೂ 13.89 ಲಕ್ಷ (ಎಕ್ಸ್ ಶೊರೂಂ) ವಿದ್ದರೆ, AX7L ರೂ. 14.96 ಲಕ್ಷ (ಎಕ್ಸ್ ಶೊರೂಂ) ಇದೆ. ಐಚ್ಛಿಕ 7.2 kW ವಾಲ್ ಚಾರ್ಜರ್ ರೂ. 50,000 ಹೆಚ್ಚುವರಿ ವೆಚ್ಚದಲ್ಲಿ ಖರೀದಿಸಬಹುದು. ತನ್ನ ವಿಭಾಗದಲ್ಲಿಯೇ ಅತ್ಯಂತ ವೇಗವಾದ ಎಲೆಕ್ಟ್ರಿಕ್ ಕಾರು ಇದಾಗಿದ್ದು - ಕೇವಲ 8.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದೆ.
XUV 3XO EV ಮುಖ್ಯಾಂಶಗಳು
ಸಿಂಗಲ್ ಪೇನ್ ಸನ್‌ರೂಫ್, R16 ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಟ್ವಿನ್ HD 10.25 ಇಂಚಿನ ಇನ್ಫೋಟೈನ್‌ಮೆಂಟ್ ಮತ್ತು 10.25ಇಂಚಿನ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 6 ಸ್ಪೀಕರ್‌ಗಳು + ಸ್ಟೀರಿಂಗ್ ಆಡಿಯೊ ಕಂಟ್ರೋಲ್, ಲೆಥೆರೆಟ್ ಸ್ಟೀರಿಂಗ್, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, LED DRL, ಇನ್ಫಿನಿಟಿ LED ಟೈಲ್ ಲ್ಯಾಂಪ್, ರೂಫ್ ರೈಲ್ಸ್ ಮತ್ತು ಹಿಂಭಾಗದ ಸ್ಪಾಯ್ಲರ್‌ನೊಂದಿಗೆ ಸ್ಪೋರ್ಟಿ ಲುಕ್ ಪಡೆದುಕೊಂಡಿದೆ.

ಹೊಸ XUV 3XO EV ಕಾರಿನಲ್ಲಿ ಪವರ್‌ಫುಲ್ ಮೋಟಾರ್ ಅಳವಡಿಸಲಾಗಿದ್ದು, 110 kW ಪವರ್ ಹಾಗೂ 310 Nm ಟಾರ್ಕ್ ಹೊರಹಾಕುತ್ತದೆ. 39.4 kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಸೂಪರ್‌ಫಾಸ್ಟ್ ಚಾರ್ಜಿಂಗ್ (50 kW DC ಚಾರ್ಜರ್) ಮೂಲಕ ಕೇವಲ 50 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು. ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿ 285 ಕಿ.ಮೀ ಓಡಿಸಬಹುದು ಎಂದು ಮಹೀಂದ್ರಾ ತಿಳಿಸಿದೆ.
ಫೀಚರ್ಸ್ ವಿಷಯಕ್ಕೆ ಬಂದರೆ ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟಾರ್ಟ್, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ (EPB), ಆಟೋ ಹೆಡ್‌ಲ್ಯಾಂಪ್, ಆಟೋ ರೈನ್ ಸೆನ್ಸಿಂಗ್ ವೈಪರ್, ಎಲೆಕ್ಟ್ರಿಕ್ ORVM, ಹಿಂಭಾಗದ ಡಿಫಾಗರ್, 60:40 ಸ್ಪ್ಲಿಟ್ ಹಿಂಭಾಗದ ಸೀಟ್, ಹಿಂಭಾಗದ AC ವೆಂಟ್‌ಗಳು, ವೈರ್‌ಲೆಸ್ ಚಾರ್ಜರ್, ಮುಂಭಾಗ ಮತ್ತು ಹಿಂಭಾಗದ USB ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಸುರಕ್ಷತೆ ವಿಷಯಕ್ಕೆ ಬಂದರೆ, ರಿಯರ್ ವ್ಯೂವ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), 6 ಏರ್‌ಬ್ಯಾಗ್‌ಗಳು, ಟೈರ್ ಒತ್ತಡ ಮೇಲ್ವಿಚಾರಣಾ ವ್ಯವಸ್ಥೆ (TPMS), ಕ್ರೂಸ್ ಕಂಟ್ರೋಲ್ ಸ್ಟಾಂಡರ್ಡ್ ಆಗಿ ಸಿಗಲಿದೆ. ಟಾಪ್ ವೇರಿಯೆಂಟ್ ಆದ AX7L ನಲ್ಲಿ ಲೆವಲ್-2 ADAS, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಡಿಪಾರ್ಚರ್ ಪ್ರೊಟೆಕ್ಷನ್, ಲೇನ್ ಕೀಪ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್ ಸಿಗಲಿದೆ.
ಇವಿಷ್ಟೆ ಅಲ್ಲದೆ ಆಟೋ ಎಮರ್ಜನ್ಸಿ ಬ್ರೇಕಿಂಗ್, ಆಟೋ ಎಮರ್ಜನ್ಸಿ ಬ್ರೇಕಿಂಗ್ - ಪಾದಚಾರಿ + ಸೈಕ್ಲಿಸ್ಟ್, ಹೈ ಬೀಮ್ ಅಸಿಸ್ಟ್, ಸ್ಟಾಪ್ ಮತ್ತು ಗೋ ಜೊತೆಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಸ್ಮಾರ್ಟ್ ಪೈಲಟ್ ಅಸಿಸ್ಟ್, ಬ್ಲೈಂಡ್ ವ್ಯೂ ಮಾನಿಟರ್‌ನೊಂದಿಗೆ 360-ಡಿಗ್ರಿ ಸರೌಂಡ್ ವ್ಯೂ ಸಿಸ್ಟಮ್, ಮುಂಭಾಗದ ಪಾರ್ಕಿಂಗ್ ಅಸಿಸ್ಟ್ ಸಿಸ್ಟಮ್ ನಂತಹ ಸುಧಾರಿತ ಸೇಫ್ಟಿ ಫೀಚರ್ಸ ಟಾಪ್ ವೇರಿಯೆಂಟ್‌ನಲ್ಲಿ ಸಿಗಲಿವೆ.


Click it and Unblock the Notifications








