ಮಾರುತಿ ಸುಜುಕಿ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ಬಗ್ಗೆ ಯಾರೂ ತಿಳಿಸದ ಪ್ರಮುಖ ಮುಖ್ಯಾಂಶಗಳಿವು

ಮಾರಾಟದಲ್ಲಿ ದೇಶದ ನಂ.1 ಕಾರು ಬ್ರ್ಯಾಂಡ್ ಆಗಿರುವ ಮಾರುತಿ ಸುಜುಕಿ ತನ್ನ ಹೊಚ್ಚ ಹೊಸ ಕಾರಾಗಿರುವ ಮಾರುತಿ ಸುಜುಕಿ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮೊನ್ನೆಯಷ್ಟೆ ಭಾರತದಲ್ಲಿ ಬೆಲೆಗಳನ್ನು ಘೋಷಿಸಿ ಬಿಡುಗಡೆ ಮಾಡಿದೆ. ಈ ಹೊಸ ಕಾರು ದೇಶದಲ್ಲಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರಾಗಿದ್ದು, ಮಾರುತಿ ಸುಜುಕಿಯ ಗುಜರಾತ್ ಉತ್ಪಾದನಾ ಸ್ಥಾವರದಲ್ಲಿ ತಯಾರಿಸಲಾಗುತ್ತಿದೆ. ಇದರ ಬೆಲೆಗಳು ಸ್ಪರ್ಧಾತ್ಮಕವಾಗಿದ್ದು, ಈಗಾಗಲೇ ಪ್ರತಿಸಪ್ಪರ್ಧಿಗಳಿಗೆ ಶಾಕ್ ನೀಡಿದೆ. ಹೊಸ ಮಾರುತಿ ಸುಜುಕಿ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ಕುರಿತ ಟಾಪ್ ಹೈಲೆಟ್‌ಗಳನ್ನು ಇಲ್ಲಿ ನೋಡೋಣ.

ಮಾರುತಿ ಸುಜುಕಿ ಇ-ವಿಟಾರಾ ಬೆಲೆಗಳು

ಆಸಕ್ತ ಗ್ರಾಹಕರು ನೆಕ್ಸಾ ಶೋ ರೂಂಗಳಲ್ಲಿ ಅಥವಾ ನೆಕ್ಸಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ರೂ. 21 000 ಆರಂಭಿಕ ಪಾವತಿಯೊಂದಿಗೆ ಕಾರನ್ನು ಬುಕ್ ಮಾಡಬಹುದು. ಜೊತೆಗೆ ಈ ಕಾರಿಗಾಗಿ ಕಂಪನಿಯು 'BaaS' ಪರಿಚಯಿಸಿದ್ದು, ಇದರಡಿ ರೂ. 10.99 ಲಕ್ಷ ಪಾವತಿಸಿ ಕಾರನ್ನು ಮನೆಗೆ ಕೊಂಡೊಯ್ಯಬಹುದು, ಆದರೆ ಬ್ಯಾಟರಿಯನ್ನು ಬಾಡಿಗೆ ಪಡೆಯಬೇಕಾಗುತ್ತದೆ, ಪ್ರತಿ ಕಿ.ಮೀಗೆ ರೂ. 3.99 ಪಾವತಿಸಬೇಕು.

maruti-suzuki-e-vitara-electric-suv-key-highlights

ಈ ಆಯ್ಕೆ ಬೇಡವೆಂದರೆ ಮಾರುತಿ ಸುಜುಕಿ ಇ-ವಿಟಾರಾ 'ಡೆಲ್ಟಾ' 49 kwh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆಯು ರೂ. 15,99,000 (ಎಕ್ಸ್‌ ಶೋರೂಂ), ಮಾರುತಿ ಸುಜುಕಿ ಇ-ವಿಟಾರಾ 'ಜೀಟಾ' 61 kwh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆಯು ರೂ. 17,49,000 (ಎಕ್ಸ್‌ ಶೋರೂಂ), ಹಾಗೆಯೇ ಮಾರುತಿ ಸುಜುಕಿ ಇ-ವಿಟಾರಾ 'ಆಲ್ಫಾ' 61 kwh ಬ್ಯಾಟರಿ ಹೊಂದಿರುವ ವೇರಿಯೆಂಟ್ ಬೆಲೆಯು ರೂ. 17,49,000 (ಎಕ್ಸ್‌ ಶೋರೂಂ) ಇದೆ.

ಬ್ಯಾಟರಿ ಮತ್ತು ರೇಂಜ್: ಇ-ವಿಟಾರಾವನ್ನು 49kWh ಮತ್ತು 61kWh ಎಂಬ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ನೀಡಲಾಗುವುದು. 49kWh ಬ್ಯಾಟರಿಯು ಮುಂಭಾಗದ ಆಕ್ಸಲ್‌ನಲ್ಲಿ ಇರಿಸಲಾದ ಒಂದೇ ಮೋಟಾರ್‌ನೊಂದಿಗೆ ಜೋಡಿಯಾಗಿ ಬರುತ್ತದೆ, ಇದು 144hp ಪವರ್ ಉತ್ಪಾದಿಸುತ್ತದೆ. ದೊಡ್ಡದಾದ 61kWh ಬ್ಯಾಟರಿಯು 174hp ಪವರ್ ಹೊರಹಾಕುತ್ತದೆ. ಕಾರನ್ನು ಸಿಂಗಲ್ ಚಾರ್ಜ್‌ನಲ್ಲಿ 543 ಕಿ.ಮೀ ಓಡಿಸಬಹುದು, ಬ್ಯಾಟರಿ ಮೇಲೆ 8 ವರ್ಷ ಅಥವಾ 1,60,000 ಕಿ.ಮೀವರೆಗೆ ವಾರೆಂಟಿ ನೀಡಲಾಗುತ್ತದೆ.

maruti-suzuki-e-vitara-electric-suv-key-highlights

ವಿನ್ಯಾಸ: ಮಾರುತಿ ಇ-ವಿಟಾರಾ ಮುಂಭಾಗದಲ್ಲಿ ಕ್ಲೋಸ್ಡ್-ಆಫ್ ಗ್ರಿಲ್‌ನೊಂದಿಗೆ ಟ್ರೈ-ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ. ಕೆಳಗಿನ ಬಂಪರ್ ಬ್ರೆಝಾವನ್ನು ಹೋಲುತ್ತದೆ, ಸ್ಕಿಡ್ ಪ್ಲೇಟ್‌ಗಳೊಂದಿಗೆ ಸಣ್ಣ ಫಾಗ್ ಲ್ಯಾಂಪ್ ಅನ್ನು ಹೊಂದಿದೆ. ಚಾರ್ಜಿಂಗ್ ಪೋರ್ಟ್ ಮುಂಭಾಗದಲ್ಲಿದೆ, ಬದಿಗಳಲ್ಲಿ 18 ಇಂಚಿನ ಅಲಾಯ್ ವೀಲ್‌ಗಳಿದ್ದು, ಹಿಂಭಾಗದ ಬಾಗಿಲಿನ ಹ್ಯಾಂಡಲ್ ಅನ್ನು ಸಿ-ಪಿಲ್ಲರ್ ಮೇಲೆ ಇರಿಸಲಾಗಿದೆ.

ಹಿಂಭಾಗದಲ್ಲಿ, ಇದು ಇಂಟಿಗ್ರೇಟೆಡ್ ಸ್ಪಾಯ್ಲರ್‌ನೊಂದಿಗೆ ಕನೆಕ್ಟೆಡ್ ಟೈಲ್‌ಲೈಟ್‌ಗಳನ್ನು ನೀಡಲಾಗಿದೆ. ಆಯಾಮಗಳ ವಿಷಯದಲ್ಲಿ, ಇ-ವಿಟಾರಾ 4,275 ಮಿಮೀ ಉದ್ದ, 1,800 ಮಿಮೀ ಅಗಲ, 1,635 ಮಿಮೀ ಎತ್ತರ ಮತ್ತು ಉದಾರವಾದ 2,700 ಎಂಎಂ ವೀಲ್‌ಬೇಸ್ ಅನ್ನು ಹೊಂದಿದೆ. ಇದು 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 1,900 ಕೆಜಿ ವರೆಗೆ ಕರ್ಬ್ ತೂಕವನ್ನು ಹೊಂದಿದೆ.

maruti-suzuki-e-vitara-electric-suv-key-highlights

ಇಂಟೀರಿಯರ್: 10 - ವೇ ಪವರ್ ಅಡ್ಜಸ್ಟಬಲ್ ಟ್ರೈವರ್ ಸೀಟ್, ಹಿಂಭಾಗದ ಸೀಟ್‌ಗಳಲ್ಲಿ ಪ್ರಯಾಣಿಕರಿಗೆ ಸ್ಲೈಡಿಂಗ್ ಮತ್ತು ಒರಗಿಕೊಳ್ಳುವ ಸೌಕರ್ಯವನ್ನು ನೀಡಲಾಗಿದೆ. ಸಂಪೂರ್ಣ ಆಟೋಮ್ಯಟಿಕ್ ಕ್ಲೈಮೆಟ್ ಕಂಟ್ರೋಲ್, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಚಾರ್ಜರ್ ಮತ್ತು ಇನ್ನೂ ಹಲವು ಸುಧಾರಿತ ಫೀಚರ್ಸ್ ಹೊಂದಿದೆ.

ವೈಶಿಷ್ಟ್ಯಗಳ ಪ್ರಕಾರ, ಇದು 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇನಿಂದ ಬೆಂಬಲಿತವಾದ 10.1-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಕ್ಲೌಡ್-ಆಧಾರಿತ ನ್ಯಾವಿಗೇಷನ್, ಪನೋರಮಿಕ್ ಸನ್‌ರೂಫ್, 12 ಬಣ್ಣ ಆಯ್ಕೆಗಳೊಂದಿಗೆ ಆಂಬಿಯೆಂಟ್ ಲೈಟಿಂಗ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದಿದೆ.

More from DriveSpark

Article Published On: Thursday, February 19, 2026, 10:20 [IST]
English summary
Maruti suzuki e vitara electric suv key highlights
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+