Maruti: ಡಾಕ್ಟರ್, ಎಂಜಿನಿಯರ್‌ಗಳ ಫೇವರೆಟ್ ಕಾರು: ಬರೀ 4.98 ಲಕ್ಷ... 33.47 ಕಿ.ಮೀ ಮೈಲೇಜ್

ಜನಪ್ರಿಯ ಕಾರು ತಯಾರಕರಾದ ಮಾರುತಿ ಸುಜುಕಿ ಇಂಡಿಯಾ, ಭಾರತದಲ್ಲಿ ಕಳೆದ ಎರಡೂವರೆ ದಶಕಗಳಿಂದ ಯಶಸ್ವಿಯಾಗಿ ಮಾರಾಟ ಮಾಡುತ್ತಿರುವ ವ್ಯಾಗನ್‌ಆರ್ (Maruti WagonR) ಕಾರಿಗೆ ಇಂದಿಗೂ ತುಂಬಾ ಬೇಡಿಕೆ ಇದೆ. ಇದು ಮಧ್ಯಮ ವರ್ಗದ ಹಾಗೂ ಡಾಕ್ಟರ್, ಎಂಜಿನಿಯರ್‌ಗಳ ಫೇವರೆಟ್ ಕಾರಾಗಿ ಜನಪ್ರಿಯತೆ ಪಡೆದಿದೆ. 2025ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕೈಗೆಟುಕುವ ಬೆಲೆ, ದಕ್ಷತೆ ಮತ್ತು ಪ್ರಾಯೋಗಿಕತೆಯ ಸಂಯೋಜನೆಯೊಂದಿಗೆ ಖರೀದಿದಾರರಿಗೆ ಪ್ರಮುಖ ಆಯ್ಕೆಯಾಗಿ ಮಾರಾಟದಲ್ಲಿ ಮುನ್ನುಗ್ಗುತ್ತಿದೆ.

ಭಾರತದಲ್ಲಿ ಇತ್ತೀಚೆಗಷ್ಟೆ ವ್ಯಾಗನ್ ‌ಆರ್ (WagonR) ಕಾರು 35 ಲಕ್ಷ ಕಾರುಗಳ ಉತ್ಪಾದನಾ ಮೈಲಿಗಲ್ಲನ್ನು ದಾಟಿದೆ. ಡಿಸೆಂಬರ್ 1999 ರಲ್ಲಿ ಬಿಡುಗಡೆಯಾದ ವ್ಯಾಗನ್‌ಆರ್ 25 ವರ್ಷಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದೆ. ಆಲ್ಟೊ ಮತ್ತು ಸ್ವಿಫ್ಟ್ ಕಾರುಗಳ ನಂತರ 35 ಲಕ್ಷ ಕಾರು ಉತ್ಪಾದನಾ ಗಡಿಯನ್ನು ದಾಟಿದ ಮಾಡಲ್ ಆಗಿ ವ್ಯಾಗನ್ ‌ಆರ್ ಗುರ್ತಿಸಿಕೊಂಡಿದೆ. ಇಂದಿಗೂ ಪ್ರತಿ ತಿಂಗಳ ಟಾಪ್-10 ಬೆಸ್ಟ್ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ವ್ಯಾಗನ್-ಆರ್ ಇರುತ್ತದೆ.

maruti-suzuki-wagon-r-price-features-mileage-explained

ಮಾರುತಿ ವ್ಯಾಗನ್‍ಆರ್ ಕಡಿಮೆ ಬೆಲೆಗೆ ಲಭ್ಯವಿರುವುದು ಮತ್ತು ಹೆಚ್ಚಿನ ಮೈಲೇಜ್ ನೀಡುತ್ತಿರುವುದು ಗ್ರಾಹಕರಲ್ಲಿ ಭಾರೀ ಸ್ವೀಕಾರ ಪಡೆಯುತ್ತಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ. ಮಾರುತಿ ಸುಜುಕಿ ಪ್ರಸ್ತುತ ಬೆಲೆಯು ಬೇಸ್‌ ವೇರಿಯೆಂಟ್‌ಗೆ 4.98 ಲಕ್ಷ ರೂ.ಗಳಿಂದ ಪ್ರಾರಂಭವಾಗಿ ಟಾಪ್ ವೇರಿಯೆಂಟ್ ಬೆಲೆಯು 6.38 ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. LXi, VXi, ZXi ಮತ್ತು ZXi ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ವ್ಯಾಗನ್‌ಆರ್ ಕೈಗೆಟುಕುವ ಸಣ್ಣ ಫ್ಯಾಮಿಲಿ ಹ್ಯಾಚ್‌ಬ್ಯಾಕ್ ಆಗಿ ಸದ್ಯ ಮುಂದುವರಿಯುತ್ತಿದ್ದು, ಎತ್ತರದ ವಿನ್ಯಾಸ, ವಿಶಾಲವಾದ ಒಳಾಂಗಣ ಮತ್ತು ಮೈಲೇಜ್ ಸೇರಿದಂತೆ ಹೊಸ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳೊಂದಿಗೆ ಭಾರತೀಯರ ನೆಚ್ಚಿನ ಕಾರಾಗಿದೆ. ಟಾಟಾ ಟಿಯಾಗೊ ಮತ್ತು ಸಿಟ್ರೊಯೆನ್ C3 ನಂತಹ ಪ್ರಮುಖ ಹ್ಯಾಚ್‌ಬ್ಯಾಕ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತದೆ.

maruti-suzuki-wagon-r-price-features-mileage-explained

ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌-ಪ್ಲೇ ಕನೆಕ್ಟಿವಿಯೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವಿಂಗ್ ಮಿರರ್‌ಗಳಲ್ಲಿ ಟರ್ನ್ ಇಂಡಿಕೇಟರ್, ಫ್ರಂಟ್ ಪ್ಯಾಸೆಂಜರ್ ಸೈಡ್ ಸೀಟ್ ಅಂಡರ್ ಟ್ರೇ, ಫ್ರಂಟ್ ಫಾಗ್ ಲ್ಯಾಂಪ್‌ಗಳು ಮತ್ತು 4 ಸ್ಪೀಕರ್‌ಗಳು, ಟ್ಯಾಕೋಮೀಟರ್, ಎಲೆಕ್ಟ್ರಿಕಲ್ ಫೋಲ್ಡಿಂಗ್ ವಿಂಗ್ ಮಿರರ್‌ಗಳನ್ನು ಹೊಂದಿದೆ.

ಇವಿಷ್ಟೆ ಅಲ್ಲದೆ ರಿಯರ್ ವೈಪರ್, ವಾಷರ್ ಮತ್ತು ಡಿಫೊಗರ್ ಮತ್ತು 14-ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ಮಾರುತಿ ಸುಜುಕಿ ವ್ಯಾಗನ್‍ಆರ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ, EBD ಜೊತೆಗೆ ABS, ಸ್ಪೀಡ್ ಅಲರ್ಟ್‌ಗಳು, ಡ್ಯುಯಲ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್ ಮತ್ತು ಸೀಟ್‌ಬೆಲ್ಟ್ ರಿಮೈಂಡರ್ ಹೊಂದಿದೆ.

maruti-suzuki-wagon-r-price-features-mileage-explained

ಎಂಜಿನ್ ವಿಷಯಕ್ಕೆ ಬಂದರೆ ಮಾರುತಿ ವ್ಯಾಗನ್‌ಆರ್ 1-ಲೀಟರ್ ಮತ್ತು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಬರುತ್ತದೆ. ಇದರಲ್ಲಿ 1-ಲೀಟರ್ ಎಂಜಿನ್ 67 PS ಪವರ್ ಮತ್ತು 89 Nm ಟಾರ್ಕ್ ಉತ್ಪಾದಿಸುತ್ತದೆ. 1.2-ಲೀಟರ್ ಎಂಜಿನ್ 90 PS ಪವರ್ ಮತ್ತು 113 Nm ಟಾರ್ಕ್ ಉತ್ಪಾದಿಸುತ್ತದೆ. ಇವೆರಡೂ 5-ಸ್ಪೀಡ್ ಮ್ಯಾನುವಲ್‌ನೊಂದಿಗೆ ಬರುತ್ತವೆ. ಇನ್ನು CNG ಆಯ್ಕೆಯಲ್ಲಿ 57 PS ಪವರ್ ಮತ್ತು 82 Nm ಟಾರ್ಕ್ ಉತ್ಪಾದಿಸಲಿದ್ದು, ಇದು ಮ್ಯಾನ್ಯುವಲ್ ಆಗಿದೆ.

ಮೈಲೇಜ್: ಮಾರುತಿ ವ್ಯಾಗನ್‌ಆರ್ 1-ಲೀಟರ್ AMT ನಲ್ಲಿ 25.19 ಕಿ.ಮೀ ಮೈಲೇಜ್, 1.2-ಲೀಟರ್ MT ನಲ್ಲಿ 23.56 ಕಿ.ಮೀ ಮೈಲೇಜ್, 1.2-ಲೀಟರ್ AMT ನಲ್ಲಿ 24.43 ಕಿ.ಮೀ ಮೈಲೇಜ್, 1-ಲೀಟರ್ MT ನಲ್ಲಿ 24.35 kmpl ಮೈಲೇಜ್ ಮತ್ತು 1-ಲೀಟರ್ CNG ನಲ್ಲಿ 33.47 ಕಿ.ಮೀ/ಕೆ.ಜಿ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

More from DriveSpark

Article Published On: Monday, March 16, 2026, 12:14 [IST]
English summary
Maruti suzuki wagon r price features mileage explained
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+