ಮೊನ್ನೆಯಷ್ಟೆ ಬಿಡುಗಡೆ... ಪ್ರತಿಸ್ಪರ್ಧಿಗಳಿಗೆ ಭಯ ಹುಟ್ಟಿಸುವ ಟಾಪ್-5 ಫೀಚರ್ಸ್!
ಪ್ರೀಮಿಯಂ ಕಾರುಗಳ ತಯಾರಕ ಕಂಪನಿಯಾಗಿರುವ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ (JSW MG Motor), ಭಾರತದಲ್ಲಿ ಇತ್ತೀಚೆಗಷ್ಟೆ ತನ್ನ ಬಹುನಿರೀಕ್ಷಿತ ದೈತ್ಯ ಮೆಜೆಸ್ಟರ್ (MAJESTOR) ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಡಿ+ ಎಸ್‌ಯುವಿ ಆಗಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ, ಹಾಗೆಯೇ ಮೇ 2026 ರಲ್ಲಿ ಡೆಲಿವರಿಗಳು ಪ್ರಾರಂಭವಾಗಲಿವೆ. ಅನಾವರಣಗೊಂಡಾಗಿನಿಂದ ಈ ಎಸ್‌ಯುವಿಯ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಸಾಕಷ್ಟು ಕುತೂಹಲವಿದೆ, ಬನ್ನಿ ಹಾಗಾದ್ರೆ ಎಂಜಿ ಮೆಜೆಸ್ಟರ್ ಎಸ್‌ಯುವಿಯ ಪ್ರಮುಖ ಐದು ಫೀಚರ್‌ಗಳನ್ನು ನೋಡೋಣ.
ಟ್ರಿಪಲ್ ಡಿಫರೆನ್ಷಿಯಲ್ ಲಾಕ್: ಇದು ವಿಭಾಗದಲ್ಲೇ ಮೊದಲ ಫೀಚರ್ ಆಗಿದ್ದು, ಇದನ್ನು ತೀವ್ರ ಆಫ್-ರೋಡ್ ಪರಿಸ್ಥಿತಿಗಳಲ್ಲಿ ಟ್ರಾಕ್ಷನ್ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ ಲಾಕಿಂಗ್ ರಿಯರ್ ಡಿಫರೆನ್ಷಿಯಲ್ ಅನ್ನು ಅತ್ಯುತ್ತಮವಾಗಿ ನೀಡುವ ಸಾಮಾನ್ಯ 4x4 ಸೆಟಪ್‌ಗಿಂತ ಭಿನ್ನವಾಗಿ, ಮೆಜೆಸ್ಟರ್ ಡ್ರೈವರ್‌ಗೆ ಮುಂಭಾಗ, ಮಧ್ಯ ಮತ್ತು ಹಿಂಭಾಗದ ಮೂರು ಡಿಫರೆನ್ಷಿಯಲ್‌ಗಳನ್ನು ಲಾಕ್ ಮಾಡಲು ಅನುಮತಿಸುತ್ತದೆ.

ಈ ಸಿಸ್ಟಮ್ ಅನ್ನು ಯಾಂತ್ರಿಕವಾಗಿ ತೊಡಗಿಸಿಕೊಳ್ಳುವುದರಿಂದ ಡಿಫರೆನ್ಷಿಯಲ್‌ಗಳನ್ನು ಲಾಕ್ ಮಾಡುತ್ತದೆ, ಎಲ್ಲಾ ವೀಲ್‌ಗಳು ಒಂದೇ ವೇಗದಲ್ಲಿ ತಿರುಗುವಂತೆ ಮಾಡುತ್ತದೆ. ಇದು ಎಲ್ಲಾ ನಾಲ್ಕು ವೀಲ್‌ಗಳಲ್ಲಿ ಪವರ್ ಸಮವಾಗಿ ವಿತರಿಸುವುದನ್ನು ಖಚಿತಪಡಿಸುತ್ತದೆ, ಗ್ರಿಪ್ ಅನ್ನು ಗಮನಾರ್ಹವಾಗಿ ಸುಧಾರಿಸುವುದರ ಜೊತೆಗೆ, ಸವಾಲಿನ ಅಡೆತಡೆಗಳ ಮೇಲೆ ನುಗ್ಗುವ ವಾಹನದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಟ್ವಿನ್ ವೈರ್‌ಲೆಸ್ ಚಾರ್ಜರ್‌ಗಳು: ಕ್ಯಾಬಿನ್ ಒಳಗೆ ಮುಂಭಾಗದಲ್ಲಿ ಟ್ವಿನ್ ವೈರ್‌ಲೆಸ್ ಚಾರ್ಜರ್‌ಗಳನ್ನು ನೀಡಲಾಗಿದ್ದು, ಎಂಜಿ ಮೆಜೆಸ್ಟರ್ ಇಂಟೀರಿಯರ್‌ನ್ನು ಎದ್ದು ಕಾಣುವುಂತೆ ಮಾಡುತ್ತದೆ. ಇದು ಸಾಮಾನ್ಯ ವೈರ್ಡ್ ಚಾರ್ಜಿಂಗ್ ಆಯ್ಕೆಗಳಿಗಿಂತ ಹೆಚ್ಚುವರಿ ಅನುಕೂಲವನ್ನು ನೀಡುತ್ತದೆ. ಒಟ್ಟಾರೆ ಸಂಪೂರ್ಣವಾಗಿ ಹೊಸ ಪ್ರೀಮಿಯಂ ಕ್ಯಾಬಿನ್ ಪಡೆದಿದ್ದು, ಅಪ್‌ಡೇಟೆಡ್ ಡ್ಯಾಶ್‌ಬೋರ್ಡ್ ಮತ್ತು ಆಧುನಿಕ ಸೆಂಟರ್ ಕನ್ಸೋಲ್ ವಿನ್ಯಾಸವನ್ನು ಹೊಂದಿದೆ.

3-ಝೋನ್ ಕ್ಲೈಮೆಟ್ ಕಂಟ್ರೋಲ್: ಡ್ಯುಯಲ್ - ಝೋನ್ ಕ್ಲೈಮೆಟ್ ಕಂಟ್ರೋಲ್ ನೀಡುವ ವಿಭಾಗದಲ್ಲಿನ ಹೆಚ್ಚಿನ ಪ್ರತಿಸ್ಪರ್ಧಿ ಕಾರುಗಳಿಗಿಂತ ಭಿನ್ನವಾಗಿ ಎಂಜಿ ಮೆಜೆಸ್ಟರ್ 3-ಝೋನ್ ಕಂಟ್ರೋಲ್ ಹೊಂದಿದೆ. ಇದು ಎಲ್ಲಾ ಸಾಲುಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ನಮ್ಯತೆ ಮತ್ತು ಸೌಕರ್ಯವನ್ನು ನೀಡುತ್ತದೆ. ಲಾಂಗ್ ಡ್ರೈವ್‌ಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಕಿರಿ-ಕಿರಿ ಇಲ್ಲದಂತೆ ಆರಾಮ ಪ್ರಯಾಣ ಅನುಭವ ನೀಡುತ್ತದೆ.
ಎಂ-ಕ್ರಾಲ್: 10 ಆಫ್-ರೋಡ್ ಮೋಡ್‌ಗಳ ಜೊತೆಗೆ, ಹೊಸ ಮೆಜೆಸ್ಟರ್ ಎಂ-ಕ್ರಾಲ್ ಎಂಬ ಫೀಚರ್ ಸಹ ಪಡೆದಿದೆ. ಈ ಸಿಸ್ಟಮ್ ಡ್ರೈವರ್ ಸ್ಟೀರಿಂಗ್ ಮೇಲೆ ಮಾತ್ರ ಗಮನಹರಿಸಲು ಅನುವು ಮಾಡಿಕೊಡುತ್ತದೆ, ಥ್ರೊಟಲ್ ಮತ್ತು ಬ್ರೇಕಿಂಗ್ ಇನ್‌ಪುಟ್‌ಗಳನ್ನು ಬಹಳ ಕಡಿಮೆ ವೇಗದಲ್ಲಿ ಬುದ್ಧಿವಂತಿಕೆಯಿಂದ ನಿರ್ವಹಿಸುತ್ತದೆ.

ಟ್ರಿಪಲ್ ಡಿಫರೆನ್ಷಿಯಲ್ ಲಾಕ್‌ಗಳೊಂದಿಗೆ ಸಂಯೋಜಿಸಿದಾಗ, ಇದು ಎಲ್ಲಾ ವೀಲ್‌ಗಳಲ್ಲಿ ಟಾರ್ಕ್ ಅನ್ನು ಸಮವಾಗಿ ವಿತರಿಸುಸುತ್ತದೆ, ವೀಲ್ ಸ್ಪಿನ್ ಅನ್ನು ಕಡಿಮೆ ಮಾಡಿ ಟ್ರಾಕ್ಷನ್ ಹೆಚ್ಚಿಸುತ್ತದೆ. ಈ ಮೂಲಕ ಎಸ್‌ಯುವಿನ್ನು ಸಡಿಲವಾದ, ಕಲ್ಲಿನ, ಮರಳು ಅಥವಾ ಜಾರು ಮೇಲ್ಮೈಗಳ ಮೇಲೆ ಸ್ಥಿರವಾದ ವೇಗ ಅಥವಾ ಬ್ರೇಕ್ ಮಾಡ್ಯುಲೇಷನ್ ಅಗತ್ಯವಿಲ್ಲದೇ ಚಲಿಸಲು ಅನುವು ಮಾಡಿಕೊಡುತ್ತದೆ.
ಫ್ರಂಟ್ ಸೀಟ್‌ಗಳಲ್ಲಿ ಮಸಾಜ್: ಪ್ರತಿಸ್ಪರ್ಧಿ ಕಾರುಗಳು ಫ್ರಂಟ್ ಸೀಟ್‌ನಲ್ಲಿ ವೆಂಟಿಲೇಷನ್ ನೀಡಿದರೆ, ಎಂಜಿ ಮೆಜೆಸ್ಟರ್ ಮುಂಭಾಗದ ಆಸನಗಳಿಗೆ ಮಸಾಜ್ ಫಂಕ್ಷನ್ ಪಡೆದುಕೊಂಡಿದೆ. ಡ್ರೈವರ್ ಮತ್ತು ಕೋ-ಡ್ರೈವರ್ ಇಬ್ಬರಿಗೂ 8-ಮೋಡ್ ಮಸಾಜ್ ಕಾರ್ಯವನ್ನು ಒದಗಿಸಲಾಗಿದೆ. ಹೆಚ್ಚುವರಿಯಾಗಿ, ಮುಂಭಾಗದ ಆಸನಗಳು 12-ವೇ ಎಲೆಕ್ಟ್ರಿಕಲ್ಲಿ ಅಡ್ಜಸ್ಟ್‍ಮೆಂಟ್ ಪಡೆದಿವೆ.
ಫೆಬ್ರವರಿ 12, 2026 ರಂದು ಎಂಜಿ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ. 41,000 ಮೊತ್ತದೊಂದಿಗೆ ಪ್ರೀ-ಬುಕಿಂಗ್‌ಗಳು ಪ್ರಾರಂಭವಾಗಿವೆ. ಬೆಲೆ ಘೋಷಣೆ, ಶೋರೂಂ ಪ್ರದರ್ಶನ ಮತ್ತು ಟೆಸ್ಟ್ ಡ್ರೈವ್ ಏಪ್ರಿಲ್ 2026 ರಲ್ಲಿ ಪ್ರಾರಂಭವಾಗುತ್ತದೆ. ಕಾರು ಡೆಲಿವರಿಗಳು ಮೇ 2026 ರಲ್ಲಿ ಪ್ರಾರಂಭವಾಗುತ್ತವೆ. ಕಾರಿನ ಮೇಲೆ 5 ವರ್ಷಗಳ ಅನಿಯಮಿತ KM ವಾರೆಂಟಿ, 5 ವರ್ಷಗಳ ರಸ್ತೆಬದಿಯ ಸಹಾಯ ಮತ್ತು 5 ಕಾರ್ಮಿಕ-ಮುಕ್ತ ಸೇವೆ (Labor-free service)ಗಳನ್ನು ನೀಡುವುದಾಗಿ ಎಂಜಿ ತಿಳಿಸಿದೆ.


Click it and Unblock the Notifications








