ನಿನ್ನೆಯಷ್ಟೆ ಬೃಹತ್ SUV ಅನಾವರಣ: ದೈತ್ಯ ಫಾರ್ಚುನರ್‌ಗೆ ಸವಾಲ್: ಹೇಗಿದೆ ಹೊಸ ಕಾರು?

ಪ್ರಮುಖ ಕಾರು ತಯಾರಕ ಕಂಪನಿಯಾದ ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ (JSW MG Motor), ನಿನ್ನೆಯಷ್ಟೆ ತನ್ನ ಬಹುನಿರೀಕ್ಷಿತ ಎಂಜಿ ಮೇಜೆಸ್ಟರ್ (MG MAJESTOR) ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಕಂಪನಿಯ ಪ್ರಕಾರ ಇದು ಭಾರತದ ಮೊದಲ ಡಿ+ ಎಸ್‌ಯುವಿ ಆಗಿದ್ದು, ದಿಟ್ಟ ನೋಟ, ಅಪ್ರತಿಮ ಪ್ರಾಬಲ್ಯ, ಉನ್ನತ ಸಾಮರ್ಥ್ಯ ಹೊಂದಿರುವ ಎಸ್‌ಯುವಿ ಆಗಿದೆ. ಗರಿಷ್ಠ ಪರ್ಫಾಮೆನ್ಸ್, ಕಮಾಂಡಿಂಗ್ ರೋಡ್ ಪ್ರೆಸೆನ್ಸ್, ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಪರ್ಫಮೆನ್ಸ್, ಪ್ರೀಮಿಯಂ ಸೌಕರ್ಯ, ಸುಧಾರಿತ ಸುರಕ್ಷತೆ, ಅತ್ಯಾಧುನಿಕ 4x4 ಪರಾಕ್ರಮವನ್ನು ಪ್ರದರ್ಶಿಸುತ್ತದೆ ಎಂದು ಎಂಜಿ ಮೋಟಾರ್ ತಿಳಿಸಿದೆ.

ಬಲಿಷ್ಠವಾದ ಹೊರಭಾಗ: ಹೊಸ ಎಂಜಿ ಮೇಜೆಸ್ಟರ್ ಎಸ್‌ಯುವಿ ಬೃಹತ್ 2950 mm ವೀಲ್‌ಬೇಸ್, 5046 ಎಂಎಂ ಉದ್ದ, 2016 ಎಂಎಂ ಅಗಲ ಮತ್ತು 1870 ಎಂಎಂ ಎತ್ತರವನ್ನು ಹೊಂದಿದೆ. ಇದರ ಮೊಸಾಯಿಕ್ ಮ್ಯಾಟ್ರಿಕ್ಸ್ ಕಾಂಬಿನೇಶನ್ ಗ್ರಿಲ್, ಡ್ರ್ಯಾಗನ್ ಐಸ್ DRL ಗಳು, ಸ್ಪ್ಲಿಟ್ ಹೆಡ್‌ಲ್ಯಾಂಪ್‌ಗಳು, ಕನೆಕ್ಟೆಡ್ LED ಟೈಲ್ ಲ್ಯಾಂಪ್‌ಗಳು, ಎತ್ತರಿಸಿದ ಹುಡ್ ಲೈನ್ ಮತ್ತು 19-ಇಂಚಿನ ಅಲಾಯ್ ವೀಲ್‌ಗಳು ನೇರ, ದೃಢ ಹಾಗೂ ರಗಡ್ ಲುಕ್ ನೀಡುತ್ತವೆ.

mg-motor-unveils-indias-first-d-plus-segment-suv-majestor

ಪ್ರೀಮಿಯಂ ಒಳಾಂಗಣ:

ಪ್ಲಶ್ ಲೆದರ್ ಮತ್ತು ನಯವಾದ ಸೆಂಟರ್ ಕನ್ಸೋಲ್‌ನೊಂದಿಗೆ ಬ್ಲಾಕ್ ಥೀಮ್‌ನಲ್ಲಿ ಡಿಸೈನ್ ಮಾಡಲಾದ ಇಂಟೀರಿಯರ್, ಡ್ರೈವರ್ ಮತ್ತು ಕೋ-ಡ್ರೈವರ್‌ಗೆ ವೆಂಟಿಲೇಟೆಡ್ ಹಾಗೂ ಮಸಾಜ್ ಸೀಟ್‌ಗಳನ್ನು ನೀಡಲಾಗಿದೆ. ಇವುಗಳನ್ನು ಬಹು ರೀತಿಯಲ್ಲಿ ಹೊಂದಿಸಬಹುದಾಗಿದೆ (12-ವೇ ಡ್ರೈವರ್, 8-ವೇ ಪ್ಯಾಸೆಂಜರ್). ಪನೋರಮಿಕ್ ಸನ್‌ರೂಫ್, 64-ಕಲರ್ ಆಂಬಿಯೆಂಟ್ ಲೈಟಿಂಗ್, 3-ಝೋನ್ ಎಸಿ ಒದಗಿಸಲಾಗಿದೆ.

6- ಅಥವಾ 7-ಸೀಟರ್ ಸಂರಚನೆಗಳಲ್ಲಿ ಹೊಂದಿಕೊಳ್ಳುವ ಈ ಕಾರು, ಕುಟುಂಬಗಳು ಅಥವಾ ಅಡ್ವೆಂಚರ್ ಬಯಸುವವರಿಗೂ ಸರಿಹೊಂದುತ್ತದೆ. ಡ್ಯುಯಲ್ 12.3-ಇಂಚಿನ ಡಿಸ್ಪ್ಲೇಗಳು (ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್), ವೈರ್‌ಲೆಸ್ ಆಂಡ್ರಾಯ್ಡ್ ಆಟೋ/ಆಪಲ್ ಕಾರ್‌ಪ್ಲೇ, 12-ಸ್ಪೀಕರ್ JBL, ಡ್ಯುಯಲ್ ವೈರ್‌ಲೆಸ್ ಚಾರ್ಜರ್‌ಗಳು, 220V ಔಟ್‌ಲೆಟ್ ಮತ್ತು 75+ iSMART ಕನೆಕ್ಟೆಡ್ ಫೀಚರ್ಸ್ ಒಳಗೊಂಡಿದೆ.

mg-motor-unveils-indias-first-d-plus-segment-suv-majestor

ಬಲಿಷ್ಟ್ ಎಂಜಿನ್: ಇದರ 2.0-ಲೀಟರ್ ಟ್ವಿನ್-ಟರ್ಬೊ ಡೀಸೆಲ್ ಎಂಜಿನ್‌ 215.5 PS ಪವರ್ ಮತ್ತು 478.5 Nm ಟಾರ್ಕ್ ಉತ್ಪಾದಿಸುತ್ತದೆ. 2WD ಮತ್ತು ಸುಧಾರಿತ 4WD ಎರಡರಲ್ಲೂ ಅತ್ಯುತ್ತಮವಾದ 8-ಸ್ಪೀಡ್ AT ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದರ 4WD ಸಿಸ್ಟಮ್ 10 ಆಫ್-ರೋಡ್ ಮೋಡ್‌ಗಳನ್ನು ಹೊಂದಿದೆ. 219 mm ಗ್ರೌಂಡ್ ಕ್ಲಿಯರೆನ್ಸ್ ಮತ್ತು 810 mm ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಉನ್ನತ ಹಂತದ ಸುರಕ್ಷತೆ:

ಹೊಸ SUV ಲೆವೆಲ್-2 ADAS ಹೊಂದಿದೆ, ಇದರ ಹೊರತಾಗಿ 360 ಡಿಗ್ರಿ HD ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ಮತ್ತು ರೋಲ್ ಮೂವ್‌ಮೆಂಟ್ ಇಂಟರ್‌ವೆನ್ಷನ್ (RMI) ನಂತಹ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

mg-motor-unveils-indias-first-d-plus-segment-suv-majestor

ಎಂಜಿ ಮೇಜೆಸ್ಟರ್ ಎಸ್‌ಯುವಿಯನ್ನು 2WD ಮತ್ತು 4WD ಡ್ರೈವ್‌ಟ್ರೇನ್‌ಗಳಲ್ಲಿ ಶಾರ್ಪ್ ಮತ್ತು ಸ್ಯಾವಿ ವೇರಿಯೆಂಟ್‌ಗಳಲ್ಲಿ ಪರ್ಲ್ ವೈಟ್, ಕಾಂಕ್ರೀಟ್ ಗ್ರೇ, ಮೆಟಲ್ ಬ್ಲ್ಯಾಕ್ ಮತ್ತು ಮೆಟಲ್ ಆಶ್‌ನಲ್ಲಿ ನೀಡಲಾಗುವುದು. ಇದು ಭಾರತದಲ್ಲಿ ದೊಡ್ಡ ಪ್ರೀಮಿಯಂ SUV ಗಳಿಗೆ ಹೊಸ ಸರಿಯಾದ ಪ್ರತಿಸ್ಪರ್ಧಿಯಾಗಲಿದೆ. ಬೆಲೆ, ಬುಕಿಂಗ್ ಮತ್ತು ಮಾರುಕಟ್ಟೆ ಲಭ್ಯತೆಯನ್ನು ಬಿಡುಗಡೆಯ ಹತ್ತಿರದಲ್ಲಿ ಘೋಷಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಫೆಬ್ರವರಿ 12, 2026 ರಂದು (ನಿನ್ನೆ) ಎಂಜಿ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ. 41,000 ಮೊತ್ತದೊಂದಿಗೆ ಪ್ರೀ-ಬುಕಿಂಗ್‌ಗಳು ಪ್ರಾರಂಭವಾಗಿವೆ. ಬೆಲೆ ಘೋಷಣೆ, ಶೋರೂಂ ಪ್ರದರ್ಶನ ಮತ್ತು ಟೆಸ್ಟ್ ಡ್ರೈವ್ ಏಪ್ರಿಲ್ 2026 ರಲ್ಲಿ ಪ್ರಾರಂಭವಾಗುತ್ತದೆ. ಕಾರು ಡೆಲಿವರಿಗಳು ಮೇ 2026 ರಲ್ಲಿ ಪ್ರಾರಂಭವಾಗುತ್ತವೆ. ಕಾರಿನ ಮೇಲೆ 5 ವರ್ಷಗಳ ಅನಿಯಮಿತ KM ವಾರೆಂಟಿ, 5 ವರ್ಷಗಳ ರಸ್ತೆಬದಿಯ ಸಹಾಯ ಮತ್ತು 5 ಕಾರ್ಮಿಕ-ಮುಕ್ತ ಸೇವೆ (Labor-free service)ಗಳನ್ನು ನೀಡುವುದಾಗಿ ಎಂಜಿ ತಿಳಿಸಿದೆ.

More from DriveSpark

Article Published On: Friday, February 13, 2026, 12:20 [IST]
English summary
Mg motor unveils indias first d plus segment suv majestor
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+