MG Windsor: ವ್ಯಾಪಾರವಿಲ್ಲದೆ ನೊಣ ಹೊಡೆಯುತ್ತಿದ್ದ ಕಂಪನಿಗೆ ವರವಾಯ್ತು ಈ ಕಾರು: ಮುಗಿಬಿದ್ದಿದ್ದಾರೆ ಜನ!

ಎಂಜಿ ವಿಂಡ್ಸರ್ (MG Windsor) ಈಗ ಸಂಪೂರ್ಣ ಒಂದು ವರ್ಷದ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ದಾಟಿದೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರಾಗಿ ಗುರ್ತಿಸಿಕೊಂಡಿದೆ. ಪ್ರಮುಖ ಬ್ರಾಂಡ್‌ಗಳ ಎಲೆಕ್ಟ್ರಿಕ್ ಕಾರುಗಳನ್ನು ಹಿಂದಿಕ್ಕಿ ನಂ.1 ಸ್ಥಾನವನ್ನು ದಕ್ಕಿಸಿಕೊಂಡಿದೆ. ಎಂಜಿ ಮೋಟಾರ್‌ ಭಾರತದಲ್ಲಿ ತನ್ನ ಇಂಧನ ಚಾಲಿತ ಕಾರುಗಳಿಗಿಂತ ಹೆಚ್ಚಾಗಿ ಈ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರಿನಿಂದಾಗಿ ಹೆಚ್ಚು ಗುರ್ತಿಸಿಕೊಂಡಿದ್ದು, ಕಂಪನಿಗೆ ಅದೃಷ್ಟದ ಕಾರಾಗಿ ಮಾರ್ಪಟ್ಟಿದೆ.

ಪ್ರತಿ ವರ್ಷ ದಾಖಲೆ ಮಟ್ಟದಲ್ಲಿ ಮಾರಾಟವಾಗುವ ಟಾಟಾ ನೆಕ್ಸಾನ್ ಇವಿ, ಟಿಯಾಗೋ ಇವಿ ಮತ್ತು ಪಂಚ್ ಇವಿನಂತಹ ಕಾರುಗಳನ್ನು 2025ರ ಮಾರಾಟದಲ್ಲಿ ಹಿಂದಿಕ್ಕಿದೆ. ವಿಂಡ್ಸರ್ ಬರೋಬ್ಬರಿ 46,735 ಯುನಿಟ್‌ ಕಾರುಗಳ ಮಾರಾಟವನ್ನು ಗಳಿಸಿದೆ. ಮಹೀಂದ್ರಾ XEV 9e 27,700 ಯುನಿಟ್‌ ಕಾರುಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಟಾಟಾ ನೆಕ್ಸಾನ್ ಇವಿ 25,100, ಟಿಯಾಗೋ ಇವಿ 16,100 ಮತ್ತು ಪಂಚ್ ಇವಿ 16,000 ಯುನಿಟ್‌ ಕಾರುಗಳೊಂದಿಗೆ ನಂತರದ ಸ್ಥಾನದಲ್ಲಿವೆ.

mg-windsor-electric-car-crossed-40000-sales-in-cy2025

ಎಂಜಿ ವಿಂಡ್ಸರ್ ಅನ್ನು ಸೆಪ್ಟೆಂಬರ್ 2024 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು, ಅಕ್ಟೋಬರ್ 2024 ರಲ್ಲಿ ಮಾರಾಟ ಪ್ರಾರಂಭವಾಯಿತು. ಮಾರಾಟಕ್ಕೆ ಬಂದ ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 10,000 ಯೂನಿಟ್‌ ಕಾರುಗಳಿಗಿಂತ ಹೆಚ್ಚು ಮಾರಾಟವನ್ನು ಕಂಡಿತ್ತು. ಈಗ ತನ್ನ ವೇಗವನ್ನು ಮುಂದುವರಿಸುತ್ತಾ 2025 ರಲ್ಲಿ ತನ್ನ ಪ್ರಭಾವಶಾಲಿ ಕಾರ್ಯಕ್ಷಮತೆಯನ್ನು ತೋರಿಸಿದೆ.

MG ವಿಂಡ್ಸರ್‌ಗೆ 5-ಸೀಟರ್ ಎಲೆಕ್ಟ್ರಿಕ್ ಕಾರಾಗಿದ್ದು, ಪ್ರಾಯೋಗಿಕ, ಕುಟುಂಬ-ಕೇಂದ್ರಿತ ಕೊಡುಗೆಯಾಗಿ ಸ್ಥಾನ ಪಡೆದಿದೆ. ಈ ಕಾರು ಮುಖ್ಯವಾಗಿ ಮೌಲ್ಯ ಮತ್ತು ಪ್ರಾಯೋಗಿಕತೆಯಿಂದ ಜನಪ್ರಿಯತೆ ಪಡೆದಿದೆ. ವಿಶಾಲವಾದ ಕ್ಯಾಬಿನ್, ಫ್ಲಾಟ್ ಫ್ಲೋರ್ ಮತ್ತು ಆರಾಮದಾಯಕವಾದ ಹಿಂಭಾಗದ ಆಸನದೊಂದಿಗೆ ಕುಟುಂಬ ಖರೀದಿದಾರರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ.

mg-windsor-electric-car-crossed-40000-sales-in-cy2025

ದೊಡ್ಡ ಟಚ್‌ಸ್ಕ್ರೀನ್, ಸಂಪರ್ಕಿತ ತಂತ್ರಜ್ಞಾನ ಮತ್ತು ಟಾಪ್ ವೇರಿಯೆಂಟ್‌ಗಳಲ್ಲಿ ADAS ಸೇರಿದಂತೆ ಆಧುನಿಕ ಫೀಚರ್‌ಗಳು ಬೆಲೆಗೆ ತಕ್ಕ ಮೌಲ್ಯ ನೀಡುತ್ತವೆ. ವಿಂಡ್ಸರ್ ಬೆಲೆ ರೂ. 14 ಲಕ್ಷದಿಂದ ರೂ. 18.39 ಲಕ್ಷಗಳವರೆಗೆ (ಎಕ್ಸ್-ಶೋರೂಂ) ಇದೆ. ಈ ಕಾರು ಮುಂಭಾಗದ ಆಕ್ಸಲ್-ಮೌಂಟೆಡ್ ಪರ್ಮನೆಂಟ್-ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಹೊಂದಿದ್ದು, 136PS ಗರಿಷ್ಠ ಪವರ್ ಮತ್ತು 200Nm ಟಾರ್ಕ್ ನೀಡುತ್ತದೆ.

ಎರಡು ಬ್ಯಾಟರಿ ಪ್ಯಾಕ್‌ಗಳು ಲಭ್ಯವಿದ್ದು ಮೊದಲನೇ ಆಯ್ಕೆಯು 37.9kWh ಮತ್ತು ಎರಡನೇಯದು 52.9kWh ಬ್ಯಾಟರಿ ಪ್ಯಾಕ್ ಆಗಿದೆ. 37.9kWh ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 332 ಕಿ.ಮೀ ಓಡಿಸಬಹುದಾಗಿದೆ. ಮತ್ತು ಎರಡನೆಯ 52.9kWh ಬ್ಯಾಟರಿ ಪ್ಯಾಕ್ ಅನ್ನು ಫುಲ್ ಚಾರ್ಜ್ ಮಾಡಿದರೆ ಬರೋಬ್ಬರಿ 449 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

mg-windsor-electric-car-crossed-40000-sales-in-cy2025

ಈ ಕಾರಿನ ವಿನ್ಯಾಸ್ ವಿಷಯಕ್ಕೆ ಬಂದರೆ ಪ್ರೀಮಿಯಂ ಆಗಿ ಕಾಣುವಂತೆ ಮಾಡುವ ಸ್ಪ್ಲಿಟ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಲೈಟ್ ಬಾರ್‌ಗಳು, ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್‌ಗಳು ಹಾಗೂ 18-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದುಕೊಂಡಿದೆ. ಇಕೋ, ಇಕೋ ಪ್ಲಸ್, ನಾರ್ಮಲ್ & ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಪಡೆದಿದೆ.

ಇಂಟೀರಿಯರ್‌ನಲ್ಲಿ 15.6-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪೋರ್ಟ್ ಹಾಗೂ ಪುಶ್ ಬಟನ್ ಸ್ಟಾರ್ಟ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹಾಗೆಯೇ ಹೆಚ್ಚಿನ ಲಗೇಜ್ ಸಾಗಿಸಲು 604 ಲೀ. ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಸುರಕ್ಷತೆಗಾಗಿ 6-ಏರ್‌ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್)ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಡ್ರೈವ್‌ಸ್ಪಾರ್ಕ್ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ.

More from DriveSpark

Article Published On: Wednesday, January 14, 2026, 15:41 [IST]
English summary
Mg windsor electric car crossed 40000 sales in cy2025
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+