Renault: ನಾಳೆ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ ಎಸ್‌ಯುವಿ ಬಿಡುಗಡೆ, ಬೆಲೆ ಎಷ್ಟು... ವಿಶೇಷತೆಗಳೇನು?
ಹೊಸ ರೆನಾಲ್ಟ್ ಡಸ್ಟರ್ (Renault Duster) 2026 ಜನವರಿ 26 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಈಗಾಗಲೇ ದೃಢಪಡಿಸಲಾಗಿದೆ. ಇದು ಗಮನಾರ್ಹ ಮರುವಿನ್ಯಾಸ, ವರ್ಧಿತ ವೈಶಿಷ್ಟ್ಯಗಳು ಮತ್ತು ಆಧುನಿಕ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿರಲಿದ್ದು, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಹೆಚ್ಚು ಪೈಪೋಟಿ ನೀಡಲು ಸಜ್ಜಾಗುತ್ತಿದೆ. ನಾಳೆ ಬಿಡುಗಡೆಯಾಗಲಿರುವ ಈ ಹೊಸ ಡಸ್ಟರ್ ಎಸ್‌ಯುವಿ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಪವರ್‌ಟ್ರೇನ್ ಬಗೆಗಿನ ಕುರಿತ ಪ್ರಮುಖ ವಿಶೇಷತೆಗಳು ಇಲ್ಲಿವೆ.
ಡಸ್ಟರ್ ಅನ್ನು 2012 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು, ನಂತರ ಇದನ್ನು ಕಾರಣಾಂತರಗಳಿಂದ 2022 ರಲ್ಲಿ ಸ್ಥಗಿತಗೊಳಿಸಲಾಯಿತು. ಈ ಕಾರನ್ನು ವಿಶ್ವದ ಮೂರು ಖಂಡಗಳಲ್ಲಿ -23°C ನಿಂದ 55°C ನಡುವೆ 1 ಮಿಲಿಯನ್ (10 ಲಕ್ಷ) ಕಿಲೋಮೀಟರ್ ಓಡಿಸಿ, ವೈವಿಧ್ಯಮಯ ರಸ್ತೆ ಪರಿಸ್ಥಿತಿಗಳಲ್ಲಿಯೂ ಈ ಕಾರು ಹೊಂದಿಕೊಳ್ಳಬಲ್ಲದು ಎಂದು ಖಚಿತಪಡಿಸುವ ಕಠಿಣ ಜಾಗತಿಕ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ರೆನಾಲ್ಟ್ ತಿಳಿಸಿದೆ.

ಎಲ್ಲಾ ರೀತಿಯ ಪರೀಕ್ಷೆಗಳನ್ನು ಮುಗಿಸಿ ರೆನಾಲ್ಟ್ ಹೊಸ ತಲೆಮಾರಿನ ಡಸ್ಟರ್ ಅನ್ನು ಭಾರತದಲ್ಲಿ ಜನವರಿ 26, 2026 ರಂದು ಬಿಡುಗಡೆ ಮಾಡುತ್ತಿದೆ. ಇದು ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಕಾಂಪ್ಯಾಕ್ಟ್ SUV ಗಳಿಗೆ ಪ್ರತಿಸ್ಪರ್ಧಿಯಾಗಿ ಆಧುನಿಕ ವೈಶಿಷ್ಟ್ಯಗಳೊಂದಿಗೆ ದೃಢವಾದ ವಿನ್ಯಾಸದೊಂದಿಗೆ ಈ ಬಾರಿ ಎಂಟ್ರಿಕೊಡಲು ಸಜ್ಜಾಗುತ್ತಿದೆ.
ಹೊಸ ರೆನಾಲ್ಟ್ ಡಸ್ಟರ್ ವಿಶೇಷತೆಗಳು
ಮುಂಬರಲಿರುವ ಡಸ್ಟರ್ ವಿನ್ಯಾಸದ ವಿಷಯಕ್ಕೆ ಬಂದರೆ ತನ್ನ ಬಾಕ್ಸಿ ಲುಕ್ ಜೊತೆಗೆ ರಗಡ್ ಆಗಿ ಕಾಣುವ ಮುಂಭಾಗದ ಗ್ರಿಲ್, ಹೊಸ DRL ಗಳ ಜೊತೆಗೆ LED ಹೆಡ್‌ಲೈಟ್‌ಗಳು, ದೃಢವಾದ ಬಂಪರ್ ಹೊಂದಿದೆ. 18-ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬರಲಿದೆ. ದೊಡ್ಡ ವಿಂಡ್ ಶೀಲ್ಡ್, ಫ್ಲೇರ್ಡ್ ಆರ್ಚ್‌ಗಳು ಮತ್ತು LED ಟೈಲ್‌ಲ್ಯಾಂಪ್ ಪಡೆದುಕೊಂಡು ರಗಡ್ ಆಗಿ ಕಾಣುತ್ತದೆ. ಉಳಿದಂತೆ ಹಳೆಯ ಮಾಡಲ್‌ನಂತೆಯೇ ಅದೇ ರಗಡ್ ಲುಕ್ ಮುಂದುವರಿಸಲಿದೆ.

ಫೀಚರ್ಸ್ ವಿಷಯಕ್ಕೆ ಬಂದರೆ ಕಾರಿನಲ್ಲಿ 10.1-ಇಂಚಿನ ಟಚ್‌ಸ್ಕ್ರೀನ್-ಆಧಾರಿತ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಸ್ಪ್ಲೇ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್ ಲೆಸ್ ಚಾರ್ಜಿಂಗ್, ಪನೋರಮಿಕ್ ಸನ್ ರೂಫ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್, ವೆಂಟಿಲೇಟೆಡ್ ಹಾಗೂ ಪವರ್ಡ್ ಸೀಟುಗಳು, 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಇನ್ನೂ ಹೆಚ್ಚಿನ ಆಕರ್ಷಕ ಫೀಚರ್ಸ್ ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಸೇಫ್ಟಿ ಫಿಚರ್ಸ್ ವಿಷಯಕ್ಕೆ ಬಂದರೆ, 6 ಏರ್‌ಬ್ಯಾಗ್, ಅಡಾಪ್ಟವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಅಸಿಸ್ಟ್ ಸೇರಿದಂತೆ ಲೆವೆಲ್-2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ನಿರೀಕ್ಷಿಸಲಾಗಿದೆ. ಹಾಗೆಯೇ ಎಬಿಎಸ್(ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ(ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‍ಪಿ(ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿರಬಹುದು.

ಹೊಸ 'ರೆನಾಲ್ಟ್ ಡಸ್ಟರ್' ಎಸ್‌ಯುವಿ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಸಾಧ್ಯತೆಯಿದೆ. ರೂ.9 ಲಕ್ಷದಿಂದ ರೂ.15 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಈ ಹಿಂದೆ ಭಾರತದಲ್ಲಿ 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿತ್ತು. ಆದರೆ ಈಗ ಹೊಸ ಡಸ್ಟರ್ ಟರ್ಬೊ - ಪೆಟ್ರೋಲ್ ಜೊತೆಗೆ ಮೈಲ್ಡ್ - ಹೈಬ್ರಿಡ್, ಸ್ಟ್ರಾಂಗ್ ಹೈಬ್ರಿಡ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುವ ನಿರೀಕ್ಷೆಯಿದೆ.
ಈ ಕಾರು 4,360 ಎಂಎಂ ಉದ್ದ, 1,822 ಎಂಎಂ ಅಗಲ ಹಾಗೂ 1695 ಎಂಎಂ ಎತ್ತರವಿರಲಿದೆ. 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,673 ಎಂಎಂ ವೀಲ್‌ಬೇಸ್ ಹೊಂದಿರುವ ಸಾಧ್ಯತೆಯಿದೆ. ಹೊಸ 2026 ರ ರೆನಾಲ್ಟ್ ಡಸ್ಟರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ. ನಾಳೆ ಬಿಡುಗಡೆ ಸುದ್ದಿಯ ಅಪ್‌ಡೇಟ್‌ಗಾಗಿ ಡ್ರೈವ್‌ಸ್ಪಾರ್ಕ್ ಅನ್ನು ಫಾಲೋ ಮಾಡಿ.


Click it and Unblock the Notifications








